ಜೆರುಸಲೆಂನ ಹೋಲಿ ಚರ್ಚ್‌ನ ಸಮಾಧಿಯಲ್ಲಿ ಜೀಸಸ್ ಜೀವಂತವಾಗಿದ್ದಾರೆ ಎಂಬ ಕ್ರೈಸ್ತ ಸಮುದಾಯದ ನಂಬಿಕೆಯಾದ ಸಮಾಧಿಯ ಬಾಗಿಲನ್ನು ಸುಮಾರು ಎರಡು ಶತಮಾನಗಳ ನಂತರ ಮೊದಲ ಬಾರಿ ತೆರೆಯಲಾಗಿದೆ.
ಇತಿಹಾಸ ತಜ್ಞರು ಜೀಸಸ್ ಅಸ್ತಿತ್ವದ ಕುರಿತ ಸಾಕ್ಷ್ಯ ಸಂಗ್ರಹಕ್ಕಾಗಿ ಈ ಸಮಾಧಿಯನ್ನು ತೆರೆದು ಪರಿಶೀಲನೆ ನಡೆಸಲು ಉದ್ದೇಶಿಸಿದ್ದಾರೆ. ಕ್ರಿಸ್ತಪೂರ್ವ 33 ಶತಮಾನದಲ್ಲಿ ಬದುಕಿದ್ದರೆನ್ನಲಾದ ಜೀಸಸ್ ಅವರ ಪಾರ್ಥಿವ ಶರೀರದ ಮಾದರಿಯ ಚಿತ್ರ ಲಭಿಸಿದೆ. ಈ ಸಮಾಧಿಯಲ್ಲಿ ಜೀಸಸ್ ಅವರ ಪೇಟಿಂಗ್ ಮಾಡಿದ ರೀತಿಯ ಚಿತ್ರದಂತಿದೆ.
ಸಮಾಧಿಯ ಮೇಲೆ ಹಾಕಲಾಗಿದ್ದ ಮೊಸೆಕ್ ಚಪ್ಪಡಿಯನ್ನು ತೆರವುಗೊಳಿಸಿದಾಗ ಸ್ಥಳದಲ್ಲಿದ್ದ ಛಾಯಾಗ್ರಾಹಕ ತೆಗೆದ ಫೋಟೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನು 3 ದಿನಗಳ ಮಟ್ಟಿಗೆ ಇತಿಹಾಸ ತಜ್ಞರಿಗಾಗಿ ಬಿಟ್ಟು ಕೊಡಲಾಗಿದೆ. 1810 ಅಥವಾ ಅದಕ್ಕಿಂತ ಮುನ್ನ ಒಮ್ಮೆ ಜೀಸಸ್ ಅವರ ಸಮಾಧಿಯ ಬಾಗಿಲು ತೆರೆಯಲಾಗಿತ್ತು ಎಂದು ಚರ್ಚ್‌ನ ಫಾದರ್ ಸ್ಯಾಮ್ಯುಯೆಲ್ ಅಗೊನಯ್ ತಿಳಿಸಿದ್ದಾರೆ.
ಗ್ರೀಕ್ ಮೂಲದ ತಜ್ಞರು ಕೂಡ ಈ ತಂಡದಲ್ಲಿದ್ದು, ಸಮಾಧಿಯ ಕಲ್ಲುಗಳು ಹಾಗೂ ಮಾರ್ಬೆಲ್ ಅನ್ನು ಕೂಡ ಪರಿಶೀಲನೆಗೊಳಪಡಿಸಲಾಗುವುದು ಎಂದು ಹೇಳಲಾಗಿದೆ. ಇದೇ ವೇಳೆ ಸಮಾಧಿ ಮೇಲಿನ ಮಾರ್ಬೆಲ್ ತೆರವು ಗೊಳಿಸುತ್ತಿದ್ದಂತೆ ಕೈ ನಡುಗಿತು ಎಂದು ಸಿಬ್ಬಂದಿ ಹೇಳಿಕೊಂಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
