fbpx
ದೇವರು

ಶಬರಿ ಮಲೆಯಲ್ಲಿರುವ 18 ಮೆಟ್ಟಿಲುಗಳ ಮಹಿಮೆ ನಿಮಗೆ ಗೊತ್ತಾ?

ಶಬರಿ ಮಲೆಯಲ್ಲಿರುವ  18 ಮೆಟ್ಟಿಲುಗಳ ಮಹಿಮೆ ನಿಮಗೆ ಗೊತ್ತಾ ?

ದೇಶದಲ್ಲಿರುವ ಹಲವಾರು ಮಂದಿರಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಕೆಲವೊಂದು ಮಂದಿರದ ಒಳಗೆ ಪುರುಷರು ಬಟ್ಟೆಯನ್ನು ಧರಿಸದೇ ಬರೀ ಮೈಯಲ್ಲಿ ಹೋಗಬೇಕು. ಮಹಿಳೆಯರು ಸೀರೆಯುನ್ನುಟ್ಟು ಪ್ರವೇಶಿಸಬೇಕು. ಆದರೆ ಶಬರಿ ಮಲೆಯಲ್ಲಿರುವ ಅಯ್ಯಪ್ಪನ ದರ್ಶನಕ್ಕೆ ಹೋಗಬೇಕಾದರೆ ನಾವು ಕಠಿಣ ವ್ರತವನ್ನು ಆಚರಿಸಬೇಕಾಗುತ್ತದೆ. ಅಲ್ಲಿಗೆ ಬರುವ ಭಕ್ತರು ಹೆಚ್ಚಾಗಿ ಪುರುಷರು.ಮಹಿಳೆಯರಿಗೆ ಇಲ್ಲಿ ಪ್ರವೇಶ ನಿಷಿದ್ಧ ಎನ್ನಲಾಗಿದೆ.

ಆದರೆ ಹತ್ತು ವರ್ಷಕ್ಕಿಂತ ಸಣ್ಣ ಪ್ರಾಯದ ಹುಡುಗಿಯರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅಲ್ಲಿಗೆ ಹೋಗಬಹುದು.ಅಯ್ಯಪ್ಪನ ದರ್ಶನಕ್ಕೆ ಹೋಗಬೇಕಾದರೆ ಅಲ್ಲಿ 18 ಮೆಟ್ಟಿಲುಗಳನ್ನು ಏರಬೇಕು.ಈ ಮೊದಲು 41 ದಿನಗಳ ಕಾಲ ಕಠಿಣ ವ್ರತವನ್ನು ಮಾಡಬೇಕು.ಈ ವ್ರತದ ವೇಳೆ  ಬೆಳ್ಳಗ್ಗೆ ನಾಲ್ಕು ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ಅಯ್ಯಪ್ಪನ ಭಜನೆ ಮಾಡಬೇಕು.

ಆಹಾರದಲ್ಲಿ ಬೆಳ್ಳುಳ್ಳಿ ಹಾಗೂ ಈರುಳ್ಳಿ ಸೇವನೆ ಮಾಡಬಾರದು. ಮದ್ಯಪಾನ ಹಾಗೂ ಧೂಮಪಾನ ನಿಷಿದ್ಧ.ಕಪ್ಪು ಅಥವಾ ಕೇಸರಿ ಬಟ್ಟೆ ಧರಿಸಬೇಕು.ವ್ರತದ 41 ನೇ ದಿನದಂದು ಇರು ಮುಡಿಯನ್ನು ತಲೆಯ ಮೇಲಿಟ್ಟು ಶಬರಿಮಲೆಗೆ ಪ್ರಯಾಣ ಬೆಳೆಸಲಾಗುತ್ತದೆ. 18 ಮೆಟ್ಟಿಲುಗಳನ್ನು ಏರಿದ ಬಳಿಕ ಅಯ್ಯಪ್ಪ ದೇವರ ದರ್ಶನವಾಗುತ್ತದೆ.

18 ಮೆಟ್ಟಿಲುಗಳ ಪ್ರಾಮುಖ್ಯತೆ ಏನು ಎಂದು ತಿಳಿದುಕೊಳ್ಳೋಣ.

ಮೊದಲ ಐದು ಮೆಟ್ಟಿಲುಗಳು.

ಮೊದಲ ಐದು ಮೆಟ್ಟಿಲುಗಳ ಪಂಚೇಂದ್ರಿಯಗಳು.ನಮ್ಮ ದೇಹದಲ್ಲಿರುವ ಮೂಗು,ಕಿವಿ,ಕಣ್ಣು, ಬಾಯಿ ಮತ್ತು ಸ್ಪರ್ಶವನ್ನು ಈ ಪಂಚೇಂದ್ರಿಯಗಳು ಎನ್ನಲಾಗುತ್ತದೆ.

ಪಂಚೇಂದ್ರಿಯಗಳು.

ಮಾನವನ ಕಣ್ಣುಗಳು ಯಾವಾಗಲೂ ಒಳ್ಳೆಯದನ್ನೇ ನೋಡಬೇಕು ಮತ್ತು ಆಶುಭವನ್ನು ನೋಡುವುದರಿಂದ ದೂರವಿರಬೇಕು ಎನ್ನಲಾಗಿದೆ. ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳಬೇಕು ಮತ್ತು ಗಾಳಿ ಸುದ್ದಿಗಳಿಗೆ ಕಿವಿ ಗೊಡಬಾರದು. ನಾಲಗೆ ಯಾವಾಗಲೂ ಒಳ್ಳೆಯದನ್ನೇ ಮಾತನಾಡಬೇಕು. ಇದಕ್ಕಾಗಿಯೇ ಅಯ್ಯಪ್ಪನ ಧ್ಯಾನವನ್ನು ಮಾಡುತ್ತಾ ಇರಬೇಕು  ಎನ್ನುವುದು ಇದರ ಅರ್ಥ. ಯಾವಾಗಲೂ ತಾಜಾ ಗಾಳಿಯನ್ನು ಉಸಿರಾಡಬೇಕು ಮತ್ತು ದೇವರಿಗೆ ಅರ್ಪಿಸುವಂತಹ ಪುಷ್ಪಗಳ ಸುಗಂಧವನ್ನು ತೆಗೆದುಕೊಳ್ಳಬೇಕು.ಸ್ಪರ್ಶವನ್ನು ಸಂಬಂಧಿಸಿದ ವ್ಯಕ್ತಿಯೊಬ್ಬನು ಯಾವಾಗಲೂ ಜಪ ಮಾಲೆಯೊಂದಿಗೆ ದೇವರ ಧ್ಯಾನ ಮಾಡುತ್ತಿರಬೇಕು.

ಮುಂದಿನ 8 ಮೆಟ್ಟಿಲುಗಳು ಅಷ್ಟರಾಗ.

ಅಷ್ಟರಾಗವೆಂದರೆ ಕಾಮ,ಕ್ರೋಧ, ಲೋಭ, ಮೋಹ, ಮಧ,ಮತ್ಸರ ,ಅಸುಯೇ ಮತ್ತು ಉಕ್ತಿ.

ಅಷ್ಟರಾಗದ ಅರ್ಥವೇನು.

ಅಷ್ಟರಾಗದ ಅರ್ಥವೆಂದರೆ ಮನುಷ್ಯರಿಗೆ ಅಹಂಕಾರ ಇರಬಾರದು ಮತ್ತು ಜೀವನದಲ್ಲಿ ಯಾವುದಕ್ಕೂ ದುರಾಸೆ ಪಡಬಾರದು.ಕೆಟ್ಟ ಜನರು  ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನೆಡೆಯುವಂತೆ ಆತ ಮಾಡಬೇಕು.

ಮುಂದಿನ ಮೂರು ಮೆಟ್ಟಿಲುಗಳು.

ತ್ರಿಗುಣಗಳೆಂದರೆ ಸತ್ವ,ರಜಸ ಮತ್ತು ಥಾಮಸ .ತ್ರಿಗುಣಗಳ ಅರ್ಥವೆಂದರೆ ವ್ಯಕ್ತಿಯೊಬ್ಬನು ಯಾವಾಗಲೂ ಚಟುವಟಿಕೆಯಿಂದ ಇರಬೇಕು.ಉದಾಸೀನವನ್ನು ಬಿಡಬೇಕು.ಯಾವುದೇ ಅಹಂಕಾರ ಆತನಲ್ಲಿ ಇರಬಾರದು ಮತ್ತು ದೇವರಿಗೆ ಆತ ಶರಣಾಗಬೇಕು.

ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅವಿದ್ಯೆ.

ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಮತ್ತು ಅವಿದ್ಯೆ.ವಿದ್ಯೆಯಿಂದ ಜ್ಞಾನ ಅಹಂನ್ನು ತ್ಯಜಿಸಿ.ನಾವು ವಿದ್ಯೆಯನ್ನು ಪಡೆಯಬೇಕಾಗಿದೆ ಮತ್ತು ಮೋಕ್ಷದೆಡೆಗೆ ಸಾಗಬೇಕು.

ಮನವರಿಕೆ.

ಶಬರಿಮಲೆಯಲ್ಲಿ 18 ಮೆಟ್ಟಿಲುಗಳನ್ನು ಹತ್ತಿದ ಬಳಿಕ ಭಕ್ತರಿಗೆ ಜೀವನದ ಬಗ್ಗೆ ಮನವರಿಕೆಯಾಗುತ್ತದೆ. ಜೀವನದ ಜ್ಞಾನ ಅವರಿಗೆ ಸಿಗುತ್ತದೆ ಮತ್ತು ಜೀವನದ ಗುರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ.

ತೆಂಗಿನ ಕಾಯಿ ಒಡೆಯುವುದು.

ಮೊದಲೇ ಹೇಳಿದಂತೆ ಇರು ಮುಡಿಯನ್ನು ತಲೆಯ ಮೇಲೆ ಇಟ್ಟುಕೊಂಡು 18 ಮೆಟ್ಟಿಲುಗಳನ್ನು ಏರಬೇಕು.ಇರು ಮುಡಿಯಲ್ಲಿರುವ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ನೀಡಲಾಗುತ್ತದೆ. ಇಲ್ಲಿ ನೀಡಲಾಗಿರುವ ಪ್ರಸಾಧವನ್ನು ಮನೆಗೆ ಕೊಂಡೊಯ್ಯಲಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top