fbpx
ಸಣ್ಣ ಕಥೆ

ಹೆಂಡತಿ ವಿಷ್ಯದಲ್ಲಿ ತಪ್ಪು ಹುಡುಕೋ ಗಂಡಂದಿರು ಓದಲೇಬೇಕಾದ ಕಥೆ

ಬೀರನಲ್ಲನ ಬುದ್ಧಿಯ ಕಥೆ – ಎಲ್ಲಾ ಪತಿಯರಿಗೂ ಇದೊಂದು ಪಾಠ.

 

ದಿಲ್ಲಿ ಶಹರಿನಲ್ಲಿ ತಡಕುಮಲ್ಲನೆಂಬ ಒಬ್ಬ ಮುಂಗೋಪಿ ಇದ್ದ.ಒಮ್ಮೆ ಸಿಟ್ಟಿಗೆದ್ದರೆ ತಡಕುಮಲ್ಲ ಏನು ಮಾಡುತ್ತಾನೆ ಎಂದು ಕಲ್ಪನೆ ಯಾರಿಗೂ ಇರಲಿಲ್ಲ.ಹೀಗಿರುವಾಗ ಒಂದು ದಿನ ತಡಕುಮಲ್ಲನಿಗೆ ತನ್ನ ಹೆಂಡತಿಯ ಮೇಲೆ ಸಿಟ್ಟು ಬಂತು.ಏನೇ ಮೊಗರ(ಪತ್ನಿಯ ಹೆಸರು) ನಾನು ನಿನಗೆ ಎಷ್ಟು ಬಾರಿ ಹೇಳಿಲ್ಲ ನನಗೆ ಪಲ್ಯದಲ್ಲಿ ಕಡಿಮೆ ಉಪ್ಪು ಇರುವುದು ಇಷ್ಟ ಇಲ್ಲ ಅಂತ. ತಡೀರಿ ಈಗ ಹಾಕ್ತಿನಿ ಪಲ್ಯಕ್ಕೆ ಉಪ್ಪು ಅಂತ ಉಪ್ಪನ್ನೇ ತಂದು ಹಾಕಿದಳು. ಅದಕ್ಕೆ ತಡಕುಮಲ್ಲ ಇಷ್ಟೊಂದು ಉಪ್ಪ ಏನು ಒಂದೇ ಬಾರಿಗೆ ನನ್ನನ್ನು ಸಾಯಿಸಬೇಕು ಅಂದುಕೊಂಡಿದ್ದೀಯ ಏನು ಎಂದ. ತಡೀರಿ  ಇನ್ನೂ ಸ್ವಲ್ಪ  ಪಲ್ಯ ಹಾಕ್ತಿನಿ ಅದಕ್ಕೆ ಅಂದಳು.

ಅಬ್ಬಬ್ಬಾ ಬ್ಬಾ ಈ ಚಪಾತಿ ಇಷ್ಟು ಗಟ್ಟಿಯಾಗಿದೆ.ಇದರಿಂದ ನನ್ನ ಹಲ್ಲುಗಳೇ ತುಂಡಾಗಿ ಹೋದವು .ಎಲ್ಲಿಂದ ಇಂತ ಪತ್ನಿ ಸಿಕ್ಕಿದಳೋ ಏನೋ.

ನಾನು ನಿನಗೆ ಎಷ್ಟು ಬಾರಿ ಹೇಳಿದ್ದೆ ಊಟದಲ್ಲಿ ಅನ್ನ ಬಿಟ್ಟರೆ ಬೇರೆ ಏನು ಇರಬಾರದು ಅಂತ ಏನಿದು ಕೂದಲು ಎಲ್ಲಿಂದ ಬಂತು.ಅಯ್ಯೋ ಅದು ತಪ್ಪಾಗಿ ಬಿದ್ದಿರಬೇಕು.  ನನ್ನನ್ನು ಕ್ಷಮಿಸಿ.ಇನ್ನೊಮ್ಮೆ ಇಂತಹ ತಪ್ಪು ಆಗುವುದಿಲ್ಲ. ನನ್ನನ್ನು   ದಯವಿಟ್ಟು ಕ್ಷಮಿಸಿ ಎಂದಳು.

ಅದಕ್ಕೆ ತಡಕುಮಲ್ಲ ಇನ್ನೊಮ್ಮೆ ಈ ರೀತಿ ಕೂದಲು ಏನಾದರೂ ಸಿಕ್ಕಿದರೆ ನಿನ್ನ ಕೂದಲನ್ನು ಕತ್ತರಿಸಿ ಹಾಕಿಬಿಡ್ತೀನಿ.ಆಮೇಲೆ  ನೋಡು ಊಟದಲ್ಲಿ ಕೂದಲು ಹೇಗೆ ಬರುತ್ತೆ ಅಂತ.

ತಡಕಮಲ್ಲ ಪತ್ನಿಯನ್ನು ಎಷ್ಟು ಗದರಿಸಿದರೂ, ಒಂದು ಬಾರಿ ಆಗೋ ತಪ್ಪು ಆಗೇ ಹೋಯಿತು.ಇಷ್ಟಾದರೂ ತಡಕಮಲ್ಲನಿಗೆ ಭೋಜನದಲ್ಲಿ ಒಂದು ಕೂದಲು ಸಿಕ್ಕೇಬಿಟ್ಟಿತು. ಅದು ತಪ್ಪಿ ಬಂದಿರಬೇಕು ಈಗಂತೂ  ನಾನು ಮೊದಲೇ ಕೂದಲು ಬಾಚಿರತೀನಿ,ಎಂದಳು  ಮೊಗರ.

ತಡಕಮಲ್ಲನು ಕೋಪದಿಂದ ಈಗಲೇ ಹೋಗಿ ಹಜಾಮನನ್ನು ಕರೆದು ತರುತ್ತೀನಿ ಎಂದ.ಬೇಡ ಬೇಡ ರೀ ಇನ್ನು ಮುಂದೆ ಹಾಗೆ ಆಗುವುದಿಲ್ಲ.ನನ್ನ ಕೂದಲನ್ನು ಕತ್ತರಿಸಬೇಡಿ.ಅದಕ್ಕೆ ತಡಕಮಲ್ಲನು ಕಳೆದ ಬಾರಿಯೂ ನೀನು ಹೀಗೆ ಅಂದಿದ್ದೇ ಮತ್ತೆ ಈಗ ಕೂದಲು ಎಲ್ಲಿಂದ ಬಂತು.ಹೀಗೆ ಹೇಳಿದರೆ ನೀನು ಸುಧಾರಿಸಿಕೊಳ್ಳೋದಿಲ್ಲ  ಹೋಗು ಇಲ್ಲಿಂದ.

ಪತಿಯೆದರು ತನ್ನ ಬೇಳೆ ಬೆಯೋದಿಲ್ಲ ಎಂದು ಅರಿತಳು ಮೊಗರ. ಹಜಾಮನ  ಬಳಿಗೆ ನೆಡೆದಳು.ಅವನಿಗೆ ಎಲ್ಲಾ ವಿಷಯವನ್ನು ತಿಳಿಸಿದಳು. ಅವಳ ಎಲ್ಲಾ ಮಾತುಗಳನ್ನು ಕೇಳಿದ ಹಜಾಮನಿಂದ.ಅಕ್ಕಾ, ನಿಮ್ಮ ಪತಿಯೆದುರು ನನ್ನ ಮಾತು ನೆಡೆಯೋದು  ಕಷ್ಟ .ಒಂದು ಕೆಲಸ ಮಾಡೋಣ ,ನಡೆಯಿರಿ ನಾವು ಬೀರಬಲ್ಲನ ಬಳಿ ಹೋಗೋಣ. ಅವರಿಂದ ಏನಾದರೂ ಸಲಹೆ ಸಿಗಬಹುದು,ಎಂದನು.

ಮೊಗರ ಮತ್ತು ಹಜಾಮ ಬೀರಬಲ್ಲನನ್ನು ಭೇಟಿ ಯಾದರೂ ಇವರಿಂದ ಎಲ್ಲಾ ವಿಷಯವನ್ನು ತಿಳಿದ ಬೀರಬಲ್ಲನು ಈಗ ನಾನು ಹೇಳಿದಂತೆ  ನೀವು  ಮಾಡಿ ಎಂದು ಹೇಳಿದನು.

 

ಹಜಾಮನು ತಡಕಮಲ್ಲನ ಮನೆಗೆ ಬಂದು ,ಓ ತಡಕಮಲ್ಲರೇ ನಡೀರಿ ಬೇಗ ಬೇಗ ನಡೀರಿ,ತಡಕಮಲ್ಲ ಮನೆಯಿಂದ ಹೊರಗೆ ಬಂದು ಬಾಗಿಲು ತೆಗೆದು , ಹಜಾಮ ನೀನು ಮೊಗರ ಎಲ್ಲಿದ್ದಾಳೆ.ನಾನು ಅವರನ್ನು ಸ್ನಾನ ಮಾಡಲು ಕಳುಹಿಸಿದ್ದೇನೆ.ಇಲ್ಲವೆಂದರೆ ಸರಿಯಾಗಿ ಕೂದಲು ಕತ್ತರಿಸಲು ಸಾಧ್ಯವಾಗುವುದಿಲ್ಲ ಎಂದನು ಹಜಾಮ. ತಡಕಮಲ್ಲನು ಒಳ್ಳೆ ಕೆಲಸ  ಮಾಡಿದೆ ನೀನು.

ಹಜಾಮ,ಹಾಗಾದರೆ ನೀವೊಂದು ಕೆಲಸ ಮಾಡಿ. ಈ ವಿಷ ತಗೊಂಡು ಘಟಕ ಅಂತ ಒಮ್ಮೆಲೆ ಕುಡಿದು ಬಿಡಿ. ತಡಕಮಲ್ಲನು ಅಲ್ಲ ಇದನ್ನು ನಾನ್ಯಾಕೆ ಕುಡೀಲಿ. ನಿಮ್ಮ ಪತ್ನಿಯ ಕೂದಲು ಕತ್ತರಿಸಲಿಕ್ಕೆ ಇದೆಯಲ್ಲಾ ಅದಕ್ಕೆ.ಯಾಕೆ  ? ಮತ್ತೇನೂ ಮತ್ತೆ ನೀವೂ ಸಾಯದೇ ನಾನು ಹೇಗೆ ಕೂದಲು ಕತ್ತರಿಸುವುದು.ನಮ್ಮ ಧರ್ಮದಲ್ಲಿ ಹಾಗೆ ಹೇಳಿದ್ದಾರೆ. ನಡೀರಿ ನಡೀರಿ ಶೀಘ್ರವಾಗಿ ಮತ್ತೊಂದು ಮಡಿಕೆ ಹಿಡಿಯುವವನನ್ನು ಕರೆಯಲು ಕಳುಹಿಸಿದ್ದೇನೆ. ಅಲ್ಲಿ ಸ್ಮಶಾನದಲ್ಲಿ ಚಿತೆಯು ತಯಾರಾಗಿರಬೇಕು. ಈಗಲ್ಲಿ ಹಳ್ಳಿಯವರೆಲ್ಲರೂ ಸೇರಿರಬೇಕು. ಶೀಘ್ರ ತಗೊಳ್ಳಿ ಈ ವಿಷ ತಗೊಳ್ಳಿ ಎಂದ ಹಜಾಮ.

ತಡಕಮಲ್ಲನು “ಬೇಡ ಬೇಡ ಹಜಾಮ ಸಾಯೆಬ್ರೆ”.

ಹಜಾಮನು ಯಾಕೆ ಬೇಡ,ಬೀರಬಲ್ಲನು ಈ ವಿಷವನ್ನು ನಿಮಗಾಗಿಯೇ ಕಳುಹಿಸಿದ್ದಾರೆ.ಮತ್ತಿನ್ನೇನು ಎಷ್ಟು ಆದ್ದೂರಿಯಿಂದ ನಿಮ್ಮ ಅಂತಿಮ ಯಾತ್ರೆ ಹೊರಡಲಿದೆ. ನಿಮಗೆ ಗೊತ್ತೇ ನೀವು ನಿಮ್ಮ ಧರ್ಮದ ಆದರವನ್ನು   ಮಾಡುತ್ತಿರುವಿರಿ. ಆದ್ದರಿಂದ ಸ್ವತಃ  ಭಾಧುಷರೂ ಕೂಡ ನಿಮ್ಮ ಅಂತಿಮ ಯಾತ್ರೆಗೆ ಆಗಮಿಸಲಿದ್ದಾರೆ.ನೀವು ತುಂಬಾ ಅದೃಷ್ಟವಂತರೂ”ಎಂದನು ಹಜಾಮ.

ತಡಕಮಲ್ಲನು ಹಜಾಮ ಸಾಯೆಬ್ರೆ ನನ್ನಿಂದ ತಪ್ಪಾಯ್ತು ಇಷ್ಟು ಘೋರ ಶಿಕ್ಷೆ ನೀಡಬೇಡಿ ನನಗೆ ಮತ್ತೆ ನೀವು ನಿಮ್ಮ ಪತ್ನಿಗೆ ಅದೆಷ್ಟು ಘೋರ ಶಿಕ್ಷೆ ನೀಡುತ್ತಿದ್ದೀರಿ  ತಡಕಮಲ್ಲರೇ. ನಿಮ್ಮ ಮಾತು ನಿಜ, ತಪ್ಪಾಯ್ತು, ನಿಜವಾಗಿಯೂ ತಪ್ಪಾಯ್ತು.ನೀವು ನನ್ನ ಕಣ್ತೆರೆಸಿದಿರಿ “ಅಯ್ಯಾ ನಿಮ್ಮ ಕಣ್ತೆರೆಸಲು ನಾನ್ಯಾರು. ಈ ಕೆಲಸ ಬುದ್ಧಿಯಲ್ಲಿ  ಚತುರರಾದ ಬೀರಬಲ್ಲರದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top