fbpx
ದೇವರು

ಹಸಿದುಬಂದ ಭಕ್ತರಿಗೆ ಊಟಕೊಡೋ ದೇಶದ ಪ್ರಮುಖ 9 ದೇವಸ್ಥಾನಗಳು…

ಹಸಿದು ಬರೋ ಭಕ್ತರಿಗೆ ಅದ್ಭುತವಾದ ಊಟ ಕೊಡೊ ದೇವಸ್ಥಾನಗಳು ಇವು !

ಶಿರಡಿ ಶ್ರೀ ಸಾಯಿ ದೇವಾಲಯ:

ಇದು ಭಾರತದಲ್ಲಿಯೇ ಅತಿದೊಡ್ಡ ಸೌರ ಅಡಿಗೆಮನೆಗಳಲ್ಲಿ ಒಂದು
ಮಹಾರಾಷ್ಟ್ರದ ಶಿರಡಿ ಶ್ರೀ ಸಾಯಿ ಸಂಸ್ಥಾನ ಪ್ರಸಾದಾಲಯ 4 ಮೇಲ್ಛಾವಣಿಗಳು 73 ಸೌರ ಫಲಕಗಳಿಂದ ಕೂಡಿದ್ದು ಪ್ರತಿಯೊಂದು 16 ಚದರ ಮೀಟರ್ ಗಾತ್ರದ್ದು , ದಿನದಲ್ಲಿ ಸುಮಾರು 40,000 ಊಟ ತಯಾರು ಮಾಡುತ್ತಾರೆ ಅಷ್ಟೇ ಅಲ್ಲದೇ ತಾಜಾ ಊಟ ಜೊತೆಗೆ ಉಪಹಾರ ಪ್ಯಾಕೆಟ್ಗಳನ್ನು ಬೆಳಿಗ್ಗೆ ಉಚಿತವಾಗಿ ವಿತರಿಸಲಾಗುತ್ತದೆ

ಅಮೃತಸರ, ಪಂಜಾಬ್ ಗೋಲ್ಡನ್ ಟೆಂಪಲ್:

ಅಮೃತಸರ, ಪಂಜಾಬ್ ಗೋಲ್ಡನ್ ಟೆಂಪಲ್ ನಲ್ಲಿ 2,00,000 ರೋಟಿಗಳನ್ನ ದಿನನಿತ್ಯ ಮಾಡಲಾಗುತ್ತದೆ ಮತ್ತು 1.5 ಟನ್ ಬೇಳೆ ಸಾರು ತಯಾರು ಮಾಡಲಾಗುತ್ತದೆ , 100 ಎಲ್ಪಿಜಿ ಸಿಲಿಂಡರ್ಗಳನ್ನು ಮತ್ತು 5,000 ಕಿಲೋಗ್ರಾಂಗಳಷ್ಟು ಸೌದೆಯನ್ನು ಪ್ರತಿದಿನವು ಬಳಸುತ್ತದೆ.

ಇಸ್ಕಾನ್ ಫೌಂಡೇಶನ್ :

ಇಸ್ಕಾನ್ ಫೌಂಡೇಶನ್ ನ ಅಕ್ಷಯ ಪಾತ್ರೆ ಯೋಜನೆಯು ಸಹ ಲಕ್ಷಾಂತರ ಸಂಖ್ಯೆಯಲ್ಲಿ ಶಾಲೆಯ ಮಕ್ಕಳಿಗೆ ಊಟವನ್ನು ನೀಡುತ್ತಿದ್ದು ಹುಬ್ಬಳ್ಳಿಯ ISCKON ಅಡುಗೆ ಮನೆ 150,000 ಊಟವನ್ನು ಪ್ರತಿ ನಿತ್ಯ ನೀಡುತ್ತಿದೆ.

ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ :

ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯದ ಅನ್ನಪೂರ್ಣ ಭೋಜನಾಲಯ ದಿನನಿತ್ಯ ಸುಮಾರು 70 ಕ್ವಿಂಟಾಲ್ ಅಕ್ಕಿ , 15 ಕ್ವಿಂಟಾಲ್ ತರಕಾರಿಗಳು , 2000 ತೆಂಗಿನಕಾಯಿ ಗಳನ್ನು ಬಳಸಲಾಗುತ್ತದೆ ಹಾಗು ಒಮ್ಮೆಗೆ 2500 ಜನರಿಗೆ ಊಟ ಬಡಿಸಲಾಗುತ್ತದೆ.

ಪುರಿ ಜಗನ್ನಾಥ ದೇವಾಲಯ :

ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ದಿನವೂ 25,೦೦೦ ಜನರಿಗೆ ಊಟವನ್ನು ಬಡಿಸಲಾಗುತ್ತದೆ ಮತ್ತು ಹಬ್ಬದ ದಿನಗಳಲ್ಲಿ 100,000 ಜನರಿಗೆ ಊಟ ಬಡಿಸಲಾಗುತ್ತದೆ.

ತಿರುಪತಿ ದೇವಾಲಯ :

ದಿನ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಊಟವನ್ನು ಭಕ್ತಾದಿಗಳಿಗೆ ಉಣಬಡಿಸಲಾಗುತ್ತದೆ.

ಕುಕ್ಕೆ ಸುಬ್ರಮಣ್ಯ ದೇವಾಲಯ :

ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ದಿನ ನಿತ್ಯ ಸುಮಾರು 5 ರಿಂದ 6 ಸಾವಿರ ಜನರಿಗೆ ಉಚಿತ ಊಟವನ್ನು ಬಡಿಸಲಾಗುತ್ತದೆ.

ವೈಷ್ಣೋ ದೇವಿ ದೇವಾಲಯ :

ಜಮ್ಮುವಿನ ವೈಷನೋ ದೇವಿ ದೇವಾಲಯದಲ್ಲಿ ಲಕ್ಷಾಂತರ ಜನರಿಗೆ ದಿನನಿತ್ಯ ಉಚಿತ ಊಟವನ್ನು ಬಡಿಸಲಾಗುತ್ತದೆ.

ಸಲಸಾರ್ ದೇವಾಲಯ :

ರಾಜಸ್ತಾನದ ಚುರುವಿನಲ್ಲಿರುವ ಸಲಸಾರ್ ದೇವಾಲಯದಲ್ಲಿ ಸಾವಿರಾರು ಜನರಿಗೆ ದಿನನಿತ್ಯ ಉಚಿತ ಊಟವನ್ನು ಬಡಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top