ಊಟ ಮಾಡಿದ ನಂತರ ಯಾವ ಯಾವ ಕೆಲಸಗಳನ್ನು ಮಾಡಬಾರದು , ಹಾಗೆ ಮಾಡಿದರೆ ಆರೋಗ್ಯವು ಕ್ಷೀಣಿಸುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಅಪಾಯ ಕೂಡ ಸಂಭವಿಸುತ್ತವೆ ಎಂದು ಉಲ್ಲೇಖಿಸಲಾಗಿದೆ.ಅಂತಹ ಕೆಲಸಗಳು ಯಾವುವು ನಾವು ಯಾಕೆ ಊಟ ಮಾಡಿದ ನಂತರ ಅವುಗಳನ್ನು ಮಾಡಬಾರದು ಎಂದು ತಿಳಿಯೋಣ ಬನ್ನಿ.ನಿಮಗೆ ಗೊತ್ತಾ ನಮ್ಮ ಹೊಟ್ಟೆಯೊಳಗೆ ಗ್ಯಾಸ್ಟ್ರಿಕ್ ಆಮ್ಲವು(hcl-hydro chloric acid) ಒಂದು ದಿನಕ್ಕೆ ಎರಡು ಲೀಟರ್ ನಷ್ಟು ಉತ್ಪತ್ತಿಯಾಗುತ್ತದೆ.
1.ಹಣ್ಣುಗಳನ್ನು ತಿನ್ನಬಾರದು.
ಊಟ ಮಾಡಿದ ನಂತರ ಹಣ್ಣುಗಳನ್ನು ತಿನ್ನಬಾರದು,ಊಟ ಮಾಡಿದ ತಕ್ಷಣ ಹಣ್ಣನ್ನು ತಿನ್ನುವುದರಿಂದ ಹೊಟ್ಟೆಯೊಳಗೆ ಗಾಳಿಯ ಪ್ರಮಾಣ ಅಧಿಕವಾಗಿ ಸೇರಿಕೊಂಡು ಆಹಾರ ಬಹು ಬೇಗ ಜೀರ್ಣವಾಗುವುದಿಲ್ಲ.ಅಜೀರ್ಣವಾಗಿ ಆಹಾರ ವಿಷವಾಗುವ ಸಂಭವ ಇದೆ.ಒಂದು ವೇಳೆ ಪ್ರತಿ ದಿನ ಈ ರೀತಿ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಇರುವವರು ಮಾತ್ರ ಊಟಕ್ಕಿಂತ ಒಂದು ಗಂಟೆ ಮುಂಚೆ ಅಥವಾ ಊಟ ಆದ ಒಂದು ಗಂಟೆಯ ನಂತರ ಸೇವಿಸುವುದು ಉತ್ತಮ.
2.ಟೀ ಕುಡಿಯುವ ಅಭ್ಯಾಸ.
ಕೆಲವರಿಗೆ ಬೆಳ್ಳಗ್ಗೆ ತಿಂಡಿಯ ನಂತರ ಟೀ ಕುಡಿಯುವ ಅಭ್ಯಾಸ ಇದೆ. ಅದರಲ್ಲೂ ನಮ್ಮ ಭಾರತದ ದೇಶದವರಲ್ಲಿ ಈ ಅಭ್ಯಾಸ ಅಧಿಕ ಜನರಲ್ಲಿ ಇರುವುದು.ಹೀಗೆ ಆಹಾರವನ್ನು ತಿಂದ ನಂತರ ಟೀ,ಕಾಫಿ ಕುಡಿಯುವುದರಿಂದ ನಮ್ಮ ದೇಹವು ನಾವು ತಿನ್ನುವ ಆಹಾರದಲ್ಲಿ ಇರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವು ಇರುವುದಿಲ್ಲ.ಆದ್ದರಿಂದ ಟೀ,ಕಾಫಿಯನ್ನು ಕುಡಿಯದೇ ಇರುವುದು ಆರೋಗ್ಯಕ್ಕೆ ಆದಷ್ಟು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ.
3.ನಿದ್ರೆ ಮಾಡಬಾರದು.
ಊಟವನ್ನು ಮಾಡಿದ ನಂತರ ಮಧ್ಯಹ್ನವಾಗಲಿ ಅಥವಾ ರಾತ್ರಿಯಾಗಲಿ ನಿದ್ದೆ ಮಾಡಬಾರದು. ನಿದ್ರೆ ಮಾಡಿದರೆ ಇದು ಜೀರ್ಣ ಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ.ನಾವು ತಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ.ಹಾಗೆ ನಿದ್ದೆ ಮಾಡಲೇಬೇಕು ಎನ್ನುವರು 10 ನಿಮಿಷ ಮಾತ್ರ ನಿದ್ರೆ ಮಾಡಿ ಎದ್ದುಬಿಡಿ. ನಿದ್ರೆ ಮಾಡುವುದಕ್ಕಿಂತ ಕನಿಷ್ಠ ಪಕ್ಷ ಎರಡು ಗಂಟೆ ಮುಂಚಿತವಾಗಿಯೇ ಊಟ ಮಾಡುವುದು ಒಳ್ಳೆಯದು.
4.ನಡೆದಾಡಬಾರದು.
ಊಟ ಮಾಡಿದ ತಕ್ಷಣ ನೆಡೆದಾಡುವುದು,ಓಡುವುದು ,ವ್ಯಾಯಾಮ ಮಾಡುವುದು ಇವುಗಳನ್ನು ಮಾಡಬಾರದು. ಯಾಕೆಂದರೆ ಇದು ನಮ್ಮ ಹೊಟ್ಟೆಯೊಳಗೆ ಅಧಿಕ ಗ್ಯಾಸ್ಟ್ರಿಕ್ ಆಮ್ಲಗಳ ಉತ್ಪತ್ತಿ ಮಾಡುತ್ತದೆ. ಊಟದ ನಂತರ ಕುಳಿತು ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ.ಬೇಕಾದರೆ ಊಟ ಮಾಡಿದ 30 ನಿಮಿಷಗಳ ನಂತರ ನಡೆದಾಡಬಹುದು.
5.ಸ್ನಾನ ಮಾಡಬಾರದು.
ಊಟ ಮಾಡಿದ ತಕ್ಷಣ ಬೆಳ್ಳಗ್ಗೆಯಾಗಲ್ಲಿ ರಾತ್ರಿಯಾಗಲಿ ಸ್ನಾನ ಮಾಡಬಾರದು.ಇದು ಒಳ್ಳೆಯ ಅಭ್ಯಾಸವಲ್ಲ .ಹೀಗೆ ಮಾಡಿದರೆ ರಕ್ತವು ಕೈ ಕಾಲುಗಳಿಗೆ ಮತ್ತು ನಮ್ಮ ದೇಹಕ್ಕೆಲ್ಲ ಹರಿದು ಹೊಟ್ಟೆಯ ಬಾಗದಲ್ಲಿ ರಕ್ತವು ಕಡಿಮೆಯಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ.
6.ಈಜಾಡುವುದು ಅಪಾಯ.
ಊಟ ಮಾಡಿದ ತಕ್ಷಣ ಈಜಾಡುವುದು ಸಹ ಅಪಾಯ ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ರಕ್ತವು ವೇಗವಾಗಿ ಮತ್ತು ಅಧಿಕವಾಗಿ ಶರೀರದ ಮಾಂಸ ಖಂಡಗಳಿಗೆ ಹರಿದು ಸ್ಥಗಿತಗೊಳ್ಳುತ್ತದೆ. ವ್ಯಾಯಾಮ,ಜಿಮ್,ಆಟಗಳನ್ನು ಊಟ ಮಾಡಿದ ತಕ್ಷಣ ಮಾಡುವುದು ಒಳ್ಳೆಯದಲ್ಲವೆಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
