fbpx
ದೇವರು

ಹೀಗೆ ಮಾಡಿದ್ರೆ ಧನ ಸಂಪತ್ತು ಸದಾ ಮನೆಯಲ್ಲಿ ತುಂಬಿರತ್ತೆ

ಹೀಗೆ ಮಾಡಿದ್ರೆ ಧನ ಸಂಪತ್ತು ಸದಾ ಮನೆಯಲ್ಲಿ ತುಂಬಿರತ್ತೆ.

ಜೀವನದಲ್ಲಿ ಎಲ್ಲರೂ ಬಯಸುವ ಐಶ್ವರ್ಯ ಎಂದರೆ ಧನ. ಪುರಾಣ ಕಾಲದಲ್ಲಿ ಧನಕ್ಕಿಂತಲೂ ಮನಸ್ಸಿನ ಗುಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿತ್ತು.ಪುರಾಣಗಳಲ್ಲಿ ಕುಭೇರನಿಗೆ ಯಾವ ಅರ್ಹತೆಯೂ ಇಲ್ಲದ ಕಾರಣ ಧನವಾದರೂ ಇರಲಿ ಎಂದೇ ಅಪಾರ ಧನವನ್ನು ಭಗವಂತ ನೀಡಿದ ಎಂದೇ ತಿಳಿಸಲಾಗಿದೆ.

ಆದರೆ ಇಂದೂ  ಹೆಚ್ಚಿನವರು ಯಾವುದೇ ಅರ್ಹತೆಯನ್ನು ಬಯಸದೇ ಕೇವಲ ಕುಭೇರರಾಗಲು ಹವಣಿಸುತ್ತಿರುವುದನ್ನು ಸ್ಪಷ್ಟವಾಗಿಯೇ ಗಮನಿಸಬಹುದು. ಏಕೆಂದರೆ ಅರ್ಥ ವ್ಯವಸ್ಥೆಯೇ ಪ್ರಧಾನವಾದ ಇಂದಿನ ದಿನಗಳಲ್ಲಿ ಪ್ರತಿಯೊಂದು ಹಣದ ಮೂಲಕವೇ ಪಡೆಯಲಾಗುತ್ತದೆ. ಆರೋಗ್ಯ ನೆಮ್ಮದಿ ಸಹಾ!

ಆದರೆ ಈ ಧನ ಎಲ್ಲರ ಬಳಿ ಅಷ್ಟು ಸುಲಭವಾಗಿ ನಿಲ್ಲುವುದಿಲ್ಲ.ಕೆಲವರು ಮುತ್ತಿದ್ದೆಲ್ಲಾ ಚಿನ್ನವಾದರೆ ಉಳಿದವರು ಮುಟ್ಟಿದೆಲ್ಲಾ ಮಣ್ಣು ಎಂಬಂತೆ ಯಾವ ರೀತಿಯಾಗಿ ಹಣ ಸಂಪಾದಿಸಿದರೂ ಯಾವುದೇ ಕಾರಣಕ್ಕೂ ಕರಗಿಯೇ ಹೋಗುತ್ತದೆ.

ಧನ ಆಗಮಿಸಿದರೂ ಉಳಿಯದು.

ಕೆಲವೊಮ್ಮೆ ಉತ್ತಮ ಧನಾಗಮನದ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರೂ ಮನೆಯಲ್ಲಿ ಹಣ ಉಳಿಯಲಾರದು. ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೆಯೋ ಹೆಚ್ಚು ಕಡಿಮೆ ಅಷ್ಟೇ ಖರ್ಚು ಆಗಿ ಹೋಗುತ್ತದೆ. ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿಗೂ ಯಾವುದೇ ವ್ಯತ್ಯಾಸ ತೋರದಂತಾಗುತ್ತದೆ.ಇದಕ್ಕೆ ಮನೆಯ ವಸ್ತುಗಳು ಪ್ರಮುಖ ಕಾರಣವಾಗಿರಬಹುದು.ಇದನ್ನು ಸರಿಪಡಿಸುವ ಬಗೆ ಹೀಗಿದೆ.

ಈ ವಸ್ತುಗಳು ಮನೆಯಲ್ಲಿ ಇರಲಿ.

ಮನೆಗೆ ಆಗಮಿಸುವ ಧನ ಪೂರ್ಣ ಖರ್ಚಾಗದೇ ಉಳಿಯುವಂತಾಗಲು ಮನೆಯಲ್ಲಿ ಕೆಲವು ವಸ್ತುಗಳಿರಬೇಕು. ಇದು ಹಣವನ್ನು ಮತ್ತು ಸಮೃದ್ಧಿಯನ್ನು ಆಕರ್ಷಿಸಿ ಮನೆಯಲ್ಲಿ ಸ್ಥಿತಗೊಳಿಸಲು ನೆರವಾಗುತ್ತದೆ.

ಹನುಮಂತನ ವಿಗ್ರಹ.

ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ಹನುಮಂತನ ಪಂಚ ರೂಪದ ವಿಗ್ರಹವೊಂದನ್ನು ಸ್ಥಾಪಿಸಿ ಪ್ರತಿದಿನ ಪೂಜಿಸಿ ಪ್ರಾರ್ಥಿಸಿ. ಇದರಿಂದ  ಮನೆಯ ಅಭಿವೃದ್ಧಿಗೆ ಮತ್ತು ಹಣ ಸಂಗ್ರಹಕ್ಕೆ ಅಡ್ಡಿಯಾಗುತ್ತಿದ್ದ ತಡೆಗಳು ನಿವಾರಣೆಯಾಗುತ್ತವೆ.

ಲಕ್ಷ್ಮೀ ಕುಭೇರರ ಫೋಟೋ.

ಮನೆಯ ಹೊಸ್ತಿಲು ದಾಟಿ ಕಾಲಿಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮೀ ಕುಭೇರರು ಒಂದೇ ಫೋಟೋದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಫೋಟೋಗಳನ್ನು ಇರಿಸಿ.

ವಾಸ್ತು ದೇವರ ಫೋಟೋ ಅಥವಾ ವಿಗ್ರಹ .

ಮನೆಯ ಯಾವುದೇ ಭಾಗದಲ್ಲಿ ವಾಸ್ತು ದೇವರ ವಿಗ್ರಹ ಅಥವಾ ಚಿತ್ರವೊಂದನ್ನು ಇರಿಸಿದರೆ.ವಾಸ್ತು ದೋಷವನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಇದರಿಂದ ಮನೆಯ ಒಳಾಂಗಣದ ಪಾವಿತ್ರ್ಯತೆ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಉತ್ತಮ  ಬಾಂಧವ್ಯ ಏರ್ಪಡಲು ನೆರವಾಗುತ್ತದೆ.

ಮಣ್ಣಿನ ಮಡಿಕೆ.

ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಿಕೆ ಅಥವಾ ಸುರಾಹಿಯನ್ನು ಇರಿಸಿ.ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು. ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ.

ಎಲ್ಲಾ  ಶಕ್ತಿಗಳ ನೆಲೆ ಆಗಮಿಸುವಂತೆ ನೋಡಿಕೊಳ್ಳಿ.

ಸೂರ್ಯನಿಂದ ಸೌರಶಕ್ತಿ, ಚಂದ್ರನಿಂದ ಬೆಳದಿಂಗಳು, ಭೂಮಿಯಿಂದ, ಭೂಶಕ್ತಿ, ಆಯಸ್ಕಾಂತ ಶಕ್ತಿ, ವಿದ್ಯುತ್ ಶಕ್ತಿ, ಬೆಳಕು ಮತ್ತು ಗಾಳಿ, ಇವೆಲ್ಲವೂ ಪಡೆಯುವಂತಿರಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top