fbpx
ದೇವರು

ಓಂ ಎಂದರೇನು?ಓಂ ಶಾಂತಿ ಎಂದು ಏಕೆ ಹೇಳುತ್ತೇವೆ?

ಓಂ ಎಂದರೇನು ? ಓಂ ಶಾಂತಿ ಎಂದು ಮೂರು ಬಾರಿ ಏಕೆ ಹೇಳುತ್ತೇವೆ ?

ಓಂ ಎಂದರೇನು ?

ಓಂ ಅನ್ನು ಪ್ರಣವ ಎಂದು ಸಹ ಕರೆಯಲಾಗುತ್ತದೆ ಇದರ ಅರ್ಥ ಸಂಕೇತ ಅಥವಾ ಧ್ವನಿಯ ಮೂಲಕ ದೇವರನ್ನು ಆರಾಧಿಸುವುದು.

ಅ +] ಮಾ + ^’ ಈ ಸಂಕೇತಗಳು ಓಂ ಅನ್ನು ನಾಲ್ಕು ಭಾಗಗಳಲ್ಲಿ ಮುರಿದರೆ ಉಂಟಾಗುತ್ತದೆ , ಮಾನವ ಜೀವನದ ನಾಲ್ಕು ಹಂತಗಳಾದ ಜಾಗೃತಿ, ಸ್ವಪ್ನ, ಸುಷುಪ್ತಿ ಮತ್ತು ತುರ್ಯ ಇವುಗಳ ಸಂಕೇತವೇ ಓಂ
ವಿಶ್ವ, ತೇಜಾ, ಪ್ರಾಧ್ಯಾ ಮತ್ತು ಆತ್ಮ ಇವುಗಳ ಸಂಕೇತಗಳಾಗಿಯು ಸಹ ಓಂ ಇದೆ ಎನ್ನಲಾಗುತ್ತದೆ.
ಓಂಕಾರವು ಬ್ರಹ್ಮ , ವಿಷ್ಣು ಮಹೇಶ್ವರರ ಸಂಕೇತವಾಗಿದೆ.

ಕಠೋಪನಿಷತ್ ನಲ್ಲಿ ಓಂಕಾರ ಬ್ರಹ್ಮಾಂಡದ ಮೂಲ ಎಂದು ಪರಿಗಣಿಸಲಾಗುತ್ತದೆ.

ಎಲ್ಲಾ ವೇದ ಮತ್ತು ಪೌರಾಣಿಕ ಆಚರಣೆಗಳನ್ನು ಸಮಯದಲ್ಲಿ ಓಂಕಾರ ಮಂತ್ರವನ್ನು ಪಠಿಸಲಾಗುತ್ತದೆ.
ಇದನ್ನು ಬೌದ್ಧರು ಮತ್ತು ಜೈನರು ಸಹ ಒಪ್ಪಿಕೊಳ್ಳುತ್ತಾರೆ. ಬೌದ್ಧ ಮಂತ್ರ ಅವಲೋಕಿತೇಶ್ವರ ಓಂ ನಿಂದ ಆರಂಭವಾಗುತ್ತದೆ ಹಾಗೆಯೇ ಜೈನ ಧರ್ಮದ ನಮೋಕಾರ ಮಂತ್ರವು ಸಹ ಓಂ ನಿಂದ ಆರಂಭವಾಗುತ್ತದೆ.

ಬೌದ್ಧ ತತ್ವಶಾಸ್ತ್ರದಲ್ಲಿ ಪ್ರಣವದಿಂದ ಬ್ರಹ್ಮಾಂಡ ಸೃಷ್ಟಿಯಾಗುತ್ತದೆ ಮತ್ತು ಶೂನ್ಯ ವನ್ನು ಸೃಷ್ಟಿಸುತ್ತದೆ.

ಶಿವ ಪುರಾಣದಲ್ಲಿ ಓಂ ಐದು ತಲೆ ಶಿವನ ಸಂಕೇತವಾಗಿದೆ ಮತ್ತು ವಿಷ್ಣು ಪುರಾಣದಲ್ಲಿ ವಿಷ್ಣು, ಶ್ರೀ ಮತ್ತು ಭಕ್ತರ ಸಂಕೇತವಾಗಿದೆ.

ಓಂಕಾರವನ್ನು ಏಕೆ ಪಠಿಸಬೇಕು ?

ಭಗವಂತನನ್ನು ಸಾರ್ವತ್ರಿಕವಾಗಿ ಓಂ ಎಂದು ಪರಿಗಣಿಸಲಾಗಿದೆ. ಭಾರತೀಯ ತತ್ವಶಾಸ್ತ್ರದ ಪ್ರಕಾರ ಓಂ ತನ್ನಲ್ಲಿ ಪರಮಾತ್ಮನನ್ನು ಕಂಡುಕೊಳ್ಳುವ ಕಲೆ ಎಂದು ನಂಬಲಾಗಿದೆ.

ಪತಂಜಲಿಯೋಗಸೂತ್ರದ ಪ್ರಕಾರ ಈಶ್ವರನ ಒಂದು ಭಾಗವೇ ಓಂಕಾರವಾಗಿದ್ದು ಮತ್ತೆ ಮತ್ತೆ ಪಠಿಸಿಬೇಕು ಎಂದು ಹೇಳುತ್ತಾರೆ. ಆದ್ದರಿಂದ ಯೋಗ ದರ್ಶನದಲ್ಲಿ ಓಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ಒಂದು ತಿಂಗಳಲ್ಲಿ ಹದಿನಾರು ಬಾರಿ ಪ್ರಣವದ ಜೊತೆ ಪ್ರಾಣಾಯಾಮ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುತ್ತದೆ.

ಶಾಂತಿ ಎಂದರೇನು ?

ಮನಸ್ಸನ್ನು ಲೋಕದ ಎಲ್ಲ ಚಿಂತನೆಗೆ ಒಳಸಪಡಿಸದೆ ತನ್ನ ತನದಲ್ಲಿ ಮಗ್ನನಾಗಿರುವುದು ಇದು ನೆಮ್ಮದಿಯ ಗುಟ್ಟು ಸಹ ಆಗಿದೆ.

ಮೂರು ಬಾರಿ ಓಂಶಾಂತಿ ಮಂತ್ರವನ್ನು ಏಕೆ ಹೇಳುತ್ತಾರೆ ?

“ತ್ರಿವರಂ ಸತ್ ಯಂ”
ಬಲವಾದ ನಂಬಿಕೆ ಏನೆಂದರೆ ಯಾವುದಾದರು ವಿಷಯವನ್ನು ಮೂರು ಬಾರಿ ಹೇಳಿದರೆ ಅದು ನಿಜವಾಗುತ್ತದೆ ಎಂಬುದು.
ನಾವು ಯಾವುದೇ ಪ್ರಣಾಮಗಳನ್ನು ಮಾಡಬೇಕಾದರೂ ಅದೇ ಕಾರಣಕ್ಕೆ “ನಾನು ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ” ಎಂದು ಹೇಳಿಸಲಾಗುತ್ತದೆ.
ನಮ್ಮ ಪ್ರಮಾಣದ ಸತ್ಯತೆಯ ಅರಿವು ಮೂಡಲಿ ಎಂಬುದೇ ಈ ಪ್ರಕ್ರಿಯೆ.

ಮನುಷ್ಯನಿಗೆ ತೊಂದರೆ ಉಂಟುಮಾಡುವ ಮೂರು ಪ್ರಮುಖ ಅಂಶಗಳು :

ಆಧಿದೈವಿಕ : ಕೆಲವು ಮಾನವನ ಹತೋಟಿಗೆ ಸಿಗದ ನೈಸರ್ಗಿಕ ಪ್ರಕ್ರಿಯೆಗಳು (ಚಂದ ಮಾರುತ , ಭೂಕಂಪ ಇತ್ಯಾದಿ )
ಆಧಿಬೌತಿಕ : ಅಪಘಾತಗಳು, ಅಪರಾಧ, ಮಾಲಿನ್ಯ ಇತ್ಯಾದಿ ಅಂಶಗಳು
ಆಧ್ಯಾತ್ಮಿಕ : ಇಂತಹ ರೋಗಗಳು , ಹತಾಶೆ, ಮಾನಸಿಕ ಅಸ್ಥಿರತೆ ,ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು.

ಮೂರು ಬಾರಿ ಓಂಶಾಂತಿ ಮಂತ್ರವನ್ನು ಹೇಳಿದರೆ ಮನುಷ್ಯನಿಗೆ ತೊಂದರೆ ಉಂಟುಮಾಡುವ ಮೂರು ಪ್ರಮುಖ ಅಂಶಗಳ ಪರಿಣಾಮ ತಟಸ್ಥಗೊಳ್ಳುತ್ತದೆ,
ದೇವರ ಆಶೀರ್ವಾದ ರಕ್ಷಣೆಯನ್ನು ಪಡೆಯುವುದು ಇದರ ಮುಖ್ಯ ಉದ್ದೇಶ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top