fbpx
ಸಮಾಚಾರ

ಜುಲೈ 21 ರಿಂದ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ

21 ರಿಂದ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ

ಡಾಕ್ಟರ್ ಬಿ .ಆರ್ ಅಂಬೇಡ್ಕರ್ ರವರ 126 ನೇ ಜನ್ಮ ಜಯಂತಿಯ ಅಂಗವಾಗಿ ಸಾಮಾಜಿಕ ನ್ಯಾಯದ ಪುನರ್ ಸ್ಥಾಪನೆ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ರವರನ್ನು ಹೊಸ ದೃಷ್ಟಿಯಲ್ಲಿ ನೋಡುವ ಅಂತಾರಾಷ್ಟ್ರೀಯ ಸಮ್ಮೇಳನ ಜುಲೈ 21,22 ಮತ್ತು 23 ರಂದು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಸೋನಿಯಾ ಗಾಂಧಿಯವರನ್ನು ಆಹ್ವಾನಿಸಲಾಗಿದ್ದು ಅವರು ಬರುವ ಸಾಧ್ಯತೆಗಳಿವೆ
ಈ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮಟ್ಟದ 83 ,ರಾಷ್ಟ್ರೀಯ ಮಟ್ಟದ 140 ಹಾಗು ರಾಜ್ಯದ 80 ಕ್ಕೂ ಹೆಚ್ಚು ಭಾಷಣಕಾರರು ತಮ್ಮ ವಾದವನ್ನು ಮಂಡಿಸಲಿದ್ದಾರೆ 2000 ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಇದೆ .

‘ ರೀ ಕ್ಲೆಯ್ಮಿಂಗ್ ಸೋಶಿಯಲ್ ಜಸ್ಟಿಸ್ ಅಂಡ್ ರಿವಿಸ್ಟಿಂಗ್ ಅಂಬೇಡ್ಕರ್’


ಎಂಬ ವಿಷಯದ ಮೇಲೆ ನಡೆಯಲಿರುವ ಈ ಸಮ್ಮೇಳನಕ್ಕೆ ಮಾರ್ಟಿನ್ ಲೂಥರ್ ಕಿಂಗ್ -3 ಮತ್ತು ರಾಹುಲ್ ಗಾಂಧಿ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ

ಸಾಮಾಜಿಕ ನ್ಯಾಯ ಮತ್ತು ಕೋಮು ಗಲಭೆಯ ವಿರುದ್ಧ ಈ ಸಮ್ಮೇಳನ ಧ್ವನಿ ಎತ್ತಲಿದೆ ,

ಚರ್ಚೆಯಾಗುವ ವಿಷಯಗಳು ಈ ರೀತಿ ಇವೆ

ಸಾಮಾಜಿಕ ನ್ಯಾಯದ ಪರಿಕಲ್ಪನೆ
ರಾಜಕೀಯ ನ್ಯಾಯದ ಪರಿಕಲ್ಪನೆ
ಆರ್ಥಿಕ ನ್ಯಾಯ
ಸಾಮಾಜಿಕ ನ್ಯಾಯ
ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞರು ಸಮ್ಮೇಳನದಲ್ಲಿ ಮಾತನಾಡಲಿದ್ದಾರೆ.

1938 ರಲ್ಲಿ ಯೋಜನಾ ಸಮಿತಿ ಘೋಷಣೆ ಮಾಡಿರುವ ರೀತಿಯಲ್ಲಿಯೇ ಕರ್ನಾಟಕ ಸರ್ಕಾರವು ಕೊನೆಯಲ್ಲಿ ಸಾಮಾಜಿಕ ನ್ಯಾಯ , ಮಾನವ ಹಕ್ಕುಗಳ ಸ್ವಾತಂತ್ರ , ಮತ್ತು ಪ್ರಜಾ ಪ್ರಭುತ್ವದ ಕಾಳಜಿಗೆ ನಿರ್ದಿಷ್ಟ ಸಂವಿಧಾನಿಕ , ಸಾಂಸ್ಥಿಕ ಮತ್ತು ನೀತಿ ಪ್ರಕ್ರಿಯೆಗಳನ್ನು ರೂಪಿಸುವ ಬೆಂಗಳೂರು ಘೋಷಣೆ ಮಾಡಲಾಗುವುದು ಎಂದು ಮುಖ್ಯ ಮತ್ರಿಗಳು ಹೇಳಿದ್ದಾರೆ

ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು :

ಪ್ರೊ ಎಸ್.ಕೆ ಥೋರಟ್ , ಲಾರ್ಡ್ ಬಿಕು ಪರೇಖ್ ,ಕೆ.ರಾಜು , ಪ್ರೊ ರಾಜೀವ್ ಗೌಡ , ದೀಪಕ್ ನಾಯರ್ ,ಡಾ ರಾಮಚಂದ್ರ ಗುಹಾ , ಪ್ರೊ .ವೆಲೇರಿಯನ್ , ರಾಡ್ರಿಗಸ್ ,ಪ್ರೊಫ್ ಆಶೀಶ್ ನಂದಿ , ಪ್ರೊ ಸುಧೀರ್ ಕೃಷ್ಣ ಸ್ವಾಮಿ ,ಪ್ರೊ ಶಿವ ವಿಶ್ವನಾಥನ್ ,ಪ್ರೊ ಕಲ್ಪನಾ ಕಣ್ಣ ಬೀರನ್ , ಪ್ರಕಾಶ್ ಅಂಬೇಡ್ಕರ್ ,ಮಾಜಿ ಕೇಂದ್ರ ಸಚಿವ ಜೈ ರಾಮ್ ರಮೇಶ್ ,ಶಶಿ ತರೂರ್ , ಪ್ರೊ ಥಾಮಸ್ ವೆಸ್ಕಾಪ್ , ಡಾ ಉಪೇಂದ್ರ ಬಕ್ಷಿ ಮುಂತಾದ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಗಣ್ಯರು ಆಗಮಿಸಲಿದ್ದಾರೆ ,

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ಇದ್ದರೆ ನಿಮ್ಮ ಹೆಸರುಗಳನ್ನೂ ಈ ಕೂಡಲೇ ನೊಂದಾಯಿಸಿಕೊಳ್ಳಿ ,ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಕೊಂಡಿ ಕ್ಲಿಕ್ ಮಾಡಿ

https://www.questforequity.org/landingpage.html

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top