ಕಣ್ಣುಗಳ ಕಪ್ಪು ಕಲೆ ನಿವಾರಣೆಗೆ ಮನೆ ಮದ್ದು ಗಳು ಮತ್ತು ಸಣ್ಣ ಪುಟ್ಟ ಉಪಾಯಗಳು.
ನಮ್ಮಲ್ಲಿ ಶೇಕಡಾ ೫೦ ರಷ್ಟು ಜನಕ್ಕೆ ಡಾರ್ಕ್ ಸರ್ಕಲ್ ಸಮಸ್ಯೆ ಇರುತ್ತದೆ . ತಡರಾತ್ರಿಯವರೆಗೂ ಎದ್ದಿರುವುದು , ಕೆಲಸ ಮಾಡುವುದರ ಕೊಡುಗೆಯೇ ಈ ಡಾರ್ಕ್ ಸರ್ಕಲ್ಸ್ .
1. ಟೊಮ್ಯಾಟೋ ಮತ್ತು ನಿಂಬೆ ರಸ
ಒಂದು ಚಿಕ್ಕ ಚಮಚ ಟೊಮ್ಯಾಟೋ ರಸಕ್ಕೆ ಒಂದು ಚಿಕ್ಕ ಚಮಚ ನಿಂಬೆ ರಸ ಬೆರೆಸಿ ಕಪ್ಪು ವರ್ತುಲಗಳ ಮೇಲೆ ಹಚ್ಚಿ.ಹತ್ತು ನಿಮಿಷಗಳ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ಈ ವಿಧಾನವನ್ನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಪುನರಾವರ್ತಿಸಿ.
2. ಪುದೀನ
ಪುದೀನ ಎಲೆಗಳನ್ನು ಅರೆದು ನಿಯಮಿತವಾಗಿ ಹಚ್ಚಿಕೊಳ್ಳುತ್ತಿದರೆ ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ.
3. ಆಲೂಗೆಡ್ಡೆ
ಹಸಿ ಆಲೂಗೆಡ್ಡೆ ಯನ್ನು ಚಿಕ್ಕದಾಗಿ ತುರಿದು ರಸ ತೆಗೆಯಿರಿ. ಹತ್ತಿ ಉಂಡೆಯನ್ನು ಈ ರಸದಲ್ಲಿ ಅದ್ದಿ, ಕಣ್ಣುಗಳನ್ನು ಮುಚ್ಚಿಕೊಂಡು ಕಪ್ಪು ವರ್ತುಲ,ಕಣ್ಣಿನ ರೆಪ್ಪೆ, ಹುಬ್ಬು ಗಳಿಗೆ ಲೇಪಿಸಿ.ಇದಕ್ಕಾಗಿ ನಿಮ್ಮ ಕಣ್ಣುಗಳ ವರ್ತುಲಗಳು ಎಷ್ಟು ದೊಡ್ಡದಿರುತ್ತವೆಯೋ ಅದಕ್ಕಿಂತಲೂ ದೊಡ್ಡದಾಗಿರುವ ಹತ್ತಿಯ ಉಂಡೆಯನ್ನು ತಯಾರಿಸಿ. ಈ ಉಂಡೆಗಳು ಸುಮಾರು ಹತ್ತು ನಿಮಿಷವಾದರು ಕಣ್ಣಿನ ಮೇಲೆ ಹಾಗೆ ಇರಲಿ.ಬಳಿಕ ತಣ್ಣೀರಿನಿಂದ ತೊಳೆಯಿರಿ.
4. ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿ ವಿಟಮಿನ್-ಇ ಸಮೃದ್ಧವಾಗಿದೆ ,ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಓಂದೇ ವಾರದಲ್ಲಿ ಕಪ್ಪು ಕಲೆಗಳನ್ನು ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ ಚಿಕಿತ್ಸೆಯಾಗಿದೆ.ಈ ಎಣ್ಣೆಯನ್ನು ಕಪ್ಪು ವೃತ್ತಗಳ ಮೇಲೆ ಲೇಪಿಸಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೆಯೇ ಬಿಟ್ಟು ಮರುದಿನ ಬೆಳಗ್ಗೆ ತೊಳೆಯಿರಿ.
5. ತಣ್ಣಗಿನ ಹಾಲು ಅಥವಾ ಐಸ್ ನೀರು
ಒಂದು ಹತ್ತಿಯ ಉಂಡೆಯನ್ನು ತಣ್ಣಗಿನ ಹಾಲು ಅಥವಾ ಐಸ್ ನೀರಿನಲ್ಲಿ ಹಾಕಿ ತೆಗೆದು ಕಣ್ಣಿಗೆ ಹಾಗೂ ಬಾಧಿತ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನೀರಿನಲ್ಲಿ ತೊಳೆಯಿರಿ. ಇದರಿಂದ ಕಪ್ಪು ವರ್ತುಲಗಳು ಕ್ರಮೇಣ ಕಡಿಮೆಯಾಗುತ್ತವೆ.
6. ಸೌತೆಕಾಯಿ
ಸೌತೆಕಾಯಿ ಯನ್ನು ತೊಳೆದು ಗೋಲಾಕಾರದಲ್ಲಿ ಕತ್ತರಿಸಿ ಕಣ್ಣಿನ ಮೇಲೆ ಸ್ವಲ್ಪ ಸಮಯದವರೆಗೆ ಹಾಗೆ ಇರಲಿ 15-20 ನಿಮಿಷ ಬಿಟ್ಟು ಸೌತೆಕಾಯಿಯನ್ನು ತೆಗೆದು ತಣ್ಣೀರಿನಿಂದ ಮುಖವನ್ನು ತೊಳೆಯಿರಿ.ಇದನ್ನು ನಿರಂತರವಾಗಿ ಮಾಡುತ್ತಿದ್ದರೆ ಕಣ್ಣಿನ ಬಳಿ ಕಪ್ಪು ವರ್ತುಲಗಳು ಬರುವುದಿಲ್ಲ.
7 . ದಿನಕ್ಕೆ ಕನಿಷ್ಠ ೧೦ ಲೋಟ ನೀರು ಕುಡಿಯಿರಿ
8.ಒಂದು ಸ್ಟೀಲ್ ಚಮಚವನ್ನು ಫ್ರೀಜರ್ ನಲ್ಲಿ ಇರಿಸಿ , ನಂತರ ಏಳುವ ಸಮಯಕೆ ಅದನ್ನು ಕಣ್ಣಿನ ಮೇಲೆ ಇರಿಸಿ
9. ತಣ್ಣಗಿರುವ ಟೀ ಬ್ಯಾಗ್ ಗಳನ್ನು ಅಥವಾ ಟೀ ಎಲೆಗಳನ್ನು ಕಣ್ಣಿನ ಮೇಲೆ ಹಚ್ಚಿರಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
