fbpx
ದೇವರು

ಭೂಮಿಯ ಕೈಲಾಸ ಮಾನಸ ಸರೋವರದ ನಿಗೂಢತೆಗಳು ಇವು

 ಕೈಲಾಸ ಮಾನಸ ಸರೋವರದ ನಿಗೂಢತೆಗಳು ಇವು.

ವಾಸ್ತವವಾಗಿ ಮಾನಸಸರೋವರ ವಿಶ್ವದ ಪವಿತ್ರ ಸರೋವರ ಎಂದೇ ಹೆಸರು ಪಡೆದಿದೆ , ಬ್ರಹ್ಮದೇವನ ಮನಸ್ಸಿನಲ್ಲಿ ಮಾನಸಸರೋವರ ಹುಟ್ಟಿದ ಕಾರಣದಿಂದ ಇದಕ್ಕೆ ಬ್ರಹ್ಮಸಂ ಎಂದು ಕರೆಯುತ್ತಾರೆ .


ಶಿವನ ಮಡದಿ ಗಂಗೆಯನ್ನು ಭೂಮಿಗೆ ಕರೆಸಲು ಭಗೀರಥನು ತಪಸ್ಸು ಮಾಡಿದನೆಂದು ನಮಗೆ ತಿಳಿದಿರುವ ವಿಷಯವಾಗಿದೆ, ಶಿವ ಪಾರ್ವತಿಯರಿಗಾಗಿ ಬ್ರಹ್ಮನು ಈ ಸರೋವರ ರಚಿಸಿದನೆಂದು ಪುರಾಣ ಕಥೆಗಳಲ್ಲಿ ಹೇಳುತ್ತಾರೆ.

ಸಮುದ್ರ ಮಟ್ಟದಿಂದ 14.900 ಅಡಿ ಎತ್ತರದಲ್ಲಿದ್ದು , ಸರೋವರದ ಪರಿಧಿ 54 ಮೈಲುಗಳಷ್ಟು ,200 ಚದರ ಮೈಲಿ ವಿಸ್ತೀರ್ಣವನ್ನು ಸರೋವರ ಹೊಂದಿದೆ ,300 ಅಡಿ ಆಳವಾಗಿದೆ ಎಂದು ಅಂದಾಜಿಸಲಾಗುತ್ತದೆ.

1.ಕೈಲಾಸ ಶಿವನ ವಾಸಸ್ಥಾನ,ಕೈಲಾಸ ಮಾನಸ ಸರೋವರ ಪ್ರಸಿದ್ದವಾದ ತೀರ್ಥಕ್ಷೇತ್ರವಾಗಿದ್ದು.ಯಾತ್ರಾರ್ಥಿಗಳಿಗೆ ಸಾವಿರಾರು ವರ್ಷಗಳಿಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕೇವಲ ಹಿಂದೂ,ಬೌಧ ,ಜೈನರಿಗಷ್ಟೇ ಅಲ್ಲದೇ ಪ್ರಪಂಚದ ವಿವಿಧ ಭಾಗಗಳಿಂದ ಬರುವ ಅನೇಕರಿಗೆ ಧಾರ್ಮಿಕ ಕೇಂದ್ರವಾಗಿದೆ ಈ ಕೈಲಾಸ ಮಾನಸ ಸರೋವರ.

2.ಕೈಲಾಸ ಮಾನಸ ಸರೋವರದ ಬಗ್ಗೆ ಅನೇಕ ಅಚ್ಚರಿಯ,ರೋಚಕ ವಿಷಯಗಳಿದ್ದು,ಮೋಕ್ಷ ಪಡೆದ ಆತ್ಮಗಳು ಈ ಕೈಲಾಸದಲ್ಲಿ ನೆಲೆಸುತ್ತವೆ ಎಂಬ ಪ್ರತೀತಿ ಇದೆ.ಅಷ್ಟೇ ಅಲ್ಲದೇ, ಎಲ್ಲಾ ಮೋಕ್ಷ ಪಡೆದ ಪವಿತ್ರ ಆತ್ಮಗಳೂ ಪ್ರತಿ ವರ್ಷದ ಗುರು ಪೌರ್ಣಮಿ,ಬುದ್ಧ ಪೌರ್ಣಮಿ,ಕಾರ್ತಿಕ ಪೌರ್ಣಮಿಯ ದಿನದಂದು ಒಟ್ಟಿಗೆ ಸೇರುತ್ತವೆ ಎಂಬ ನಂಬಿಕೆ ಇದೆ.

3.ಇನ್ನೂ ವಿಶೇಷವಾದ ಸಂಗತಿ ಎಂದರೆ,ಸಪ್ತ ಋಷಿಗಳು, ಜೀವನ್ಮುಕ್ತರು ,ಸಂತರು ಪ್ರತಿದಿನ ಬ್ರಾಹ್ಮಿ ಮುಹೂರ್ತ (ಪ್ರಾತಃಕಾಲ)ದಲ್ಲಿ ಎದ್ದು ಇಲ್ಲಿ  ಸ್ನಾನ ಮಾಡುತ್ತಾರೆ.

4.ಅಷ್ಟೇ ಅಲ್ಲದೇ ಆತ್ಮ ತತ್ವವನ್ನು ಅರಿತ ಜ್ಞಾನಿಗಳು. ಕೈಲಾಸ ಮಾನಸ ಸರೋವರದಲ್ಲಿ ಜ್ಯೋತಿಯ ರೂಪದಲ್ಲಿ ಕಾಣಸಿಗುತ್ತಾರೆ ಎಂಬ ಪ್ರತೀತಿಯೂ ಇದೆ.

5.ಭಾರತೀಯ ಸನಾತನ ಧರ್ಮದಲ್ಲಿ ಶಿವನನ್ನು ಆದಿ ಯೋಗಿ ಎಂದು ಆರಾಧಿಸಲಾಗುತ್ತದೆ. ಶಿವನ ವಾಸಸ್ಥಾನ ಕೈಲಾಸವಾಗಿದ್ದು ಹಾಗೆಯೇ ಶಿವನ ಸ್ವರೂಪವಾಗಿರುವ ಮೋಕ್ಷ ಪಡೆದ ಯೋಗಿಗಳು ಕೈಲಾಸದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಮೇಲಿನ ಅಂಶಗಳು ಪೂರಕವಾಗಿದೆ.

6.ಕೈಲಾಸ ಮಾನಸ  ಸರೋವರಕ್ಕೆ  ಹೋಗಿ ಬಂದಿರುವ ಯಾತ್ರಾರ್ಥಿಗಳು ಹೇಳುವ ಪ್ರಕಾರ .ಕೈಲಾಸ ಪರ್ವತಕ್ಕೆ ಹೋದರೆ ಅತೀ ಬೇಗನೆ ಕೂದಲು ಮತ್ತು ಉಗುರುಗಳು ಬೆಳೆಯುತ್ತವೆ.ಅದು ಬರೀ 24 ಗಂಟೆಗಳಲ್ಲಿ ಅತೀ ವೇಗವಾಗಿ ಬೆಳೆಯುತ್ತವೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಅಷ್ಟು ಕೂದಲು ಮತ್ತು ಉಗುರುಗಳು ಬೆಳೆಯುವುದಕ್ಕೆ  ಎರಡು ವಾರಗಳಾದರು ಬೇಕು ಆದರೆ ಇಲ್ಲಿ ಅಷ್ಟು ಬೆಳೆಯಲು ಕೇವಲ ಒಂದು ದಿನ ಅಂದರೆ 24 ಗಂಟೆಗಳ ಕಾಲಾವಕಾಶ ಸಾಕು.

6.ಈ ಕೈಲಾಸ ಪರ್ವತದಲ್ಲಿ ಎರಡು ರೀತಿಯ ಸರೋವರಗಳಿದ್ದು. ಅವುಗಳ ಹೆಸರು

1.ಮಾನಸ ಸರೋವರ ಅಥವಾ ದೇವರ ಸರೋವರ.

2.ಮತ್ತೊಂದು ರಾಕ್ಷಸ ತಳ ಅಥವಾ ದೆವ್ವಗಳ ಸರೋವರ.

ಇವು ಒಂದಾದ ನಂತರ ಇನ್ನೊಂದು  ಸೃಷ್ಟಿಯಾಗಿವೆ. ಈ ಸರೋವರಗಳು ಒಂದು ತೆಳ್ಳನೆಯ ಪರ್ವತದಿಂದ ಬೇರೆಯಾಗಿದ್ದು.ಈ ಸರೋವರಗಳು ಸರಿ ಮತ್ತು ತಪ್ಪುಗಳ ನಡುವೆ ಇರುವ ವ್ಯತ್ಯಾಸವನ್ನು  ಬಿಂಬಿಸುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top