fbpx
ದೇವರು

ಯಾವ ನಕ್ಷತ್ರದವರು ಯಾವ ದೇವರನ್ನು ಪೂಜಿಸಬೇಕು ಎಂದು ನಿಮಗೆ ಗೊತ್ತಾ ?

ಯಾವ ನಕ್ಷತ್ರದವರು ಯಾವ ದೇವರನ್ನು ಪೂಜಿಸಬೇಕು ಎಂದು ನಿಮಗೆ ಗೊತ್ತಾ ?

ನಕ್ಷತ್ರ ಮತ್ತು ನಾವು ಪೂಜಿಸುವ ದೇವರಿಗೂ ಇರುವ ಸಂಬಂಧವೇನು ? ಜನ್ಮ ನಕ್ಷತ್ರ ನಿಮ್ಮ ಭವಿಷ್ಯ ಸೂಚಿಯಾಗಿರುತ್ತದೆ.ಹೌದು, ನಮ್ಮ ನಂಬಿಕೆ ಹಾಗೂ ಹಿಂದೂ ಧರ್ಮದಲ್ಲಿ ಪೂಜೆ ಪುರಾಣಗಳು ಅನಾದಿ ಕಾಲದಿಂದಲೂ ಇರುವಂತಹ ಪದ್ದತಿ ಹೀಗಿರುವಾಗ ನಮ್ಮ ನಕ್ಷತ್ರಕ್ಕೆ ತಕ್ಕಂತೆ ನೀವು ಯಾವ ದೇವರನ್ನು ಪೂಜಿಸಬೇಕು ಅನ್ನೋದು ಇಲ್ಲಿದೆ ನೋಡಿ.

ಅಶ್ವಿನಿ ನಕ್ಷತ್ರ:- ಅಶ್ವಿನಿ ಕುಮಾರರಾಗಿದ್ದು,ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

 

ಭರಣಿ ನಕ್ಷತ್ರ:- ಈ ನಕ್ಷತ್ರದ ದಿನ ಯಮನನ್ನು ನೀಲಿ ಬಣ್ಣದ ಹೂಗಳಿಂದ ಪೂಜಿಸಿ ಅಕಾಲಿಕ ಮರಣದಿಂದ ದೂರವಿರಬಹುದು.

ಕೃತಿಕ ನಕ್ಷತ್ರ:- ದೇವ ಅಗ್ನಿಯಾಗಿದ್ದು,ಅಗ್ನಿ ದೇವನನ್ನು ಕೆಂಪು ಹೂವುಗಳಿಂದ ಪೂಜಿಸಿದರೆ ನೀವು ಬಯಸಿದ ಆಸೆಗಳು ಬಯಕೆಗಳು ಈಡೇರುತ್ತವೆ.

ರೋಹಿಣಿ ನಕ್ಷತ್ರ:- ದೇವರು  ಬ್ರಹ್ಮನಾಗಿದ್ದು,ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸಲೀಸಾಗಿ ನಡೆಯುತ್ತವೆ.

ಮೃಗಶಿರ ನಕ್ಷತ್ರ:- ದೇವ ಚಂದ್ರನಾಗಿದ್ದು.ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ಹೆಚ್ಚುತ್ತದೆ.

ಅರಿದ್ರ ನಕ್ಷತ್ರ:-ದೇವರು ಶಿವನಾಗಿದ್ದು,ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿ ನಿಮ್ಮ ಹೋರಾಟದಲ್ಲಿ ಜಯ ಸಿಗುತ್ತದೆ.

ಪುನರ್ವಸು ನಕ್ಷತ್ರ:- ದೇವತೆ ಅಧಿತಿಯಾಗಿದ್ದು, ಅಧಿತಿಯನ್ನು ಪೂಜಿಸಿದರೆ ತಾಯಿ ಮತ್ತು ಹಸು,ಕರುಗಳು  ಆರೋಗ್ಯವಾಗಿರುತ್ತವೆ. ಸಂತಾನ ಇಲ್ಲದವರಿಗೆ ಸಂತಾನವಾಗುವ ಸಾಧ್ಯತೆ ಹೆಚ್ಚು.

ಪುಷ್ಯ ನಕ್ಷತ್ರ:- ದೇವ ಗುರು ಬೃಹಸ್ಪತಿಯಾಗಿದ್ದು, ಬೃಹಸ್ಪತಿಯನ್ನು ಪೂಜಿಸಿದರೆ ಹೆಚ್ಚಿನ ವ್ಯಾವಹಾರಿಕ ಜ್ಞಾನ ಹೆಚ್ಚುತ್ತದೆ ಮತ್ತು ಬುದ್ಧಿಶಕ್ತಿಯು ಬರುತ್ತದೆ.

ಆಶ್ಲೇಷ ನಕ್ಷತ್ರ:- ದೇವ ನಾಗನಾಗಿದ್ದು,ನಾಗನನ್ನು ಪೂಜಿಸಿದರೆ, ನಾಗದೋಷ ನಿವಾರಣೆಯಾಗುತ್ತದೆ.

ಮಖ ನಕ್ಷತ್ರ:- ದೇವ ಪ್ರಶ ಮಹರ್ಷಿಯಾಗಿದ್ದು,ಪ್ರಶ ಮಹರ್ಷಿಯನ್ನು ಪೂಜಿಸಿದರೆ, ನೀವು ಅಂದುಕೊಂಡ ವಧು ವರ ಸಿಗುತ್ತಾರೆ.

ಉತ್ತರ ಫಾಲ್ಗುಣಿ ನಕ್ಷತ್ರ:- ದೇವತೆ ಆರ್ಯಮ ದೇವತೆಯಾಗಿದ್ದು,ಆರ್ಯಮ ದೇವತೆಯನ್ನು ಪೂಜಿಸಿದರೆ ವಿವಾಹ ಕರಾರುಗಳ ಪೋಷಕ ಹಾಗೂ ಶೌರ್ಯ ಇವುಗಳಿಗೆ ಸಹಾಯವಾಗುತ್ತದೆ.

ಹಸ್ತ ನಕ್ಷತ್ರ:-  ದೇವ ಸೂರ್ಯನಾಗಿದ್ದು,ಸೂರ್ಯನನ್ನು ಗಂಧ ಹಾಗೂ ಪುಷ್ಪಗಳಿಂದ ಪೂಜಿಸಿದರೆ ಧನ ಹೆಚ್ಚುತ್ತದೆ,  ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಚಿತ್ತಾ ನಕ್ಷತ್ರ:- ದೇವತೆ ತೃಷ್ಟ ದೇವತೆಯಾಗಿದ್ದು,ತೃಷ್ಟ ದೇವತೆಯನ್ನು ಪೂಜಿಸಿದರೆ ಆರೋಗ್ಯ, ಜ್ಞಾನ,ಆಹಾರ, ಧನ ಹೆಚ್ಚುತ್ತದೆ.

ಸ್ವಾತಿ ನಕ್ಷತ್ರ:-  ಸ್ವಾತಿ ನಕ್ಷತ್ರದ ಅಧಿಪತಿ ವಾಯುದೇವನಾಗಿದ್ದು , ವಾಯುದೇವನನ್ನು ಪೂಜಿಸಿದರೆ ದೈವೀಕ ಶಕ್ತಿಯನ್ನು ಪಡೆದುಕೊಳ್ಳಬಹುದು.

ವಿಶಾಖ ನಕ್ಷತ್ರ:- ದೇವತೆ ಇಂದ್ರಾಗ್ನಿಯಾಗಿದ್ದು, ಇಂದ್ರಾಗ್ನಿಯನ್ನು  ಕೆಂಪು ಹೂವುಗಳಿಂದ ಪೂಜಿಸಿದರೆ ಧನ ಸಂಪತ್ತು ವೃದ್ಧಿಯಾಗಿ,ನಮ್ಮ ಮನಸ್ಸಿನ ಇಷ್ಟಾರ್ಥಗಳು ನೆರವೇರುತ್ತವೆ.

ಅನುರಾಧ ನಕ್ಷತ್ರ:- ದೇವ ಮಿತ್ರ ದೇವನಾಗಿದ್ದು ,ಮಿತ್ರ ದೇವನನ್ನು ಪೂಜಿಸಿದರೆ  ಲಕ್ಷ್ಮೀ ದೇವಿಯು ಒಲಿಯುತ್ತಾಳೆ.

ಜ್ಯೇಷ್ಠ ನಕ್ಷತ್ರ:- ದೇವ ಇಂದ್ರನಾಗಿದ್ದು,ಇಂದ್ರ ದೇವನನ್ನು ಪೂಜಿಸಿದರೆ ಪೌರುಷವಂತ, ಧನವಂತ,ಧಾರ್ಮಿಕ ಸ್ವಭಾವ ಬರುತ್ತದೆ.

ಮೂಲ ನಕ್ಷತ್ರ:- ದೇವತೆ ಶಿನಿರುತಿಷಿ ದೇವತೆಯಾಗಿದ್ದು,ಶಿನಿರುತಿಷಿ ದೇವತೆಯನ್ನು ಪೂಜಿಸಿದರೆ ನರಕ ಯಾತನೆಯಿಂದ ಮುಕ್ತ ನಾಗುತ್ತಾನೆ,ದೋಷಗಳು ಪರಿಹಾರವಾಗುತ್ತವೆ.

ಪೂರ್ವಾಷಾಡ ನಕ್ಷತ್ರ:- ದೇವತೆ ಜಲ ದೇವತೆಯಾಗಿದ್ದು,ಜಲ ದೇವತೆಯನ್ನು ಪೂಜಿಸಿದರೆ ಮಾನಸಿಕ ಹಾಗೂ ದೈಹಿಕ ಒತ್ತಡಗಳು ಸರಿಯಾಗುತ್ತವೆ.

ಉತ್ತರಾಷಾಡ  ನಕ್ಷತ್ರ:- ದೇವ ವಿಶ್ವ ದೇವನಾಗಿದ್ದು ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ.

ಶ್ರವಣ ನಕ್ಷತ್ರ:- ದೇವ ವಿಷ್ಣುವಾಗಿದ್ದು , ಶ್ರೀ ವಿಷ್ಣುವನ್ನು  ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ ಧನ ವೃದ್ಧಿ ,ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ.

ಧನಿಷ್ಠ ನಕ್ಷತ್ರ:- ದೇವತೆ  ವಸುದೇವತೆನಾಗಿದ್ದು ವಸುದೇವತೆಯನ್ನು ಗಂಧ ಪುಷ್ಪಗಳಿಂದ ಪೂಜಿಸಿದರೆ, ನಿಮ್ಮಲ್ಲಿರುವ ಭಯ ನಿವಾರಣೆಯಾಗುತ್ತದೆ.

ಶತಾಭಿಷ ನಕ್ಷತ್ರ:- ದೇವ ವರುಣ ದೇವನಾಗಿದ್ದು,ವರುಣ ದೇವನನ್ನು ಪೂಜಿಸಿದರೆ ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗುತ್ತವೆ.

ಪೂರ್ವಭಾದ್ರಪದ ನಕ್ಷತ್ರ:- ದೇವರಾದ ಅಜನ್ಮನಾಗಿದ್ದು,ಆ ಅಜನ್ಮನನ್ನು ಪ್ರತಿದಿನ  ಪೂಜಿಸಿದರೆ  ಶ್ರದ್ದಾವಂತನಾಗುತ್ತಾರೆ.

ಉತ್ತರಭಾದ್ರಪದ:- ದೇವ ರುದ್ರನಾಗಿದ್ದು,ರುದ್ರ ದೇವನನ್ನು  ಪೂಜಿಸಿದರೆ ದೇವತಾ ಶಾಸ್ತ್ರದಲ್ಲಿ ಬುದ್ಧಿವಂತರಾಗುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top