fbpx
ದೇವರು

ಇಂದ್ರ, ಕರ್ಣನಿಗೆ ಮೋಸ ಮಾಡಿ “ದಾನ ಶೂರ ಕರ್ಣ” ಅಂತ ಹೆಸರು ಕೊಟ್ಟ ರಹಸ್ಯಕಾರಿ ಕಥೆ

“ದಾನ ಶೂರ ಕರ್ಣ” ಎನ್ನುವ ಹೆಸರು ಹೇಗೆ ?  ಯಾಕೆ  ? ಯಾರಿಂದ ಬಂತು   ? ಎನ್ನುವ ರಹಸ್ಯಕಾರಿ ವಿಷಯ ಈ ಕಥೆಯಲ್ಲಿದೆ.

ಕರ್ಣ ಕುಂತಿಯ ಹಿರಿಯ ಮಗನಾಗಿದ್ದ.ಕುಂತಿ ಸೂರ್ಯ ಮಂತ್ರದ ಜಪ ಮಾಡಿ ಕರ್ಣನನ್ನು ಮಗನಾಗಿ ಪಡೆದಿದ್ದಳು. ಆದ್ದರಿಂದಲೇ ಕರ್ಣ ಸೂರ್ಯ ಪುತ್ರನಾಗಿದ್ದ.

ಅರ್ಜುನನು ಕುಂತಿಯ ಪುತ್ರನೇ,ಆದರೆ ಇಂದ್ರನ ವರದಾನದಿಂದ ಹುಟ್ಟಿದವನು ಆದ್ದರಿಂದ ಅರ್ಜುನ ಇಂದ್ರನ ಪುತ್ರ.

ಇಂದ್ರ ಮತ್ತು ಸೂರ್ಯ ಇಬ್ಬರಿಗೂ ಅನಿಸಿತ್ತು ಅವರ ಮಗನೇ ವಿಜಯಿಯಾಗಬೇಕೆಂದು.ಒಂದು ರಾತ್ರಿ ಕರ್ಣನು ನಿದ್ರಾವಸ್ಥೆಯಲ್ಲಿದ್ದ ಅವನೊಂದು ಕನಸು ಕಂಡ.ಅದರಲ್ಲಿ ಸೂರ್ಯ ಬಂದು ಹೇಳಿದ.ನಾಳೆ ನಿನ್ನ ಬಳಿ ಒಬ್ಬ ಬ್ರಾಹ್ಮಣ ಬರುವ ಆದರೆ ಅವನು ಬ್ರಾಹ್ಮಣನಲ್ಲ, ಬ್ರಾಹ್ಮಣ ವೇಶದಲ್ಲಿರುವ  ಇಂದ್ರ.ನಿನ್ನ ಜನ್ಮದಿಂದಲೂ ನಿನ್ನ ಜೊತೆಗೆ  ಇರುವ  ಕವಚ ಕುಂಡಲವನ್ನು ಕೇಳುತ್ತಾನೆ.ಆದರೆ ನೀನು ಅದನ್ನು ಅವನಿಗೆ ಕೊಡಬೇಡ. ಆದರೆ ಕರ್ಣನು ಅಂದ  ಕೇಳಿದವರಿಗೆ  ಹೇಗೆ ಕೊಡದೇ ಇರಲಿ ನಾನು. ಅದಕ್ಕೆ   ಸೂರ್ಯ ಹೇಳಿದ ಕವಚ ಕುಂಡಲ ಕೊಟ್ಟರೆ ನಿನ್ನ ತೇಜಸ್ಸು ಕಡಿಮೆಯಾಗುತ್ತದೆ, ಶಕ್ತಿ ನಾಶವಾಗುತ್ತದೆ. ಆಮೇಲೆ ಶತ್ರುವನ್ನು ಹೇಗೆ ಸೋಲಿಸುವೆ.

ಕರ್ಣನೆಂದ ‘ನಾನು ಪರಶುರಾಮರಿಂದ ಅನೇಕ ವಿದ್ಯೆಗಳನ್ನು ಕಲಿತಿದ್ದೇನೆ.ಅವುಗಳ ಉಪಯೋಗ ಮಾಡುವೆ.ನನ್ನಲ್ಲಿ ದಾನ ಕೇಳುವವರಿಗೆ  ನಾನು  ಇಲ್ಲ ಎಂದು ಹೇಳಲಾರೆ’.ಸೂರ್ಯನೆಂದ ‘ಬಾಲಕ ನನಗೆ ನಿನ್ನ ಮೇಲೆ ಪ್ರೇಮ ಇರುವುದರಿಂದಲೇ ನಾನು ನಿನ್ನನ್ನು ಜಾಗೃತಗೊಳಿಸಲು  ಬಂದೆ. ಇನ್ನೊಮ್ಮೆ ಯೋಚಿಸು.ಕವಚ ಕುಂಡಲ ಕೊಟ್ಟರೆ ನೀನು ಸಂಕಟಕ್ಕೆ ಈಡಾಗುವೆ’. ಕರ್ಣನೆಂದ ‘ನಿಮ್ಮ ಉಪದೇಶಕ್ಕಾಗಿ ಧನ್ಯವಾದ ಆದರೆ ತನ್ನ ಬಳಿ ಇದ್ದ ವಸ್ತುವನ್ನು ದಾನ ಕೇಳಿದವರಿಗೆ ಕೊಡದೇ ಇರುವುದು ನನ್ನಿಂದ ಆಗುವುದಿಲ್ಲ’. ಈ ಮಾತನ್ನು ಕೇಳಿದ ಸೂರ್ಯ ನಿರುತ್ತರನಾಗಬೇಕಾಯಿತು. ನಿನ್ನಿಚ್ಛೆಯಂತೆ ಮಾಡು ಎನ್ನುತ್ತಾ ಸೂರ್ಯನು ಹೊರಟು ಹೋದ. ಕರ್ಣನು ನಿದ್ರೆ ಹಾರಿ ಹೋಯಿತು ಕನಸು ಕೊನೆಯಾಯಿತು.

ಕೌರವ ಪಾಂಡವರ ಯುದ್ಧದಲ್ಲಿ ಕರ್ಣನು ಅರ್ಜುನನನ್ನು  ಸೋಲಿಸುತ್ತಾನೆ ಎಂಬ ಭಯವಿತ್ತು ಇಂದ್ರನಿಗೆ. ಹಾಗಾಗಿ ಅವನಿಗೆ ಒಂದು ಉಪಾಯ ಒಳೆಯಿತು. ಇಂದ್ರನಿಗೆ  ಕರ್ಣನ ಉದಾರ ಮನಸ್ಸಿನ ಸ್ವಭಾವದ  ಅರಿವಿತ್ತು. ಹಾಗಾಗಿ ಬ್ರಾಹ್ಮಣ ವೇಷ ದಾರಿಯಾಗಿದ್ದ ಇಂದ್ರ ಕರ್ಣನಲ್ಲಿಗೆ ಬಂದೇ ಬಿಟ್ಟ. ದ್ವಾರದಲ್ಲಿ ನಿಂತು ಕರ್ಣ ನನಗೆ ಭಿಕ್ಷೆಯ ಅವಶ್ಯಕತೆ ಇದೆ ಎಂದ.ಹೊರಗೆ ಬಂದ ಕರ್ಣ ಎಂತಹ ಭಿಕ್ಷೆ ಬೇಕು ಮಹಾರಾಜ ಎಂದು ಕೇಳಿದ.ನಿಮಗೆ ಪುತ್ರನ ಯಶಸ್ಸಿಗೆ ನೂರು ಸ್ವರ್ಣ ಮುದ್ರೆ ಕೂಡಲೇ ಅಥವಾ ಪುತ್ರಿಯ ವಿವಾಹಕ್ಕೆ ಒಂದು ಸಾವಿರ ಸ್ವರ್ಣ ಮುದ್ರೆ ಕೊಡಲೇ ಅಥವಾ  ಗೋವುಗಳನ್ನು ಕೊಡಲೇ. ಕರ್ಣನು ಪ್ರಶ್ನೆ ಕೇಳಿದ ಕಪಟವಾದಿ ಇಂದ್ರ ನನಗೆ ಬೇರೆ ಯಾವ ಭಿಕ್ಷೆಯೂ ಬೇಡ.ನಿನ್ನ ಜನ್ಮದಿಂದಲೂ ನಿನ್ನ ಬಳಿ ಇರುವ ಕವಚ ಕುಂಡಲ ಇದೆಯಲ್ಲಾ ಅದನ್ನೇ ನನಗೆ ಕೊಡು.

ಕರ್ಣನಿಗೆ ಕನಸಿನ ಮಾತು ನೆನಪಾಯಿತು.ಸೂರ್ಯ ದೇವನು ಹೇಳಿದಂತೆ ಒಬ್ಬ ಬ್ರಾಹ್ಮಣ ಅವನ ಬಾಗಿಲಿಗೆ ಬಂದಿದ್ದ ಮತ್ತು  ಕವಚ ಕುಂಡಲವನ್ನು ಕೇಳುತ್ತಿದ್ದ.ಈ ಬ್ರಾಹ್ಮಣ ಅಂದರೆ ಸ್ವಯಂ ಇಂದ್ರದೇವ. ಕರ್ಣನು ಬ್ರಾಹ್ಮಣ ವೇಷದಲ್ಲಿದ್ದ ಈ ಇಂದ್ರ ದೇವನಿಗೆ ಕೈ ಜೋಡಿಸಿ ಕೇಳಿದ “ನನ್ನ ಕವಚ ಕುಂಡಲದಿಂದ ನಿಮಗೇನು ಲಾಭ.ಬೇಕಿದ್ದರೆ ಇಡೀ ಪೃಥ್ವಿಯನ್ನೇ ಜಯಿಸಿ ನಾನು ನಿಮಗೆ ಅರ್ಪಿಸುತ್ತೇನೆ ,ಸರಿಯೇ”.

ಇಂದ್ರನೆಂದ  ಬೇಡ ,ಬೇಡ ನನಗೆ ಪೃಥ್ವಿಯ ಅವಶ್ಯಕತೆ ಇಲ್ಲ. ನನಗೆ ಕೇವಲ ನಿನ್ನ ಕವಚ ಕುಂಡಲ ಬೇಕು.ಕೊಡುತ್ತೀಯಾ ? ಅಂತಹ ದಾನ ಶೂರನೇನು ನೀನು. ಕರ್ಣ ಒಮ್ಮೆ ಇಂದ್ರದೇವನ ಕಣ್ಣಿನಲ್ಲಿ  ಕಣ್ಣಿಟ್ಟು ನೋಡಿದ  ಮತ್ತೆ ಅಂದ ನೀವು ಇಂದ್ರದೇವ .ನೀವು ನನ್ನಲ್ಲಿ ಕರ್ಣ ಕುಂಡಲವನ್ನು ಯಾಚಿಸಿದಿರಿ. ನಾನು ಧನ್ಯನಾದೆ ತೆಗೆದುಕೊಳ್ಳಿ   ಎನ್ನುತ್ತಾ,  ಕ್ಷಣ ಮಾತ್ರವೂ ವಿಚಾರ ಮಾಡದೇ ತನ್ನ ಅಂಗದಲ್ಲಿದ್ದ ಕವಚ ಕೂಡಲವನ್ನು ಎಳೆದು ತೆಗೆದ.ಕರ್ಣ ಕುಂಡಲವು  ಕರ್ಣನ ಶರೀರದ ಒಂದು ಭಾಗವೇ ಆಗಿತ್ತು.ಅದನ್ನು ಎಳೆದು ತೆಗೆಯುವಾಗ ,ಅವನ ಶರೀರದಿಂದ ರಕ್ತದ ಪ್ರವಾಹವೇ ಹರಿಯಲಾರಂಭಿಸಿತು. ಆದರೆ ಕರ್ಣನು ಇದಕ್ಕಾಗಿ  ಸ್ವಲ್ಪವೂ ಚಿಂತಿಸಲಿಲ್ಲ. ಬಾಗಿಲಿಗೆ  ಬಂದ ಬ್ರಾಹ್ಮಣನಿಗೆ  ಕರ್ಣನು ಕವಚ ಕುಂಡಲವನ್ನು ನಗು ನಗುತ್ತಾ ಕೊಟ್ಟ.

ಇಂದ್ರನಿಗೂ ಆಶ್ಚರ್ಯವಾಯಿತು, ಅವನೆಂದ  “ಸೂರ್ಯ ಕನಸಿನಲ್ಲಿ ಬಂದು ಎಲ್ಲವನ್ನೂ ತಿಳಿಸಿದ್ದ ಆದರೂ ಕರ್ಣ ಕುಂಡಲವನ್ನು ಕೊಡಲು ನೀನು ಸ್ವಲ್ಪವೂ ಹಿಂಜರಿಯಲಿಲ್ಲ. ಧನ್ಯ ನೀನು. “ ದಾನ ಶೂರ ಕರ್ಣ” ನೆಂಬ  ನಿನ್ನ ಹೆಸರು ಮೂರು ಲೋಕಗಳಲ್ಲಿಯೂ ಪ್ರಸಿದ್ದಿಯಾಗಲಿ. ಕರ್ಣ ಕುಂಡಲವನ್ನು ತೆಗೆಯುವಾಗ ನಿನ್ನ ಶರೀರದಲ್ಲಾದ ಗಾಯ  ಹಾಗೆಯೇ  ನಿನ್ನ ಶರೀರದಿಂದ ಮಾಯವಾಗಲಿ.ನಾನು ನಿನಗೆ ವಾಸವಿ ಹೆಸರಿನ ಶಕ್ತಿ ಪ್ರಧಾನ ಮಾಡುವೆ ಅದನ್ನು ನೀನು ಯುದ್ಧದಲ್ಲಿ ಯಾವುದೇ ಯೋಧನ ಮೇಲೆ ಪ್ರಯೋಗಿಸಬಹುದು. ನಿನಗೆ ಇನ್ನೇನು  ಬೇಕೋ ಅದನ್ನು ಕೇಳು ಕೊಡುವೆ ನಾನು” .

ಕರ್ಣನೆಂದ ನನ್ನಲ್ಲಿ ಯಾಚಿಸುವವರೊಡನೆ ನಾನೇನು ಕೇಳಲಿ ನನಗೇನು ಬೇಡ, ನೀನು ಸುಖಿಯಾಗಿ ಹೋಗಬಹುದು. ಬ್ರಾಹ್ಮಣ ರೂಪದಲ್ಲಿ ಬಂದಿದ್ದ ಇಂದ್ರ ಬಂದ ಹಾಗೆ ಹಿಂದೆ ಹೋದ. ಕರ್ಣನು ತನ್ನ ಧರ್ಮದ ಪಾಲನೆ ಮಾಡಿದ .ಇಂದ್ರ ತನ್ನ ಜಾಲವನ್ನು ಚೆನ್ನಾಗಿ ಹರಡಿದ್ದ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top