fbpx
ದೇವರು

ನಿಮಗೆ ಗೊತ್ತಿರದ ರಾಮಾಯಣದ ಹತ್ತು ರಹಸ್ಯಗಳು !

ನಿಮಗೆ ಗೊತ್ತಿರದ ರಾಮಾಯಣದ ಹತ್ತು ರಹಸ್ಯಗಳು !

1.ರಾವಣನ ಸಾವಿಗೆ ಪಾರ್ವತಿ ಕಾರಣ.

ನಮಗೆ ತಿಳಿದಿರುವಂತೆ ಹತ್ತು ತಲೆಯ ದುಷ್ಟ ರಾವಣನ ಸಾವಿಗೆ ಕಾರಣ ಸೀತೆ.ಆದರೆ,ನಿಜವಾಗಿ ನೋಡಿದರೆ ಅವನ ಸಾವಿಗೆ ಸೀತೆ ನೆಪ ಮಾತ್ರ ಅದಕ್ಕೆ ಮೂಲ ಕಾರಣ ಪಾರ್ವತಿಯ  ಶಾಪ.ಈಶ್ವರ ರಾವಣನ ತಪ್ಪಸ್ಸಿಗೆ ಮೆಚ್ಚಿ ಆತ್ಮಲಿಂಗ ಕೊಟ್ಟ ಎಂದು ಕೇಳಿದ್ದೇವೆ.ಆದರೆ ಪಾರ್ವತಿ ಶಾಪ ಕೊಟ್ಟಿದ್ದು ನಮಗೆ ಗೊತ್ತಿಲ್ಲ.ಆತ್ಮಲಿಂಗ ಪಡೆಯುವ ಕಸರತ್ತಿನಲ್ಲಿ ಒಮ್ಮೆ ಶಿವನನ್ನು ಮೆಚ್ಚಿಸಲು ರಾವಣ ಕೈಲಾಸ ಪರ್ವತವನ್ನೇ ಎತ್ತಿದ್ದ.ಆಗ ಪಾರ್ವತಿಗೆ ಬಹಳ ಹೆದರಿಕೆಯಾಗಿತ್ತಂತೆ. ರಾವಣನ ಮೇಲೆ ಸಿಟ್ಟುಗೊಂಡು ಆಕೆ ನಿನಗೆ ಹೆಂಗಸರಿಂದಲೇ ಸಾವು ಎಂದು ಶಾಪ ಕೊಟ್ಟಳಂತೆ.

2.ಸೇತುವೆ ಕಟ್ಟಲು ಎಷ್ಟು ದಿನ ಬೇಕಾಯ್ತು.

ಭಾರತ-ಶ್ರೀಲಂಕಾ ನಡುವೆ ರಾಮಸೇತು ಒಡೆಯಲು ತುಂಬಾ ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ.ಆದರೆ ಅದನ್ನು ಕಟ್ಟಲು ರಾಮನ ಕಪಿಸೈನ್ಯ ತೆಗೆದುಕೊಂಡಿದ್ದು ಕೇವಲ ಐದು ದಿನ!

3.ವನವಾಸಕ್ಕೆ ಹೋದಾಗ ರಾಮನಿಗೆ ಕೇವಲ 27 ವರ್ಷ.

ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ ಮಾತ್ರ ಇದು ತಿಳಿಯುತ್ತದೆ. ರಾಮ ವನವಾಸಕ್ಕೆ ಹೊರಟಾಗ ಅವನಿಗೆ 27 ವರ್ಷದ ಪ್ರಾಯ. ಇನ್ನೊಂದು  ಕುತೂಹಲಕಾರಿ ಸಂಗತಿಯೆಂದರೆ,ಕಾಡಿಗೆ ಹೋದಮೇಲೆ ರಾಮ ಅಲ್ಲಿ ಸುಖವಾಗಿರಲೆಂದು ಅಪ್ಪ ದಶರಥ ಅವನಿಗೆ ತುಂಬಾ ಸಂಪತ್ತು ಕೊಟ್ಟು ಕಳಿಸಬೇಕೆಂದು ಬಯಸಿದ್ದ.ಆದರೆ ಅವನು ಖಾಲಿ ಕೈಯಲ್ಲಿ ಹೋಗಬೇಕು ಎಂದು ಕೈಕೇಯಿ ತಾಕೀತು ಮಾಡಿದಳು.ಅದಕ್ಕೂ ಮುನ್ನವೇ,ಅರಮನೆಯಿಂದ ಏನನ್ನು ತೆಗೆದುಕೊಂಡು ಹೋಗಬಾರದೆಂದು  ರಾಮ ನಿರ್ಧರಿಸಿದ್ದ.ಕೈಕೇಯಿ ಹೇಳುವುದಕ್ಕೂ ಮೊದಲೇ ಸೀತೆಗೆ ನಾರುಮಡಿ ಉಟ್ಟುಕೊಳ್ಳಲು ಅವನು ಸೂಚಿಸಿದ್ದ.

4.ರಾಮ ಶಿವಧನಸ್ಸನ್ನು ಮುರಿಯಲಿಲ್ಲ.

ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಶಿವ ಧನಸ್ಸನ್ನು ಮುರಿದು ರಾಮ ಸೀತೆಯನ್ನು ಮದುವೆಯಾದ ಎಂಬ ಜನಪ್ರಿಯ ಕಥೆ ಚಾಲ್ತಿಯಲ್ಲಿದೆ. ಆದರೆ,ಮೂಲ  ವಾಲ್ಮೀಕಿ ರಾಮಾಯಣದಲ್ಲಿ ಈ ಸನ್ನಿವೇಶವೇ ಇಲ್ಲ.ಶಿವನ ಧನಸ್ಸನ್ನು ಎದೆಗೇರಿಸಿ ರಾಮ ಮುರಿದ ಎಂಬ ಘಟನೆ ಬರುವುದು ತುಳಸೀದಾಸರ ರಾಮಾಯಣದಲ್ಲಿ.ಅದೊಂದು ರೋಚಕ ಕಥೆ ಆಗಿರುವುದರಿಂದ ಎಲ್ಲರ ಮನಸ್ಸಿನಲ್ಲೂ ಉಳಿದಿರಬೇಕು.

5.ರಾಮಾಯಣದ ಪ್ರಕಾರ ದೇವರು ಕೇವಲ 33.

ಹಿಂದೂಗಳ ನಂಬಿಕೆಯಂತೆ ಮುಕ್ಕೋಟಿ (33 ಕೋಟಿ)  ದೇವರು.33 ಕೋಟಿ ದೇವರು ಎಂದೆಲ್ಲಾ ಹೇಳಲಾಗುತ್ತದೆ. ಸರಿಯಾಗಿ  ಕುಳಿತು ಲೆಕ್ಕ ಹಾಕಿದರೆ ಲಕ್ಷಾಂತರ ದೇವರಂತೂ ಸಿಕ್ಕೇ ಸಿಗುತ್ತಾರೆ.ಆದರೆ ರಾಮಾಯಣದ ಪ್ರಕಾರ ದೇವರು ಹಾಗೂ ದೇವತೆಗಳಿರುವುದು 33 ಗುಂಪು ಮಾತ್ರ ರಾಮಾಯಣದ ಅರಣ್ಯ ಕಾಂಡದಲ್ಲಿ ಇದರ ಉಲ್ಲೇಖವಿದೆ.

6.ದಶರಥ ಮುದುಕನಾದ ಮೇಲೆ ರಾಮ ಹುಟ್ಟಿದ.

ಮದುವೆಯಾಗಿ ಬಹಳ  ವರ್ಷಗಳವರೆಗೂ ದಶರಥ ರಾಜನಿಗೆ ಮಕ್ಕಳಿರಲಿಲ್ಲ.ಮೂವರು ಹೆಂಡತಿಯಿದ್ದರೂ ಅವನಿಗೆ ಸಂತಾನ ಭಾಗ್ಯ ಲಭಿಸಲಿಲ್ಲ.ಕೊನೆಗೆ 60 ವರ್ಷವಾದಾಗ ಚಿಂತೆ ಜೋರಾಯಿತು.”ನನ್ನ ನಂತರ ಅಯೋದ್ಯೆಯ ಕಥೆಯೇನು ?” ಆಗ ಪುತ್ರಕಾಮೇಷ್ಠಿಯಾಗ ಮಾಡಿದ ನಂತರ ರಾಮ,ಲಕ್ಷ್ಮಣ, ಭರತ ಮತ್ತು ಶತ್ರುಘ್ನರು ಹುಟ್ಟಿದರು.

7.ಲಂಕೆ ನಿಜವಾಗಿ ರಾವಣನದ್ದಲ್ಲ.

ಲಂಕೆಗೆ ರಾವಣನ ಲಂಕ ಎಂದೇ ಕರೆಯಲಾಗುತ್ತದೆ. ಆದರೆ ಅದು ಮೂಲತಃ ಕುಭೇರನದ್ದು .ಲಂಕೆ ಸಂಪೂರ್ಣ ಚಿನ್ನದಿಂದ ನಿರ್ಮಿತವಾಗಿತ್ತು. ಜಗತ್ತಿನ ಮೊದಲನೇ  ಶ್ರೀಮಂತ ಕುಭೇರ ಅದನ್ನು ನಿರ್ಮಿಸಿ ಆಳುತ್ತಿದ್ದ. ಅವನ ತಮ್ಮ ರಾವಣನಿಗೆ ತಾನೇ ಲಂಕೆಯ ಅಧಿಪತಿಯಾಗಬೇಕು ಎಂಬ ಆಸೆ ಹುಟ್ಟಿತ್ತು. ಕುಭೇರ ಅಷ್ಟೇನೂ ಪರಾಕ್ರಮಿಯಲ್ಲ.ಆದರೆ ರಾವಣ ಭಯಂಕರ ಶಕ್ತಿವಂತ.ಆದ್ದರಿಂದ ಕುಭೇರ ರಾವಣ ಯುದ್ಧಕ್ಕೆ ಬರುವ ಸೂಚನೆ ನೀಡಿದ ತಕ್ಷಣವೇ ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟು  ಲಂಕೆಯಿಂದಲೇ ಹೊರಟು ಹೋದ . ಹೀಗಾಗಿ ಕುಭೇರ ಹೆದರಿ ಓಡಿ ಹೋಗಿದ್ದಾನೆ, ಒಳ್ಳೆಯದ್ದೇ ಆಯಿತು  ಎಂದು ತಿಳಿದು ಖುಷಿಯಾಗಿ ತಾನೇ ಗೆದ್ದವನಂತೆ ತಿಳಿದು ಲಂಕೆಯನ್ನು   ಆಳ ತೊಡಗಿದನು.

8.ಶಿವ ರಾವಣನಿಗೆ ವರ ಕೊಟ್ಟ,ಶಿವನ ಶಿಷ್ಯ ಶಾಪ ಕೊಟ್ಟ.

ವಾಸ್ತವವಾಗಿ ಶಿವನಿಗೂ ರಾವಣನನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ ತಪ್ಪಸ್ಸು ಮಾಡಿ ತಮ್ಮನ್ನು ಮೆಚ್ಚಿಸುವವರನ್ನ ಕಡೆಗಣಿಸುವ ಶಕ್ತಿ ಆ ದೇವರಿಗೂ ಇರಲಿಲ್ಲ. ಹಾಗಾಗಿ ರಾವಣನಿಗೆ ಅನಿವಾರ್ಯವಾಗಿ ವರ ಕೊಟ್ಟ.ಆದರೆ ಶಿವನ ಹೆಂಡತಿ ಪಾರ್ವತಿ ಮತ್ತು ಶಿವನ ವಾಹನ ನಂದಿ ಮಾತ್ರ ರಾವಣನಿಗೆ ಶಾಪ ಕೊಟ್ಟಿದ್ದರು.ಒಮ್ಮೆ ಶಿವನನ್ನು ನೋಡಲು ರಾವಣ ಕೈಲಾಸ ಪರ್ವತಕ್ಕೆ ಹೋಗಿದ್ದ .ಆಗ ಅಲ್ಲಿದ್ದ ನಂದಿಯನ್ನು ನೋಡಿ ಆಡಿಕೊಂಡು ನಕ್ಕನಂತೆ.ಆದ್ದರಿಂದ ಸಿಟ್ಟಿಗೆದ್ದ ನಂದಿ ಒಂದು ಕೋತಿಯಿಂದ ನಿನ್ನ ಅವಸಾನವಾಗಲಿ ಎಂದು ಶಾಪ ಕೊಟ್ಟನಂತೆ.ನಂತರ ಹನುಮಂತನಿಂದಲೇ ರಾವಣನ ಅವಸಾನ ಆರಂಭವಾಯಿತು.

9.ಅಪ್ಪನ ಮೇಲೆ ಯುದ್ಧ ಮಾಡು ಎಂದಿದ್ದ ಲಕ್ಷ್ಮಣ.

ರಾಮನಿಗೆ ಪಟ್ಟಾಭಿಷೇಕ ಮಾಡುವುದಿಲ್ಲವೆಂದೂ, ಅವನು ವನವಾಸಕ್ಕೆ ಹೋಗಬೇಕೆಂದು ದಶರಥ ಮಹಾರಾಜ ಹೇಳಿದಾಗ ಲಕ್ಷ್ಮಣ ಬಹಳ ಸಿಟ್ಟುಗೊಂಡಿದ್ದ. ಅಪ್ಪನ ಮೇಲೆ ಯುದ್ಧ ಮಾಡಿ.ಅವನನ್ನು ಸೋಲಿಸಿ ಸಿಂಹಾಸನ ಗೆಲ್ಲು ಎಂದು ಅಣ್ಣನಿಗೆ ಅವನು ಬಹಳ ಒತ್ತಾಯ ಮಾಡಿದ ಅವನು ಲಕ್ಷ್ಮಣನಿಗೆ ಸಮಾಧಾನ ಮಾಡಿದ.

10.ಸೀತೆಗಾಗಿ ಇಂದ್ರ ಪಾಯಸ ತಂದಿದ್ದ.

ಸೀತೆ ರಾವಣನ ಅಶೋಕ ವನದಲ್ಲಿದ್ದಾಗ ಅಲ್ಲಿಗೆ ಹೊರಗಿನಿಂದ ಹೋದವನು ಹನುಮಂತ ಮಾತ್ರ.ಅದಕ್ಕೂ ಮೊದಲು ಇಂದ್ರ ಅಲ್ಲಿಗೆ ಹೋಗಿದ್ದ.ಸೀತೆಯನ್ನು  ಅಪಹರಣ ಮಾಡಿ ರಾವಣ ಅವಳನ್ನು ಅಶೋಕ ವನಕ್ಕೆ ತೆಗೆದುಕೊಂಡು ಹೋದ ಸುದ್ದಿ ಬ್ರಹ್ಮನಿಗೆ ತಿಳಿಯಿತು.ಅವನು ಬಹಳ ಬೇಸರಗೊಂಡ. ಸೀತೆಗೆ ಸಂತೋಷವಾಗಲಿ ಎಂದು ಇಂದ್ರನ ಬಳಿ ಪಾಯಸ ಕೊಟ್ಟು ಕಳಿಸಿದ. ಇಂದ್ರ ಅದನ್ನು ತೆಗೆದುಕೊಂಡು ಬಂದು ತನ್ನ ಮಂತ್ರ ಶಕ್ತಿಯಿಂದ ಎಲ್ಲಾ ರಾಕ್ಷಸರಿಗೂ ನಿದ್ದೆ ಬರಿಸಿ, ನಂತರ ಸೀತೆಗೆ ಪಾಯಸ ಕೊಟ್ಟಿದ್ದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top