ನಿಮ್ಮ ಮನೆಯಲ್ಲಿ ಈ ಚಿಹ್ನೆ ಇದ್ದರೆ ಅದೃಷ್ಟ ನಿಮ್ಮದಾಗತ್ತೆ, ಅಷ್ಟೇ ಅಲ್ಲದೆ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ.
ಸ್ವಸ್ತಿಕ ಅನ್ನು ಲಕ್ಷ್ಮೀ ಮತ್ತು ಗಣಪತಿಯ ಚಿಹ್ನೆಯಾಗಿ ಹಿಂದೂಗಳು ಭಾವಿಸುತ್ತಾರೆ. ಈ ಸ್ವಸ್ತಿಕ ಅನ್ನು ತುಳಸಿಗಿಡಕ್ಕೆ ಮತ್ತು ಪೂಜೆಯ ಮನೆಯಲ್ಲಿ ಬರೆಯುತ್ತೇವೆ.ಇದನ್ನು ಸರಿಯಾಗಿ ಬರೆಯದಿದ್ದರೆ ಒಳ್ಳೆಯದಕ್ಕಿಂತಾ ತುಂಬಾ ಕೆಟ್ಟದೇ ಆಗುತ್ತದೆ.
ವಿಜ್ಞ ವಿನಾಶಕನಾದ ಗಣಪತಿಗೆ ಪ್ರತೀಕವಾದ ಈ ಸ್ವಸ್ತಿಕ ನಮ್ಮ ಮನೆಯಲ್ಲಿ ಇದ್ದರೆ ಸ್ವಪ್ನಗಳು ದೂರವಾಗಿ ನೀವು ಅಂದುಕೊಂಡ ಕೆಲಸಗಳು ಶುಭಪ್ರದವಾಗಿ ಆಗುತ್ತದೆ.ಆದ್ದರಿಂದಲೇ ಈ ಸ್ವಸ್ತಿಕ್ ಅನ್ನು ಪೂರ್ವ ಕಾಲದಿಂದಲೂ ಅಷ್ಟು ವಿಶೇಷವಾಗಿ ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಧಾರ್ಮಿಕ ಕಾರ್ಯಗಳಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಹೆಚ್ಚು ಬಳಸುತ್ತಾರೆ ಮನೆಯ ಶುಭ ಕಾರ್ಯಗಳಲ್ಲಿಯೂ ಸಹ ಈ ಚಿಹ್ನೆಯನ್ನು ಉಪಯೋಗಿಸುತ್ತೇವೆ.
ಸ್ವಸ್ತಿಕ್ ಎಂದರೇನು ?
ಸ್ವಸ್ತಿಕ್ ಅಂದರೆ ಶುಭಸೂಚಕ,ಶುಭ ಪ್ರದಾಯಕ ಚಿಹ್ನೆ. ಪೂರ್ವ ಕಾಲದಲ್ಲಿ ಈ ಚಿಹ್ನೆಯನ್ನು ಸೂರ್ಯ ದೇವರ ಚಿಹ್ನೆಯಾಗಿ ಆರಾಧಿಸುತ್ತಿದ್ದರು.
ನಮ್ಮ ಕುಟುಂಬ ಮತ್ತು ವ್ಯಾಪಾರಕ್ಕೆ ಗಣಪತಿ ಸುರಕ್ಷತೆಯಿಂದ ಕಾಪಾಡುತ್ತಾರೆ ಎಂದು ನಂಬಿಕೆ ಇಟ್ಟಿದ್ದರು.ಈ ಸ್ವಸ್ತಿಕ್ ಚಿಹ್ನೆಯನ್ನು ಮನೆಯಲ್ಲಿ ಮತ್ತು ವ್ಯಾಪಾರದ ಸ್ಥಳದಲ್ಲಿ ಶುಭ ಸೂಚಕವಾಗಿ ಬರೆಯುತ್ತಾರೆ.
ಸ್ವಸ್ತಿಕ್ ಚಿಹ್ನೆಯು ನೋಡಲು ಕಾಲ ಚಕ್ರವಾಗಿ ಕಾಣಿಸುತ್ತದೆ ಮತ್ತು ಆಧ್ಯಾತ್ಮಿಕ ಪ್ರಪಂಚದಲ್ಲಿ “ಓಂ” ಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟು ಪ್ರಾಮುಖ್ಯತೆ ಈ ಸ್ವಸ್ತಿಕ್ ಚಿಹ್ನೆಗೂ ಇದೆ.
ಮನೆಯ ಮುಖ್ಯ ದ್ವಾರಕ್ಕೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ಮನೆಯ ವಾಸ್ತು ದೋಷಗಳು ಏನಾದರೂ ಇದ್ದರೆ ಅದು ದೂರವಾಗುತ್ತದೆ.
ಸ್ವಸ್ತಿಕ ಚಿಹ್ನೆಯು ಸಕಾರಾತ್ಮಕ ಶಕ್ತಿಯನ್ನು ಮನೆಯ ಒಳಗೆ ತೆಗೆದುಕೊಂಡು ಬರುತ್ತದೆ.ಮನೆಯ ದರಿದ್ರ ತೊಲಗಿ ಐಶ್ವರ್ಯ ಬರುತ್ತದೆ.
ಇದು ಲಕ್ಷ್ಮೀಯ ಸಂಕೇತವಾಗಿದ್ದು ವಿವಾಹ ಸಮಾರಂಭದಲ್ಲಿ ಮತ್ತು ಲಗ್ನ ಪತ್ರಿಕೆಗಳಲ್ಲಿ ಸಹ ಬರೆದಿರುತ್ತಾರೆ.
ಇನ್ನೂ ಇದನ್ನು ನೀವು ಬರೆಯುವವರಾಗಿದ್ದರೆ ಕೆಂಪು ಬಣ್ಣದಲ್ಲೇ ಬರೆಯಬೇಕು.ಬೇರೆ ಬಣ್ಣದಲ್ಲಿ ಬರೆಯಬಾರದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
