fbpx
ಸಾಧನೆ

ಕೇವಲ 8ನೇ ತರಗತಿ ಓದಿ, ಪ್ರಪಂಚದ ಟಾಪ್ ಇಂಜಿನಿಯರ್ ಗಳನ್ನೇ ಬೆರಗುಗೊಳಿಸುತ್ತಿರುವ ಬೆಂಗಳೂರಿನ ‘ಆಪಲ್ ಡಾಕ್ಟರ್’.

ಕೇವಲ 8ನೇ ತರಗತಿ ಓದಿ, ಪ್ರಪಂಚದ ಟಾಪ್ ಇಂಜಿನಿಯರ್ ಗಳನ್ನೇ ಬೆರಗುಗೊಳಿಸುತ್ತಿರುವ ಬೆಂಗಳೂರಿನ ‘ಆಪಲ್ ಡಾಕ್ಟರ್’. 

ಹರೀಶ್ ಅಗರ್ವಾಲ್, ಜಾಸ್ತಿ ವಿದ್ಯಾಭ್ಯಾಸ ಮಾಡದ ಇಂದೋರ್ ನ ಒಬ್ಬ ಛಲಗಾರ.ಬಡತನದ ಕಾರಣ ಅವ್ನು ತನ್ನ 8ನೇ ತರಗತಿಯಲ್ಲಿ ಓದುತ್ತಿರುವಾಗ ಶಾಲೆಯನ್ನು ಬಿಟ್ಟರು.ಇವರದ್ದು ಬಡತನದ ಕುಟುಂಬವಾಗಿದ್ದರಿಂದ ಅವನನ್ನು ಓದಿಸಲು ಅವರ ಪೋಷಕರಿಗೆ ಶಕ್ತಿ ಇರಲಿಲ್ಲ. ಇದರಿಂದ ಹರೀಶ್ ರವರು ಎಂಟನೇ ತರಗತಿಯಲ್ಲಿರುವಾಗ ಸ್ಕೂಲನ್ನು ಬಿಟ್ಟರು.ಅವರ ಊರಿನಲ್ಲೇ ಒಬ್ಬ ಒಬ್ಬ ಕಂಪ್ಯೂಟರ್ ಮೆಕಾನಿಕ್ ನ ಅಂಗಡಿಗೆ ಕೆಲಸವನ್ನು ಕಲಿಯಲು ಹೋಗುತ್ತಿದ್ದನು.2007 ರಲ್ಲಿ ಅವರು ಒಂದು ಹಳೆಯ ಕಂಪ್ಯೂಟರ್ ಅನ್ನು ಖರೀದಿಮಾಡಿದನು ಮತ್ತು ಕಂಪ್ಯೂಟರ್ ಅನ್ನು ರಿಪೇರಿ ಮಾಡುವುದನ್ನು ಕಲಿಯುತ್ತಿದ್ದನು.

ಕಂಪ್ಯೂಟರ್ ಕೆಲ್ಸ ಕಲಿತಿರುವವರಿಗೆ ಬೆಂಗಳೂರಿನಲ್ಲಿ ಸಾಕಷ್ಟು ಕೆಲ್ಸದ ಅವಕಾಶಗಳಿವೆ ಎಂದು ತಮ್ಮೊರಿನವರು ಹೇಳಿದ್ದನ್ನು ಕೇಳಿ ಅವರು ಬೆಂಗಳೂರಿಗೆ ಬರುತ್ತಾನೆ. ಅಲ್ಲಿ ಒಂದು ಸ್ಟಾರ್ಟ್ ಅಪ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಅವನಿಗೆ ತಿಂಗಳಿಗೆ ಕೇವಲ ಎರಡು ಸಾವಿರ ರೂಪಾಯಿ ಸಂಬಳವನ್ನು ಮಾತ್ರ ಕೊಡುತಿದ್ದರು. ನಂತರ ಈ ಕೆಲಸವನ್ನು ಬಿಟ್ಟು ಹೋಟೆಲ್ ನಲ್ಲಿ ವ್ಯೆಟರ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಸ್ವಲ್ಪ ದಿನಗಳ ನಂತರ ಅವ್ರು ಆ ಹೋಟೆಲನ್ನು ಬಿಟ್ಟು ಒಂದು ಪುಟ್ಟ ಮೊಬೈಲ್ ಅಂಗಡಿಗೆ ಕೆಲಸಗಾರನಾಗಿ ಸೇರಿಕೊಳ್ಳುತ್ತಾರೆ.ಇದು ಇವರ ಜೀವನದ ಟರ್ನಿಂಗ್ ಪಾಯಿಂಟ್ ಆಗುತ್ತದೆ.ಅಲ್ಲಿ ಅವ್ರು ಯಾವ್ಯಾವ ಕಂಪನಿಯ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳನ್ನು ಯಾವ್ಯಾವ ರೀತಿಯಲ್ಲಿ ರಿಪೇರಿ ಮಾಡಬೇಕು ಎಂದು ಕಲಿತುಕೊಂಡರು.
ಅಲ್ಲೇ ಕೆಲ್ಸಮಾಡುತ್ತಿರುವಾಗ ಒಮ್ಮೆ ಒಬ್ಬ ಗ್ರಾಹಕರು ಕೆಟ್ಟುಹೋದ ಮ್ಯಾಕ್ಬುಕ್ ಅನ್ನು ಕೊಟ್ಟು ರಿಪೇರಿ ಮಾಡಿಕೊಡಲು ಹೇಳಿದಾಗ ಅವರಿಗೆ ಆಪಲ್ ಉತ್ಪನ್ನಗಳ ಬಗ್ಗೆ ಏನನ್ನೂ ತಿಳಿದಿರಲಿಲ್ಲ ಆದರೂ ಅವನು ಆ ಮ್ಯಾಕ್ಬುಕ್ ಅನ್ನು ಯಶಸ್ವಿಯಾಗಿ ರಿಪೇರಿ ಮಾಡಿದನು.

ದಿನಗಳು ಕಳೆದಂತೆ ಹರೀಶ್ ರವರು ಆಪಲ್ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳುತ್ತಾ ಬಂದರು.ಅವರೇ ಒಂದು ಆಪಲ್ ಪ್ರಾಡಕ್ಟ್ ಗಳನ್ನು ರಿಪೇರಿ ಮಾಡುವ ಒಂದು ಶಾಪ್ ಅನ್ನು ಪ್ರಾರಂಭಮಾಡುತ್ತಾರೆ.ಆದರೆ ಅವರಿಗೆ ಆರಂಭದಲ್ಲೇ ತೊಂದರೆಯಾಗುತ್ತದೆ.ಆಪಲ್ ಉತ್ಪನ್ನಗಳಿಗೆ ಬಿಡಿ ಭಾಗಗಳು ಸುಲಭವಾಗಿ ಸಿಗುತ್ತಿರಲಿಲ್ಲ. ನಂತರ ಅವನು ಹಲಾವಾರು ಅಧ್ಯಯನ ಮಾಡಿ ಆಪಲ್ ಉತ್ಪನ್ನಗಳಿಗೆ 100% ರೆಪೇರಿಮಾಡುವ ಸಾಮರ್ಥ್ಯವನ್ನು ಹೊಂದಿದರು.ಪ್ರಪಂಚದ ವಿವಿಧ ಭಾಗಗಳಿಂದ ದೊಡ್ಡ ಮಟ್ಟದಲ್ಲಿ ಆಪಲ್ ಉತ್ಪನ್ನಗಳನ್ನು ಖರೀಧಿ ಮಾಡಿ. ಅವುಗಳನ್ನೇ ಬಿಡಿ ಭಾಗಗಳನ್ನಾಗಿ ಬಳಸಿಕೊಳ್ಳಲು ಶುರು ಮಾಡಿ ಈ ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡನು.

ಇಂದು ಸ್ವತಃ ಆಪಲ್ ಕಂಪೆನಿಯವರೇ ಇವನಿಗೆ ಆಪಲ್ ಪ್ರಾಡಕ್ಟ್ ಗಳನ್ನು ರಿಪೇರಿ ಮಾಡುವವುದಕ್ಕೆ ಸರ್ಟಿಫಿಕೇಟ್ ಕೊಟ್ಟಿದೆ.ಇವರು ಸ್ಥಾಪನೆ ಮಾಡಿದ್ದ ಆ ಅಂಗಡಿ ವಾರ್ಷಿಕವಾಗಿ ಮೂರು ಕೋಟಿಗಳಿಗಿಂತಲೂ ಹೆಚ್ಚು ಆದಾಯವನ್ನು ಗಳಿಸುತ್ತಿದೆ. “ಆಪಲ್ ಡಾಕ್ಟರ್” ಎಂದು ಜನಪ್ರಿಯನಾಗಿದ್ದಾನೆ. 8ನೇ ತರಗತಿ ಫೇಲ್ ಆಗಿ ಮ್ಯಾಕ್ ಟೆಕ್ನಿಷಿಯನ್ ಆಗಿರುವುದು ಎಲ್ಲರಿಗು ಸ್ಪೂರ್ತಿಯ ಕತೆಯಾಗಿದೆ. ಇವರ ಆಪಲ್ ಪ್ರಾಡಕ್ಟ್ ಗಳನ್ನು ರೆಪೇರಿಮಾಡುವ ಶಾಪ್ ಬೆಂಗಳೂರಿನ ಕೋರಮಂಗಲದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top