fbpx
ಭವಿಷ್ಯ

ವಾರ ಭವಿಷ್ಯ ಜುಲೈ 16 ರಿಂದ ಜುಲೈ 22.

ವಾರ ಭವಿಷ್ಯ ಜುಲೈ 16 ರಿಂದ ಜುಲೈ 22.

1.ಮೇಷ ರಾಶಿ:-


ನೀವು ಯಾರನ್ನು ಅತಿ ವಿಶ್ವಾಸಾರ್ಹರು ಎಂದು ತಿಳಿದುಕೊಂಡಿದ್ದೀರೋ ಅವರಿಂದಲೇ ಈ ವಾರ ವಂಚನೆಗೆ ಒಳಗಾಗುವ ಸಂಭವವಿರುತ್ತದೆ.ಸರಿ,ತಪ್ಪುಗಳನ್ನು ಅರಿತು ಮುಂದುವರೆಯುವುದು ಬುದ್ಧಿವಂತರ ಲಕ್ಷಣ.ಖಾಸಗಿ ಕಂಪನಿ ನೌಕರರು ತಮ್ಮ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಳೆದುಕೊಳ್ಳುವರು.
ನಿಮ್ಮ ಹೆಸರನ್ನು ಬೇರೆಯವರು ದುರುಪಯೋಗ ಪಡೆಸಿಕೊಳ್ಳುವರು. ಜೀವನವನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳುವುದು ಥರವಲ್ಲ. ವಾರಾಂತ್ಯದಲ್ಲಿ ಉದ್ಯೋಗದಲ್ಲಿ ಬದಲಾವಣೆ ಕಂಡು ಬರುವುದು.

2.ವೃಷಭ:-

ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸುವ ನಿಮಗೆ ಅವರಿಂದಲೇ ಹೆಚ್ಚು ಹಣಕಾಸಿನ ನೆರವು ದೊರೆಯುವುದು.ಉದ್ಯೋಗಸ್ಥ ಮಕ್ಕಳಿಂದ ಹಣದ ಸಹಾಯ ದೊರೆಯುವುದು. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬದಿರುವುದೇ ಕ್ಷೇಮ.
ಆಸ್ತಿ ಸಂಬಂಧಿತ ವ್ಯಾಜ್ಯಗಳನ್ನು ರಾಜಿ ಪಂಚಾಯ್ತಿಯಲ್ಲಿ ಬಗೆಹರಿಸಿಕೊಳ್ಳುವುದು ಉತ್ತಮ.ಸೋದರನ ಗೃಹ ನಿರ್ವಹಣೆಗೆ ಅಧಿಕ ಖರ್ಚು ಬರುವುದರಿಂದ ಲಕ್ಷ್ಮೀ ಸ್ತೋತ್ರ ಪಠಿಸಿರಿ.ಮಗನ ದಾಂಪತ್ಯ ಜೀವನದಲ್ಲಿ ಸಂತಸ ಮೂಡುವುದು.

ಮಿಥುನ (Mithuna)

ಗೃಹ ವ್ಯವಹಾರಕ್ಕೆ ಸಂಬಂಧಪಟ್ಟ ವಿವಾದವೊಂದು ಅನಿರೀಕ್ಷಿತ ತಿರುವು ಪಡೆಯಲಿದೆ.ಇದರಲ್ಲಿ ನಿಮ್ಮ ಪಾತ್ರವಿಲ್ಲದಿದ್ದರೂ ಅನಾವಶ್ಯಕ ಆಪಾದನೆ ಬರುವುದು.ಈ ವಿಷಯದಲ್ಲಿ ಸಾಕಷ್ಟು ಜಾಗೃತರಾಗಿರಿ.ನಿರುದ್ಯೋಗಿ ಸೋದರನಿಗೆ ಸಾಧಾರಣ ವೇತನದ ನೌಕರಿ ದೊರೆಯಲಿದೆ.ತಾತ್ಕಾಲಿಕವಾಗಿ ಅದನ್ನು ಮಾಡುವುದು ಒಳ್ಳೆಯದು.
ಹಿರಿಯರ ಸಲಹೆಗಳು ಸೂಕ್ತವಾಗಿದ್ದಲ್ಲಿ ಸ್ವೀಕರಿಸಿ,ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡು ಬರಲಿದೆ.ಬೇರೆಯವರ ನಿಮ್ಮಿತವಾಗಿ ಮಾಡುವ ಪ್ರಯಾಣದ ಖರ್ಚು,ನೀವೇ ಮಾಡಬೇಕಾಗುವುದು.

ಕರ್ಕ (Karka)

ಪರಸ್ಪರ ಆಲೋಚನೆ, ವಿಚಾರ, ವಿನಿಮಯದಿಂದ ಮಾತ್ರ ಅಂದುಕೊಂಡ ಕಾರ್ಯಗಳು ಕೈಗೂಡಲಿವೆ. ಮಾಡುವ ದಾನಗಳು ಯೋಗ್ಯರಿಗೆ ಮುಟ್ಟುವಂತೆ ನೋಡಿಕೊಳ್ಳಿ.ಯಾರಾದರೂ ಕೇಳಿದಲ್ಲಿ ಮಾತ್ರ ಸಲಹೆಗಳನ್ನು ನೀಡಿರಿ.ಹುದ್ದೆಯಲ್ಲಿ ಮುಂಬಡ್ತಿಯೊಂದಿಗೆ ವೇತನದಲ್ಲಿ ಹೆಚ್ಚಳ ಕಂಡು ಬರಲಿದೆ.
ಮತ್ತೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥರಾಗುವುದರಿಂದ ನೀವು ನಷ್ಟ ಅನುಭವಿಸಬೇಕಾಗುವುದು.ವಿಶೇಷ ಔತಣಕೂಟಗಳಲ್ಲಿ ಭಾಗವಹಿಸುವಿರಿ.ಮಡದಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು.ಸೂಕ್ತ ಚಿಕಿತ್ಸೆ ಕೊಡಿಸಿರಿ.

ಸಿಂಹ (Simha)

ಸಾರ್ವಜನಿಕವಾಗಿ ನೀವು ಕೊಡಲಿರುವ ಸಲಹೆಗಳು ಸಮಯೋಚಿತವಾಗಿಯೇ ಇರುತ್ತದೆ.ವ್ಯವಹಾರದಲ್ಲಿ ಮುಂದಾಲೋಚನೆಯಿರಲಿ ಸೋದರನು ಗುಟ್ಟಾಗಿ ಆಸ್ತಿ ಖರೀದಿಸಬಹುದು.ಇದರಿಂದ ನಿಮಗೆ ಕೊಂಚ ಬೇಸರವಾಗುವುದು. ಸಂಗಾತಿಯೊಂದಿಗೆ ನೆಡೆಯಲಿರುವ ಚರ್ಚೆಯಿಂದಲೇ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಒಂದು ಪರಿಹಾರ ಕಂಡು ಬರುವುದು.
ಬರಲಿರುವ ಅವಕಾಶಗಳು ನಿಮ್ಮ ಭವಿಷ್ಯವನ್ನೇ ಬದಲಾಯಿಸಲಿವೆ. ಲೇವಾದೇವಿ ವ್ಯವಹಾರವನ್ನು ಒಂದು ವಾರದ ಮಟ್ಟಿಗೆ ಮುಂದೂಡಿರಿ. ಉದ್ಯೋಗದಲ್ಲಿ ವಿಶೇಷ ಪ್ರಗತಿ ಕಂಡುಬರಲಿದೆ.

ಕನ್ಯಾರಾಶಿ (Kanya)

ವಿಪರೀತ ತಿರುಗಾಟದಿಂದ ಶರೀರ ಬಳಲಬಹುದು.ದೂರ ಪ್ರಯಾಣ ಸದ್ಯಕ್ಕಂತೂ ಬೇಡವೇ ಬೇಡ.ಬೆನ್ನು ನೋವು ಹಾಗೂ ಉದರ ಶೂಲೆ ನಿಮ್ಮನ್ನು ಭಾದಿಸುವ ಸಾಧ್ಯತೆ ಇರುತ್ತದೆ .ಬಂಧುಗಳ ಮನೆಯಲ್ಲಿ ನೆಡೆಯಲಿರುವ ಶುಭ ಕಾರ್ಯಗಳಲ್ಲಿ ಪರಿವಾರದೊಂದಿಗೆ ಭಾಗವಹಿಸುವಿರಿ.
ಆಸ್ತಿ ಪಾಲುದಾರಿಕೆ ವಿಷಯದಲ್ಲಿ ನಿಷ್ಠುರತೆ ಅನುಭವಿಸ ಬೇಕಾಗುವುದು. ಕೆಲವು ವಿಷಯಗಳಲ್ಲಿ ಕಟ್ಟುನಿಟ್ಟಾಗಿರುವುದು ಒಳ್ಳೆಯದು.ಸರ್ಕಾರಿ ಅಥವಾ ಇತರೆ ಸಂಘ ,ಸಂಸ್ಥೆಗಳಿಂದ ಧನ ಸಹಾಯವು ಹೆಚ್ಚಿನ ಮಟ್ಟದಲ್ಲಿ ದೊರೆಯಲಿದೆ.

ತುಲಾ (Tula)

ಇಷ್ಟು ದಿನಗಳ ಕಾಲ ನಿಮ್ಮನ್ನು ಸತಾಯಿಸುತ್ತಿದ್ದ ಆರ್ಥಿಕ ಸಮಸ್ಯೆ ಕ್ರಮೇಣ ಕಡಿಮೆಯಾಗಲಿದೆ.ಮತ್ತೆ ಪುನಃ ಸಾಲದ ಸುಳಿಯಲ್ಲಿ ಸಿಲುಕದಿರುವುದು ಬುದ್ಧಿವಂತರ ಲಕ್ಷಣ.ಮನೆಯಲ್ಲಿ ಅತಿಥಿ ಸತ್ಕಾರ ವಿಶೇಷವಾಗಿ ನೆಡೆಯಲಿದೆ.
ಕೆಲವೊಮ್ಮೆ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮುಂದಾಲೋಚನೆ ಮಾಡುವುದು ಉತ್ತಮ.ಆತ್ಮಸಾಕ್ಷಿಗೆ ವಿರುದ್ಧವಾಗಿ ನೆಡೆದುಕೊಳ್ಳದಿರಿ.ಕೆಲಸದ ನಿಮ್ಮಿತ ದೇಹಾಲಸ್ಯ ಕಂಡು ಬರುವುದು. ಕಾಲ ಕಾಲಕ್ಕೆ ವಿಶ್ರಾಂತಿ ಅತ್ಯಗತ್ಯ ಎಂಬುದು ನೆನಪಿರಲಿ.

ವೃಶ್ಚಿಕ (Vrushchika)


ಪಾಲು ದಾರಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಿಬರುವ ಸಾಧ್ಯತೆ ಇರುತ್ತದೆ.ಅದನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಿರಿ. ಮಕ್ಕಳು ತಮ್ಮ ಕೆಲಸಗಳಲ್ಲಿ ತೋರುವ ಆತುರತೆ ಕೆಲವೊಮ್ಮೆ ನಿಮ್ಮನ್ನು ಇಕಟ್ಟಿಗೆ ಸಿಲುಕಿಸುವುದು.ಮತ್ತೊಬ್ಬರನ್ನು ನಂಬಿ ಕರ್ತವ್ಯ ವಿಮುಖರಾಗದಿರಿ.
ಸ್ನೇಹಿತರ ಸಲಹೆಗಳು ಕೆಲವೊಮ್ಮೆ ತುಂಬಾ ಸಹಕಾರಿಯಾಗುವುದು.ಬಹುಮುಖವಾಗಿ ಹಮ್ಮಿಕೊಂಡ ಯೋಜನೆಗಳಿಗೆ ಆರ್ಥಿಕ ಸಹಾಯವು ಸ್ನೇಹಿತರಿಂದ ದೊರೆಯುವುದು.ಪೂರ್ವ ಸಿದ್ಧತೆ ಇಲ್ಲದೆ ನೂತನ ಕೆಲಸ ಆರಂಭಿಸಬೇಡಿ.

ಧನು ರಾಶಿ (Dhanu)

ನೀವು ಸರ್ಕಾರಿ ಮೇಲಧಿಕಾರಿಗಳಾಗಿದ್ದಲ್ಲಿ ಸದ್ಯದಲ್ಲೇ ಅನಿರೀಕ್ಷಿತವಾಗಿ ನೆಡೆಯಲಿರುವ ವರ್ಗಾವಣೆಗೆ ಸಿದ್ದರಾಗುವಿರಿ.ಹೊಸ ಜಾಗದಲ್ಲಿ ನಿಮಗೆ ವಿಶೇಷ ಸ್ಥಾನಮಾನ ದೊರೆಯಲಿದೆ.ನಿಮ್ಮ ಕೈ ಕೆಳಗೆ ಮಾಡುವ ನೌಕರರ ಕಷ್ಟ ಸುಖಗಳನ್ನು ಸ್ವಲ್ಪ ವಿಚಾರಿಸುತ್ತೀರಿ.
ಪರಿವಾರದವರೊಂದಿಗೆ ಅತಿ ದೂರ ಪ್ರಯಾಣ ಅನಿವಾರ್ಯವಾಗುವುದು. ವೈಯಕ್ತಿಕ ಜೀವನದಲ್ಲಿ ವಿಶೇಷ ಅಭಿವೃದ್ಧಿ ಕಂಡು ಬರಲಿದೆ.ಆದಾಯದ ಮೂಲ ಹೆಚ್ಚಲಿದೆ.ವೈಯಕ್ತಿಕ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗಲಿದೆ.

ಮಕರ (Makara)

ಕೆಲಸದ ಒತ್ತಡದ ನೆಪದಲ್ಲಿ ದೇಹಾರೋಗ್ಯವನ್ನು ಅಲಕ್ಷಿಸಬೇಡಿ.ಮಡದಿಯ ಆರೋಗ್ಯದಲ್ಲಿ ಸುಧಾರಣೆ ಆಗುವುದು.ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ವೆಚ್ಚವಾಗುವುದು.ತೆಗದುಕೊಳ್ಳುವ ಆಹಾರದ ವಿಷಯದಲ್ಲಿ ಅಲಕ್ಷ್ಯ ಬೇಡ.ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದು.ಬಂಧುಗಳ ನಡುವೆ ವಿಶ್ವಾಸ ವೃದ್ಧಿಯಾಗುವುದು.
ನೀವು ಮಾಡುವ ಸಮಾಜ ಸೇವೆಯಿಂದ ಜನರು ಹರ್ಷಗೊಳ್ಳುವರು. ಇದರಿಂದ ಸಾಮಾಜಿಕ ಗೌರವ,ಅಧರಗಳು ಕಂಡು ಬರುವುವು.ಅನಾವಶ್ಯಕವಾಗಿ ಶತ್ರುಗಳನ್ನು ಹುಟ್ಟಿ ಹಾಕಿ ಕೊಳ್ಳಬೇಡಿರಿ.

ಕುಂಭರಾಶಿ (Kumbha)

ಕೆಲವರು ನಿಮ್ಮ ಸಣ್ಣ ತಪ್ಪನ್ನೇ ದೊಡ್ಡದು ಮಾಡಿ ಅಪ ಪ್ರಚಾರ ಮಾಡುವ ಸಾಧ್ಯತೆ ಇದೆ.ಅದನ್ನು ಅಲಕ್ಷಿಸುವುದು ಉತ್ತಮ. ಶೀತ,ನೆಗಡಿ,ಜ್ವರ ಈ ತರಹದ ಸಣ್ಣ ಪುಟ್ಟ ಖಾಯಿಲೆಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ.
ಕೋರ್ಟು,ಕಚೇರಿಯ ವ್ಯಾಜ್ಯಗಳು ಸದ್ಯಕ್ಕೆ ನಿಮ್ಮ ವಿರುದ್ಧವಾಗಿರುತ್ತದೆ. ಆದರೆ ನಿರಾಶರಾಗುವ ಅವಶ್ಯಕತೆ ಇರುವುದಿಲ್ಲ.ಮನೆಯ ಹಿರಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡು ಬರುವುದು.

ಮೀನರಾಶಿ (Meena)

ಖಾಸಗಿ ಕಂಪನಿ ನೌಕರರು ಮೇಲಧಿಕಾರಿಗಳ ಪ್ರಷಂಸೆಗೆ ಪಾತ್ರರಾಗುವರು.ವ್ಯಾಪಾರಿಗಳು ಗ್ರಾಹಕರ ವಿಶ್ವಾಸ ಗಳಿಸಿದಲ್ಲಿ.ಅಧಿಕ ಲಾಭ ಕಾಣಬಹುದು.ಮಕ್ಕಳ ನಡವಳಿಕೆ ಹಾಗೂ ಅವರ ಮಾತಿನ ವರಸೆ ಮನೆಯಲ್ಲಿರುವ ಹಿರಿಯರಿಗೆ ಬೇಸರವನ್ನುಂಟು ಮಾಡುವುದು.
ಸಂಬಂಧಿಗಳು ಆರಂಭಿಸಿರುವ ಹೊಸ ಯೋಜನೆಗಳಿಗೆ ನಿಮ್ಮಿಂದಲೇ ಚಾಲನೆ ದೊರೆಯುವ ಸಾಧ್ಯತೆ ಇರುತ್ತದೆ. ಅನಿರೀಕ್ಷಿತವಾಗಿ ಒದಗಿ ಬರುವ ಧನ ಸಹಾಯದಿಂದ ಸಾಲಗಳನ್ನು ಮರುಪಾವತಿ ಮಾಡುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top