fbpx
ದೇವರು

ಶನೇಶ್ವರನನ್ನು ಹೀಗೆ ಪೂಜೆ ಮಾಡಿದರೆ ಶನಿಪ್ರಭಾವವು ನಿಮ್ಮ ಮೇಲೆ ಬೀಳುವುದಿಲ್ಲ…

ಶನೇಶ್ವರನನ್ನು ಹೀಗೆ ಪೂಜೆ ಮಾಡಿದರೆ ಶನಿಪ್ರಭಾವವು ನಿಮ್ಮ ಮೇಲೆ ಬೀಳುವುದಿಲ್ಲ…

 

ನಾವು ಸಾಧಾರಣವಾಗಿ ನವಗ್ರಹದಲ್ಲಿರುವ ಶನೈಶ್ಚರ ಅಂದರೆ ತುಂಬಾ ಭಯ ಪಡುತ್ತೇವೆ.ಶನೈಶ್ಚರ ಎಂಬ ಹೆಸರು ಕೇಳುತ್ತಿದ್ದಂತೆಯೇ ನಮ್ಮಲ್ಲಿ ಗೊತ್ತಿಲ್ಲದಂತೆಯೇ ಮೈ ಕಂಪಿಸುತ್ತದೆ.ನಮ್ಮ ಜಾತಕದಲ್ಲಿ ಶನಿಕಾಟ ನಮಗೆ ಬರಬಾರದು ಎಂದು ಶನಿದೇವರು ತಮ್ಮ ಪ್ರಭಾವವನ್ನು ನಮ್ಮ ಮೇಲೆ ಬೀಳಬಾರದು ಎಂದು ಕೋರಿಕೊಳ್ಳುತ್ತೇವೆ.
ಸಪ್ತಮ ಶನಿ,ಅಷ್ಠಮ ಶನಿ, ಅರ್ಧಾಷ್ಟಮ ಶನಿ.ಈ ಹೆಸರನ್ನು ಕೇಳುತ್ತಿದ್ದಂತೆಯೇ ನಮಗೆ ಗೊತ್ತಿಲ್ಲದ ನಡುಕ ಉಂಟಾಗುತ್ತದೆ. ಆದರೆ ಶನೈಶ್ಚರ ಕೊಡುವ ವರಗಳ ಬಗ್ಗೆ ತಿಳಿದುಕೊಂಡರೆ ಅಸಲಿಗೆ ಇದರ ಬಗ್ಗೆ ಭಯಪಡುವುದಿಲ್ಲ.ಅದಲ್ಲದೆ ಶನೈಶ್ಚರ ಸ್ವಾಮಿಯನ್ನು ಆರಾಧಿಸಲು ಪ್ರಾರಂಭಿಸುತ್ತೇವೆ.

“ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ l
ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ” ll

ಭಾವಾರ್ಥ:- ಕಾಡಿಗೆಯಂತಹ ಕಪ್ಪು ದೇಹದ ಸೂರ್ಯನ ಮಗನೂ, ಯಮನ ಅಣ್ಣನೂ, ಛಾಯದೇವಿ ಹಾಗೂ ಸೂರ್ಯನ ಪುತ್ರನೂ ಆದ ನಿಧಾನವಾಗಿ ಚಲಿಸುವ ಶನಿ ದೇವರಿಗೆ ನಮಸ್ಕಾರಗಳು.

“ಶನೇ ದಿನಮಣೆ ಸುನೋ ಆನೈಕ್ ಗುಣ ಸನ್ಮಣೆ l
ಅನಿಷ್ಠಮ್ ಮೇ ಹರ ಮೆಭೀಷ್ಟಂ ಕುರು ಮಾ ಕುರು ಸಂಕಟಮ್” ll

ಭಾವಾರ್ಥ:- ಹೇ ಶನಿದೇವ, ಸೂರ್ಯನ ಪುತ್ರನೇ ,ಗುಣವಂತನೆ, ನಿನಗೊದಗಿದ ಅನಿಷ್ಟಗಳನ್ನು ಕಳೆದು ಅಭೀಷ್ಟೆಗಳನ್ನು ಈಡೇರಿಸು.ಸಂಕಟವನ್ನು ಕೃಪೆ ತೋರಿ ಕೊಡಬೇಡ ಎಂದು ಬೇಡುವೆ.

ಶನೈಶ್ಚರ ಸ್ವಾಮಿಯನ್ನು ಯಾವಾಗಲೂ “ಶನಿ” ಎಂದು ನಾವು ಕರೆಯಬಾರದು.ಶನೈಶ್ಚರ ಎಂದು ಮಾತ್ರವೇ ಕರೆಯಬೇಕು.ಈಶ್ವರ ಎಂಬ ಶಬ್ದ ಎಲ್ಲಿ ಇರುತ್ತದೆಯೋ ಅಲ್ಲಿ ಐಶ್ವರ್ಯವುಳ್ಳ ತತ್ವ ಇರುತ್ತದೆ.
ನವಗ್ರಹಗಳಿಗೆ ಪ್ರದಕ್ಷಿಣೆ ಹಾಕುವಾಗ ಶನೈಶ್ಚರ ಸ್ವಾಮಿಗೆ ಭಕ್ತಿಯಿಂದ ತಪ್ಪದೇ ನಮಸ್ಕಾರ ಮಾಡಬೇಕು.
ಶನಿವಾರ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಶನೈಶ್ಚರನ ಅನುಗ್ರಹ ನಮಗೆ ಸಿಗುತ್ತದೆ.ಶನಿವಾರದ ದಿನದಂದು ನೀಲಿ ಬಣ್ಣ ಅಥವಾ ಕಪ್ಪನೆಯ ಬಟ್ಟೆಯನ್ನು ಧರಿಸುವುದರಿಂದ ಶನೈಶ್ಚರನ ಅನುಗ್ರಹ ಸಿಗುತ್ತದೆ.
* ಆ ದಿನ ಎಳ್ಳಿನ ಉಂಡೆಯನ್ನು ನೈವೇದ್ಯವಾಗಿ ಸಮರ್ಪಿಸಿ ಶಿವನ ಆರಾಧನೆಯನ್ನು ಮಾಡುವುದರಿಂದ ಶನೈಶ್ಚರನು ನಮ್ಮನ್ನು ಅನುಗ್ರಹಿಸಿಸುತ್ತಾನೆ.

* ಶನಿವಾರದಂದು ಹಳೆಯ ಬಾಣಲೆಯನ್ನು ಬಡವರಿಗೆ ಧಾನ ಮಾಡುವುದು ಒಳ್ಳೆಯದು.

* ಎಂಟು ಬಾದಾಮಿ ಹಣ್ಣನ್ನು ಯಾರಿಗಾದರೂ ದಾನವಾಗಿ ಕೊಡಬೇಕು. ಹಾಲು ಮತ್ತು ಸಕ್ಕರೆಯನ್ನು ಬೆರೆಸಿ ಅರಳಿ ಮರದ ಕೆಳಗೆ ಹಾಕಿ ಅದರಿಂದ ಒದ್ದೆಯಾದ ಮಣ್ಣನ್ನು ಹಣೆಗೆ ಕುಂಕುಮವಾಗಿ ಧರಿಸಬೇಕು.

*ಉದ್ದಿನಬೇಳೆ ಮತ್ತು ಎಳ್ಳನ್ನು ಧಾನವಾಗಿ ನೀಡಬೇಕು.ಮನೆಗೆ ಹತ್ತಿರ ಇರುವ ಶನೈಶ್ಚರ ದೇವಸ್ಥಾನಕ್ಕೆ ಚಪ್ಪಲಿ ಇಲ್ಲದೆ ನೆಡೆದುಕೊಂಡು ದೇವರ ದರ್ಶನ ಮಾಡಿಕೊಂಡು ಬರಬೇಕು.

 

ಶನೈಶ್ಚರನು ನಿಮ್ಮ ಜಾತಕದಲ್ಲಿರುವ ಸ್ಥಾನಗಳ ಪ್ರಕಾರ, ಜನ್ಮ ಶನಿ,ದ್ವಾದಶ ಶನಿ, ಅಂತಹ ಸ್ಥಾನಗಳ ಪ್ರಕಾರ, ನಿಮಗೆ ಸ್ವಲ್ಪ ಕಷ್ಟವನ್ನು ಕೊಡುತ್ತಾರೆ.ಆದರೆ ಯಾರು ಭಕ್ತಿಯಾಗಿ ಪೂಜಿಸುತ್ತಾರೋ ಅವರಿಗೆ ಶನೈಶ್ಚರನು ಅನುಗ್ರಹಿಸಿ,ಅವರ ಕಷ್ಟಗಳನ್ನು ದೂರ ಮಾಡುತ್ತಾರೆ.
ಒಂದು ವೇಳೆ ಶನೈಶ್ಚರನೂ ನಿಮಗೆ ಸ್ವಲ್ಪ ಕಷ್ಟವನ್ನು ಕೊಟ್ಟರು.ಶನೈಶ್ಚರ ಸ್ವಾಮಿಯ ಅನುಗ್ರಹ ಸಿಗುವುದರಿಂದ ನೀವು ಕಷ್ಟ ಪಟ್ಟಿದ್ದಕ್ಕೆ ನೂರು ಪಟ್ಟಷ್ಟು ಐಶ್ವರ್ಯ ಮತ್ತು ಸುಖ ಸಂತೋಷವನ್ನು ಕೊಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top