ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ಏನಾಗುತ್ತೆ ಗೊತ್ತಾ ?
ಮಂಗಳವಾರದಂದು ಈ ಕೆಲಸವನ್ನು ಮಾಡಿದ್ರೆ ಖಂಡಿತವಾಗಿಯೂ ನಿಮಗೆ ಆರ್ಥಿಕ ನಷ್ಟ ಬಂದು ಒದಗುತ್ತದೆ.ಯಾವ ಯಾವ ಕೆಲಸ ಮಾಡಬಾರದು? ಯಾಕೆ?ತಿಳಿದುಕೊಳ್ಳೋಣ ಬನ್ನಿ.
ನಮ್ಮ ಮನೆಯಲ್ಲಿ ನಮ್ಮ ಹಿರಿಯರು ಹೇಳ್ತಾನೆ ಇರುತ್ತಾರೆ ಮಂಗಳವಾರ ದಿನ ಆ ಕೆಲಸ ಮಾಡಬೇಡ ,ಈ ಕೆಲಸ ಮಾಡಬೇಡ ಅಂತ. ಯಾಕೆ ಹಾಗೆ ಹೇಳ್ತಾರೆ ಅಂದ್ರೆ ಅದಕ್ಕೆ ಕಾರಣ ಇದೆ. ನಿಶ್ಚಿತವಾಗಿ ನಿಮಗೆ ಆರ್ಥಿಕ ಸಂಕಷ್ಟದ ಜೊತೆಗೆ ಸಕಲ ಕಷ್ಟಗಳು ಬಂದೊದಗುತ್ತವೆ.ಇನ್ನೂ ಹಿಂದೂ ಧರ್ಮದ ಪ್ರಕಾರ ಒಂದೊಂದು ದಿನಕ್ಕೂ ಒಂದೊಂದು ಅದರದ್ದೇ ಆದ ಮಹತ್ವವಿದೆ.ಸೋಮವಾರ ಈಶ್ವರನಿಗೆ,ಮಂಗಳವಾರ ಹನುಮಂತನಿಗೆ,ಶುಕ್ರವಾರ ಲಕ್ಷ್ಮೀಗೆ ,ಶನಿವಾರ ಶನಿದೇವರಿಗೆ ಹೀಗೆ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ.
ಆಯಾ ದಿನಕ್ಕೂ ಒಂದೊಂದು ಗ್ರಹ ಅಧಿಪತಿಯಾಗಿದ್ದು,ಆ ಗ್ರಹಗಳಿಗೂ ಸಹ ಅಧಿದೇವತೆ ಇರುತ್ತವೆ.ನಾವು ಆಯಾ ದಿನಕ್ಕೆ ತಕ್ಕಂತೆ ನೆಡೆದುಕೊಳ್ಳಬೇಕು.ಹಾಗೆ ನೆಡೆದುಕೊಂಡರೆ ನಮಗೆ ದೇವಾನುದೇವತೆಗಳ ಕೃಪೆ ಸಂಪೂರ್ಣವಾಗಿ ನಮಗೆ ದೊರೆಯುತ್ತದೆ ಎಂದು ನಮ್ಮ ಹಿರಿಯರು ಮತ್ತು ಶಾಸ್ತ್ರಗಳು ಹೇಳುತ್ತವೆ.
ಮಂಗಳವಾರದ ದಿನ ಮಂಗಳ ಗ್ರಹದ ದಿನವೆಂದು ಭಾವಿಸಲಾಗುತ್ತದೆ. ಜಾತಕ ಪಲಕ್ಕೆ ಅಡ್ಡಿಯಾಗುವಂತಹ ಯಾವುದೇ ಕೆಲಸವನ್ನೂ ಸಹ ನಾವು ಮಾಡಬಾರದು.ಮಂಗಳವಾರ ಯಾವುದೇ ವಿಶೇಷ ಕೆಲಸವನ್ನು ಮಾಡೋದಿಲ್ಲ ನಮ್ಮ ಹಿರಿಯರು.ಹೌದು ನಾವು ಕೂಡ ನಮ್ಮ ಹಿರಿಯರು ಹಾಕಿಕೊಟ್ಟ ಪಥದಲ್ಲೇ ಸಾಗಬೇಕು.ಅದೇ ಒಳ್ಳೆಯ ಮಾರ್ಗ.
ಮಂಗಳವಾರ ದಿನ ಯಾವುದೇ ಒಳ್ಳೆಯ ಕೆಲಸಗಳನ್ನು ಪ್ರಾರಂಭ ಮಾಡಲೇಬಾರದು.ಹಾಗೇನಾದರೂ ಒಂದು ವೇಳೆ ಮಾಡಿದರೆ ನಮಗೆ ಆಗುವ ಲಾಭಕ್ಕಿಂತ ನಷ್ಟವೇ ಜಾಸ್ತಿ. ಮಂಗಳ ದೋಷ ಎದುರಾಗುತ್ತದೆ. ಆರ್ಥಿಕ ಸಂಕಷ್ಟ ಬಂದೊದಗುತ್ತದೆ. ಆದ್ದರಿಂದ ಆ ದಿನ ಕೆಲವು ಕೆಲಸಗಳನ್ನು ಮಾಡದೇ ಇರುವುದೇ ಒಳ್ಳೆಯದು. ಅಂತಾರೆ ನಮ್ಮ ಹಿರಿಯರು.
1.ಹಣ ಕೊಡಬೇಡಿ.
ಮಂಗಳವಾರದ ದಿನ ಯಾರಿಗೂ ಹಣ ಕೊಡಬೇಡಿ ಹಾಗೆ ಯಾರಿಂದಲೂ ನೀವು ಸಹ ಹಣವನ್ನು ತೆಗೆದುಕೊಳ್ಳಬೇಡಿ.ಅಂದರೆ ಸಾಲವಾಗಿ.ಹೀಗೆ ಮಾಡಿದರೆ ಆರ್ಥಿಕ ನಷ್ಟ ಎದುರಾಗುತ್ತದೆ.
2.ಮಧ್ಯ ಮತ್ತು ಮಾಂಸಾಹಾರ ಸೇವನೆ ಮಾಡಬಾರದು.
ಮಂಗಳವಾರದ ದಿನ ಹನುಮಂತ ದೇವರ ದಿನವೆಂದು ಹೇಳಲಾಗುತ್ತದೆ. ಆದ್ದರಿಂದ ನೀವು ಮಧ್ಯ ಮತ್ತು ಮಾಂಸಾಹಾರ ಸೇವನೆಯಿಂದ ದೂರವಿರಬೇಕು.ಇದರಿಂದ ದೇವರ ಕೃಪೆ ನಿಮ್ಮ ಮೇಲೆ ಸಂಪೂರ್ಣವಾಗಿ ಇರುತ್ತದೆ. ಹಾಗೆ ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರು ಯಾವುದೇ ಅಡ್ಡಿ ಆತಂಕಗವಿಲ್ಲದೆ ನಿರ್ವಿಗ್ನವಾಗಿ ಯಶಸ್ವಿಯಾಗಿ ಮುಂದೆ ನೆಡೆಯುತ್ತವೆ.
3.ಕೂದಲು ಕತ್ತರಿಸಬಾರದು.
ಯಾವುದೇ ಕಾರಣಕ್ಕೂ ಸಹ ಮಂಗಳವಾರದಂದು ಮುಖ್ಯವಾಗಿ ಕೂದಲನ್ನು ಕತ್ತರಿಸಬೇಡಿ ಹಾಗೆ ಪುರುಷರು ಸಹ ಶೇವಿಂಗ( ಕ್ಷೌರ) ಕೂಡ ಮಾಡಿಸಬೇಡಿ ,ಸ್ವತಃ ತಾವೇ ಮಾಡಿಕೊಳ್ಳಲೂ ಬಾರದು.ಹೀಗೆ ಮಾಡಿದರೆ ಮಂಗಳನ ದೋಷಕ್ಕೆ ತುತ್ತಾಗುತ್ತೀರ.
4.ಉಗುರುಗಳನ್ನು ಕತ್ತರಿಸಬೇಡಿ.
ಮಂಗಳವಾರ ಹಾಗೂ ಶುಕ್ರವಾರದ ದಿನ ಉಗುರುಗಳನ್ನು ಕತ್ತರಿಸಬೇಡಿ. ಹಾಗೆ ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನದಂದು ಸಹ ಉಗುರುಗಳನ್ನು ಕತ್ತರಿಸಬಾರದು.ಹಾಗೆ ಯಾವುದೇ ದಿನವಾದರೂ ಸಹ ಮಧ್ಯಾಹ್ನ ಹಾಗೂ ಸಂಜೆಯ ವೇಳೆ ಉಗುರುಗಳನ್ನು ಕತ್ತರಿಸಬಾರದು. ಈ ಸಮಯದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತಾದೆ ಆದ್ದರಿಂದ ಕತ್ತರಿಸಬಾರದು. ಅದಕ್ಕೆಂದೇ ಒಂದು ದಿನ ನಿಗದಿ ಪಡಿಸಿದರೆ ಉತ್ತಮ.ಬಾನುವಾರದ ದಿನ ಉಗುರಗಳನ್ನು ಕತ್ತರಿಸಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
