fbpx
ಭವಿಷ್ಯ

ಧನಿಷ್ಠ ನಕ್ಷತ್ರದವರ ಗುಣ ಲಕ್ಷಣಗಳ ಬಗ್ಗೆ ನಿಮಗೆಷ್ಟು ಗೊತ್ತು ?

ಧನಿಷ್ಠ ನಕ್ಷತ್ರದ ಬಗ್ಗೆ ನಿಮಗೆಷ್ಟು ಗೊತ್ತು ?

ಒಟ್ಟು 27 ನಕ್ಷತ್ರಗಳಲ್ಲಿವೆ. ಅವುಗಳಲ್ಲಿ ಧನಿಷ್ಠ ನಕ್ಷತ್ರ 23 ನೇ ನಕ್ಷತ್ರವಾಗಿದ್ದು.ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ 30 ವರ್ಷಗಳ ವರೆಗೆ ಸತತವಾಗಿ ಒಂದಾದ ನಂತರ ಒಂದರಂತೆ ಕಷ್ಟಗಳನ್ನು ಇವರು ಮತ್ತು ಇವರು ಹುಟ್ಟಿದ ಮನೆಯಲ್ಲಿ ಇರುವವರು  ಸಹ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಧನಿಷ್ಠ ನಕ್ಷತ್ರ ಕುಜನ ನಕ್ಷತ್ರವಾಗಿದ್ದು.ಕುಜನೆ ಈ  ನಕ್ಷತ್ರಕ್ಕೆ ಅಧಿಪತಿ ಆದ್ದರಿಂದ ಕುಜ ದೋಷ ಕೂಡ ಬರುವುದು.ಬನ್ನಿ ಧನಿಷ್ಠ ನಕ್ಷತ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ…

ಧನಿಷ್ಠ ನಕ್ಷತ್ರದಲ್ಲಿ ಹುಟ್ಟಿದವರ ಗುಣ ಮತ್ತು ಲಕ್ಷಣಗಳು.

ಧನಿಷ್ಠ ನಕ್ಷತ್ರ ಮೊದಲ ಎರಡು ಪಾದ ಮಕರ ರಾಶಿಯಲ್ಲಿ ಮತ್ತು ಮೂರು ಮತ್ತು ನಾಲ್ಕನೇ ಪಾದ ಕುಂಭ ರಾಶಿಯಲ್ಲೂ ಬರುತ್ತದೆ

ಸಾಮಾನ್ಯ ಗುಣಲಕ್ಷಣಗಳು:-ಶ್ರೀಮಂತ ವ್ಯಕ್ತಿಗಳು ಮತ್ತು ದೈರ್ಯವಂತರು.ಉದಾರ ಮನೋಭಾವನೆ ಉಳ್ಳವರು, ಸಂಗೀತವೆಂದರೆ ಇವರಿಗೆ ಇಷ್ಟ ಮತ್ತು ವಯಸ್ಸಾದರು  ಇನ್ನೂ ಯುವಕರಂತೆ ಕಾಣುತ್ತಾರೆ.

ಧನಿಷ್ಠ ನಕ್ಷತ್ರ ಎಂದರೆ  ಸಂಪೂರ್ಣ ಸಂಪತ್ತು ಎಂದರ್ಥ.

ಧನಿಷ್ಠ ನಕ್ಷತ್ರದ ಚಿಹ್ನೆಗಳು:- ಸಂಗೀತದ ವಸ್ತುಗಳಾದ ಕೊಳಲು ,ಮೃದಂಗ , ವೀಣೆ ,ತಂಬೂರಿ,ವಾದ್ಯ ಇನ್ನೂ ಮುಂತಾದವು.

ಪ್ರಾಣಿಯ ಚಿಹ್ನೆ:- ಹೆಣ್ಣು ಸಿಂಹ.

ನಕ್ಷತ್ರದ ಅಧಿಪತಿ:- ಕುಜ,ಅಂಗಾರಕ ಅಥವಾ ಮಂಗಳ ಗ್ರಹ ಧನಿಷ್ಠ ನಕ್ಷತ್ರವನ್ನು ಆಳುತ್ತದೆ.ಕುಜ ಗ್ರಹವೇ ಧನಿಷ್ಠ ನಕ್ಷತ್ರಕ್ಕೆ ಅಧಿಪತಿ.

ಹೆಸರು ಪ್ರಾರಂಭವಾಗುವ ಮೊದಲ ಅಕ್ಷರ:- ಗ,ಗೀ,ಗೇ, ಗು.

ದೇವತೆ:-8 ವಾಸುಗಳು.ಇವರು ಸೌರ ಶಕ್ತಿಯ ಮತ್ತು ಬೆಳಕಿನ ದೇವತೆಯಾಗಿದ್ದಾರೆ.

ಗಣ:-ರಾಕ್ಷಸ ಗಣ.

ಧನಿಷ್ಠ ನಕ್ಷತ್ರದಲ್ಲಿ ಹುಟ್ಟಿರುವ ಪುರುಷರ ಗುಣಲಕ್ಷಣಗಳು ಮತ್ತು ವೈಶಿಷ್ಟ್ಯಗಳು.

ಭೌತಿಕ ಲಕ್ಷಣಗಳು:- ಎತ್ತರದ ಮತ್ತು ತೆಳ್ಳನೆಯ ದೇಹವನ್ನು  ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.ಇನ್ನೂ ಕೆಲವರು ಗಿಡ್ಡಕ್ಕೂ ಇರುತ್ತಾರೆ.

ಜೀವನದ ಸಾಮಾನ್ಯ ಘಟನೆಗಳು:- ಇವರಿಗೆ ಏನೇ ಕೆಲಸ ಕೊಟ್ಟರು ಇವರು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.ಎಲ್ಲಾ ಕೆಲಸಗಳಲ್ಲಿಯೂ ನಿಪುಣರು  ಇವರು.

ಈ ನಕ್ಷತ್ರದಲ್ಲಿ ಹುಟ್ಟಿದವರು ಅತ್ಯಂತ  ಬುದ್ದಿವಂತರಾಗಿದ್ದು.  ಎಲ್ಲಾ ವಿಷಯಗಳಲ್ಲಿಯೂ ಅಧಿಕ ಜ್ಞಾನ ಇವರಿಗೆ ಇರುತ್ತದೆ.

 

ಇವರು ಮನಸಾ ,ವಾಚ,ಕರ್ಮ (ಮನಸ್ಸಿನಿಂದಾಗಲಿ, ಮಾತುಗಳಿಂದಾಗಲಿ ಅಥವಾ ಕೆಲಸದಲ್ಲಾಗಲಿ) ಯಾರಿಗೂ ಕೂಡ ತೊಂದರೆ ಕೊಡಲು ,ಮನಸ್ಸಿಗೆ ನೋವುಂಟು ಮಾಡಲು ಬಯಸುವುದಿಲ್ಲ. ಇವರಿಗೆ  ಆಯಾ ಧರ್ಮದಲ್ಲಿ ಹುಟ್ಟಿದವರಿಗೆ ಆಯಾ ಧರ್ಮದ ದೇವರ  ಮೇಲಿನ ಭಕ್ತಿ ಅತೀವವಾಗಿರುತ್ತದೆ.

ಇವರು ಯಾವಾಗಲೂ ತಮ್ಮ ಸ್ವಂತ,ಕಠಿಣ  ಪರಿಶ್ರಮದಿಂದ ಹಣಕಾಸನ್ನು  ಗಳಿಸಿ ಅದರಲ್ಲಿ ಜೀವಿಸಲು ಇಷ್ಟ ಪಡುತ್ತಾರೆ. ಬೇರೆಯವರ ಆಸ್ತಿ, ಅಂತಸ್ತು  ಮತ್ತು ಹಣಕಾಸಿನ ಮೇಲೆ ಯಾವುದೇ ಆಸೆ ಇರುವುದಿಲ್ಲ.

ಇವರು ಯಾರಿಗೂ ಕೂಡ  ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಷ್ಟ ಪಡುವುದಿಲ್ಲ ಕೊನೆಯ ಗಳಿಗೆಯ ವರೆಗೂ ಕಾಯುತ್ತಾರೆ.

ಆನೆಯ ಸೇಡಿನ ಬಗ್ಗೆ ನಿಮಗೆ ತಿಳಿದಿದೆಯೇ. ಯಾರಾದರೂ ಅದಕ್ಕೆ ನೋವುಂಟು ಮಾಡಿದರೆ ,ಅನಾವಶ್ಯಕವಾಗಿ ತೊಂದರೆ ಕೊಟ್ಟರೆ ಸರಿಯಾದ ಸಮಯ ಬರುವವರೆಗೂ ಶಾಂತಿಯುತವಾಗಿ ಕಾದು ನಂತರ ಸರಿಯಾದ ಸಂದರ್ಭ ಸಿಕ್ಕಾಗ ಸೇಡು ತೀರಿಸಿಕೊಳ್ಳುತ್ತದೆ.ಈ ಧನಿಷ್ಠ ನಕ್ಷತ್ರದವರು ಕೂಡ  ಹಾಗೆಯೇ ಸರಿಯಾದ ಸಂದರ್ಭ ಮತ್ತು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

ಶಿಕ್ಷಣ,ವೃತ್ತಿ ಜೀವನ ಮತ್ತು ಆದಾಯ ಗಳಿಕೆಯ ಮೂಲಗಳು.

ಈ ನಕ್ಷತ್ರದಲ್ಲಿ ಹುಟ್ಟಿದವರ  ಅನೇಕರ ಜಾತಕಗಳನ್ನು ಪರಿಶೀಲಿಸಿದಾಗ ಇವರು ವಿಜ್ಞಾನಿಗಳು ಮತ್ತು ಇತಿಹಾಸಕಾರರು ಆಗಿರುವುದು ತಿಳಿದು ಬಂದಿದೆ.

ಇವರಲ್ಲಿ ಒಂದು ವಿಶಿಷ್ಟ  ಪ್ರತಿಭೆ ಇದೆ.ಅದೇನೆಂದರೆ ರಹಸ್ಯಕಾರಿ  ವಿಷಯಗಳನ್ನು  ಗುಪ್ತವಾಗಿಡುವ ಸುಪ್ತ ಪ್ರತಿಭೆ ಇವರಲ್ಲಿದೆ.ಆದ್ದರಿಂದ ಇವರು ರಹಸ್ಯ ಸೇವೆಗಳು ಮತ್ತು ಖಾಸಗಿ ಕಾರ್ಯದರ್ಶಿಗಳಾಗಿ ಹಿರಿಯ ಕಾರ್ಯ ನಿರ್ವಾಹಕರ ಜೊತೆಗೆ ಕೆಲಸ ಮಾಡುವುದು ಉತ್ತಮ.ಇವರ ಶಿಕ್ಷಣ ಮತ್ತು ಶೈಕ್ಷಣಿಕ ಹಿನ್ನೆಲೆ ಅದೇನೇ ಇದ್ದರೂ ಅದು ಇವರ ಬುದ್ಧಿವಂತಿಕೆಗೆ ಮೀರಿದ್ದು.

ವಾದ ವಿವಾದ ಮತ್ತು ಪ್ರತಿವಾದಗಳಲ್ಲಿಯೂ ಸಹ ಇವರೇ ಮುಂದಿರುತ್ತಾರೆ. ಇವರೇ ಜಯಿಸುತ್ತಾರೆ.

ಇವರು ಸಾಮಾನ್ಯವಾಗಿ 24 ವರ್ಷದ ನಂತರವೇ ದುಡಿಮೆಯನ್ನು ಪ್ರಾರಂಭಿಸುತ್ತಾರೆ.ಅಲ್ಲಿಯವರೆಗೆ ಶಿಕ್ಷಣ ಅಥವಾ ಬೇರೆ ಯಾವುದರಲ್ಲಾದರೂ ತಮ್ಮನ್ನು ತಾವು ತೊಡಗಿಸಿ ಕೊಂಡೊರುತ್ತಾರೆ.

ಧನಿಷ್ಠ ನಕ್ಷತ್ರದಲ್ಲಿ ಹುಟ್ಟಿದವರು ಬೇರೆಯವರ ಮೇಲೆ  ನಂಬಿಕೆ ಇಡುವುದಕ್ಕಿಂತ ಮುಂಚೆ ಸ್ವಲ್ಪ ಯೋಚಿಸಿಬೇಕು,ಜಾಗೃತರಾಗಿರುವುದು ಉತ್ತಮ.ಯಾಕೆಂದರೆ ಇವರು ಯಾರನ್ನೇ ಆಗಲಿ ಒಂದು ಬಾರಿ ನಂಬಿದರೆ ಏನನ್ನು ಹಿಂದೂ ಮುಂದು ಯೋಚನೆ ಮಾಡದೇ ಸಂಪೂರ್ಣವಾಗಿ ನಂಬುತ್ತಾರೆ ಅದನ್ನೇ ಬಂಡವಾಳ ವಾಗಿಟ್ಟುಕೊಂಡು ಬೇರೆಯವರು ಇವರಿಗೆ ಸುಲಭವಾಗಿ   ಮೋಸ ಮಾಡುತ್ತಾರೆ. ಆದ್ದರಿಂದ ಬೇರೆಯವರ ಜೊತೆ ವ್ಯವಹಾರ ಮಾಡುವುದು ಒಳ್ಳೆಯದಲ್ಲ.ತಾವೇ ಒಂದು ಸ್ವಂತ ವ್ಯವಹಾರ,ಉದ್ಯಮವನ್ನು ಪ್ರಾರಂಭ ಮಾಡುವುದು ಉತ್ತಮ.

ಕೌಟುಂಬಿಕ ಜೀವನ.

ಕೌಟುಂಬಿಕ  ವಲಯದಲ್ಲಿಯೂ ಕೂಡ ನೀವೇ ಅತ್ಯಂತ ಮೇಲೆತ್ತೆರೆದ ಸ್ಥಾನದಲ್ಲಿದ್ದು ಉತ್ತಮ ನಿರ್ವಾಹಕರಾಗಿರುತ್ತೀರ.

ಧನಿಷ್ಠ ನಕ್ಷತ್ರದಲ್ಲಿ ಹುಟ್ಟಿದವರಿಗೆ ಇವರ ಸಂಬಂಧಿಕರು  ಒಂದೇ ಸಮನೆ ಒಂದಾದ ನಂತರ ಮೊತ್ತೊಂದು ತೊಂದರೆಗಳನ್ನು ಇವರ ಜೀವನದಲ್ಲಿ ತಂದೊಡ್ಡುತ್ತಾರೆ ಅದು ಸತತವಾಗಿ 30 ವರ್ಷಗಳ ವರೆಗೂ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಆದ್ದರಿಂದ  ಇವರು ಸಂಭಂಧಿಕರಿಂದ ದೂರ ಉಳಿಯುವುದೇ ಒಳ್ಳೆಯದು.ಕಷ್ಟಗಳು ಮಾಟ ಮಂತ್ರ ಮತ್ತು ಇನ್ನೂ ಅನೇಕ ರೀತಿಯದ್ದು ಆಗಿರಬಹುದು.ಈ ಕಾರಣದಿಂದ ಇವರಷ್ಟೇ ಅಲ್ಲದೆ  ಇವರು ಹುಟ್ಟಿದ್ದ ಮನೆಯಲ್ಲಿ ಇರುವವರು  ಕೂಡ ಇವರ ಜೊತೆಗೆ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ ಇದೆ ಕಾರಣಕ್ಕೆ  ಧನಿಷ್ಠ ನಕ್ಷತ್ರಕ್ಕೆ ಅನಿಷ್ಟ ನಕ್ಷತ್ರ ಎಂದು ಕರೆಯುವುದು ಮತ್ತು ಇನ್ನೊಂದು ಕಾರಣ ವೆಂದರೆ ಧನಿಷ್ಠ ನಕ್ಸತ್ರದ ಅಧಿಪತಿ ಕುಜ ಗ್ರಹ.ಕುಜ ಗ್ರಹವೂ ಇದಕ್ಕೆ ಕಾರಣ.30 ವರ್ಷದ ನಂತರ ಇವರ ಜೀವನದಲ್ಲಿ ಎಲ್ಲಾ ತೊಂದರೆಗಳು ನಿವಾರಣೆಗೊಂಡು ನಿಧಾನವಾಗಿ ವೃತ್ತಿಯಲ್ಲಿ ಮತ್ತು ಜೀವನದಲ್ಲಿ ಏಳಿಗೆ ಯಾಗುತ್ತದೆ.

ಇನ್ನೂ ಧನಿಷ್ಠ ನಕ್ಷತ್ರದಲ್ಲಿ ಜನಿಸಿ ಇದರ ಜೊತೆಗೆ ಸರ್ಪ ದೋಷವು ಇದ್ದರಂತೂ ಕಷ್ಟಗಳ ಸರಮಾಲೆಯೇ ಇರುತ್ತದೆ ಅದು 31 ವರ್ಷಗಳ ವರೆಗೆ ಅನುಭವಿಸಬೇಕಾಗುತ್ತದೆ.ಯಾರಿಗೂ ಹೇಳುವುದಕ್ಕೂ ಆಗುವುದಿಲ್ಲ.ಹೇಳಿದರು ಅರ್ಥವು ಆಗುವುದಿಲ್ಲ.

ಇವರು ತಮ್ಮ ಅಕ್ಕ, ತಂಗಿ, ತಮ್ಮ, ಆಣ್ಣಂದಿರಿಗೆ  ಹೆಚ್ಚು ಒಲವನ್ನು ತೋರಿಸುತ್ತಾರೆ.

ಇವರು ಅಧಿಕ ಲಾಭವನ್ನು ಕಾನೂನು ಮೂಲಗಳ ಪ್ರಕಾರ  ಗಳಿಸಲು ಸಾಧ್ಯವಾಗುವುದಿಲ್ಲ. ಆದರೆ ಈ  ನ್ಯೂನತೆಗಳನ್ನು  ಇವರ ಹೆಂಡತಿಯಲ್ಲಿರುವ ಅಥವಾ ಗಂಡನಲ್ಲಿರುವ ಒಳ್ಳೆಯ ಗುಣಗಳ ಮೂಲಕ ಸರಿಹೋಗುತ್ತವೆ.ಇವರ ಹೆಂಡತಿಯೇ ಸಾಕ್ಷಾತ್   ಲಕ್ಷ್ಮೀಯ ಅವತಾರ.

ಇವರು ಜೀವನದಲ್ಲಿ ಮದುವೆಯಾದ ನಂತರವೇ  ಹಣಕಾಸಿನ ಸ್ಥಿತಿಯೂ ವೃದ್ಧಿಯಾಗುತ್ತದೆ.ಅಲ್ಲಿಯವರೆಗೂ ಹಣಕಾಸಿನ ವ್ಯವಸ್ಥೆಯಲ್ಲಿ ಸ್ವಲ್ಪ ಕಷ್ಟವೇ.

ಮದುವೆಯ ಜೀವನ ಕೂಡ ಕಷ್ಟ,ಮದುವೆಗೆ ಸಂಗಾತಿಯನ್ನು ಹುಡುಕುವಾಗ  ಕೂಡ ಅನೇಕ ತೊಂದರೆಗಳು ಎದುರಾಗುತ್ತವೆ  ಮತ್ತು  ವಿವಾಹ ವಿಚ್ಚೇದನ  ಕೂಡ ಆಗುವ ಸಾಧ್ಯತೆ ಹೆಚ್ಚು.ಇದು ಕೂಡ ಕುಜ ಗ್ರಹದ ಕಾರಣದಿಂದಲೇ.

ಆರೋಗ್ಯ:-ಇವರು  ಆರೋಗ್ಯ  ಅಷ್ಟು  ಚೆನ್ನಾಗಿ ಇರುವುದಿಲ್ಲ .  ಆರೋಗ್ಯದ ಬಗ್ಗೆ ಅಷ್ಟು ಕಾಳಜಿಯೂ  ಇರುವುದಿಲ್ಲ . ಯಾವಾಗ ಖಾಯಿಲೆ ಅತಿಯಾಗುತ್ತದೋ ಆಗ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಸ್ವಲ್ಪ ಅವರ ಆರೋಗ್ಯದ ಸ್ಥಿತಿ ಉತ್ತಮವಾದರೆ ಸಾಕು ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಕೆಮ್ಮು,ರಕ್ತ ಹೀನತೆ ಇನ್ನೂ ಮುಂತಾದ ಖಾಯಿಲೆಗಳಿಗೆ ತುತ್ತಾಗುತ್ತಾರೆ.

ಮಹಿಳೆಯರು ಧನಿಷ್ಠ ನಕ್ಷತ್ರದಲ್ಲಿ ಹುಟ್ಟಿದರೆ ಅವರ ಗುಣ ಲಕ್ಷಣಗಳು.

ಈ ನಕ್ಷತ್ರದಲ್ಲಿ ಹುಟ್ಟಿದ್ದ ಮಹಿಳೆಯರು ಸಹ ಈ ಮೇಲೆ ಹೇಳಿದ ಎಲ್ಲಾ  ಗುಣ ಲಕ್ಷಣಗಳನ್ನು ಹೊಂದಿದ್ದಾರೆ.

ಭೌತಿಕ ಲಕ್ಷಣಗಳು:- 40 ವರ್ಷವಾದರೂ ಕೂಡ 17 ವರ್ಷದ ಚಿರ ಯವ್ವನ ತಾರುಣ್ಯದಿಂದ ಕೂಡಿರುತ್ತಾರೆ.ಇವರನ್ನು ಯಾರು  ನೋಡಿದರು 40 ವರ್ಷ  ಎಂದು ಹೇಳುವುದಿಲ್ಲ,ದಪ್ಪನೆಯ ತುಟಿಗಳನ್ನು ಹೊಂದಿದ್ದು

ಜೀವನದ ಸಾಮಾನ್ಯ ಘಟನೆಗಳು.

ಜೀವನದಲ್ಲಿ ಅತಿಯಾದ ಮಹಾತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಸರಳತೆ ,ವಿನಯ,ಮತ್ತು ಉದಾರ ಸ್ವಭಾವವನ್ನು ಹೊಂದಿರುತ್ತಾರೆ. ದುರ್ಬಲರ ಕಡೆಗೆ ಕರುಣೆ ತೋರಿಸುತ್ತಾರೆ

ಶಿಕ್ಷಣ, ಮತ್ತು ಆದಾಯ ಗಳಿಸುವ ಮೂಲ.

ಮಿಶ್ರ  ಪ್ರತಿಭೆಯುಳ್ಳವರಾಗಿದ್ದು ಶಿಕ್ಷಣದ ಕ್ಷೇತ್ರದಲ್ಲಿ   ಇವರ ಪ್ರತಿಭೆಯನ್ನು  ವಿಶೇಷವಾಗಿ  ಗುರುತಿಸಲಾಗಿದೆ.ಕೆಲವರಿಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದರೆ ಇನ್ನೂ ಕೆಲವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇರುತ್ತದೆ.ಆದ್ದರಿಂದ ಇವರು ಶಿಕ್ಷಕರು,ಉಪನ್ಯಾಸಕರು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಉತ್ತಮ.

ಕೌಟುಂಬಿಕ ಜೀವನ:- ಮನೆಯ ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ  ಉತ್ತಮ ತಜ್ಞರಾಗಿರುತ್ತಾರೆ.

ಆರೋಗ್ಯ:- ಆರೋಗ್ಯ ಅಷ್ಟು ಚೆನ್ನಾಗಿ ಇರುವುದಿಲ್ಲ.ರಕ್ತಹೀನತೆ, ಗರ್ಭಕೋಶದ ಖಾಯಿಲೆಗಳನ್ನು ಅನುಭವಿಸುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top