fbpx
ಆರೋಗ್ಯ

ರಾತ್ರಿವೇಳೆ ಕಾಫಿ ಕುಡಿಯೋದ್ರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಅಂತ ನಿಮಗೆ ಗೊತ್ತಾ?

ನೀವು ಕಾಫಿ ಪ್ರಿಯರಾ ? ನಿಮ್ಮ ಈ ಕಾಫಿ ಕುಡಿಯೋ ಅಭ್ಯಾಸ ನಿಮ್ಮ ಲೈಂಗಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತೆ ತಿಳ್ಕೊಳ್ಳಿ ..

ಕಾಫಿಯಲ್ಲಿರುವ ಕೆಫಿನ್ ಎಂಬ ರಾಸಾಯನಿಕವು ಅಡೆನೊಸೈನ್ (ನಿಮಗೆ ನಿದ್ದೆಯ ಮಂಪರು ತರಿಸುವ ರಾಸಾಯನಿಕ) ಅನ್ನು ನಾಶ ಮಾಡುತ್ತದೆ. ಆಗ ನಾವು ಹೆಚ್ಚು ಎಚ್ಚರವಾಗಿರುತ್ತವೆ. ಒಂದು ದಿನದಲ್ಲಿ 300 ಮಿ.ಗ್ರಾಂ.ಗಿಂತ ಹೆಚ್ಚು ಕಾಫಿಯನ್ನು ಸೇವಿಸಿದಲ್ಲಿ ಆಗ ನಮಗೆ ನಿದ್ದೆಗೆ ಸಂಬಂಧಿಸಿದ ಹಲವಾರು ಡಿಸಾರ್ಡರ್‌ಗಳು ಬರುವ ಸಂಭವ ಹೆಚ್ಚಾಗುತ್ತದೆ.

ವಯಸ್ಕರಲ್ಲಿ ಪ್ರತಿ ನಿತ್ಯ ಅಂದಾಜು 8 ಗಂಟೆಗಳ ಕಾಲ ನಿದ್ರೆ ಅವಶ್ಯಕವಾಗಿದೆ , ಇದನ್ನು ತಪ್ಪಿಸಿದರೆ ನಿಮ್ಮ ಲೈಂಗಿಕ ಜೀವನ ಅಸ್ತವ್ಯಸ್ತವಾಗಬಹುದು .
ಇದು ನಿಮ್ಮ ವೀರ್ಯಾಣುಗಳ ಸಂಖ್ಯೆಯ ಮೇಲೆ ಬಾರಿ ಪರಿಣಾಮ ಬೀರುತ್ತದೆ .

ಚೀನಾದಲ್ಲಿ ನಡೆಸಿದ ಇನ್ನೊಂದು ಪರೀಕ್ಷೆಯಲ್ಲಿ 656 ವಯಸ್ಕ ಹುಡುಗರ ಕಡಿಮೆ ಅವಧಿಯ ನಿದ್ದೆ ಮಾಡುವವರ ಮತ್ತು 8 ಗಂಟೆಗೂ ಹೆಚ್ಚು ನಿದ್ದೆ ಮಾಡುವ ಹುಡುಗರನ್ನು ಕರೆಸಿ ಅವರ ವೀರ್ಯ ಪರೀಕ್ಷೆ ಮಾಡಿದಾಗ ಗೊತ್ತಾದ ಸಂಗತಿಯೇನೆಂದರೆ ನಿದ್ದೆ ಮಾಡುವವರ ವೀರ್ಯವು ನಿದ್ದೆ ಮಾಡದವರ ವೀರ್ಯಕ್ಕಿಂತ ಹೆಚ್ಚು ಗುಣಮಟ್ಟ ಮತ್ತು ಪ್ರಮಾಣದಲ್ಲೂ ಹೆಚ್ಚಿತ್ತು ಎಂಬುದು ತಿಳಿದು ಬಂತು .

ಡೆನ್ಮಾರ್ಕ್‌ನಲ್ಲಿ ನಡೆಸಿದ ಇನ್ನೊಂದು ಪರೀಕ್ಷೆಯಲ್ಲಿ 953 ಪುರುಷರ ವೀರ್ಯ ಪರೀಕ್ಷೆ ಮಾಡಿದಾಗ ಗೊತ್ತಾದ ಸಂಗತಿಯೇನೆಂದರೆ ನಿದ್ದೆ ಕಡಿಮೆ ಮಾಡುವ ಅಥವಾ ನಿದ್ದೆ ಮಾಡದ 30 ಶೇಕಡಾ ಜನರು ವೀರ್ಯದ ಗುಣಮಟ್ಟ ಮತ್ತು ಪ್ರಮಾಣದಲ್ಲೂ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು .

 

ಬೋಸ್ಟನ್‌ನಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ 695 ಮದುವೆಯಾದ ದಂಪತಿಗಳನ್ನು ಅಧ್ಯಯನ ಮಾಡಿದ್ದರಂತೆ ಇದರಲ್ಲಿ 21 ರಿಂದ 50 ವರ್ಷದ ಒಳಗಿನ ದಂಪತಿಗಳಿದ್ದರಂತೆ ,

ಕೆಲವು ಗಂಟೆಗಳ ನಿದ್ರೆ ಮತ್ತು ಸಾಮಾನ್ಯ 8 ಗಂಟೆಗಳ ನಿದ್ದೆ ಮಾಡಲು ಅವಕಾಶ ನೀಡಿದ್ದರಂತೆ ಇದರಲ್ಲಿ ಸ್ವಲ್ಪ ಕಾಲ ನಿದ್ದೆ ಮಾಡಿದ ಪುರುಷ ಹೆಂಡತಿಯನ್ನು ಗರ್ಭಿಣಿ ಮಾಡಿದರಂತೆ ಆದರೆ ಶೇಕಡಾ ಮೂವತ್ತರಷ್ಟು ಕಡಿಮೆ ಅವಧಿಯ ನಿದ್ದೆ ಮಾಡಿದ್ದ ಪತಿಯಂದಿರು ತಮ್ಮ ಹೆಂಡತಿಯನ್ನು ಗರ್ಭಿಣಿ ಮಾಡಲು ವಿಫಲ ರಾದರು ಎಂಬುದು ಈ ವರದಿಯ ಸಾರ .

ಅಧ್ಯಯನಗಳ ಪ್ರಕಾರ ಅಧಿಕವಾಗಿ ಕಾಫಿ ಸೇವನೆಯಿಂದಾಗಿ ಸಂತಾನ ಹೀನತೆಯ ಸಮಸ್ಯೆಯುಂಟಾಗಬಹುದೆಂದು ತಿಳಿದು ಬಂದಿದೆ. ಪ್ರತಿ ದಿನ 2 ರಿಂದ 3 ಕಪ್ ಕಾಫಿಯನ್ನು ಯಾರು ಸೇವಿಸುತ್ತಾರೋ, ಅವರು ಸಂತಾನ ಹೀನತೆಯ ಸಮಸ್ಯೆಗೆ ಗುರಿಯಾಗುತ್ತಾರಂತೆ. ಕಾಫಿಯಲ್ಲಿರುವ ಕೆಫಿನ್ ವೀರ್ಯಾಣುಗಳಿಗೆ ಮೂಲದಲ್ಲಿಯೇ ಅಪಾಯವನ್ನುಂಟು ಮಾಡುತ್ತದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top