ಯಾಕ್ರೀ ಎಲ್ಲ ಹೆಣ್ಮಕ್ಳು ತಾಯಿಗಿಂತ ತಂದೆ ಅಂದ್ರೆ ಹೆಚ್ಚು ಅಚ್ಚು, ಮೆಚ್ಚು, ಹುಚ್ಚು, ಅಂತ ಕೇಳೋರಿಗೆ ಇಲ್ಲಿದೆ answer…
1. ಮಗಳು ಏನಾದರೂ ಕೇಳಿದರೆ ಇಲ್ಲ ಎನ್ನದ ಒಂದೇ ಒಂದು ಜೀವಿ “ಅಪ್ಪ”
2. ಗಂಡಸರಿಗೆ ಮಾತ್ರ ಸಿಗುವ ಒಂದು ದೊಡ್ದ ವರ ಎಂದರೆ ತನ್ನ ಜೀವನದಲ್ಲಿ ಮೂವರು “ಅಮ್ಮಂದಿರನ್ನು” ಪಡೆಯುವುದು.
3. ಜನ್ಮಕೊಟ್ಟ ತಾಯಿ ತನ್ನ, ರಕ್ತ ಹಚ್ಚಿಕೊಂಡ ಸಹೋದರಿ(ಎರಡನೇ ತಾಯಿ), ತನಗೆ ಹುಟ್ಟಿದ ಮಗಳು (ಮೂರನೆಯ ತಾಯಿ),
4. ಪ್ರತಿ ಮಗಳಿಗೆ ತಂದೆ ನಿಜವಾದ ಆತ್ಮೀಯ. ನಂಬಿಕಸ್ಥ ಗೆಳೆಯ. ಆಪತ್ತಿನ ಸಮಯದಲ್ಲಿ ಜೊತೆಗಿರುವ ಜೊತೆಗಾರ.
5. ಪ್ರತಿ ತಂದೆಗೆ ತನ್ನ ಮಗಳೇ ಸರ್ವಸ್ವ. ಕೆಲವು ಸರಿ ತನ್ನ ಹೆಂಡತಿಯ ಮೇಲೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಮಗಳ ಮೇಲೆ ತೋರಿಸುತ್ತಾನೆ.
6. ಎಂತಹ ಸಂದರ್ಭದಲ್ಲೂ ತಂದೆಯೇ ಮಗಳಿಗೆ ರಕ್ಷಣೆ. ರಕ್ಷಣೆ ವಿಷಯದಲ್ಲಿ ತಾಯಿಗಿಂತ ತಂದೆ ಎಚ್ಚರವಹಿಸುತ್ತಾನೆ.
7. ಮಗನ ಮೇಲೆ ತೋರಿಸುವ ಕೋಪಕಿಂತ ಮಗಳ ಮೇಲೆ ಮಗಳ ಮೇಲೆ ತೋರಿಸುವ ಕೋಪ ತುಂಬಾ ಕಡಿಮೆ ಎಂದು ಹೇಳಬಹುದು.
8. ಗಂಡು ಮಕ್ಕಳ ಮೇಲೆ ಕೈ ಮಾಡಿರಬಹುದು. ಆದರೆ ಮಗಳ ಮೇಲೆ ಒಂದು ಏಟೂ ಹಾಕದ ತಂದೆಯರು ಇದ್ದಾರೆ.
9. ತಂದೆ ತನ್ನ ಆದಾಯ ಹೆಚ್ಚು ಹಣವನ್ನು ಖರ್ಚು ಮಾಡುವುದು ಮಗಳಿಗಾಗಿಯೇ…!
10. ಹೊರಗಡೆ ಹೋದಾಗ ತಡವಾದರೆ ಎಷ್ಟೊತ್ತಾದರೂ ತನಗಾಗಿ ಕಾಯುವವ ತಂದೆಯೊಬ್ಬನೇ.
11. ವಯಸ್ಸಿಗೆ ಬಂದಾಗ ಪ್ರೀತಿ ಎಂದರೇನು? ಆಕರ್ಷಣೆ ಅಂದರೆ ಏನು? ಎಂದು ನಿಧಾನವಾಗಿ ಅರ್ಥಮಾಡಿಸುವುದು ತಂದೆಯೊಬ್ಬನೇ.
12. ಮಗಳು ಎಂತಹದೇ ಕ್ಲಿಷ್ಟವಾದ ಪರಿಸ್ಥಿತಿಯಲ್ಲಿ ಸಿಲುಕಿದ್ದರೂ ಅದರಿಂದ ಹೊರತರುವುದು ತಂದೆ ಮಾತ್ರ.
13. ತಾಯಿ ಕೈತುತ್ತು ಕೊಟ್ಟು ಎಷ್ಟೇ ಚನ್ನಾಗಿ ನೋಡಿಕೊಂಡರೂ ಮಗಳಿಗೆ ಧೈರ್ಯ ತುಂಬುವುದು ತಂದೆನೇ.
14. ತಂದೆಗೆ ತನ್ನ ಮಗಳ ಜೀವನದ ಬಗ್ಗೆ ಸ್ವಲ್ಪ ಹೆಚ್ಚಿನ ಭಯವಿರುತ್ತದೆ. ಅದು ಭಯ ಅಲ್ಲ ಆಕೆಯ ಮೇಲೆ ತೋರಿಸುವ ಪ್ರೀತಿ, ಆಕ್ಕರೆ.
15. ಒಂದು ಹುಡುಗಿಯ ಜೀವನದಲ್ಲಿ ತಂದೆ ಎಂಬುವನು ಒಬ್ಬ ಸ್ನೇಹಿತ, ದಾರಿತೋರಿಸುವ ದೇವರು.
16. ಏನೇ ತಪ್ಪು ಮಾಡಿದರೂ ಎದೆಯಲ್ಲಿಟ್ಟುಕೊಂಡು ಕಾಪಾಡುವ ಕಾವಲುಗಾರ. ಒಬ್ಬ ಹೀರೋ, ಒಬ್ಬ ಆತ್ಮೀಯ.
“ಇಂತಹ ತಂದೆಯನ್ನು ಯಾವ ಮಗಳಾದರೂ ಇಷ್ಟಪಡುವುದರಲ್ಲಿ ಆಶ್ಚರ್ಯವಿಲ್ಲ” …
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
