ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ಸಾಮಾನ್ಯವಾಗಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದರೂ ಯಾವುದೇ ಪರಿಹಾರವಾಗಿರುವುದಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ. ಇಲ್ಲಿ ನೀಡಿರುವ ಮನೆಮದ್ದುನ್ನು ಮೂರು ತಿಂಗಳ ಕಾಲ ಬಳಸಿದರೆ ಕೀಲು ಹಾಗೂ ಮೂಳೆಗಳು ಕಬ್ಬಿಣದಷ್ಟು ಬಲಿಷ್ಠವಾಗುತ್ತವೆ.
ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ. ಮೆಂತ್ಯೆ ಕಾಳು, ಪಾರಿಜಾತ ಎಲೆಗಳು ಮತ್ತು ಒಣಗಿದ ಹುಣಸೆ ಬೀಜಗಳ ಪುಡಿ ಮೂಳೆಸವೆತಕ್ಕೆ ಇವು ಅತ್ಯುತ್ತಮ ಮನೆ ಮದ್ದು.
ಮೆಂತ್ಯೆ ಕಾಳು:
ಒಂದು ಟೀ ಸ್ಪೂನಷ್ಟು ಮೆಂತೆಕಾಳನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ರಾತ್ರಿಯೆಲ್ಲ ನೆನೆಯಲು ಬಿಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಆ ನೀರನ್ನು ಕುಡಿಯಬೇಕು.
ಪಾರಿಜಾತ ಎಲೆಗಳು:
ದೇವಾಲಯಗಳಲ್ಲಿ ಹೆಚ್ಚಾಗಿ ಕಾಣುವ ಪಾರಿಜಾತ ಗಿಡ. ಅದರ ಹೂ ಬಿಳಿಯ ಬಣ್ಣದಲ್ಲಿರುತ್ತದೆ. ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ ಇದು ನಿಮಗೆ ತಿಳಿದಿರುತ್ತದೆ. ಇದರ ಎಲೆಗಳನ್ನು 6, 7 ರಷ್ಟು ತೆಗೆದುಕೊಂಡು ಫೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು. ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಹಾಗೆ ಬಿಸಿ ಮಾಡದೇ ಕುಡಿಯಬೇಕು.
ಪಾರಿಜಾತ ಎಲೆಗಾಲ ಕಷಾಯ ಮೂಳೆಗಳಲ್ಲಿ ಸವೆದುಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ. ಜೊತೆಗೆ ಈ ಔಷಧವು ಡೆಂಗಿ ಜ್ವರಕ್ಕೂ ಸಹ ಉಪಯುಕ್ತವಾದದ್ದು. ಡೆಂಗಿ ಕಾರಣವಾಗಿ ಬರುವ ಮೈ ನೋವುಗಳು ಗುಣಮುಖವಾಗಬೇಕೆಂದರೆ ಈ ಔಷಧವನ್ನು ಕುಡಿಯಬೇಕು.
ಒಣಗಿದ ಹುಣಸೆ ಬೀಜಗಳ ಪುಡಿ:
ಮೊದಲು ಹುಣಸೆಬೀಜವನ್ನು ಚೆನ್ನಾಗಿ ಬೇಯಿಸಬೇಕು. ನಂತರ ಆ ಬೀಜಗಳನ್ನು ನೀರಿನಲ್ಲಿ ಎರಡು ದಿನ ನೆನೆಸಬೇಕು ಚನ್ನಾಗಿ ನೆಂದ ನಂತರ ಮೇಲಿನ ಸಿಪ್ಪೆಯನ್ನು ತೆಗೆದು ಒಣಗಿಸಬೇಕು. ಒಣಗಿದ ಹುಣಸೆ ಬೀಜಗಳನ್ನು ಪುಡಿಮಾಡಬೇಕು. ಈ ಪುಡಿ ಒಂದು ಚಮಚ, ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಹಾಲು, ಸಕ್ಕರೆ ಹಾಕಿ ಪಾಯಸದಂತೆ ಮಾಡಿ ಬೆಳ್ಳಗೆ, ಸಂಜೆ ಸೇವಿಸಬೇಕು.
ಇದನ್ನು ಕೆಲವು ದಿನಗಳ ಕಾಲ ನಿರಂತರವಾಗಿ ಸೇವಿಸಿದರೆ ಕೀಲು ನೋವು, ಮಂಡಿನೋವು ಶಾಶ್ವತವಾಗಿ ಪರಿಹಾರವಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
