fbpx
ಮನೋರಂಜನೆ

ಗಾಡ್ ಫಾದರ್ ಇಲ್ಲದೆ ಸೂಪರ್ ಸ್ಟಾರ್ ಆದ “ರಕ್ಷಿತ್ ಶೆಟ್ಟಿ”.

ಗಾಡ್ ಫಾದರ್ ಇಲ್ಲದೆ ಸೂಪರ್ ಸ್ಟಾರ್ ಆದ “ರಕ್ಷಿತ್ ಶೆಟ್ಟಿ”.

 

ಯುವ ಪೀಳಿಗೆಯಲ್ಲಿ ಅತ್ಯಂತ ಪ್ರಸಿದ್ದಿಯಾಗಿರುವ ಕನ್ನಡ ಚಲನಚಿತ್ರ ನಟರಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಇವರು ಮೂಲತಃ ಉಡುಪಿಯವರು. NMAMತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆಯಲ್ಲಿ ಇಂಜಿನಿಯರಿಂಗ್ ಮಾಡಿರುವ ಇವರು ಒಬ್ಬ ಬಹುಮುಖ ಪ್ರತಿಭೆ. ನಟನೆ,ನಿರ್ದೇಶನ, ಸಾಹಿತ್ಯ,ನೃತ್ಯಸಂಯೋಜನೆ, ಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ.

ರಕ್ಷಿತ್ ಒಬ್ಬ ಸಾಮಾನ್ಯ ಹುಡ್ಗ ಆದ್ರೆ ಇವತ್ತು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಕನ್ನಡ ಚಿತ್ರರಂಗಕ್ಕೆ ಯಾವುದೇ ಗಾಡ್ ಫಾದರ್ ಗಳಿಲ್ಲದೆ ಬಂದು ಈ ಮಟ್ಟಿಗೆ ಯಶಸ್ಸನ್ನು ಕಾಣುತ್ತಿರುವ ಅವರ ಸಿನಿ ಜರ್ನಿ ಸಹ ಅಷ್ಟೇ ಕಷ್ಟದಾಯಕವಾಗಿತ್ತು.
ರಕ್ಷಿತ್ ಶೆಟ್ಟಿಯವರು 2010ರಲ್ಲಿ ‘ನಮ್ಮ್ ಏರಿಯಾದಲ್ಲಿ ಒಂದಿನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ನಂತರ ‘ತುಗ್ಲಕ್’ ಎಂಬ ಚಿತ್ರದಲ್ಲಿ ನಟಿಸಿದರು ಆದರೆ ಆ ಚಿತ್ರ ಅವರಿಗೆ ಯಶಸ್ಸನ್ನು ತಂದು ಕೊಡಲಿಲ್ಲ.

2013ರಲ್ಲಿ ಬಿಡುಗಡೆಯಾದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಲನಚಿತ್ರದ ಮೂಲಕ ಪ್ರಸಿದ್ಧರಾದರು. ನಂತರ 2014ರಲ್ಲಿ ‘ಉಳಿದವರು ಕಂಡಂತೆ’ ಚಿತ್ರವನ್ನು ನಿರ್ದೇಶಿಸಿದರು. ಅವರ ಚೊಚ್ಚಲ ನಿರ್ದೇಶನಕ್ಕಾಗಿ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಹಾಗು ದಕ್ಷಿಣ ಭಾರತ ಫಿಲಂ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡರು.2015ರಲ್ಲಿ ‘ವಾಸ್ತು ಪ್ರಕಾರ’ ಹಾಗು 2016ರಲ್ಲಿ ‘ರಿಕ್ಕಿ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ನಟಿಸಿ ಯಶಸ್ಸು ಕಂಡರು. ಚಿತ್ರಕಥೆ ಬರೆದು ಸ್ವತಃ ಅವರೆ ನಿರ್ಮಾಪಿಸಿದ ‘ಕಿರಿಕ್ ಪಾರ್ಟಿ’ ಚಿತ್ರ 2016ರಲ್ಲಿ ಬಹು ದೊಡ್ಡ ಯಶಸ್ಸು ತಂದು ಕೊಟ್ಟಿತು.ಆ ಚಿತ್ರ ಆ ವರ್ಷದ ಅತಿದೊಡ್ಡ ಹಿಟ್ ಚಿತ್ರವಾಗಿದೆ.

ರಕ್ಷಿತ್ ಶೆಟ್ಟಿ ಸಿನಿಮಾಗಳು ಇಂದು 100 ದಿನ ಓಡುತ್ತಿವೆ. ಆದರೆ ಕೆಲವೇ ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ಅವರ ಪರಿಸ್ಥಿತಿ ಹೀಗಿರಲಿಲ್ಲ.ರಕ್ಷಿತ್ ಶೆಟ್ಟಿ ಇಂಜಿನಿಯರಿಂಗ್ ವಿದ್ಯಾರ್ಥಿ. ಅದಕ್ಕೆ ಸರಿಯಾಗಿ ಒಳ್ಳೆಯ ಕೆಲಸ ಸಿಕ್ಕಿತ್ತು ಆದರೆ ಅದನ್ನೆಲ್ಲ ಬಿಟ್ಟು ಚಿತ್ರರಂಗಕ್ಕೆ ಬಂದರು ರಕ್ಷಿತ್ ಶೆಟ್ಟಿ. ಪ್ರಾರಂಭದಲ್ಲಿ ಅನೇಕ ಕಿರುಚಿತ್ರಗಳ ಮೂಲಕ ಸಿನಿಮಾ ಮಾಡುವುದನ್ನ ಚೆನ್ನಾಗಿ ಕಲಿತುಕೊಂಡರು.ತಮ್ಮ ಟ್ಯಾಲೆಂಟ್ ಅನ್ನು ನಿರೂಪಿಸುವುದಕ್ಕೆ ಯಾವುದಾರೂ ಒಂದು ಅವಕಾಶ ಸಿಕ್ಕರೆ ಸಾಕು ಅಂತ ಕಾಯುತ್ತಿದ್ದ ರಕ್ಷಿತ್ ರಿಗೆ ನಟನಾಗಿ ‘ಪ್ರೇಮ ಪಯಣ’ ಎನ್ನುವ ಸಿನಿಮಾ ಆಫ಼ರ್ ಬಂತು ಚಿತ್ರ ಪ್ರಾರಂಭವೂ ಆಯಿತು ಆದರೆ ಸಿನಿಮಾ ಅರ್ಧದಲ್ಲಿ ನಿಂತು ಹೋಯ್ತು.ನಂತರ ‘ನಮ್ ಏರಿಯದಲ್ ಒಂದಿನ’ ರಕ್ಷಿತ್ ಶೆಟ್ಟಿ ಅಭಿನಯದ ಮೊದಲ ಸಿನಿಮಾದ ಆಡಿಷನ್ ಗೆ ರಕ್ಷಿತ್ ಹೋದಾಗ ನಿರ್ದೇಶಕ ಅರವಿಂದ್ ಈ ಹುಡುಗನಿಗೆ ಆಡಿಷನ್ ಮಾಡಲು ಒಲ್ಲದ ಮನಸ್ಸಿನಿಂದ ಮಾಡಿದ್ರಂತೆ. ಆದರೆ ಕೊನೆಗೆ ಫೈನಲ್ ಆಗಿ ಈ ಚಿತ್ರದಲ್ಲಿ ರಕ್ಷಿತ್ಆಯ್ಕೆಯಾಗಿಬಿಟ್ಟರು.

ಮೊದಮೊದಲು ರಕ್ಷಿತ್ ಮಾಡಿದ ಯಾವ ಸಿನಿಮಾಗಳೂ ಯಶಸ್ಸನ್ನು ಕಾಣುತ್ತಿರಲಿಲ್ಲ. ಪ್ರಾರಂಭದಲ್ಲಿ ‘ನಮ್ ಏರಿಯಾಲ್ ಒಂದಿನ’ ಮತ್ತು ‘ತುಘಲಕ್’. ಎರಡು ಸಿನಿಮಾಗಳಲ್ಲಿ ಅವರಿಗೆ ಸಿಕ್ಕಿದ್ದು ಸಿಕ್ಕಿದ್ದು ಸೋಲು, ನೋವು,ಮಾತ್ರ.’ತುಘಲಕ್’ ಸಿನಿಮಾ ಬಿಡುಗಡೆಯಾದಾಗ ಸಿನಿಮಾ ನೋಡುವುದಕ್ಕೆ ಯಾರು ಬರಲೇ ಇಲ್ಲ,ಆಗ ಕಷ್ಟ ಪಟ್ಟು ಮಾಡಿದ ಸಿನಿಮಾ ಹೀಗಾಯ್ತಲ್ಲಾ ,ನಮ್ಮ ಕಥೆ ಮುಗಿಯಿತು ಅಂತ ತ್ರಿಭುವನ್ ಥಿಯೇಟರ್ ಮುಂದೆ ಕುಳಿತು ರಕ್ಷಿತ್ ಕಣ್ಣೀರಿಟ್ಟಿದ್ದರು.

”ಆಗ ಕಳೆದ ದಿನಗಳನ್ನ ಈಗ ನೆನೆಸಿಕೊಂಡರೆ ಕಷ್ಟದ ದಿನಗಳು ಅಂತ ಹೇಳಬಹುದು. ಆದರೆ ಆಗ ಅದು ಕಷ್ಟ ಅಂತ ಅನಿಸಿರಲಿಲ್ಲ. ಉಟ ಇಲ್ಲದೆ, ದುಡ್ಡು ಇಲ್ಲದೆ ಇರುವ ದಿನಗಳು ಆಗ ಸಾಮಾನ್ಯವಾಗಿಬಿಟ್ಟಿತ್ತು” – ಎಂದು ರಕ್ಷಿತ್ ಶೆಟ್ಟಿ ಹೇಳುತ್ತಾರೆ.

 

ಯಾವುದೇ ಕ್ಷೇತ್ರದಲ್ಲಿ ರಂಗದಲ್ಲಿ ಮೊದಲು ಸೋಲು ಕಂಡಾಗ ಅದೆಷ್ಟೋ ಜನರು ಬಿಟ್ಟು ಬಿಡುತ್ತಾರೆ. ಆದರೆ ಸೋಲು ಇರುವುದೇ ಮುಂದೆ ಗೆಲ್ಲುವುದಕ್ಕೆ ಅಂತ ತಿಳಿದು ಪ್ರಯತ್ನ ಪಟ್ಟರೆ ರಕ್ಷಿತ್ ತರಹ ಒಬ್ಬ ಸಾಧಕ ಆಗಬಹುದು. ಸದ್ಯ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಈ ಚಿತ್ರದ ನಂತರ ಕಿಚ್ಚಸುದೀಪ್ ರೊಂದಿಗೆ ‘ಥಗ್ಸ್ ಆಫ್ ಮಾಲ್ಗುಡಿ’ ಚಿತ್ರವನ್ನು ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top