fbpx
ದೇವರು

ಮದುವೆಯ ದೋಷಕ್ಕೆ ಶಾಸ್ತ್ರದ ಪರಿಹಾರಗಳು

ಮದುವೆಯ ದೋಷಕ್ಕೆ ಅದ್ಬುತ ಪರಿಹಾರ.

ಮದುವೆ  ಪ್ರತಿಯೊಬ್ಬರ  ಜೀವನದಲ್ಲಿಯೂ ಬಹಳ ಪ್ರಮುಖವಾದ ಒಂದು ಘಟ್ಟವಾಗಿದೆ. 25 ವರ್ಷಕ್ಕೆ ಮದುವೆ ಆಗಲಿಲ್ಲ ಅಂದರೆ ಎಲ್ಲರೂ ಹಂಗಿಸಿ ಮಾತನಾಡುತ್ತಾರೆ ಮತ್ತು  ಕೇಳ್ತಾ ಇರ್ತಾರೆ  ಯಾಕೆ ಇನ್ನೂ ಮದುವೆ ಆಗಲಿಲ್ಲವ , ಹುಡುಗ ಸಿಕ್ಕಿಲ್ವ, ಹುಡುಗಿ ಸಿಕ್ಕಿಲ್ವ, ಜಾತಕದಲ್ಲಿ ಏನಾದರೂ ದೋಷ ಇದ್ಯಾ ? ಹೀಗೆ.

ಸಾಮಾನ್ಯವಾಗಿ  ಸರ್ಪ ದೋಷ ,ಕುಜ ದೋಷ, ಮತ್ತು ಜಾತಕದ ಜನ್ಮ ಕುಂಡಲಿಯ 7 ನೇ ಮನೆಯಲ್ಲಿ ಶನಿ  ಇದ್ದರೆ ಬೇಗ ಮದುವೆ ಆಗಲ್ಲ .ಕುಜ ದೋಷ ಇದ್ದರೆ 30 ವರ್ಷದ ನಂತರ, ಸರ್ಪ ದೋಷ ಇದ್ದರೆ 31 ವರ್ಷಗಳ ನಂತರ ,ಶನಿ ದೋಷ ಇದ್ದರೆ 35 ವರ್ಷಗಳ ನಂತರ ಮದುವೆ ಯಾಗುತ್ತದೆ. ಅಲ್ಲಿಯವರೆಗೂ ಮನೆಯವರ ,ಸಂಭಂಧಿಕರ ಮತ್ತು  ಸಮಾಜದ ನಿಂದನೆಗಳನ್ನು ಮಾತುಗಳನ್ನು  ಕೇಳಬೇಕಾಗುತ್ತದೆ.

ಮದುವೆಯ ದೋಷಕ್ಕೆ ವಿಶೇಷವಾಗಿ ಈ ದೀಪವನ್ನು  ಹಚ್ಚುವುದರಿಂದ ದೋಷ ಪರಿಹಾರ ಮಾಡಿಕೊಳ್ಳಬಹುದು.ಎಷ್ಟೋ ಜನ ಯಾಕೋ ಮನೆಯಲ್ಲಿ ಮದುವೇನೇ ಆಗ್ತಿಲ್ಲ ಗುರುಗಳೆ. ಮನೆಯ ಹೆಣ್ಣು ಮಕ್ಕಳಿಗೆ ವಯಸ್ಸು ಮೀರಿ ಹೋಗ್ತಾಯಿದೆ.ಸಂಭಂಧಿಕರು ,ಸ್ನೇಹಿತರು ಎಲ್ಲರೂ ಕೇಳ್ತಾ ಇರ್ತಾರೆ ಅವರಿಗೆ ಹೇಳಿ ಹೇಳಿ ಸಾಕಾಗಿದೆ.ಏನು ಮಾಡೋದು ಎಲ್ಲಾ ದೇವರು,ಎಲ್ಲಾ ಪೂಜೆ,ಪುನಸ್ಕಾರ, ನೂರಾರು ದೋಷ ಪರಿಹಾರಗಳನ್ನು ಮಾಡಿಕೊಂಡಿದ್ದೇವೆ.ಎಷ್ಟೇ ಮಾಡಿದರೂ ಯಾಕೋ ಕಾರ್ಯ ವಿಜ್ಞವಾಗಿ ನಿಂತಿದೆ ಎಂದು ತುಂಬಾ ಒದ್ದಾಡುತ್ತಿರುತ್ತಾರೆ.

ಇದಕ್ಕೆ ತುಂಬಾ ಸರಳವಾದ  ಒಂದು ಪರಿಹಾರವಿದೆ.ನಿಮ್ಮ ಮನೆಯ ಹತ್ತಿರದಲ್ಲಿ ಎಲ್ಲಾದರೂ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಇದ್ದರೆ ಪ್ರತೀ ಮಂಗಳವಾರ ಬಿಡದೇ ಸತತವಾಗಿ ಒಂಬತ್ತು ಮಂಗಳವಾರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ, ಸಂಕಲ್ಪ ಮಾಡಿಕೊಂಡು ಅಸುರ ಸಂಧ್ಯಾ ಕಾಲದಲ್ಲಿ ಅಂದರೆ ಗೋಧೂಳಿ ಸಮಯದಲ್ಲಿ ಸರಿ ಸುಮಾರು  ಸಂಜೆ 5.45 ರಿಂದ 6.30 ವರೆಗೆ ಸಂಜೆ ಸುಬ್ರಹ್ಮಣ್ಯ  ದೇವಸ್ಥಾನಕ್ಕೆ ಹೋಗಿ  ಜೋಡಿ ಬೆಲ್ಲದ ದೀಪವನ್ನು ಹಚ್ಚಿ  ಬನ್ನಿ.

ಹೀಗೆ ಪ್ರತಿ ಮಂಗಳವಾರ ಬಿಡದೆ 9 ಮಂಗಳವಾರ ಮಾಡಿ ಬನ್ನಿ.ನಿಮ್ಮ ಮನೆಯಲ್ಲಿ ನಿಂತು ಹೋಗಿರುವ ಮಂಗಳ ಕಾರ್ಯ,ಮದುವೆ ಕಾರ್ಯ, ನಿರ್ವಿಘ್ನವಾಗಿ ಯಾವುದೇ ಅಡೆತಡೆ,ದೋಷ ಇಲ್ಲದೆ ತೊಂದರೆಯಾಗದೆ ಅತೀ ಶೀಘ್ರದಲ್ಲೇ ನೆರವೇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top