ಕೇವಲ 11 ರುಪಾಯಿಯನ್ನು ಪಡೆದು ಐಎಎಸ್ ಮತ್ತು ಐಪಿಎಸ್ ತರಬೇತಿ ಕೊಡುವ ಮಹಾನ್ ಗುರು.
ಸಾಮಾನ್ಯ ಮಕ್ಕಳು ಅಸಾಮಾನ್ಯ ಸಾಧನೆಗಳನ್ನು ಮಾಡಲು ಅವರ ಗುರುಗಳು ಮುಖ್ಯವಾದ ಕಾರಣವಾಗುತ್ತಾರೆ. ಆಚಾರ್ಯ ಚಾಣಕ್ಯ ಹೇಳಿಕೊಟ್ಟ ವಿದ್ಯೆಯಿಂದ ಚಂದ್ರಗುಪ್ತ ಎಂಬ ಸಾಮನ್ಯ ಹುಡುಗ ಹೇಗೆ ಅತಿದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ ಎಂಬುದು ಇದಕ್ಕೆ ಉತ್ತಮ ಉದಾಹರಣೆ. ಇದೆ ರೀತಿ ಇಲ್ಲೊಬ್ಬ ಗುರು ಇದ್ದಾರೆ ಅವರು ತಮ್ಮ ವಿದ್ಯಾರ್ಥಿಗಳನ್ನು ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಕೇವಲ 11 ರೂಪಾಯಿಗಳನ್ನು ಗುರುದಕ್ಷಿಣಿಯಾಗಿ ಪಡೆದು. ವಿದ್ಯಾದಾನವನ್ನು ಮಾಡುತ್ತಿದ್ದಾರೆ.ಮೋತಿಯುರ್ ರೆಹಮಾನ್ ರ ಹತ್ತಿರ ಕೋಚಿಂಗ್ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಬದುಕಿನಲ್ಲಿ ಒಂದು ಹಂತ ತಲುಪಿದ ಮೇಲೆ ರೆಹ್ಮಾನ್ ರವರಿಗೆ ಹಣಕಾಸಿನ ಸಹಾಯವನ್ನು ಮಾಡುತ್ತಾರೆ.
49ವರ್ಷ ವಯಸ್ಸಿನ ರೆಹ್ಮಾನ್ ಎಂಬುವವರು ತಮ್ಮನ್ನು ತಾವು ಪಾಠಹೇಳಿಕೊಡುವ ಕೆಲಸದಲ್ಲಿ ಸಮರ್ಪಣೆ ಮಾಡಿಕೊಂಡಿದ್ದಾರೆ.ಇದಕ್ಕೆಂದೇ ಇವರು ಪಾಟ್ನಾದಲ್ಲಿ ‘ಅದಮ್ಯ ಅತಿಥಿ ಗುರುಕುಲ’ ಎಂಬ ವಿದ್ಯಾಲಯನ್ನು ಸ್ಥಾಪಿಸಿ ದೇಶಕ್ಕೆ ಡಜನ್ ಗಟ್ಟಲೆ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಟ್ಟಿದ್ದಾರೆ.ಈ ವಿದ್ಯಾಲಯದಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಡಾಕ್ಟರ್,ಇಂಜಿನಿಯರ್, ಪೊಲೀಸ್ ಅಧಿಕಾರಿಗಳಾಗಿದ್ದಾರೆ.
ಮೂರು ಸ್ನಾತಕೋತ್ತರ ಪದವಿಯನ್ನು ಹೊಂದಿರುವ ರೆಹ್ಮಾನ್ ರವರು 1994ರಲ್ಲಿ ಈ ವಿದ್ಯಾಲಯವನ್ನು ಸ್ಥಾಪಿಸಿದ್ದರು. ಆ ವರ್ಷ ಸರ್ಕಾರವು ನಾಲ್ಕು ಸಾವಿರ ಜನ ಪೊಲೀಸ್ ಅಧಿಕಾರಿಗಳನ್ನು ನೇಮಕಮಾಡಿಕೊಂಡಿತ್ತು. ಆ ನಾಲ್ಕು ಸಾವಿರದಲ್ಲಿ 1200 ಮಂದಿ ಇವರ ಗುರುಕುಲದಲ್ಲಿ ಓದಿದವರಾಗಿದ್ದರು.ಮೊದಲ ವರ್ಷವೇ ರೆಹ್ಮಾನ್ ಅಭೂತಪೂರ್ವ ಜಯ ಸಾಧಿಸಿದರು.
ಒಂದು ದಿನ ಒಬ್ಬ ಬಡ ವಿದ್ಯಾರ್ಥಿಯ ಬಳಿ ಫೀಸ್ ಪಾವತಿ ಮಾಡಲು ಹಣವಿಲ್ಲದೆ ಇದ್ದಾಗ ಕೇವಲ 11 ರೂಪಾಯಿಗಳನ್ನು ಪಡೆದಿದ್ದರು. ಆ ಹುಡುಗ ಐಎಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗಿದ್ದರು ಹಾಗಾಗಿ ಅಲ್ಲಿಂದ ಅವರು ಎಲ್ಲಾ ಬಡ ವಿದ್ಯಾರ್ಥಿಗಳ ಬಳಿ ಕೇವಲ 11 ರೂಪಾಯಿಗಳನ್ನೇ ಗುರುದಕ್ಷಿಣೆಯನ್ನಾಗಿ ತೆಗೆದುಕೊಳ್ಳುತ್ತಾರೆ.
ಶಾಲೆಯ ಹೆಸರಿನಲ್ಲಿ ಸಾವಿರಾರು ಗಟ್ಟಲೆ ಹಣವನ್ನು ದೋಚುವ ಈ ಕಾಲದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ರೆಹಮಾನ್ ರವರು ಇಲ್ಲಿಯವರೆಗೆ 3000 ಸಾವಿರ ಸಬ್ ಇನ್ಸ್ಪೆಕ್ಟರ್,60 ಐಪಿಎಸ್ ಮತ್ತು 5 ಐಎಎಸ್ ಅಧಿಕಾರಿಗಳನ್ನು ದೇಶಕ್ಕೆ ಕೊಟ್ಟಿದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
