ಚಳಿಗಾಲದಲ್ಲಿ ಬರೋ ಜ್ವರ ಕಡಿಮೆ ಮಾಡೋಕೆ ಮನೆ ಮದ್ದುಗಳು
ಸಾಧಾರಣವಾಗಿ 37 ಡಿಗ್ರಿ ಗಿಂತ ದೇಹದ ಬಿಸಿ ಹೆಚ್ಚಿದ್ದರೆ ಜ್ವರ ಎಂದು ಪರಿಗಣಿಸಬಹುದು , ಜ್ವರ ಕಡಿಮೆ ಇರೋವಾಗಲೇ ಮನೆಮದ್ದುಗಳು ಮಾಡಿ ವಾಸಿ ಮಾಡ್ಕೋಬಹುದು
ವಾತಾವರಣ ದಲ್ಲಿ ಬದಲಾವಣೆಯಾದಾಗ , ದೇಹದಲ್ಲಿ ಶಕ್ತಿ ಕುಗ್ಗಿದಾಗ ಅಲರ್ಜಿ ಅಥವಾ ಇನ್ನಾವುದೋ ಸಮಸ್ಯೆಯಿಂದ ಸಹ ಜ್ವರ ಬರಬಹುದು
ಮಾತ್ರೆಯಿಂದ ಅಡ್ಡ ಪರಿಣಾಮಗಳೇ ಹೆಚ್ಚು ಆದ್ದರಿಂದ ಆದಷ್ಟು ಮಾತ್ರೆ ಸೇವನೆ ಕಡಿಮೆ ಮಾಡಿ .
ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಹೇಗೆ ನಾವು ಜ್ವರ ಕಡಿಮೆ ಮಾಡ್ಕೋಬಹುದು ಬನ್ನಿ ತಿಳಿದು ಕೊಳ್ಳೋಣ
ತಣ್ಣೀರು ಬಟ್ಟೆಯನ್ನು ಹಣೆಯ ಮೇಲೆ ಹಾಕಿ ಮಲಗುವುದು ಬೇಕಾದರೆ ತಣ್ಣೀರಿನಲ್ಲಿ ಬಟ್ಟೆಯನ್ನು ಅದ್ದಿ ಮೈಯಲ್ಲ ಒರಿಸಿಕೊಳ್ಳಬಹುದು
ಸಾಕ್ಸ್ ನ ಒಳಗೆ ಕತ್ತರಿಸಿದ ಈರುಳ್ಳಿಯನ್ನು ಇಟ್ಟುಕೊಂಡು ಮಲಗಿ ಇದು ದೇಹದ ಉಷ್ಣವನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ .
ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಚಕ್ಕೆ ಪುಡಿ , ಸ್ವಲ್ಪ ಶುಂಠಿ , ಎರಡು ಕಾಲು ಮೆಣಸು ಮತ್ತು ನಾಲ್ಕರಿಂದ ಐದು ತುಳಸಿ ಎಲೆಗಳನ್ನು ಹಾಕಿ ಕಾಯಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ
ಒಂದು ಲೋಟ ನೀರಿಗೆ ಸ್ವಲ್ಪ ಶುಂಠಿ 8 -10 ಪುದಿನ ಎಲೆ ಮತ್ತು 8 -10 ತುಳಸಿ ಎಲೆ ಹಾಕಿ ಚೆನ್ನಾಗಿ ಕಾಯಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ
ಅಂಗಾಲಿಗೆ ಮಸಾಜ್ ಮಾಡಿ , ಆಲಿವ್ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಳಸಿ ಹತ್ತು ನಿಮಿಷ ಮಸಾಜ್ ಮಾಡಿಸಿಕೊಳ್ಳಿ ಹೀಗೆ ಮಾಡಿದರೆ ಶರೀರ ಸುಲಭ ಎನಿಸುತ್ತದೆ.
ವಿಟಮಿನ್ ಸಿ ಇರುವ ಹಣ್ಣುಗಳ ಜ್ಯೂಸು ಸೇವನೆ ಮಾಡಿ
ಎಳನೀರನ್ನು ದಿನಕ್ಕೆ ಎರಡು ಸಾರಿ ಕುಡಿದರೆ ದೇಹಕ್ಕೆ ಮತ್ತೆ ಶಕ್ತಿಯನ್ನು ನೀಡುತ್ತದೆ
ಒಂದು ಘಂಟೆಗೆ ಒಮ್ಮೆ ಬಿಸಿ ನೀರನ್ನು ಕುಡಿಯಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
