ಕೃಷ್ಣದೇವರಾಯನ ಕಳೆದುಹೋದ ಉಂಗುರವನ್ನು ಪತ್ತೆಹಚ್ಚಿದ ಬುದ್ದಿವಂತ ತೆನಾಲಿರಾಮ.
ಕೃಷ್ಣದೇವರಾಯನು ಅಮೂಲ್ಯ ರತ್ನಗಳಿಂದ ತಯಾರಿಸಲಾಗಿದ್ದ ಉಂಗುರಗಳನ್ನು ಧರಿಸುತ್ತಿದ್ದ.ಒಂದು ದಿನ ಅದು ಕಳೆದು ಹೋಗಿರುವುದನ್ನು ಅವ್ನು ಗಮನಿಸಿದ ಮತ್ತು ಅವನ ಅಂಗರಕ್ಷಕರಲ್ಲೇ ಒಬ್ಬರು ಆ ಉಂಗುರವನ್ನು ಕದ್ದಿರಬಹುದು ಎಂದು ಅವನು ಅವಮಾನಿಸಿದ.
ಕೃಷ್ಣದೇವರಾಯನು ಬುದ್ದಿವಂತ ತೆನಾಲಿರಾಮನನ್ನು ಕರೆಸಿ “ರಾಮ,ನನ್ನ ನೆಚ್ಚಿನ ಉಂಗುರ ಕಳೆದುಹೋಗಿದೆ,ಮತ್ತು ನನ್ನ ಹನ್ನೆರಡು ಜನ ಅಂಗರಕ್ಷಕರಲ್ಲೇ ಒಬ್ಬರು ಇದನ್ನು ಕದ್ದಿರಬಹುದು ಎಂಬ ಅನುಮಾನವಿದೆ.,ಈಗ ಕಳ್ಳನನ್ನು ಪತ್ತೆಹಚ್ಚುವುದು ಹೇಗೆ “ಎಂದು ಕೇಳಿದನು
ಆಗ ತೆನಾಲಿರಾಮನು ” ಕಳ್ಳನನ್ನು ಕಂಡುಹಿಡಿಯಲು ನನಗೆ ಒಂದು ಉಪಾಯ ಹೊಳೆದಿದೆ,ಆದರೆ ಕಳ್ಳನನ್ನು ಕಂಡು ಹಿಡಿದರೆ ನನಗೆ ಏನು ಬಹುಮಾನ ಕೊಡುವಿರಿ” ಎಂದು ಕೇಳುತ್ತಾನೆ. ಇದಕ್ಕೆ ರಾಜನು “ನೀನು ಕಳ್ಳನನ್ನು ಕಂಡುಹಿಡಿದರೆ ನಿಂಗೆ ನೂರು ಬಂಗಾರದ ನಾಣ್ಯಗಳನ್ನು ಕೊಡುತ್ತೇನೆ”ಎಂದು ಹೇಳಿದನು
ನಂತರ ತೆನಾಲಿರಾಮನು ಎಲ್ಲಾ ಹನ್ನೆರಡು ಅಂಗರಕ್ಷಕರನ್ನು ಅರಮನೆಯ ಒಂದು ಗುಪ್ತ ಕೋಣೆಗೆ ಕರೆದುಕೊಂಡು ಬಂದನು.ಆಗ ಆ ಅಂಗರಕ್ಷಕರಿಗೆ , “ಅಂಗರಕ್ಷಕರೇ ಕೋಣೆಯ ಒಳಗೆ ದೇವಿಯ ಒಂದು ಹಳೆ ವಿಗ್ರಹವಿದೆ,ಎಲ್ಲರು ಒಬ್ಬಒಬ್ಬರಾಗಿ ಒಳಹೋಗಿ ದೇವಿಯ ಬಲಪಾದವನ್ನು ಮುಟ್ಟಿ ಬನ್ನಿ” ಎಂದು ಹೇಳುತ್ತಾನೆ.ಆಗ ಆ ಅಂಗರಕ್ಷಕರಲ್ಲೊಬ್ಬನು “ನಾವು ಏಕೆ ಹೀಗೆ ಮಾಡಬೇಕು ” ಎಂದು ಕೇಳುತ್ತಾನೆ. ಇದಕ್ಕೆ ರಾಮನು “ರಾಜರು ಅವರ ಉಂಗುರವನ್ನು ಕಳೆದುಕೊಂಡಿದ್ದಾರೆ ಮತ್ತು ಅವರು ಆ ಉಂಗುರವನ್ನು ಕದ್ದಿರುವ ಕಳ್ಳನನ್ನು ಕಂಡುಹಿಡಿಯಬೇಕೆಂದಿದ್ದಾರೆ, ನೀವು ದೇವಿಯ ಪಾದವನ್ನು ಮುಟ್ಟಿದರೆ ಅವಳು ಕಳ್ಳನನ್ನು ಗುರುತಿಸಿ ನನಗೆ ಕನಸಿನಲ್ಲಿ ಹೇಳುತ್ತಾಳೆ “ಎಂದನು
ರಾಮನು ಒಬ್ಬೊಬ್ಬರನ್ನಾಗಿ ಕೋಣೆಯ ಒಳಕ್ಕೆ ಕಳುಹಿಸಿ ದೇವಿಯ ಬಲ ಪಾದವನ್ನು ಮುಟ್ಟಿಸಿ ಬರುವಂತೆ ಹೇಳುತ್ತಿದ್ದ. ಅವರು ಹೊರಗೆ ಬಂದ ನಂತರ ತೆನಾಲಿಯು “ಅಂಗರಕ್ಷಕರೇ ನಿಮ್ಮ ಅಂಗೈಯನ್ನು ತೋರಿಸಿ ನಾನು ಅದರ ವಾಸನೆಯನ್ನು ನೋಡ್ಬೇಕು” ಎಂದು ಎಲ್ಲರ ಅಂಗೈಯಿನ ವಾಸನೆಯನ್ನು ನೋಡುತ್ತಿದ್ದನು.ರಾಮ ಆರು ಅಂಗರಕ್ಷಕರ ಅಂಗೈಯಿನ ವಾಸನೆಯನ್ನು ನೋಡಿ ಏಳನೇ ಅಂಗರಕ್ಷಕನ ಅಂಗೈಯನ್ನು ಮೂಸಿನೋಡಿದಾಗ “ಮಹಾರಾಜರೇ ನಿಮ್ಮ ಉಂಗುರವನ್ನು ಕದ್ದಿರುವ ಕಳ್ಳ ಇವನೇ”ಎಂದು ಕೃಷ್ಣದೇವರಾಯನಿಗೆ ಹೇಳುತ್ತಾನೆ.ಆಗ ಆ ಅಂಗರಕ್ಷಕನು ‘ಇಲ್ಲ,ಮಹಾಪ್ರಭು ಇವರು ಸುಳ್ಳು ಹೇಳುತ್ತಿದ್ದಾರೆ ನಾನು ನಿಮ್ಮ ಉಂಗುರವನ್ನು ಕದ್ದಿಲ್ಲ’ಎಂದು ವಾದಮಾಡಿದರೂ ರಾಜ ಆ ಅಂಗರಕ್ಷಕನನ್ನು ಸೆರೆಮನೆಗೆ ಹಾಕಿಸಿದ.
ನಂತರ ತೆನಾಲಿರಾಮನನ್ನು “ರಾಮ, ನೀನು ಕಳ್ಳನನ್ನು ಹೇಗೆ ಕಂಡುಹಿಡಿದೆ ಆದ್ರೆ ದೇವಿ ನಿನ್ನ ಕನಸಿನಲ್ಲಿ ಬಂದು ಹೇಳುತ್ತಾಳೆ ಎಂದು ಹೇಳಿದೆ” ಎಂದು ಕೇಳುತ್ತಾನೆ.ಆಗ ತೆನಾಲಿರಾಮನು “ಒಹ್! ಅದು ಬಹಳ ಸುಲಭ ಮಹಾಪ್ರಭು, ನಾನು ದೇವಿಯ ಬಲಪಾದಕ್ಕೆ ಸುವಾಸನೆಯ ದ್ರವ್ಯವನ್ನು ಹಚ್ಚಿದ್ದೆ ಮತ್ತು ಆ ಪಾದವನ್ನು ಮುಟ್ಟಿದವರ ಕೈಯಿಂದ ನಾನು ವಾಸನೆಯನ್ನು ಪತ್ತೆಹಚ್ಚುತ್ತಿದ್ದೆ,ಆದರೆ ಆ ಅಂಗರಕ್ಷಕನಿಗೆ ಹೆದರಿಕೆಯಾಗಿ ಪಾದಮುಟ್ಟಲಿಲ್ಲ ಅವನ ಹಸ್ತದಿಂದ ಸುವಾಸನೆ ಬರಲಿಲ್ಲ ನಂತರ ಅವನೇ ಕಳ್ಳ ಎಂದು ನಾನು ಊಹಿಸಿದೆ”ಎಂದು ಹೇಳಿದನು.
ರಾಜ ತೆನಾಲಿರಾಮನ ಬುದ್ದಿವಂತಿಗೆ ಮೆಚ್ಚಿ ಬಂಗಾರದ ನಾಣ್ಯಗಳನ್ನು ಉಡುಗೊರೆಯಾಗಿ ಕೊಟ್ಟನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
