ದಶರಥ ರಾಜನು ಪುತ್ರಕಾಮೇಷ್ಠಿ ಯಾಗ ಮಾಡುವಾಗ ಪಾಯಸ ಪ್ರದಾನ ಮಾಡಿದ ಅಗ್ನಿದೇವ.
ದಶರಥ ಮಹಾರಾಜನು ಸಂತಾನ ಪ್ರಾಪ್ತಿಗಾಗಿ ಪುತ್ರಕಾಮೇಷ್ಠಿಯನ್ನು ಆಚರಿಸಿ ಪತ್ನಿಯರೊಂದಿಗೆ ಶಾಸ್ತ್ರ ಸಮ್ಮತವಾಗಿ ಅನೇಕ ರೀತಿಯ ದಾನಗಳನ್ನು ಮಾಡಿದನು. ಗೋಧಾನ,ವಸ್ತ್ರಧಾನ,ಭೂಧಾನ ಸುವರ್ಣದಾನ ಮಾಡಿದನು. ಯಾಗದ ಕೊನೆಯಲ್ಲಿ ಅಗ್ನಿಗೆ ಪೂರ್ಣಾಹುತಿ ನೀಡುತ್ತಿದ್ದಂತೆ ದಿವ್ಯವಾದ ತೇಜಸ್ಸಿನಿಂದ ಹೊಳೆಯುತ್ತ ಅಗ್ನಿದೇವನು ಕೈಯಲ್ಲಿ ಚಿನ್ನದ ಪಾತ್ರೆಯನ್ನು ಹಿಡಿದು ಕಾಣಿಸಿ ಕೊಂಡನು.
ದಶರಥ ಮಹಾರಾಜನು ಅವನಿಗೆ ನಮಸ್ಕರಿಸಿದಾಗ ಹೇ ದಶರಥ ಮಹಾರಾಜ, ನೀನು ಮಾಡಿದ ಯಜ್ಞದಿಂದ ದೇವತೆಗಳು ತೃಪ್ತರಾಗಿದ್ದಾರೆ. ಈ ಪಾತ್ರೆಯಲ್ಲಿರುವ ಪಾಯಸದಿಂದ ನಿನ್ನ ಇಷ್ಟಾರ್ಥ ನೆರವೇರುವುದು.ಈ ಪಾಯಸವನ್ನು ನಿನ್ನ ಪತ್ನಿಯರಿಗೆ ಹಂಚಿಕೊಡು ಎಂದು ಹೇಳಿ ಪಾಯಸವನ್ನು ಕೊಟ್ಟು ಅಗ್ನಿದೇವನು ಮರೆಯಾದನು.
ದಶರಥ ಮಹಾರಾಜನು ಪಾಯಸವನ್ನು ಹಂಚುವುದಕ್ಕಾಗಿ ಮೊದಲು ಹಿರಿಯ ರಾಣಿ ಕೌಸಲ್ಯೆಗೆ ಅರ್ದವನ್ನು ಕೊಟ್ಟನು.ನಂತರ ಉಳಿದ ಅರ್ಧವನ್ನು ಮೂರನೆಯ ರಾಣಿ ಕೈಕೇಯಿಗೆ ಕೊಟ್ಟನು ನಂತರದಲ್ಲಿ ಇನ್ನೊಬ್ಬ ರಾಣಿಗೆ ಪಾಯಸವನ್ನು ಕೊಡಲು ಸಾಧ್ಯವಾಗಿರಲಿಲ್ಲ. ಆಗ ಆ ಎರಡು ರಾಣಿಯರು ತಾವು ಸ್ವೀಕರಿಸಿದ ಅರ್ಧ ಪಾಯಸದಲ್ಲಿ ಅರ್ಧ ಅರ್ಧ ಕೊಟ್ಟರು ಹೀಗೆ ನಾಲ್ಕು ಪಾಲಾದ ಪಾಯಸದಲ್ಲಿ ಎರಡು ಪಾಲು ಸುಮಿತ್ರೆಗೆ ಲಾಭವಾಯಿತು. ಯಜ್ಞ ಸಮಾಪ್ತಿಯ ನಂತರದಲ್ಲಿ ದಶರಥನಿಗೆ ಇಷ್ಟ ಲಾಭವಾದರೆ, ಅವರ ರಾಣಿಯರು ಸಹ ಮುಂದಿನ ಪುತ್ರ ಸುಖದ ನಿರೀಕ್ಷೆಯಲ್ಲಿ ಸುಖವಾಗಿದ್ದರು.
ಅಶ್ವಮೇಧ ಯಾಗ ನೆಡೆದು ಒಂದು ವರ್ಷ ಕಳೆದಾಗಿನ ಚೈತ್ರ ಮಾಸ ಶುಕ್ಲ ಪಕ್ಷದ ನವಮಿಯ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಹಿರಿಯ ರಾಣಿ ಕೌಸಲ್ಯಾದೇವಿ ಗಂಡು ಮಗುವಿಗೆ ಜನ್ಮವಿತ್ತಾಗ ಎಲ್ಲರಿಗೂ ಸಂತಸವಾಯಿತು. ಮರುದಿನವೇ ಕೈಕೇಯಿ ಇನ್ನೊಂದು ಮಗುವಿನ ತಾಯಿಯಾದಳು.ಅದೇ ದಿನ ಸುಮಿತ್ರಾ ದೇವಿಯು ಅವಳಿ ಮಕ್ಕಳ ತಾಯಿಯಾದಳು. ದಶರಥ ಮಹಾರಾಜನು ಮಕ್ಕಳು ಹುಟ್ಟಿದ ಸಂಭ್ರಮದಲ್ಲಿ ಬಡವರಿಗೆ ದಾನ ಮಾಡಿದನು.ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಉಂಟಾಯಿತು.
ದಶರಥ ಮಹಾರಾಜನು ಮಕ್ಕಳಿಗೆ ನಾಮಕರಣ ಮಹೋತ್ಸವ ನೆಡೆಸಿದನು.ಕೌಸಲ್ಯೆಯ ಮಗನಿಗೆ ‘ ರಾಮ’ ನೆಂದು ಕೈಕೇಯಿ ಮಗನಿಗೆ ‘ ಭರತ ’ ನೆಂದು ಸುಮಿತ್ರೆಯ ಅವಳಿ ಮಕ್ಕಳಿಗೆ ಲಕ್ಷ್ಮಣ, ಶತ್ರುಜ್ಞರೆಂದು ಹೆಸರಿಡಲಾಯಿತು. ನಾಲ್ಕು ಮಕ್ಕಳು ಬಿದಿಗೆ ಚಂದ್ರರಂತೆ ತೇಜಸ್ವಿಗಳಾಗಿ ದಿನೇ ದಿನೇ ಬೆಳೆಯುತ್ತಾ ಆಟದಿಂದ ಎಲ್ಲರನ್ನು ಸಂತಸ ಪಡಿಸುತ್ತಿದ್ದರು.
ದಿನಕಳೆದಂತೆ ಬಾಲಕರು ಹೊರಳಾಡಿ,ನಕ್ಕು ಕುಳಿತು ನೆಡೆದಾಡುತ್ತಾ ಬಾಲ ಲೀಲೆಗಳಿಂದ ಹೆತ್ತವರ ಆನಂದವನ್ನು ಹೆಚ್ಚಿಸುತ್ತಿದ್ದರು. ದಶರಥನು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದನು.ಗುರುಗಳಿಂದ ವೇದ ಪಾಠವನ್ನು ಕಲಿತರು. ಶಸ್ತ್ರ ವಿದ್ಯೆ ಹಾಗೂ ಶಾಸ್ತ್ರ ವಿದ್ಯೆಗಳಲ್ಲಿ ನಿಪುಣರಾದರು.
ರಾಮನು ಬಾಲ್ಯದಲ್ಲಿ ಒಂದು ದಿನ ಎಲ್ಲ ರಾಣಿಯರು ಮಹಾರಾಜ ದಶರಥ ಎಲ್ಲರೂ ಬೆಳದಿಂಗಳಲ್ಲಿ ಸಂತಸದಿಂದ ಇರುವಾಗ ಒಮ್ಮೆಲೆ ಅಕಾಶದಲ್ಲಿರುವ ಚಂದ್ರನೇ ಬೇಕೆಂದು ಹಟ ಮಾಡಿದನು. ಮಂತ್ರಿಗಳನ್ನು ವಿಚಾರಿಸಿ ಮಹಾರಾಣಿಯರನ್ನು ಕರೆದು ಚರ್ಚಿಸಿದರು ರಾಮನ ಅಳುವನ್ನು ನಿಲ್ಲಿಸಲಾಗಲಿಲ್ಲ. ರಾಮನ ಹಟ ಹೆಚ್ಚಾಯಿತು. ಆಗ ಕೈಕೇಯಿಯ ಸೇವಕಿಯಾದ ಮಂಥರೆಯು ಬಂದು ಒಂದು ಕನ್ನಡಿಯನ್ನು ತಂದು ರಾಮನಿಗೆ ತೋರಿಸಿದಾಗ ರಾಮನು ನಗಲು ಆರಂಭಿಸಿದನು. ಹೀಗೆ ಕೈಕೇಯಿಯೊಂದಿಗೆ ಇದ್ದ ಮಂಥರೆ ರಾಮನ ಹಟವನ್ನು ಶಾಂತಪಡಿಸಿದ್ದಳು.
ಎಲ್ಲರೂ ಸಹ ವಳ್ಳೆಯ ಗುಣಗಳನ್ನು ಹೊಂದಿದ್ದು ಪ್ರೀತಿಯಿಂದ ಇದ್ದರು. ರಾಮನ ಜೊತೆಗೆ ಲಕ್ಷ್ಮಣನು ಯಾವಾಗಲೂ ಇರುತ್ತಿದ್ದನು.ಭರತ ಶತ್ರುಜ್ಞರು ಸಹ ಅನ್ಯೂನ್ಯವಾಗಿದ್ದರು. ರಾಮನು ಎಲ್ಲರ ಕಣ್ಮಣಿಯಂತ್ತಿದ್ದನು.ಅವನು ನಿಗರ್ವಿಯಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಇದ್ದು ತಾಳ್ಮೆಯಿಂದ ಇರುವುದಲ್ಲದೇ .ಇತರರು ತಪ್ಪು ಮಾಡಿದರು ಸಹ ಎತ್ತಿ ತೋರಿಸಿ ನಿಂದಿಸುತ್ತಿರಲಿಲ್ಲ. ಎಲ್ಲರನ್ನು ಕ್ಷಮಿಸಿ ಉದಾರತೆಯನ್ನೇ ತೋರಿಸುತ್ತಿದ್ದನು. ರಾಮನು ಅನೇಕ ಗುಣಗಳನ್ನು ಹೊಂದಿದ್ದರಿಂದ ದಶರಥನ ನಂತರದಲ್ಲಿ ಅಯೋದ್ಯೆಯ ರಾಜನಾಗುವ ಎಂದು ಜನರೂ ಸಹ ಆಸೆಯನ್ನು ಇಟ್ಟುಕೊಂಡಿದ್ದರು.
ರಾಮನಿಗೆ ರಘುವಿನ ವಂಶದಲ್ಲಿ ಹುಟ್ಟಿದ್ದ ಕಾರಣ ರಾಘವ ಎಂದು ಹೆಸರು ಬಂದಿತು. ದಶರಥನ ಮಗನಾದ್ದರಿಂದ ದಶರಥಿಯೆಂದು ಕಕುತಸ್ಥ ವಂಶದವನಾದ್ದರಿಂದ ಕಾಕುತಸ್ಥ ಎಂದೂ ಹೆಸರು ಬಂದಿತು. ಈ ರೀತಿಯಲ್ಲಿ ರಾಮ, ಲಕ್ಷ್ಮಣ, ಭರತ, ಶತೃಜ್ಞರು ಬೆಳೆಯುತ್ತಾ ಎಲ್ಲರನ್ನು ಸಂತಸಪಡಿಸುತ್ತಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
