ಕನ್ನಡವನ್ನು ಬೆಳೆಸಲು ತನ್ನ ಕ್ಯಾಬ್ ನಲ್ಲಿ ಕನ್ನಡ ಮಾತನಾಡಿದರೆ 10% ಡಿಸ್ಕೌಂಟ್ ಕೊಡುತ್ತಿರುವ ಕನ್ನಡಪ್ರೇಮಿ ಡ್ರೈವರ್.
ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ಕನ್ನಡ ಮಾತನಾಡುವ ಜನರು ತುಂಬಾ ಕಡಿಮೆಯಾಗುತ್ತಿದ್ದಾರೆ. ಮುಂದೆ ಕನ್ನಡ ಮಾತನಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕು ಕನ್ನಡ ಬಾರದವರಿಗೆ ಕನ್ನಡವನ್ನು ಕಲಿಸಬೇಕು ಎಂದು ಇಲ್ಲೊಬ್ಬ ಕ್ಯಾಬ್ ಡ್ರೈವರ್ ತನ್ನ ಟ್ಯಾಕ್ಸಿಯಲ್ಲಿ ಕನ್ನಡದಲ್ಲಿ ಮಾತನಾಡಿದರೆ 10% ಡಿಸ್ಕೌಂಟ್ ಕೊಡಲು ಮುಂದಾಗಿ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾನೆ.
ಕನ್ನಡವನ್ನು ಕನ್ನಡೇತರ ಜನರು ಕಲಿತುಕೊಳ್ಳಲಿ ಎಂದು ಈ ಪ್ಲಾನ್ ಮಾಡಿದ್ದು ಇವರ ಟ್ಯಾಕ್ಸಿಯಲ್ಲಿ ಕನ್ನಡೇತರ ಜನರು ಕನ್ನಡ ಮಾತನಾಡಲು ಪ್ರಯತ್ನಪಟ್ಟರೆ ಅವರ ಟ್ರಿಪ್ ನಲ್ಲಾಗಿರುವ ಬಿಲ್ ನಲ್ಲಿ 5% ಡಿಸ್ಕೌಂಟ್ ಮತ್ತು ಕ್ಯಾಬ್ ನಲ್ಲಿ ಹಾಕುವ ಕನ್ನಡ ಹಾಡುಗಳನ್ನು ಬದಲಾವಣೆ ಮಾಡಿ ಎಂದು ಕೇಳದೆ ಕನ್ನಡ ಹಾಡುಗಳನ್ನೇ ಕೇಳಿದರೆ ಅದಕ್ಕೂ 5% ಡಿಸ್ಕೌಂಟ್ ಕೊಡಲಿದ್ದಾರೆ.ಒಟ್ಟು 10% ಡಿಸ್ಕೌಂಟ್ ಅನ್ನು ಕೊಡಲಿದ್ದಾರೆ. ಇದು ಕನ್ನಡ ಬಾರದವರಿಗೆ ತಿಳಿಯಲಿ ಎಂದು ಇಂಗ್ಲಿಷ್ನಲ್ಲಿ ಈ ವಿಚಾರವನ್ನು ಬರೆದ ಎರಡು ಕರಪತ್ರಗಳನ್ನು ಮಾಡಿಸಿ ಹಿಂಬದಿಯ ಸೀಟ್ ಗೆ ತೂಗುಹಾಕಿದ್ದರೆ.
ವ್ಯಯಕ್ತಿಕವಾಗಿ ತನ್ನ ಮೇಲೆ ತುಂಬಾ ಸಾಲಗಳಿದ್ದರು ಜೀವನದಲ್ಲಿ ತುಂಬಾ ಕಷ್ಟದಲ್ಲಿದ್ದರೂ ಕನ್ನಡವನ್ನು ಉಳಿಸುವ ಕಾರ್ಯದಲ್ಲಿ ತೊಡಗಿರುವ ಇವರು ಇತರ ಕನ್ನಡಿಗರಿಗೂ ಮಾದರಿಯಾಗಿದ್ದಾರೆ.
ಇವರ ಮಾತುಗಳನ್ನು ಈ ವಿಡಿಯೋದಲ್ಲಿ ನೋಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
