fbpx
ದೇವರು

ಲಕ್ಷ್ಮೀ ಕಟಾಕ್ಷ ನಿಮ್ಮದಾಗಲು ಬೆಳಗೆದ್ದು ಈ ಕೆಲಸ ಮಾಡಿ

ಲಕ್ಷ್ಮೀ ಕಟಾಕ್ಷ ನಿಮ್ಮದಾಗಲು ಬೆಳಗೆದ್ದು ಈ ಕೆಲಸ ಮಾಡಿ.

ಸೌಭಾಗ್ಯ ದೇವತೆ ಶ್ರೀ ಲಕ್ಷ್ಮೀ.

ಮನೆ ತುಂಬಾ ಸಂಪತ್ತು ತುಂಬಿರಲು ಲಕ್ಷ್ಮೀ ಕೃಪೆ  ಬೇಕುಬೇಕು.

ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೆಳಗ್ಗೆ ಬೇಗ ಎದ್ದು ಮನೆ ಕೆಲಸ ಮಾಡಿ  ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆ ಮಾಡುತ್ತಿದ್ದರು.ಈಗ ಕಾಲ ಬದಲಾಗಿದೆ.ಮಹಿಳೆಯರು ಪುರುಷರ ಜೊತೆ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೆಲಸದ ಸಮಯವನ್ನೂ  ಗಮನದಲ್ಲಿಟ್ಟುಕೊಂಡು ಮನೆ ಕೆಲಸ ಮಾಡುತ್ತಾರೆ.

ಯಾವ ಮನೆಯಲ್ಲಿ ಮಹಿಳೆ ಸಂಸ್ಕಾರವಂತಳಾಗಿ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎಂದು ಶಾಸ್ತ್ರ ಹೇಳುತ್ತದೆ. ವಾಸ್ತು ಹಾಗೂ ಗ್ರಂಥಗಳ ಪ್ರಕಾರ ಈ ಒಂದು ಕೆಲಸವನ್ನು ಮಹಿಳೆಯರು ಮುಖ್ಯವಾಗಿ ಬೆಳ್ಳಗೆಯೇ ಮಾಡಬೇಕು.

ಮನೆ ಎಂದೂ ಸಹ ಸುಂದರವಾಗಿರಬೇಕು.ಮನೆಯನ್ನು ಸ್ವಚ್ಛ ಮಾಡುವ ಕೆಲಸವನ್ನು ಮಹಿಳೆಯರು ಯಾವಾಗಲೂ ಬೆಳಗ್ಗೆ ಮಾಡಬೇಕು.

ಮನೆಯ ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರುವುದು ಬಹಳ ಮುಖ್ಯ.ಮನೆಯ ಮುಖ್ಯ ದ್ವಾರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿರಬೇಕು.

ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಮನೆಯ ಮುಖ್ಯ ದ್ವಾರದ ಮುಂದೆ ರಂಗೋಲಿ ಹಾಕಬೇಕು.

ಮನೆಯ ಹೊಸ್ತಿಲನ್ನು ಪ್ರತಿದಿನ ಮುಂಜಾನೆ  ಸ್ವಚ್ಚಗೊಳಿಸಿ,ನೀರಿನಿಂದ ತೊಳೆದು  ,ಹೊಸ್ತಿಲಿಗೆ  ಹರಿಷಿನ, ಕುಂಕುಮ,ಹೂವು,ಅಕ್ಷತೆಗಳನ್ನು ಸಮರ್ಪಿಸಬೇಕು.ಹಾಗೆ ಇವೆಲ್ಲವನ್ನು ಮಾಡಿದ  ನಂತರ  ಅಗರಬತ್ತಿಯಿಂದ ಪೂಜೆ ಮಾಡಬೇಕು ನಂತರ ಕರ್ಪುರದ ಆರತಿಯನ್ನು ಮಾಡಿದರೆ ಇನ್ನೂ ಒಳ್ಳೆಯದು ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.

ಕರ್ಪುರದ ಆರತಿಯನ್ನು ಮೊದಲು ಮನೆಯೊಳಗೆ ಇರುವ  ದೇವರ ಮುಂದೆ ಆರತಿ ಮಾಡಿ ನಂತರ ಹೊರಗೆ ಹೊಸ್ತಿಲಿಗೆ ಹಾಗೆ ಸೂರ್ಯನಿಗೂ ಆರತಿಯನ್ನು ಬೆಳಗಿ  ಬೆಳಗುತ್ತಿರುವ  ಆರತಿಯನ್ನು ಹೊಸ್ತಿಲ ಹೊರಗೆ ಅಂದರೆ ಹೊಸ್ತಿಲ ಮುಂದೆ  ಇಡಬೇಕು.

ಹೂವು ಹಾಗೂ ಸಣ್ಣ ಸಣ್ಣ ಗಂಟೆಗಳಿಂದಲೂ ಮನೆ ಬಾಗಿಲನ್ನು ಅಲಂಕರಿಸಬಹುದು.ಮನೆಯ ಮುಖ್ಯದ್ವಾರ ಸುಂದರವಾಗಿದ್ದರೆ ಲಕ್ಷ್ಮೀ ಮನೆ ಪ್ರವೇಶ ಮಾಡಲು ಮನಸ್ಸು ಮಾಡುತ್ತಾಳೆ.

ಮನೆಯ ಮುಖ್ಯದ್ವಾರದ ಬಳಿ ಮರ, ಪೊರಕೆ ಇಡುವುದು ಒಳ್ಳೆಯದಲ್ಲ.ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ.

ಮನೆಯ ಬಾಗಿಲು ತೆರೆಯುವಾಗ ಹಾಗೂ ಹಾಕುವಾಗ ಶಬ್ದ ಮಾಡಬಾರದು ಬಾಗಿಲು ಶಬ್ದ ಮಾಡುತ್ತಿದ್ದರೆ ಮೊದಲು ಅದಕ್ಕೆ ಎಣ್ಣೆ ಹಾಕಿ ಸರಿ ಮಾಡಿ.

ಕೆಲಸದ ನಡುವೆಯೇ ಸೂರ್ಯ ಉದಯಿಸುವ ಮುನ್ನ ಎದ್ದು ಮನೆಯ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕುವ ಪದ್ದತಿಯನ್ನು ರೂಡಿ ಮಾಡಿಕೊಳ್ಳಿ.ಇದು ನಿಮ್ಮ ಮನಸ್ಸಿನ ಜೊತೆಗೆ ಮನೆಯ ವಾತಾವರಣವನ್ನು ಬದಲಾಯಿಸುತ್ತದೆ .

ಮನೆಯಲ್ಲಿರುವವರ  ಮನಸ್ಸಿನಲ್ಲಿ  ಉಲ್ಲಾಸ,ಸಂತೋಷ ಸದಾ ನೆಲೆಸುವಂತೆ ಮಾಡುತ್ತದೆ.

ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸುತ್ತಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top