fbpx
ಕನ್ನಡ

ಅಧಿಕಾರಿಗಳು ಕನ್ನಡ ಕಲಿಯದಿದ್ದರೆ ಕರ್ನಾಟಕದಲ್ಲಿ ಅವರಿಗೆ ಜಾಗವಿಲ್ಲ- ಸಿ.ಎಂ.ಸಿದ್ದರಾಮಯ್ಯ.

ಅಧಿಕಾರಿಗಳು ಕನ್ನಡ ಕಲಿಯದಿದ್ದರೆ ಕರ್ನಾಟಕದಲ್ಲಿ ಅವರಿಗೆ ಜಾಗವಿಲ್ಲ- ಸಿ.ಎಂ.ಸಿದ್ದರಾಮಯ್ಯ.

 

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು ಕನ್ನಡವನ್ನು ಕಲಿಯಬೇಕು ಮತ್ತು ಕನ್ನಡಭಾಷೆಯಲ್ಲೆ ವ್ಯವಹರಿಸಬೇಕು ಎಂದು ಹೇಳಿದ್ದಾರೆ.

ಗಾಂಧಿಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಐಎಎಸ್ ಉತ್ತೀರ್ಣರಾದ 59ಮಂದಿ ಕನ್ನಡಿಗರನ್ನು ಅಭಿನಂದಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿ ಕನ್ನಡ ಕಲಿಯಲೇಬೇಕು ಎಂದರು. 2016ರ ಯುಪಿಎಸ್‍ಸಿ ಪರೀಕ್ಷೆಯಲ್ಲಿ 59 ಮಂದಿ ಕನ್ನಡಿಗರು ಉತ್ತೀರ್ಣರಾಗಿದ್ದಾರೆ.ದೇಶಕ್ಕೇ ಪ್ರಥಮ ಸ್ಥಾನ ಪಡೆದಿರುವ ನಂದಿನಿಯವರು ಕೆಲಸ ಮಾಡಲು ಕರ್ನಾಟಕವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಮ್ಮ ಬಯಕೆ,”ನಂದಿನಿ… ನೀನು ನಮ್ಮ ರಾಜ್ಯಕ್ಕೆ ಅಧಿಕಾರಿಯಾಗಿ ಬಾರಮ್ಮಾ” ಎಂದು ನಂದಿಯವರನ್ನು ಆಹ್ವಾನಿಸಿದರು.

ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇಂಗ್ಲಿಷ್ನಲ್ಲಿ ಮಾತ್ರ ಬರೆಯಲ್ಪಟ್ಟ ಅಧಿಕೃತ ಫೈಲ್ ಗಳನ್ನು ತಮ್ಮ ಕೆಳಗೆ ಕೆಲಸ ಮಾಡುವ ಅಧಿಕಾರಿಗಳಿಗೆ ನೀಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ ಸತ್ಯವನ್ನು ಖಚಿತಪಡಿಸಿದ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಹಿಂದೆ ಅಧಿಕಾರಿಯೊಬ್ಬರು ಕನ್ನಡ ಕಲಿಯುವುದಿಲ್ಲ ಎಂದಾಗ ಆತನಿಗೆ ನಿನ್ನ ಸೇವೆ ಸಾಕು ಎಂದು ಕೇಂದ್ರ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದೇವೆ.ಮುಂದೆಯೂ ಕೂಡ ಅಧಿಕಾರಿಗಳು ಕನ್ನಡಲ್ಲೇ ವ್ಯವಹರಿಸಬೇಕು ಒಂದು ವೇಳೆ ಕನ್ನಡ ಕಲಿಯದಿದ್ದರೆ ಅಂಥವರಿಗೆ ಕರ್ನಾಟಕದಲ್ಲಿ ಜಾಗವಿಲ್ಲ ಎಂದರು. ಕನ್ನಡ ಮತ್ತು ಕನ್ನಡಿಗರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಯಾವುದೇ ಅಧಿಕಾರಿಯನ್ನು ನಾವು ಸಹಿಸುವುದಿಲ್ಲ.ಈ ಬಗ್ಗೆ ನಾನು ತಕ್ಷಣವೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಮತ್ತು ಕನ್ನಡ ಕಲಿಯದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಅವರು ಹೇಳಿದರು.

ಇದಕ್ಕೆ ಸಂಭಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಕನ್ನಡ ಕಲಿಯಲು ಒಂದು ಶೋ-ಕಾಸ್ ನೋಟಿಸ್ ಕಳುಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top