fbpx
ಭವಿಷ್ಯ

ಯಾವ ಪಂಚ ಭೂತಕ್ಕೆ ನಿಮ್ಮ ರಾಶಿ ಸೇರಿದ್ದು ಯಾವ ಗುಣ ಹೊಂದಿರ್ತೀರಾ ತಿಳ್ಕೊಳ್ಳಿ

ನಿಮ್ಮ ರಾಶಿಯು ಪಂಚ ಭೂತಗಳಲ್ಲಿ ಯಾವ ತತ್ವಕ್ಕೆ ಸೇರಿದ್ದು.

ರಾಶಿಗಳ ಗುರುಗಳು,ಆ ರಾಶಿಯ  ಗ್ರಹದ ಅಧಿಪತಿ ಬೇರೆ ಬೇರೆ ಇದ್ದಾರೆ.ಒಟ್ಟು 12 ರಾಶಿಗಳಿವೆ.ಈ 12 ರಾಶಿಗಳನ್ನು ಸಹ  ಜಲ,ಅಗ್ನಿ ಮತ್ತು ಭೂ ತತ್ವಗಳ  ಅಡಿಯಲ್ಲಿ ವಿಗಂಡಿಸಲಾಗಿದೆ.

ಪಂಚತತ್ವಗಳು ಯಾವುವು?

ಅಗ್ನಿ(ಬೆಂಕಿ),ವಾಯು(ಗಾಳಿ),ಜಲ(ನೀರು), ಪೃಥ್ವಿ (ಭೂಮಿ), ಆಕಾಶ.ಇವೆ 5 ಪಂಚ ತತ್ವಗಳು.ಇವು ನಮ್ಮ ದೇಹದಲ್ಲಿನ ಯಾವ ಭಾಗ ಏನನ್ನು ಸೂಚಿಸುತ್ತದೆ ಎಂದು ತಿಳಿಯೋಣ ಬನ್ನಿ. ಮನುಷ್ಯನ ದೇಹವನ್ನು ಭೂಮಿಗೆ ಹೋಲಿಸಲಾಗಿದೆ,ಮನಸ್ಸನ್ನು ನೀರಿಗೆ ಹೋಲಿಸಲಾಗಿದೆ,ಹಾಗೆ ಬೆಂಕಿಯನ್ನು ಬುದ್ದಿಗೆ,ಗಾಳಿಯನ್ನು ಅರಿವಿಗೆ, ಮತ್ತು ಆಕಾಶವನ್ನು ಪ್ರಜ್ಞೆಗೆ ಹೋಲಿಸಲಾಗಿದೆ.

1.ಮೇಷ,ಸಿಂಹ,ಧನಸ್ಸು ರಾಶಿಗಳು ಅಗ್ನಿ ತತ್ವಕ್ಕೆ ಸೇರಿವೆ.

ಅಗ್ನಿ ತತ್ವದ ರಾಶಿಯವರ ಫಲ.

ಕ್ರಿಯಾತ್ಮಕ ಗುಣಗಳನ್ನು ಹೊಂದಿರುತ್ತಾರೆ,ಸಾಮಾನ್ಯ ಎತ್ತರ,ದಿಟ್ಟರು, ದೈರ್ಯವಂತರು, ಪಿತ್ತ ಸ್ವಭಾವ,ಹಗಲವಾದ ಹಣೆ,ಇವರದೇ ಆದ ಉದ್ದೇಶ ಮತ್ತು ನೀತಿ ಹೊಂದಿರುತ್ತಾರೆ.ಸ್ವಲ್ಪ ದೈವತ್ವ ಇರುತ್ತದೆ.ಕಣ್ಣು , ರೂಪ, ಪಾದ,ದಾಹ, ಬೆವರು, ಆಲಸ್ಯ, ನಿದ್ರೆ, ತೇಜಸ್ಸು, ಮೂರ್ಛೆ ಇವುಗಳ ಮೇಲೆ ಅಗ್ನಿ ತತ್ವದ ಪ್ರಭಾವ ಬೀರುತ್ತದೆ.

2.ಮಿಥುನ,ತುಲಾ,ಕುಂಭ ರಾಶಿ ವಾಯು ತತ್ವಕ್ಕೆ ಬರುತ್ತವೆ.

ವಾಯು ತತ್ವದ ರಾಶಿಯವರ ಫಲಗಳು.

ಮಿತ ಭಾಷಿಗರು,ಮೇಧಾವಿಗಳು,ದೇಹದ ಶ್ರಮ ಕಡಿಮೆ, ಹೆಚ್ಚು ಸಂಗ್ರಹ ಶಕ್ತಿ, ಅತಿ ಮರೆವು,ಉತ್ಸಾಹ ಕಡಿಮೆ ಇರುತ್ತದೆ. ಗಾಳಿ,ಸ್ಪರ್ಶೇಂದ್ರಿಯಗಳು, ಧರ್ಮ,ಕೈಗಳು,ದಾನ,ಕೋಶ,ಶರೀರ,ಕ್ರಿಯೆ, ಇವುಗಳ ಮೇಲೆ ವಾಯು ತತ್ವದ ಪ್ರಭಾವ ಬೀರುತ್ತದೆ.

3.ಕಟಕ,ಮೀನ ಮತ್ತು ವೃಶ್ಚಿಕ ರಾಶಿ ಜಲ ತತ್ವಕ್ಕೆ ಬರುತ್ತವೆ.

ಜಲತತ್ವ ರಾಶಿಯವರ ಫಲಗಳು.

ಉದ್ವೇಗಕ್ಕೆ ಬೇಗ ಒಳಗಾಗುತ್ತಾರೆ.ಶರೀರ ಕೃಶ, ಗುಪ್ತ ವ್ಯವಹಾರ, ಹೆದರಿಕೆ,ಜೀರ್ಣ ಶಕ್ತಿ ಕಡಿಮೆ,ರಸ,ನಾಲಿಗೆ,ಅಪಾನ್ನ,ಪ್ರಾಣಾಮಯ, ಪ್ರಾಣಾಮಯ ಕೋಶ, ರಕ್ತ,ಮೂತ್ರ,ಶುಕ್ಲ,ಇತ್ಯಾದಿಗಳ ಮೇಲೆ ಜಲತತ್ವದ ಪರಿಣಾಮ ಬೀರುತ್ತದೆ.

4.ವೃಷಭ ,ಕನ್ಯಾ ಮತ್ತು ಮಕರ ರಾಶಿ ಭೂ ತತ್ವಕ್ಕೆ ಸೇರುತ್ತವೆ.

ಭೂತತ್ವ ರಾಶಿಯವರ ಫಲಗಳು.

ಪ್ರಯೋಗಾತ್ಮಕ  ಗುಣ,ವಿವೇಚನೆಯುಳ್ಳವರು, ನಿಧಾನವೇ ಪ್ರಧಾನವೆನ್ನುವವರು,ಲೆಕ್ಕಾಚಾರದಿಂದ ವೆಚ್ಚ ಮಾಡುವವರು, ಕ್ರಮ ಬದ್ಧವಾಗಿ ಇರುವವರು.ಗಂಧ, ಪರಿಮಳ,ಮೂಗು,ಪ್ರಾಣ ಶಕ್ತಿ, ಅನ್ನ ಮಯ, ಕೇಶ ಇವುಗಳ ಮೇಲೆ ಭೂ ತತ್ವದ ಪ್ರಭಾವ ಬೀರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top