fbpx
ಕಥೆ

ಪ್ರೀತಿ ನಿಜವಾಗಿದ್ದರೆ ಅಂದ ,ಐಶ್ವರ್ಯ ಕಾಲಿನ ಧೂಳಿಗೆ ಸಮಾನ

ಪ್ರೀತಿ ನಿಜವಾಗಿದ್ದರೆ ಅಂದ ,ಐಶ್ವರ್ಯ ಕಾಲಿನ ಧೂಳಿಗೆ ಸಮಾನ

ನೀವು ಇವತ್ತು ಒಂದು ಅಪರೂಪದ ಲವ್ ಸ್ಟೋರಿ ಒಂದನ್ನ ಓದೋಕೆ ಹೋಗ್ತಿದ್ದೀರಾ , ಓದಿದ ಮೇಲೆ ನಿಮ್ಮ ಮನಸ್ಸು ನಿಜವಾಗಿ ಕರಗದೇ ಇರೋಲ್ಲ

ಅವಳು ಸುಂದರವಾದ ಹುಡುಗಿ ಅವನು ಒಬ್ಬ ಸುರದ್ರೂಪಿ ಹುಡುಗ , ಶಾಲೆಯಲ್ಲಿ ಒಟ್ಟಿಗೆ ಓದ್ತಾ ಇರ್ತಾರೆ ಕಣ್ಣು ಕಣ್ಣುಗಳು ಕಲೆತವು ಹೃದಯ ಮಿಡಿಯೋಕೆ ಶುರು ಮಾಡಿ ಬಿಟ್ಟಿತ್ತು.

ಆಗಲೇ ಅವರಿಗೆ ಅನ್ನಿಸಿಬಿಟ್ಟಿತ್ತು ನಮ್ಮಿಬ್ಬರ ದೇಹ ಎರಡಾದ್ರೂ ಆತ್ಮ ಒಂದೇ ಅಂತ , ಪ್ರೀತಿ ಎಂದರೆ ಕೆಲವರಿಗೆ ಆಟದ ವಸ್ತುವಾದರೆ ಇನ್ನು ಕೆಲವರಿಗೆ ಭೋಗದ ವಸ್ತು ,
ಕೆಲವರು ಪ್ರೀತಿಸಿದವರನ್ನು ಬಿಟ್ಟು ಹಣ ,ಅಂತಸ್ತು ಎಂದು ಮುಂದೆ ಹೊರಟು ಹೋಗ್ತಾರೆ ಇನ್ನು ಕೆಲವರು ತಮ್ಮ ತೃಷೆ ತೀರಿದ ಬಳಿಕ ಬೇಡದ ವಸ್ತುವಿನಂತೆ ಬಿಸಾಡಿ ಹೋಗ್ತಾರೆ .

ಒಮ್ಮೊಮ್ಮೆ ನಿಜವಾದ ಪ್ರೀತಿ ಇದ್ಯಾ ? ಅಂತ ಅನ್ನಿಸಿದ್ದು ಉಂಟು ನಾವೀಗ ಹೇಳ ಹೊರಟಿರೋ ಲವ್ ಸ್ಟೋರಿ ನಿಮ್ಮ ಮನಸ್ಸು ಚೇಂಜ್ ಮಾಡಿದ್ರು ಆಶ್ಚರ್ಯ ಇಲ್ಲ

ಹುಲ್ಲಿನ ಪೊದೆಯ ಬೆಂಕಿಯ ಬಲೆಗೆ ಸಿಕ್ಕಿ ಬದುಕಿದ ತುರೀಯಾ ಪಿಟ್ಟ್ ತನ್ನ ಮದುವೆ ಬಗ್ಗೆ ಹೇಳಿಕೊಂಡಾಗ ಎಲ್ಲರಿಗು ಒಂದು ತರಹದ ಶಾಕ್ ಉಂಟಾಗಿತ್ತು ,
ಯಾಕೆಂದರೆ ಅದೇ ತನ್ನ ಜೊತೆಯಲ್ಲಿ ಶಾಲೆಯಲ್ಲಿ ಓದುತ್ತಿದ್ದನ್ನಲ್ಲ ಅವನೇ ಹುಡುಗ ! ಜನರೆಲ್ಲಾ ಕೆಟ್ಟದಾಗಿ ಮಾತಾಡಿದ್ರು ‘ಅಯ್ಯೋ ಅಷ್ಟು ಚೆನ್ನಾಗಿದ್ದಾನೆ ಅವನಿಗೇನು ಕೇಡುಗಾಲ ,ಹೋಗಿ ಹೋಗಿ ದೆವ್ವದ ತರ ಇದ್ದಾಳೆ ‘ ಎಂದು ಕೆಲವ್ರು ಕೆಟ್ಟದಾಗಿ ಆಡಿಕೊಂಡ್ಡಿದ್ದರು ಕೂಡ .

ಅಸಲಿ ಅವಳಿಗೆ ಏನಾಗಿತ್ತು ? 2011 ರಲ್ಲಿ ತುರೀಯಾ ಪಿಟ್ಟ್, ಮ್ಯಾರಥಾನ್ ಓಡುತ್ತಿದ್ದ ಸಂದರ್ಭದಲ್ಲಿ ಹತ್ತಿರದಲ್ಲಿದ್ದ ಹುಲ್ಲಿನ ಪೊದೆಗೆ ಬಿದ್ದು ಬಿಟ್ಟಳು ಎಷ್ಟೇ ಕಷ್ಟ ಪಟ್ಟರು ಹೊರಗೆ ಬರಲು ಆಗಲಿಲ್ಲ , ಅಷ್ಟರಲ್ಲಾಗಲೇ ಬೆಂಕಿ ಆಕೆಯ ದೇಹವನ್ನು 65 % ಸುತ್ತು ಹಾಕಿತ್ತು , ಆಕೆ ನರಕವನ್ನೇ ನೋಡಿದ್ದಳು ಚೀರಾಡಿದಳು , ಕೊನೆಗೂ ಹತ್ತಿರದಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು ,

ಆಕೆಯ ಮಾಂಸದ ಮುದ್ದೆಯಾಗಿದ್ದಳು ಆಕೆಯ ಬಲಗೈನ ಬೆರಳುಗಳು ನಾಶವಾಗಿದ್ದವು , ಆಕೆಯ ದೇಹ ಬೆಂದು ಹೋಗಿತ್ತು ,5 ತಿಂಗಳು ಆಸ್ಪತ್ರೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಆಪರೇಷನ್ ಮಾಡಿಸಿಕೊಂಡಳು ,ಆದರೂ ಆಕೆಯ ಮುಖ ವಿಕಾರವಾಗಿತ್ತು ಆದರೂ ಅವಳ ಪ್ರೀತಿ ಕೈ ಬಿಡಲಿಲ್ಲ .


ಆಕೆ ಮಾಲ್ಡಿವ್ಸ್ ICU ನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವಾಗಲೇ ಅವಳನ್ನು ಮದುವೆಯಾಗಬೇಕು ಎಂಬ ನಿರ್ಧಾರವನ್ನು ತಿಳಿಸಿದ್ದ , ಕೊನೆಗೂ ತುರೀಯಾ ಪಿಟ್ಟ್, ಮೈಕೆಲ್ ನನ್ನ ಮದುವೆಯಾಗಲು ಒಪ್ಪಿಕೊಂಡಳು ,ಇಬ್ಬರು ಮದುವೆಯಾಗಿ ಹೊಸ ಜೀವನವನ್ನು ಶುರು ಮಾಡಿದರು ,ಮೈಕೆಲ್ ತನ್ನ ಪೊಲೀಸ್ ಆಫೀಸರ್ ಕೆಲಸವನ್ನು ಬಿಟ್ಟು ,ಆಸ್ಟ್ರೇಲಿಯಾ ದಲ್ಲಿ ಸೆಟ್ಲ್ ಆಗಿ , ಪಿಟ್ಟ್ ಳನ್ನು ನೋಡಿಕೊಳ್ಳಲು ಶುರು ಮಾಡಿದನು ಆಕೆ ಮತ್ತೆ ಜೀವನದಲ್ಲಿ ನಗಲು ಶುರು ಮಾಡಿದಳು.

ನಿಜವಾದ ಪ್ರೀತಿ ಇದ್ದೆ ಇದೆ ನಮಗೆ ಸಿಗಬೇಕು ಅಷ್ಟೇ !

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top