fbpx
ಆರೋಗ್ಯ

ಕ್ರಿಮಿ – ಕೀಟಗಳು ಕಿವಿಯೊಳಗೆ ಹೋದ್ರೆ ಹೇಗೆ ತೆಗೆಯೋದು?

ಕ್ರಿಮಿ – ಕೀಟಗಳು ಕಿವಿಯೊಳಗೆ ಹೋದ್ರೆ ಹೇಗೆ ತೆಗೆಯೋದು

 

ಕಿವಿಯ ಒಳಗೆ ಪತಂಗಗಳು, ಜಿರಳೆ , ಜೀರುಂಡೆ ಮುಂತಾದವು ನೀವು ನಿದ್ದೆ ಮಾಡುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ಇರುವಾಗ ಮೆಲ್ಲನೆ ಕಿವಿಯೊಳಗೆ ಸೇರಿಕೊಳ್ಳುತ್ತದೆ  ಇದು ಮುಂದೆ ದೊಡ್ಡದಾಗಿ ಕಿವುಡುತನ, ಕಿವಿ ಹಾನಿ, ಮತ್ತು ಸೋಂಕನ್ನು ಉಂಟು ಮಾಡುತ್ತದೆ.

ನಿಮ್ಮ ಕಿವಿಯಲ್ಲಿ ಹುಳು ಇದ್ದರೆ ನೋವು, ಊತ, ರಕ್ತ ಸೋರುವುದು , ಕೆರೆತ , ಕಚ್ಚುವಿಕೆ ಅಥವಾ ಕುಟುಕುವ ಅನುಭವವನ್ನು ಹೊಂದಬಹುದು ಇದು ಮುಂದೆ ಹೆಚ್ಚಾಗಿ ಕಿವುಡುತನ ಅಥವಾ ಶಾಶ್ವತ ಅಂಗ ಕಳೆದುಕೊಳ್ಳುವಿಕೆಗೂ ಕಾರಣವಾಗುತ್ತದೆ.

ಹುಳು ಒಳಗೆ ಹೊಕ್ಕಿದಾಗ ಶಾಂತವಾಗಿರಿ ಭಯದಲ್ಲಿ ಕಿರುಚಾಡಿದರೆ ಹುಳು ಒಳಗೆ ಹೋಗಿ ನಿಮ್ಮ ಕಿವಿಯನ್ನು ಸಂಪೂರ್ಣ ಹಾನಿ ಮಾಡಬಹುದು .

ಹತ್ತಿ ಇಡುವುದು ,ಪಿನ್ ನಿಂದ ಚುಚ್ಚುವುದು ಮಾಡಬೇಡಿ ,ಕಾಟನ್ ಬಡ್ ಗಳನ್ನು ಉಪಯೋಗಿಸಬೇಡಿ ಇದು ಹುಳುವನ್ನು ಮತ್ತಷ್ಟು ಒಳಗೆ ತಳ್ಳಿ , ಕಿವಿಯ ನರಗಳಿಗೆ ಹಾನಿಯುಂಟುಮಾಡುತ್ತದೆ .


ಟಾರ್ಚ್ ಸಹಾಯದಿಂದ ಹುಳುವನ್ನು ಎಲ್ಲಿದೆ ಹಾಗು ಯಾವ ರೀತಿಯದ್ದು ಎಂದು ಕಂಡುಹಿಡಿಯಲು ಪ್ರಯತ್ನ ಮಾಡಿ , ಹುಳುವು ಕಾಣಿಸಲೇ ಇಲ್ಲ ಎಂದರೆ ನಿಮ್ಮ ಡಾಕ್ಟರ್ ಬಳಿ ಹೋಗಿ ತೆಗೆಸಿಕೊಳ್ಳಿ.

ಇಲ್ಲವಾದರೆ ಕಿವಿಯನ್ನು ಕೆಳಗೆ ಬಗ್ಗಿಸಿ ಕಿವಿಯ ಕೆಳ ತುದಿಯನ್ನು ನಿಧಾನವಾಗಿ ಅಲುಗಾಡಿಸಿ ಹೀಗೆ ಮಾಡಿದರೆ ಹುಳು ಕೆಳಗೆ ಬೀಳುತ್ತದೆ .

ಹುಳು ಕೆಳಗೆ ಬಿದ್ದಿಲ್ಲ ವಾದರೆ ಸ್ವಲ್ಪ ಬಿಸಿ ನೀರನ್ನು ಬಲ್ಬ್ ಸಿರಿಂಜಿ ನಲ್ಲಿ ತುಂಬಿಕೊಂಡು ಕಿಯಿಯೊಳಗೆ ಬಿಟ್ಟುಕೊಳ್ಳಿ , ನೀರು ಒಳಗೆ ಹೋದ ಮೇಲೆ ಮತ್ತೆ ಕಿವಿಯನ್ನು ನೀರು ಹೊರಗೆ ಬರಲು ಬಗ್ಗಿಸಿ  ಹುಳು ನೀರಿನಲ್ಲಿ ಬಂದು ಕೆಳಗೆ ಬೀಳಬಹುದು .

ಒಂದೆರಡು ಹನಿ ,ಮಿನರಲ್ ಎಣ್ಣೆ ,ಆಲಿವ್ ಎಣ್ಣೆ ಅಥವಾ ಬೇಬಿ ಆಯಿಲ್ ಕಿವಿಗೆ ಬಿಟ್ಟುಕೊಳ್ಳಿ ಇದು ನಿಮ್ಮ ಕಿವಿಯನ್ನು ಕೀಟಗಳ ಕಚ್ಚುವಿಕೆಯಿಂದ ರಕ್ಷಣೆ ಮಾಡುತ್ತದೆ .

ಕಿವಿಯೊಳಗೆ ಹುಳುವಿನ ಇನ್ನಾವುದಾದರೂ ಭಾಗ ಉಳಿದಿದೆಯಾ ಎಂದು ಪರೀಕ್ಷೆ ಮಾಡಿಸಿಕೊಳ್ಳಿ ,ಇದ್ದರೆ ಅದನ್ನು ತೆಗೆದು ಹಾಕಿ .

ಇಷ್ಟಾದರೂ ಹುಳು ಹೊರಗೆ ಬಂದಿಲ್ಲ ಎಂದಾದ್ರೆ ಡಾಕ್ಟರ್ ರ ಬಳಿ ಸಕ್ಷನ್ ಮಾಡಿಸಿಕೊಂಡು ಹುಳು ತೆಗೆದು ಹಾಕಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top