ಒತ್ತಾಯವಾಗಿ ಹಿಂದಿ ಹೇರಿಕೆ ಮಾಡಲು ಪಿತೂರಿ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ.
ಭಾರತದ ಕೇಂದ್ರ ಸರ್ಕಾರವು ಪ್ರಾದೇಶಿಕ ಭಾಷೆಗಳ ರಾಜ್ಯಗಳಲ್ಲಿ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರುತ್ತಿದೆ. ಆಯಾ ರಾಜ್ಯಗಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಹೋರಾಟಗಳನ್ನು ಮಾಡುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರ ಮತ್ತು ತನ್ನ 88 ಸಚಿವಾಲಯದ ಮಂತ್ರಿಗಳಿಗೆ ಎಲ್ಲಾ ರಾಜ್ಯಗಳಲ್ಲಿ ನೀಡಲಾಗುವ ಸರ್ಕಾರಿ ಜಾಹೀರಾತುಗಳಲ್ಲಿ ಇಂಗ್ಲೀಷ ಅಥವಾ ಪ್ರಾದೇಶಿಕ ಭಾಷೆಯ ಜೊತೆ ಹಿಂದಿಯನ್ನು ಅಳವಡಿಸಬೇಕು ಎಂದು ಆದೇಶಿಸಿದೆ.ಈ ಮೂಲಕೆ ಕೇಂದ್ರಸರ್ಕಾರವು ಮತ್ತೊಮ್ಮೆ ಒತ್ತಾಯವಾಗಿ ಹಿಂದಿಹೇರಿಕೆಯನ್ನು ಮಾಡಲು ಸಂಚನ್ನು ಮಾಡಿ ಹಿಂದಿ ಹೇರಿಕೆಯನ್ನು ಮಾಡುತ್ತಿದೆ.
ಹೊಸ ನೀತಿಯಂತೆ ಪ್ರಸ್ತುತ, ಪ್ರಿಂಟ್ ಮೀಡಿಯಾ ಪ್ರಕಾರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವಾಲಯ,ಮತ್ತು ಇಲಾಖೆಗಳು ತಮ್ಮ ಜಾಹಿರಾತು ಬಜೆಟ್ ನ ಒಟ್ಟು ಹಣದಲ್ಲಿ 30%ರಷ್ಟು ಹಣವನ್ನು ಇಂಗ್ಲೀಷ್ ವಾರ್ತಾಪತ್ರಿಕೆಗಳಲ್ಲಿ, 35% ರಷ್ಟು ಮೊತ್ತವನ್ನು ಹಿಂದಿ ಪತ್ರಿಕೆಗಳಲ್ಲಿ ಮತ್ತು 35% ರಷ್ಟು ಹಣವನ್ನು ಪ್ರಾದೇಶಿಕ ಭಾಷೆಯ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಲು ಖರ್ಚು ಮಾಡಬೇಕಾಗಿದೆ.
ಎಲ್ಲಾ ಸಚಿವಾಲಯಗಳು ತಮ್ಮ ಸರ್ಕಾರಿ ಜಾಹಿರಾತುಗಳ ಅರ್ಧದಷ್ಟು ಜಾಹೀರಾತುಗಳನ್ನು ಹಿಂದಿಯಲ್ಲಿ ನೀಡಬೇಕು ಎಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.ಈ ವರ್ಷದ ಮಾರ್ಚ್ 31 ರಂದು ಯಾವುದೇ ಸರ್ಕಾರಿ ಸಚಿವಾಲಯ ಹೊರಡಿಸಿದ ಪ್ರತಿ ಜಾಹಿರಾತಿನ್ನೂ ಕೂಡಾ ಹಿಂದಿ ಭಾಷೆಯಲ್ಲಿ ಕಡ್ಡಾಯವಾಗಿ ನೀಡಲಾಗುವುದು ಎಂದು ಅಧಿಸೂಚನೆಯನ್ನು ಸಮಿತಿಯ ಅಧ್ಯಕ್ಷರು ಹೊರಡಿಸಿದ್ದರು. ಜೂನ್ 30 ರ ನಂತರ ಎಲ್ಲಾ 88 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ತಮ್ಮ ಜಾಹೀರಾತುಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುಕೊಳ್ಳುವಂತೆ ಕೇಂದ್ರವು ಪತ್ರವೊಂದನ್ನು ಕಳುಹಿಸಿದೆ.
ಪ್ರಾದೇಶಿಕ ಭಾಷೆಗಳ ರಾಜ್ಯಗಳಲ್ಲಿ ಹಿಂದಿಯನ್ನು ಪ್ರಚಾರ ಮಾಡಲು ಕೇಂದ್ರ ಸರ್ಕಾರ ಪಿತೂರಿ ಮಾಡಿದೆ. ಹಿಂದಿಗಳೇ ಇಲ್ಲದ ರಾಜ್ಯಗಳಲ್ಲಿ ಹಿಂದಿ ಜಾಹಿರಾತನ್ನು ನೀಡಲು 35% ರಸ್ತು ಹಣವನ್ನು ಖರ್ಚು ಮಾಡುವುದು ಎಷ್ಟು ಸರಿ, ಈ ರೀತಿ ಮಾಡುವುದರಿಂದ ಪ್ರಾದೇಶಿಕ ಭಾಷೆಗಳು ತಮ್ಮ ಆದ್ಯತೆಯನ್ನು ಕಳೆದುಕೊಳ್ಳುತ್ತವೆ. ಈ ನಡೆಯಿಂದ ಹಿಂದಿ ಹೇರಿಕೆಯ ವಿವಾದವು ಮತ್ತೆ ಜೀವಪಡೆದುಕೊಂಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
