fbpx
ಜೀವನ ಕ್ರಮ

ದೇಹಾಕರ್ಷಣೆ ಮತ್ತು ನಿಜವಾದ ಪ್ರೀತಿಗೆ ಇರೋ 9 ವ್ಯತ್ಯಾಸಗಳು ನಾಜೂಕಾಗಿ ತಿಳ್ಕೊಳ್ಳಿ

ಸಂಗಾತಿ ಹೀಗೆ ಮಾಡಿದರೆ ಅದು ನಿಜವಾದ ಪ್ರೀತಿ.

ಯಾರು ಕೂಡ ತನ್ನ ಸಂಗಾತಿಯಮೇಲೆ ಪ್ರೀತಿಯನ್ನು ನೇರವಾಗಿ ತೋರಿಸುವುದಿಲ್ಲ.ಪ್ರತಿಯೊಬ್ಬರೂ ತಮ್ಮ ಸಂಗಾತಿಯ ಮೇಲೆ ತೋರಿಸುವ ಪ್ರೀತಿ ಬೇರೆ ಬೇರೆಯಾಗಿರುತ್ತದೆ. ಮಿಲನದ ನಂತರ ಸಂಗಾತಿ ಹೀಗೆಲ್ಲ ಮಾಡುದ್ರೆ ಅವರದ್ದು ನಿಜವಾದ ಪ್ರೀತಿ ಎಂದರ್ಥ.ಅವರ ವರ್ತನೆಯನ್ನು ಗಮನಿಸಿದರೆ ಅವರ ಪ್ರೀತಿ ಎಂತದ್ದು ಎಂದು ನಿಮಗೆ ತಿಳಿಯುತ್ತದೆ.ಮಿಲನದ ಬಳಿಕ ನಿಮ್ಮ ಸಂಗಾತಿ ಈ ರೀತಿಯೆಲ್ಲಾ ಮಾಡಿದರೆ ಅವರ ಪ್ರೀತಿ ನಿವಾದದ್ದು ಎಂಬುದನ್ನು ತಿಳಿದುಕೊಳ್ಳಬಹುದು.

1.ಯಾರಿಗೆ ಲೈಂಗಿಕ ಕ್ರಿಯೆಯಲ್ಲಿ ತುಂಬಾ ಅವಸರ ಇರುತ್ತದೆಯೋ ಅಂತಹವರು ನಿಜವಾಗಿ ತನ್ನ ಸಂಗಾತಿಯನ್ನ ಪ್ರೀತಿ ಮಾಡೋದಿಲ್ಲ.

2.ತನ್ನ ಸಂಗಾತಿಯನ್ನು ನಿಜವಾಗಿ ಪ್ರೀತಿಸುವವನು ಮೊದಲು ಪ್ರೀತಿಯಿಂದ ಮಾತನಾಡಿ,ನಂತರ ನಿಮ್ಮ ಮನಸ್ಸು ಹಗುರಾದ ಮೇಲೆ ಮಿಲನಕ್ರಿಯೆಗೆ ಮುಂದಾಗುತ್ತಾನೆ.

3.ಯಾವ ವ್ಯಕ್ತಿಗೆ ಮಿಲನಕ್ರಿಯೆಯು ಆನಂದಿಸುವುದಕ್ಕೆ ಇರುವ ಸಂದರ್ಭವಾಗಿದೆಯೋ ಅವರು ಕೇವಲ ಸಂಭೋಗದ ಮೇಲೆ ಗಮನ ಹರಿಸುತ್ತಾರೆ.

4.ನಿಮ್ಮ ಸಂಗಾತಿ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದರೆ ಮಿಲನಕ್ರಿಯೆ ನಡೆದ ಮೇಲೆ ಆತ ನಿಮ್ಮ ಹಣೆಗೊಂದು ನಯವಾದ ಮುತ್ತನ್ನು ನೀಡುತ್ತಾನೆ.

5.ನಿಮ್ಮ ಸಂಗಾತಿ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದರೆ, ರಾತ್ರಿ ಕಳೆದು ಬೆಳಗಾದ ತಕ್ಷಣ ಆತ ನಿಮಗಿಂತ ಮೊದಲಿಗೆ ಎದ್ದಿದ್ದರೆ ನಿಮ್ಮ ಕೆನ್ನೆಗೊಂದು ಮುತ್ತು ಕೊಡುತ್ತಾನೆ.

6.ಮಿಲನಕ್ರಿಯೆ ಮುಗಿದ ತಕ್ಷಣ ಪ್ರೀತಿ ಮುಗಿದು ಹೋಗೋದಿಲ್ಲ.ಮಿಲನಕ್ರಿಯೆಯಾದ ಮೇಲೆ ಆತ ನಿಮಗೆ ಫ್ರೆಶ್‌ ಆಗಲು ಸಹಾಯ ಮಾಡುವುದು, ನಿಮ್ಮನ್ನು ನೀವು ಕ್ಲೀನ್ ಮಾಡಿಕೊಳ್ಳಲು ಸಹಾಯ ಮಾಡುತ್ತಾನೆ.

7.ಯಾರು ಮಿಲನದ ಬಳಿಕ ತಮ್ಮ ಕೆಲಸ ಮುಗಿದು ಹೋಯಿತು ಎಂದು ಸುಮ್ಮನೆ ಮಲಗುತ್ತಾರೋ ಅವರಿಗೆ ನಿಮ್ಮ ಮೇಲೆ ನಿಜವಾದ ಪ್ರೀತಿ ಇರುವುದಿಲ್ಲ.

8.ನಿಮ್ಮ ಸಂಗಾತಿ ನಿಜವಾಗಿ ನಿಮ್ಮನ್ನು ಪ್ರೀತಿಸುತ್ತಿದ್ದರೆ ಅವರು ನಿಮ್ಮ ಭಾವನೆಗಳಿಗೆ ಅವರು ಸ್ಪಂಧಿಸುತ್ತಾರೆ. ಮಿಲನದ ನಂತರ ರೋಮ್ಯಾಂಟಿಕ್‌ ಮಾತುಕತೆಗಳನ್ನು ನಡೆಸುತ್ತಾರೆ.

9.ನಿಮ್ಮ ಸಂಗತಿಯು ನಿಮ್ಮ ಸೌಂದರ್ಯದ ಬಗ್ಗೆ, ನಿಮ್ಮ ಮಾತು, ಹೀಗೆ ಒಂದಲ್ಲ ಒಂದು ವಿಷಯವನ್ನು ಪ್ರಸ್ತಾಪಿಸಿ ಆತ ನಿಮ್ಮನ್ನು ಹೊಗಳಿದ್ರೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಿಜವಾದ ಪ್ರೀತಿಯಿದೆಯೆಂದರ್ಥ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top