ಸ್ಟ್ರೆಚ್ ಮಾರ್ಕ್ಸ್ ಗೆ ಸುಲಭವಾದ ಮನೆ ಮದ್ದು :
ಬಿಳಿ ಅಥವಾ ಗುಲಾಬಿ ಬಣ್ಣದ ವರ್ಣಗಳು ಚರ್ಮದ ಮೇಲೆ ಕಾಣಿಸಿಕೊಳ್ಳುವ ಕ್ರಿಯೆಗೆ ಸ್ಟ್ರೆಚ್ ಮಾರ್ಕ್ಸ್ ಎಂದು ಕರೆಯುತ್ತಾರೆ.
ಪ್ರಮುಖವಾಗಿ ಕಿಬ್ಬೊಟ್ಟೆಯ ಮೇಲೆ , ತೊಡೆ , ತೊಳುಗಳು , ಪೃಷ್ಠ ಮತ್ತು ಸ್ತನಗಳ ಮೇಲೆ ಕಾಣಿಸಿಕೊಳ್ಳುತ್ತದೆ.
ಗರ್ಭಧಾರಣೆ ಇದರ ಹಿಂದಿರುವ ಮುಖ್ಯ ಕಾರಣ , ತೂಕದ ಹಠಾತ್ ಏರಿಕೆ ಅಥವಾ ಇಳಿಕೆ , ಅಧಿಕವಾದ ದೇಹದ ಬೆಳವಣಿಗೆ , ಅನುವಂಶಿಕತೆ ಅಂಶಗಳು, ಒತ್ತಡ ಮತ್ತು ಭೌತಿಕ ಸ್ಥಿತಿಯಲ್ಲಿ ಬದಲಾವಣೆ ಇವು ಮುಖ್ಯವಾದ ಕಾರಣಗಳು.
ಚರ್ಮ ಮೂರು ಮುಖ್ಯ ಪದರಗಳನ್ನು ಒಳಗೊಂಡಿರುತ್ತದೆ: ಡೇರ್ಮಿಸ್ (ಹೊರ ಪದರ), ಎಪಿಡರ್ಮಿಸ್ (ಮಧ್ಯಮ ಪದರ) ಮತ್ತು ಹೈಪೊಡೆರ್ಮಿಸ್ (ಆಳವಾದ ಪದರ)
ಮಾಧ್ಯಮ ಪದರ ಹಾಗು ಹೊರ ಪದರದ ನಡುವಿನ ಬೆಸುಗೆ ಕಡಿಮೆಯಾಗಿ ಎಳೆಯಲ್ಪಟ್ಟ ಚರ್ಮವೇ ಸ್ಟ್ರೆಚ್ ಮಾರ್ಕ್ಸ್ .
ತಡೆಯುವುದು ಹೇಗೆ ?
ಹರಳೆಣ್ಣೆ:
ಸುಕ್ಕುಗಳು, ಕಪ್ಪು ಕಲೆಗಳು ಮತ್ತು ಗುಳ್ಳೆ ಇನ್ನಿತರ ಚರ್ಮದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಹರಳೆಣ್ಣೆ ಬಳಸಲಾಗುತ್ತದೆ .
ಹರಳೆಣ್ಣೆ ಯನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ವೃತ್ತಾಕಾರವಾಗಿ 5 -10 ನಿಮಿಷ ಮಸಾಜ್ ಮಾಡಿ, ಮಸಾಜ್ ಮಾಡಿದ ಜಾಗವನ್ನು ಕಾಟನ್ ಬಟ್ಟೆಯಿಂದ ಸುತ್ತಿ ನಂತರ ಬಿಸಿ ನೀರಿನ ಶಾಖವನ್ನು ಕೊಡಬೇಕು , ಶಾಖವನ್ನು ಕೊಡಲು ನೀರಿನ ಬಾಟಲಿ ಅಥವಾ ಹೀಟಿಂಗ್ ಪ್ಯಾಡ್ ಬಳಸಬಹುದು.
ವಾರಕ್ಕೆ ಮೂರು ಸಾರಿ ಹೀಗೆ ಮಾಡಬೇಕು.
ರೋಸೆಹಿಪ್ ಎಣ್ಣೆ(rosehip oil) :
ಇದನ್ನು ಟೀ ಟ್ರೀ ಆಯಿಲ್ ಜತೆ ಮಿಕ್ಸ್ ಮಾಡಿ ಹೊಟ್ಟೆಗೆ ಮಸಾಜ್ ಮಾಡಿ ಇದರಿಂದ ಸ್ಟ್ರೆಚ್ ಮಾರ್ಕ್ಸ್ ಕಲೆ ಉಳಿಯುವುದಿಲ್ಲ.
ಕೋಕೋ ಬೆಣ್ಣೆ(cocoa butter) :
ಇದು ತ್ವಚೆಗೆ ನೈಸರ್ಗಿಕ ತೇವಾಂಶವನ್ನು ಕೊಡುತ್ತದೆ ಅಲ್ಲದೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಆದ್ದರಿಂದ ದಿನಕ್ಕೆ ಎರಡು ಬಾರಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಮಸಾಜ್ ಮಾಡಿಕೊಂಡರೆ ಕಲೆ ಸಂಪೂರ್ಣ ಮಾಯವಾಗುತ್ತದೆ
ಆಲೋ ವೆರಾ (ಲೋಳೆ ಸರ ):
ತೊಂದರೆಗೊಳಗಾದ ಚರ್ಮದ ಪ್ರದೇಶವನ್ನು ಅಲೋ ವೆರಾ ಜೆಲ್ ನಿಂದ 15 ನಿಮಿಷಗಳ ಕಾಲ ಉಜ್ಜಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
ಅಥವಾ ಅಲೋ ವೆರಾ ಜೆಲ್ ಐದು ವಿಟಮಿನ್ A ಕ್ಯಾಪ್ಸೂಲ್ಗಳು 10 ವಿಟಮಿನ್ ಈ ಕ್ಯಾಪ್ಸೂಲ್ಗಗಳ ತೈಲ ಮಿಶ್ರಣವನ್ನು ಸೇರಿಸಿ 15 ನಿಮಿಷಗಳ ಕಾಲ ಉಜ್ಜಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ದಿನವೂ ಈ ಪ್ರಕ್ರಿಯೆ ಮುಂದುವರಿಸಿ.
ಮೊಟ್ಟೆಯ ಬಿಳಿ ಭಾಗ :
2 ಮೊಟ್ಟೆಯ ಬಿಳಿ ಭಾಗ ತೊಂದರೆಗೊಳಗಾದ ಚರ್ಮದ ಪ್ರದೇಶಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಬೇಕು , ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಇದಾದ 5 ನಿಮಿಷಗಳ ನಂತರ ಆಲಿವ್ ಎಣ್ಣೆಯ ಮಸಾಜ್ ಮಾಡಿಕೊಳ್ಳಬೇಕು.
ನಿಂಬೆ ರಸ :
ನಿಂಬೆ ರಸವನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ವೃತ್ತಾಕಾರವಾಗಿ 5 -10 ನಿಮಿಷ ಉಜ್ಜಿ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ,ಬೇಕಾದರೆ ಸೌತೆಕಾಯಿ ರಸವನ್ನು ಸಹ ಸೇರಿಸಬಹುದು.
ಸಕ್ಕರೆ :
ಒಂದು ಚಮಚ ಸಕ್ಕರೆಗೆ ಬಾದಾಮಿ ಎಣ್ಣೆಯನ್ನು ಬೆರೆಸಿ , ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ ಬಿಡಬೇಕು ಒಂದು ತಿಂಗಳು ಸ್ನಾನಕ್ಕೆ ಹೋಗುವ ಮುನ್ನ ಈ ಕೆಲಸ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ದೂರವಾಗುತ್ತದೆ.
ಆಲೂಗಡ್ಡೆ :
ಆಲೂಗಡ್ಡೆ ಸಣ್ಣ ತುಂಡುಗಳಾಗಿ ಕತ್ತರಿಸಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಉಜ್ಜಿ ಸ್ವಲ್ಪ ಸಮಯದ ನಂತರ ತೊಳೆಯಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
