ಅಪರೂಪದ ಕನ್ನಡತಿ ಅಪರ್ಣಾ
ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿರುವ ಅಪರ್ಣಾ. ಈ ಅಪರ್ಣಾ ತೀರಾ ನಮ್ಮ ಪಕ್ಕದ ಮನೆಯರು ಅನ್ನಿಸಿಬಿಡ್ತಾರೆ, ಎಷ್ಟೇ ಸಾಧನೆಗಳ ಶಿಖರವನ್ನು ಏರಿದರು ತೀರಾ ಸರಳ, ಸಜ್ಜನ, ಮೃದು ಸ್ವಾಭಾವಿ, ಎಲ್ಲಕ್ಕೂ ಮಿಗಿಲಾಗಿ ಸ್ವಚ್ಛ ಮನಸಿನ ಅಚ್ಚ ಕನ್ನಡತಿ, ಈಗಿನ ಟಿವಿ ನಿರೂಪಕರು ಹಾಗೂ ರೇಡಿಯೋ ಜಾಕಿಗಳು ಇವರಿಂದ ಕಲೀಬೇಕಾದದ್ದು ತುಂಬಾ ಇದೆ ಒಂದೊಂದು ಸರಿ ಇವ್ರೆಲ್ಲ ಕ್ಲಾಸ್ ತಗೊಂಡ್ ಕೆಲಸ ಮಾಡ್ಲಿ ಅಪರ್ಣ ಅವ್ರ ಹತ್ರ ಅಂತಾನೂ ಅನ್ಸಿದೆ .ಯಾರು ಈ ಕನ್ನಡತಿ ?
1984 ರಲ್ಲಿ ಪುಟ್ಟಣ್ಣ ಕಣಗಾಲರ ಮಸಣದ ಹೂವು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿ ಅಂಬರೀಷ್ ,ಜಯಂತಿಯವರೊಂದಿಗೆ ಪುಟ್ಟ ಹುಡುಗಿಯಾಗಿ ದೊಡ್ಡ ಮಟ್ಟದ ಅಭಿನಯ ಮಾಡಿದ ಕಲಾವಿದೆ ಈಕೆ.
All India Radioದ ರೇಡಿಯೋ ನಿರೂಪಕಿಯಾಗಿ 1993 ರಲ್ಲಿ ತಮ್ಮ ಕೆಲಸವನ್ನು ಶುರು ಮಾಡುತ್ತಾರೆ ಹಾಗೂ AIR FM Rainbow, ದ ಮೊದಲನೇ ರೇಡಿಯೋ ನಿರೂಪಕಿಯಾಗಿ ಎಂಬ ಹೆಗ್ಗಳಿಕೆ ಕೂಡ ಇವರದ್ದು , ಇಪ್ಪತ್ತಕ್ಕೂ ಹೆಚ್ಚು ವರ್ಷಗಳು DD ಚಂದನದಲ್ಲಿ ಕಾರ್ಯ ನಿರ್ವಹಿಸಿದ್ದಾರೆ .
ನಿರೂಪಣೆಯಲ್ಲಿ ದಾಖಲೆ !!
1998 ರ ದೀಪಾವಳಿ ಸಂಧರ್ಭದಲ್ಲಿ ರಸಪ್ರಶ್ನೆ ಕಾರ್ಯಕ್ರಮಒಂದನ್ನು ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಇದಲ್ಲದೆ ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ .
ಅಭಿನಯದಲ್ಲೂ ಎತ್ತಿದ ಕೈ !!
ಮುಕ್ತ, ಪ್ರೀತಿ ಇಲ್ಲದ ಮೇಲೆ ಇನ್ನು ಅನೇಕ ಧಾರಾವಾಹಿಗಳು ಮತ್ತು ಮಸಣದ ಹೂವು, ಇನ್ಸ್ಪೆಕ್ಟರ್ ವಿಕ್ರಂ, ನಮ್ಮೂರ ರಾಜ, ಒಂದಾಗಿ ಬಾಳು ಇನ್ನು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದರು. ಕೇವಲ ಸೀರಿಯಸ್ ಪಾತ್ರ ಮಾತ್ರವಲ್ಲದೆ ನಾನು ಹಾಸ್ಯವನ್ನ ಮಾಡಬಲ್ಲೆ ಎಂದು ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ಮಜಾ ಟಾಕೀಸ್ ನಲ್ಲಿ ನಿರೂಪಿಸಿದ್ದಾರೆ.
*********ಅಪರೂಪದ ಅಪರ್ಣರವರಿಗೆ ಶುಭವಾಗಲಿ*********
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
