ರಿಟೈರ್ಮೆಂಟ್ ದಿನವೇ ಪಿ.ಎಫ್ ಹಣ ನಿಮ್ಮ ಕೈಗೆ ಸಿಗುತ್ತೆ..
ರಿಟೈರ್ಮೆಂಟ್ ದಿನವೇ ಉದ್ಯೋಗಿಗಳ ಪಿಂಚಣಿ ಹಣ ಮತ್ತು ಇತರೆ ಮಾಹಿತಿಗಳನ್ನು ಸರಿಯಾಗಿ ನೀಡಬೇಕೆಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಅಧಿಕಾರಿಗಳಿಗೆ ನಿರ್ದೇಶನ ಮಾಡಿದೆ.
ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ರಾಜ್ಯಸಭೆಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ
‘ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ 1952 ಮತ್ತು ಪಿಂಚಣಿ ಯೋಜನೆ 1995ರ ಹಣ ಪಾವತಿ ಮತ್ತು ಪಿಂಚಣಿ ಸೌಲಭ್ಯಗಳನ್ನು ನಿವೃತ್ತರಾಗುವ ದಿನವೇ ಇತ್ಯರ್ಥಪಡಿಸಲು ಸೂಚಿಸಲಾಗಿದೆ’
ಗ್ರಾಚುಟಿ ಪಾವತಿ ಕಾಯ್ದೆ 1972ರ ಅನ್ವಯ ಗ್ರಾಚುಟಿ ಮೊತ್ತವನ್ನು 30ದಿನದೊಳಗೆ ಉದ್ಯೋಗಿಗೆ ನೀಡತಕ್ಕದ್ದು ಎಂದು ಸಚಿವರು ಹೇಳಿದ್ದಾರೆ.
ಸುಮಾರು 48.85 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 55.51 ಲಕ್ಷ ಪಿಂಚಣಿದಾರರಿದ್ದಾರೆ. ನಿವೃತ್ತಿ ದಿನವೇ ಇಪಿಎಫ್, ಪಿಂಚಿಣಿ, ಗ್ರಾಚುಟಿ ಮೊತ್ತವು ಉದ್ಯೋಗಿಗಳ ಕೈ ಸೇರುವಂತೆ ಮಾಡುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
