ಜರಾಸಂಧನ ಸಂಹಾರ.
ಒಮ್ಮೆ ಪಾಂಡವರು ರಾಜಸೂಯ ಯಾಗವನ್ನು ಮಾಡಲು ಬಯಸಿದರು ಮೊದಲು ದ್ವಾರಕೆಯಿಂದ ಶ್ರೀ ಕೃಷ್ಣನನ್ನು ಕರೆಸಿದರು. ಯುಧಿಷ್ಠಿರನು ರಾಜಸೂಯ ಯಾಗವನ್ನು ಮಾಡುವ ಆಸೆಯನ್ನು ಪ್ರಕಟಿಸಿದಾಗ ಎಲ್ಲರೂ ಸಂತೋಷಪಟ್ಟರು ರಾಜಸೂಯ ಮಾಡುವವನು ಚಕ್ರವರ್ತಿಯಾಗಿರಬೇಕು. ಸಾಮಂತನಾಗಿರಬಾರದು. ಎಲ್ಲ ರಾಜರೂ ಅವನನ್ನು ಚಕ್ರವರ್ತಿಯೆಂದು ಒಪ್ಪಿಕೊಳ್ಳಬೇಕಾಗುವುದು. ಯಾರಾದರೂ ವಿರೋಧ ಮಾಡಿದರೆ ಅವರೊಂದಿಗೆ ಯುದ್ಧ ಮಾಡಿ ಗೆಲ್ಲಬೇಕಾಗುವುದು.
ಮಗಧ ರಾಜ್ಯದ ಅರಸ ಜರಾಸಂಧನು ತಾನೇ ಬಲಿಷ್ಠನೆಂದು ತಿಳಿದಿದ್ದನು.ಅವನು ಬಹಳ ದುಷ್ಟ ಮತ್ತು ಕ್ರೂರಿಯಾಗಿದ್ದಾನೆ.ಅವನ ದುರಾಡಳಿತಕ್ಕೆ ಮಿತಿಯೇ ಇರಲಿಲ್ಲ .ಅವನು 84 ರಾಜರುಗಳನ್ನು ಸೆರೆಯಲ್ಲಿಟ್ಟಿದ್ದನು.ಅವರನ್ನು ಪಶುಗಳ ರೀತಿಯಲ್ಲಿ ಕಟ್ಟಿಹಾಕಿ ನೀರು ಕುಡಿಯಲು ಒಯ್ಯುತ್ತಿದ್ದನು,ಮತ್ತು ತಿನ್ನಲು ಕಡಲೆಯನ್ನು ಕೊಡುತ್ತಿದ್ದನು.
ಮಗಧನನ್ನೇ ಸೋಲಿಸಿದರೆ ಉಳಿದ ರಾಜರು ಸಹ ಅಧೀನರಾಗುತ್ತಾರೆ ಎಂಬ ಭಾವನೆ ಪಾಂಡವರಿಗಾಯಿತು. ಆ ರಾಜರು ಸಹ ಮಿತ್ರ ಭಾವದಿಂದ ಕೃತಜ್ಞತೆ ಸೂಚಿಸುತ್ತಾರೆ ಎಂದು ತಿಳಿದರು.
ಭೀಮಾರ್ಜುನರೊಂದಿಗೆ ಸೇರಿ ಕೃಷ್ಣನು ಮಗಧನನ್ನು ಸೋಲಿಸುವ ಕಾರ್ಯಕ್ಕಾಗಿ ಮೂವರು ಸಹ ಬ್ರಾಹ್ಮಣ ವೇಷ ಧರಿಸಿ ಜರಾಸಂಧನ ಅರಮನೆಗೆ ಬಂದರು.
ಜರಾಸಂಧನು ಯಾರು ? ಎಂದು ದೃತರಾಷ್ಟ್ರ ಮತ್ತು ಅರ್ಜುನ ಕೇಳಿದಾಗ ಕೃಷ್ಣ ಹೇಳಿದ, ಜರಾಸಂಧನು ಬೃಹದ್ರಥನ ಮಗ. ಬೃಹದ್ರಥನಿಗೆ ಮಕ್ಕಳಿರಲಿಲ್ಲ. ಆಗ ಆಸ್ಥಾನಕ್ಕೆ ಒಬ್ಬ ಚಂಡ ಕೌಶಿಕನೆಂಬ ಮುನಿ ಬಂದನು. ಅವರು ಒಂದು ಹಣ್ಣನ್ನು ತಿನ್ನಲು ಕೊಟ್ಟರು. ಬೃಹದ್ರಥನು ತನ್ನ ಇಬ್ಬರು ಹೆಂಡತಿಯರಿಗೆ ಅರ್ಧ ಮಾಡಿ ಕೊಟ್ಟನು. ಅವರಿಬ್ಬರು ಅರ್ಧ ಭಾಗವನ್ನು ತಿಂದು ಅರ್ಧ ಶರೀರದ ಮಕ್ಕಳನ್ನು ಹೆತ್ತರು,ಅನಂತರ ಆ ಅರ್ಧ ಶರೀರವನ್ನು ಇಬ್ಬರು ಹೊರಗೆ ಇದ್ದ ಕಸದ ಬುಟ್ಟಿಗೆ ಎಸೆದರು.
ಆಗ ಅದೇ ಸಮಯದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಜರಾ ಎಂಬ ರಾಕ್ಷಸಿಯು ಆ ಎರಡು ಶರೀರದ ಭಾಗಗಳನ್ನು ಸೇರಿಸಿದಳು. ಆ ಮಗುವನ್ನು ಅವರಿಗೆ ಕೊಟ್ಟು ಹೋದಳು. ಅದರಿಂದ ಜರಾಸಂಧ ಎಂಬ ಹೆಸರು ಅವನಿಗೆ ಬಂದಿತು . ಹೀಗೆ ಅವನ ಜನ್ಮವಾಯಿತು.
ಶ್ರೀ ಕೃಷ್ಣನು ಮಗಧನ ಜನ್ಮ ರಹಸ್ಯವನ್ನು ಭೀಮಾರ್ಜುನರಿಗೆ ತಿಳಿಸಿದಾಗ ಅವರಿಗೆ ಆಶ್ಚರ್ಯವಾಯಿತು. ಮಗಧ ರಾಜ್ಯವನ್ನು ಬ್ರಾಹ್ಮಣ ವೇಷದಲ್ಲಿ ಪ್ರವೇಶಿಸಿದ ಕೃಷ್ಣ ಭೀಮಾರ್ಜುನರು ಮಗಧನಿಗೆ ಸಂದೇಶ ಕಳುಹಿಸಿದರು.
ಎಲ್ಲಾ 84 ಜನ ರಾಕ್ಷಸರನ್ನು ಬಿಡುಗಡೆ ಮಾಡು ಇಲ್ಲವೆಂದರೆ ಮಲ್ಲಯುದ್ದಕ್ಕೆ ಸಿದ್ದನಾಗು ಎಂದನು ಶ್ರೀಕೃಷ್ಣ. ಅದಕ್ಕೆ ಜರಾಸಂಧನು ನೀನು ಹಾಲು ಮಾರುವವನ ಮಗ ನೀನು ಮಲ್ಲ ಯುದ್ಧ ಮಾಡಲು ಸಾಧ್ಯವಿಲ್ಲ.ಇನ್ನೂ ಈ ಅರ್ಜುನ ಬರೀ ಬಾಣಗಳನ್ನು ಬಿಡುತ್ತಾನೆ ಇವನ ಜೊತೆಯೂ ಮಲಯುದ್ದ ಮಾಡಲು ಸಾಧ್ಯವಿಲ್ಲ.ಇವನು ಬರಲಿ ಭೀಮಸೇನ ಇವನ ಜೊತೆ ನಾನು ಯುದ್ಧ ಮಾಡುವೆ. ಹೀಗೆ ರಾಜರನ್ನು ಬಿಡುಗಡೆ ಗೊಳಿಸದೆ ಮಲ್ಲ ಯುದ್ಧಕ್ಕೆ ಜರಾಸಂಧನು ಸಿದ್ಧನಾದನು.
ಹೀಗೆ ಜರಾಸಂಧನು ಕೃಷ್ಣ ಭೀಮಾರ್ಜುನರಲ್ಲಿ ಭೀಮನನ್ನೇ ಯುದ್ಧಕ್ಕೆ ಆಹ್ವಾನಿಸಿ. ಅವರಿಬ್ಬರು ಹಸ್ತಲಾಘವ ಮಾಡಿ ಸ್ನೇಹಿತರೆಂಬಂತೆ ಯುದ್ಧವನ್ನು ಆರಂಭಿಸಿದರು ಭುಜಗಳನ್ನು ಅಪ್ಪಳಿಸಿ ಪರಸ್ಪರ ತಿರುಗಿಸಿ ಎಸೆದರು.ಸಿಂಹಗಳಂತೆ ಕಾದಾಡಿದರು.ಜರಾಸಂಧನನ್ನು ಭೀಮನು ತಿರುಗಿಸಿ ರಭಸದಿಂದ ಕೆಳಗೆ ಹಾಕಿದನು.ಹೀಗೆ 14 ದಿನಗಳ ವರೆಗೆ ದೀರ್ಘಕಾಲದ ಯುದ್ಧವು ನೆಡೆಯಿತು.14 ನೆ ದಿನ ರಾತ್ರಿ ಭೀಮನು ಜರಾಸಂಧನ ಶರೀರವನ್ನು ಕಾಲು ಹಿಡಿದು ಸಿಗಿದು ಎರಡು ಭಾಗ ಮಾಡಿದನು.ಆಗ ಜರಾಸಂಧನ ಶರೀರ ಮತ್ತೆ ಒಂದಾಯಿತು.ಯಾಕೆ ಹೀಗಾಗುತ್ತಿದೆ ಎಂದು ಭೀಮನಿಗೆ ತಿಳಿಯದಾದಾಗ. ಕೃಷ್ಣನು ಭೀಮನಿಗೆ ಒಂದು ಉಪಾಯ ತೋರಿಸಿಕೊಟ್ಟನು.ಒಂದು ನೆಲ್ಲನ್ನು (ಹುಲ್ಲು ಕಡ್ಡಿ) ತೆಗೆದುಕೊಂಡು ಎರಡು ತುಂಡು ಮಾಡಿ ಎಡಕೈನಲ್ಲಿ ಇದ್ದ ತುಂಡನ್ನು ಬಲದ ಕಡೆಗೆ ಎಸೆದನು , ಬಲಗಡೆ ಕೈನಲ್ಲಿ ಇದ್ದ ನೆಲ್ಲಿನ ತುಂಡನ್ನು ಎಡಗಡೆಗೆ ಎಸೆದನು.
ಇದು ಭೀಮನಿಗೆ ಅರ್ಥವಾಯಿತು .ಆಗ ಜರಾಸಂಧನ ಶರೀರವನ್ನು ಮತ್ತೆ ಎರಡು ಸೀಳಾಗಿ ತುಂಡರಿಸಿ ಮತ್ತೆ ಭೀಮನು ಕೃಷ್ಣನು ತೋರಿಸಿಕೊಟ್ಟ ಹಾಗೆ ಮಾಡಿದನು.ಆಗ ಮತ್ತೆ ಜರಾಸಂಧನ ಶರೀರ ಒಂದಾಗಲೇ ಇಲ್ಲ.ಜರಾಸಂಧನು ಭಯಂಕರವಾಗಿ ಘೋಳಿಡುತ್ತ ಸತ್ತು ಬಿದ್ದನು.
ಜರಾಸಂಧನ ಮಗ ಸಹದೇವನನ್ನು ಮಗಧ ದೇಶಕ್ಕೆ ರಾಜನನ್ನಾಗಿಸಿ ಉಳಿದ 84 ರಾಜರನ್ನು ಬಿಡುಗಡೆಗೊಳಿಸಿ ರಾಜಸೂಯ ಯಾಗವನ್ನು ಮುಂದುವರಿಸಿದರು.ಜರಾಸಂಧನು ರಾಜಸೂಯದ ದೊಡ್ಡ ಆತಂಕವಾಗಿದ್ದನು.ಅವನೇ ತೀರಿಕೊಂಡ ನಂತರ ಯಾರೂ ವೈರಿಗಳಿರಲಿಲ್ಲ.ಎಲ್ಲ ಕಡೆಗಳಲ್ಲಿಯೂ ಆಹ್ವಾನ ಪತ್ರಿಕೆ ಕಳಿಸಿ.ಯಾಗ ಶಾಲೆಯನ್ನು ಕಟ್ಟಿ,ರಾಜಸೂಯ ಯಾಗವನ್ನು ನಿಶ್ಚಿಂತೆಯಿಂದ ಕೌರವ ಪಾಂಡವರು ಎಲ್ಲರೂ ಸೇರಿ ಮಾಡಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
