fbpx
ಕರ್ನಾಟಕ

ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯವರ ಪ್ರಾಣ ಬಲಿದಾನದ ಕತೆ.

ಲಕ್ಷ್ಮಿದೇವಿ ಕೆಂಪೇಗೌಡರ ಮಗ ಸೋಮಣ್ಣ ಗೌಡರ (ದೊಡ್ಡವೀರಪ್ಪಗೌಡರು) ಯವರ ಪತ್ನಿ

1

ಕೆಂಪೇಗೌಡರು ಬೃಹತ್ ಕೋಟೆ ಕಟ್ಟುತಿರುವ ಸಂದರ್ಭದಲ್ಲಿ ದಕ್ಷಿಣದ ಹೆಬ್ಬಾಗಿಲಿನ ಕಂಬ ಪದೇ ಪದೇ ಎಷ್ಟು ಕಟ್ಟಿದರು ಕುಸಿದು ಬೀಳುತ್ತಿತ್ತು .

dacf789a-ae76-4c6d-b615-63bc63a8e5b4

ಎಷ್ಟು ಬಾರಿ ನಿಲ್ಲಿಸಿದರು ಮತ್ತೆ ಮತ್ತೆ ಬೀಳುತ್ತಿದ್ದ ಕಂಬದ ಬಗ್ಗೆ ತೀವ್ರ ಚಿಂತೆಗೆ ಒಳಗಾಗಿದ್ದ ಗೌಡರು ಆಸ್ಥಾನದ ಪುರೋಹಿತರನ್ನು ಸಂಪರ್ಕಿಸಿದಾಗ ಅವರು ಕೊಟ್ಟ ಸಲಹೆ ತುಂಬು ಗರ್ಭಿಣಿಯ ಬಲಿಯಾಗಿತ್ತು ,ಗೌಡರು ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು.

341a1a7f-63ad-4341-9263-f02ab81282bd

ಇದೆಲ್ಲವನ್ನು ಕೇಳುತ್ತ ನಿಂತಿದ್ದ ಗೌಡರ ಸೊಸೆ ಲಕ್ಷ್ಮಮ್ಮ ತನ್ನ ಮಾವನ ಯಾತನೆಯನ್ನು ಕೇಳಲಾರದೆ ತಮ್ಮ ಪ್ರಾಣವನ್ನು ಅರ್ಪಿಸುವ ನಿರ್ಧಾರ ಮಾಡಿಯೇ ಬಿಟ್ಟರು ,ಅಂತೆಯೇ ಅದೇ ದಿನ ಕಡು ಕತ್ತಲಿನಲ್ಲಿ ಯಾರಿಗೂ ತಿಳಿಯದಂತೆ ಕುಡುಗೋಲಿನಿಂದ ತಮ್ಮ ಜೀವದಾನ ಮಾಡಿದರು ,ಮಾರನೇ ದಿನ ಕೋಟೆಯ ದ್ವಾರ ಬೀಳದೆ ಇದ್ದದ್ದನ್ನು ಕಂಡು ಆಶ್ಚರ್ಯಚಕಿತರಾದರು ಮತ್ತು ಸೊಸೆಯ ಹೆಣವನ್ನು ಮಗ್ಗುಲಲ್ಲಿ ಕಂಡು ಸಂಕಟಪಟ್ಟುಕೊಂಡರು , ಅಸಲಿಗೆ ಇದು ಅವರ ಶತ್ರುಗಳ ಕುತಂತ್ರವಾಗಿತ್ತು .

ಕೋರಮಂಗಲದ ಬಳಿ ಲಕ್ಷ್ಮಮ್ಮ ನವರ ದೇವಾಲಯವಿದೆ ಹಾಗೂ ಸ್ಮಾರಕ ಸ್ಥಳವಿದೆ
ಸಾಧ್ಯವಾದರೆ ಒಮ್ಮೆ ಭೇಟಿ ಕೊಡಿ ಇಂದು ಬೆಂಗಳೂರು ನಗರದಲ್ಲಿ ನಾವು ಹಾಯಾಗಿ ಬದುಕು ಕಟ್ಟಿಕೊಳ್ಳಲು ಅನುವುಮಾಡಿ ಕೊಟ್ಟ ಹಿರಿಯರನ್ನು ನೆನೆದರೆ ನಮ್ಮ ಜೀವನ ಸಾರ್ಥಕ .

2

ಕೆಂಪೇಗೌಡರನ್ನು ಒಂದು ಜನಾಂಗಕ್ಕೆ ಸೀಮಿತ ಗೊಳಿಸಬೇಡಿ ಅವರು ಅವರ ಕುಟುಂಬವು ತಮ್ಮ ಸಕಲವನ್ನೂ ಎಲ್ಲಾ ಜಾತಿಯ ಧರ್ಮದ ಜನರ ಏಳಿಗೆಗಾಗಿ ಮುಡಿಪಿಟ್ಟಿದ್ದರು.

ಕೆಂಪೇಗೌಡರು ಅನ್ಯ ಜಾತಿಯ ಧರ್ಮಿಯರಿಗೆ ಕಟ್ಟಿದ ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದಾರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ, ಮನವರ್ತಪೇಟೆ, ಕಬ್ಬನ್‌ಪೇಟೆ, ಬಿನ್ನಿಪೇಟೆ ಗಳು ,ಉದ್ಯಾನಗಳು ,ಕೆರೆಗಳು ,ನಗರದ ಯೋಜನೆಗಳು ಇದಕ್ಕೆ ಸಾಕ್ಷಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top