fbpx
ದೇವರು

ಹೆಣ್ಣು ಮಕ್ಕಳು.ಭೀಮನ ಅಮಾವಾಸ್ಯೆ ಏಕೆ ಆಚರಿಸುತ್ತಾರೆ ತಿಳಿಯಿರಿ ಐತಿಹಾಸಿಕ ಹಿನ್ನೆಲೆ

ಹೆಣ್ಣು ಮಕ್ಕಳು.ಭೀಮನ ಅಮಾವಾಸ್ಯೆ ಏಕೆ ಆಚರಿಸುತ್ತಾರೆ ತಿಳಿಯಿರಿ ಐತಿಹಾಸಿಕ ಹಿನ್ನೆಲೆ

ಭೀಮನ ಅಮಾವಾಸ್ಯೆ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಹಬ್ಬವಾಗಿದ್ದು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ , ಕರ್ನಾಟಕದಲ್ಲಿ ಭೀಮನ ಅಮಾವಾಸ್ಯೆಯನ್ನು ಜ್ಯೋತಿರ್ಭೀಮೇಶ್ವರ ವ್ರತ, ಗಂಡನ ಪೂಜೆ ಎಂದು ಕೂಡ ಕರೆಯುತ್ತಾರೆ. ಉತ್ತರಪ್ರದೇಶದಲ್ಲಿ ಹರಿಯಾಲಿ ಅಮವಾಸ್ಯ, ಗುಜರಾತ್ನಲ್ಲಿ ದಿವಾಸೋ, ಮಹಾರಾಷ್ಟ್ರದ ಗತರಿ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದೆ.

ಭೀಮನ ಅಮಾವಾಸ್ಯೆಯನ್ನು ಹಿಂದೂ ಕ್ಯಾಲೆಂಡರ್ನ ಆಷಾಢಾಮಾಸದ ಅಮಾವಾಸ್ಯೆ ದಿನ ಆಚರಿಸಲಾಗುತ್ತದೆ.
ಆಗಸ್ಟ್ ತಿಂಗಳ ಮೊದಲ ಚಂದ್ರನ ಸಂಭವವು ಭೀಮನ ಅಮವಾಸ್ಯೆ ಎಂದು ಗುರುತಿಸಲ್ಪಟ್ಟಿದೆ, ಇದನ್ನು ಹಿಂದೂಗಳು ಬಹಳ ಮಂಗಳಕರವೆಂದು ಪರಿಗಣಿಸಿದ್ದಾರೆ, ಈ ದಿನದಲ್ಲಿ ಹಿಂದೂ ಪುರಾಣದ ವಿನಾಶದ ದೇವರಾದ ಶಿವನು ಪಾರ್ವತಿಯ ಭಕ್ತಿಯಿಂದ ಪ್ರಭಾವಿತನಾಗಿ ಅವಳನ್ನು ತನ್ನ ಹೆಂಡತಿ ಎಂದು ಒಪ್ಪಿಕೊಂಡ ದಿನ.

ಪಾರ್ವತಿಯನ್ನು ಹಿಂದೂಧರ್ಮದ ಪ್ರಕಾರ ತುಂಬಾ ಶಕ್ತಿಯುತ ದೇವತೆ ಮತ್ತು ಆದಿಶಕ್ತಿ ಅವತಾರ ಎಂದು ಪೂಜಿಸುತ್ತಾರೆ.
ಇದು ಕರ್ನಾಟಕದ ವಿಶಿಷ್ಟ ಹಬ್ಬಗಳಲ್ಲಿ ಒಂದಾಗಿದೆ ಭೀಮನ ಅಮಾವಾಸ್ಯೆಯನ್ನು ಕುಟುಂಬದಲ್ಲಿ ಪುರುಷರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲು ಈ ಪೂಜೆಯನ್ನು ಮಹಿಳೆಯರು ಮಾಡುತ್ತಾರೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಅಭ್ಯುದಯಕ್ಕಾಗಿ ಪ್ರಾರ್ಥಿಸುತ್ತಾರೆ ಆದರೆ ಅವಿವಾಹಿತ ಹೆಣ್ಣುಮಕ್ಕಳು ಉತ್ತಮ ಗಂಡನನ್ನು ಪಡೆಯಲು ಪ್ರಾರ್ಥಿಸುತ್ತಾರೆ.
ಈ ದಿನ ಭೀಮೇಶ್ವರನ ರೂಪದಲ್ಲಿ ಶಿವ ಮತ್ತು ಪಾರ್ವತಿ ಪೂಜಿಸಲಾಗುತ್ತದೆ. ಈ ಸಂಪ್ರದಾಯವು ಉತ್ತರ ಭಾರತದಲ್ಲಿ ‘ಸಾವಿತ್ರಿ ವ್ರತ’ ಎಂದು ಕರೆಯುತ್ತಾರೆ.

.ಭೀಮನ ಅಮಾವಾಸ್ಯೆಯ ಐತಿಹಾಸಿಕ ಹಿನ್ನೆಲೆ:

ಭೀಮನ ಅಮಾವಾಸ್ಯೆ ದಂತಕಥೆಯ ಬಗ್ಗೆ ಹಲವಾರು ಕಥೆಗಳಿವೆ ಒಂದು ದಂತಕಥೆಯ ಪ್ರಕಾರ ..

ಒಮ್ಮೆ ಕಾಶಿ ಯಾತ್ರೆಗೆ ಹೋಗಲು ಬಯಸಿದ ಬ್ರಾಹ್ಮಣ ದಂಪತಿಗಳು ಇದ್ದರು.ಆದರೆ ಅವರಿಗೆ ಒಂದು ಸಮಸ್ಯೆ ಎದುರಾಯಿತು ಅವರಿಗೆ ಅವಿವಾಹಿತ ಕಿರಿಯ ಮಗಳು ಇದ್ದಳು ಈ ಸುದೀರ್ಘವಾದ, ಪ್ರಯಾಸದಾಯಕ ಪ್ರಯಾಣದಲ್ಲಿ ಅವಳನ್ನು ಕರೆದುಕೊಳ್ಳಲು ಅವರು ಬಯಸಲಿಲ್ಲ ಆದ್ದರಿಂದ ಅವರು ತಮ್ಮ ಹಿರಿಯ ಪುತ್ರ ಮತ್ತು ಅವನ ಹೆಂಡತಿಯೊಂದಿಗೆ ಬಿಡಲು ನಿರ್ಧರಿಸುತ್ತಾರೆ. ಬ್ರಾಹ್ಮಣ ದಂಪತಿಗಳು ಕಾಶಿ ಯಾತ್ರೆಗೆ ಹೋಗುತ್ತಾರೆ ಆದರೆ ಅವರು ಬಹಳ ದಿನವಾದರೂ ಹಿಂತಿರುಗುವುದಿಲ್ಲ.

ಇಲ್ಲಿ ದುರಾಸೆಯಿಂದ ಹಿರಿಯ ಸಹೋದರ ಮತ್ತು ಅವರ ಪತ್ನಿ ಸಂಪತ್ತಿನ ಆಸೆಗೆ ಇನ್ನೇನು ಸಾಯುವ ಸ್ಥಿತಿಯಲ್ಲಿರುವ ರಾಜನಿಗೆ ಮದುವೆಮಾಡಲು ನಿರ್ಧರಿಸುತ್ತಾರೆ. ಮದುವೆಯ ಸಮಾರಂಭದ ನಂತರ ರಾಜ ಮರಣ ಹೊಂದುತ್ತಾನೆ. ರಾಜನ ಅಪ್ಪ, ಹುಡುಗಿ (ವಧು) , ಸೈನಿಕರೊಂದಿಗೆ ರಾಜಕುರತಿ ನದಿಯ ದಂಡೆಯಲ್ಲಿ ರಾಜಕುಮಾರನನ್ನು ಹೂಣಿಡಲು ಹೋಗುತ್ತಾರೇ. ಅವರು ಕೊನೆಯ ಆಚರಣೆಯನ್ನು ಮಾಡುತ್ತಿರುವಾಗ, ಮಳೆ ಬೀಳಲು ಪ್ರಾರಂಭ ವಾಗುತ್ತದೆ , ಎಲ್ಲರೂ ಅಲ್ಲಿಂದ ಓಡಿಹೋಗಲು ಪ್ರಾರಂಭಿಸುತ್ತಾರೆ.

ಅರಸನು ಅರಮನೆಗೆ ಹಿಂದಿರುಗಲು ತನ್ನ ಸೊಸೆಗೆ ಹೇಳುತ್ತಾನೆ , ಆದರೆ ಅವಳು ಸತ್ತ ರಾಜಕುಮಾರ ಜೊತೆಯಲ್ಲಿ ಉಳಿಯಲು ನಿರ್ಧರಿಸುತ್ತಾಳೆ. ಆಕೆಯ ಪೋಷಕರು ನಿರ್ವಹಿಸಿದ ಅಮವಾಸ್ಯ ವೃತ್ತದ ಪೂಜೆ ಬಗ್ಗೆ ನೆನಪಿಸಿಕೊಳ್ಳುತ್ತಾ ಳೆ.

ಆ ಹುಡುಗಿ ಮಣ್ಣನ್ನು ತೆಗೆದು ಕೊಂಡು ಕಾಳಿ ದೀಪಗಳು ಅಂದರೆ ಎರಡು ಕೋನಗಳನ್ನು ಸೃಷ್ಟಿಸಿ ಪ್ರಾರ್ಥನೆ ಆರಂಭಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಒಬ್ಬ ವಯಸ್ಕ ದಂಪತಿಗಳು ಈ ವ್ರತದ ಬಗ್ಗೆ ಕೇಳುತ್ತಾರೆ. ಕಥೆಯ ಬಗ್ಗೆ ನವ ಯುವ ವಧು ಹೇಳಿ ಅವರ ಆಶೀರ್ವಾದವನ್ನು ಬೇಡುತ್ತಾಳೆ .

ಆಗ ಅವರು “ದೀರ್ಘ ಸುಮಂಗಲಿ ಭವ” ಎಂದು ಆಶೀರ್ವದಿಸುತ್ತಾರೆ, (“ನೀವು ನಿಮ್ಮ ಪತಿಯೊಂದಿಗೆ ಸುದೀರ್ಘ ಜೀವನವನ್ನು ನಡೆಸಲಿ” )ಮತ್ತು ಸತ್ತ ರಾಜನನ್ನು ಎಚ್ಚರಗೊಳಿಸಲು ಅವಳಿಗೆ ಹೇಳುತ್ತಾರೆ, ಅತ್ತಕಡೆ ರಾಣಿ ಹೋಗಿ ಎಬ್ಬಿಸಲು ರಾಜಕುಮಾರನಿಗೆ ಜೀವ ಬಂದಿರುತ್ತದೆ , ರಾಣಿ ಹಿಂದೆ ತಿರುಗಿ ನೋಡಿದರೆ ಆ ದಂಪತಿಗಳು ಅಲ್ಲಿರುವುದಿಲ್ಲ ಅವರು ಸಾಕ್ಷಾತ್ ಶಿವ ಮತ್ತು ಪಾರ್ವತಿಯ ರೂಪವೇ ಆಗಿರುತ್ತಾರೆ.

ಭೀಮನ ಅಮಾವಾಸ್ಯೆಯ ಆಚರಣೆ :

ಮಹಿಳೆಯರು ಎರಡು ಮಣ್ಣಿನ ಕೋನದ ರಚನೆಗಳನ್ನು ತಯಾರಿಸಿ ಅದರ ಸುತ್ತಲೂ ಒಂದು ಹಳದಿ ದಾರವನ್ನು ಕಟ್ಟಿ ಪೂಜಿಸುತ್ತಾರೆ.

ಸಾಂಪ್ರದಾಯಿಕ ಹಾಡಿನ ನಂತರ ಭೀಮೇಶ್ವರಕ್ಕೆ ಪ್ರಾರ್ಥಿಸಿ ನಂತರ ಹಳದಿ ಎಳೆಗಳನ್ನು (ಕಂಕಣ) ತಮ್ಮ ಬಲಗೈಯಲ್ಲಿ ಕಟ್ಟಿಕೊಳ್ಳುತ್ತಾರೆ.

ಗಂಡನಿಗೆ ಪೂಜೆ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ

 

 

ಹೀಗೆ ಮಾಡಿದರೆ ಸುಮಂಗಲಿಯಾಗಿರುವಂತೆ ದೇವರು ಹರಸುತ್ತಾನೆ ಎಂದು ನಂಬಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top