ದಿನಾಗ್ಲೂ ಮಾಡೋ ಈ 4 ಪದ್ಧತಿಗಳು ನಿಮ್ಮ ಬಗ್ಗೆ ಎಲ್ಲವನ್ನೂ ಹೇಳುತ್ತೆ
ಮಾನವ ವರ್ತನೆಯನ್ನು ಸಂಶೋಧಿಸುವ ವಿಜ್ಞಾನಿಗಳು ವ್ಯಕ್ತಿಯ ಗುಣ ಅವರ ಅಭ್ಯಾಸದ ಕ್ರಿಯೆಗಳ ನಡುವೆ ನೇರ ಸಂಬಂಧವಿದೆ ಎಂದು ಹೇಳುತ್ತಾರೆ.
1. ಆಹಾರ ಪದ್ಧತಿ
ನಮ್ಮ ಆಹಾರ ಪದ್ಧತಿಗಳ ಮೂಲಕ ನಮ್ಮ ಜೀವನದ ಬಗ್ಗೆ ಗ್ರಹಿಸಬಹುದು .
ನೀವು ನಿಧಾನವಾಗಿ ಮತ್ತು ಚಿಂತನಶೀಲವಾಗಿ ತಿನ್ನುವ ಅಭಾಸ್ಯ ಹೊಂದಿದ್ದರೆ ,ನೀವು ಜೀವನವನ್ನು ಇಷ್ಟಪಡುತ್ತೀರಿ ಮತ್ತು ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಪಡುತ್ತೀರಿ ಎಂದರ್ಥ.
ನೀವು ತ್ವರಿತವಾಗಿ ತಿನ್ನುವ ಅಭಾಸ್ಯ ಹೊಂದಿದ್ದರೆ ,ತಾಳ್ಮೆ ಇಲ್ಲದವರು, ಮಹತ್ವಾಕಾಂಕ್ಷಿಗಳು, ಮತ್ತು ಹೊಸದನ್ನು ಕಲಿಯಲು ಇಷ್ಟಪಡುತ್ತೀರಿ ಎಂದು ಅರ್ಥ
ನೀವು ಹೊಸ ಭಕ್ಷ್ಯಗಳನ್ನು ತಯಾರಿಸಲು ಇಷ್ಟಪಡುವವರಾದರೆ ನೀವು ಅಪಾಯ ಮತ್ತು ಸಾಹಸಗಳನ್ನು ಪ್ರೀತಿಸುತ್ತೀರಿ ಎಂದು ಅರ್ಥ
ಆಹಾರವನ್ನು ಇತರ ಆಹಾರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ತಿನ್ನುವ ಅಭಾಸ್ಯವಿದ್ದರೆ, ನೀವು ಜವಾಬ್ದಾರೀ ಹೊಂದಿರುತ್ತೀರಿ ನಿಮ್ಮ ಆದ್ಯತೆಗಳನ್ನು ಕಳೆದುಕೊಳ್ಳುತ್ತೀರಿ. ನೀವು ಅನೇಕ ಕೆಲಸಗಳನ್ನು ಒಂದೇ ಸಾರಿ ಮಾಡುವ ಸಾಮರ್ಥ್ಯವಿರುತ್ತದೆ ಎಂದುಅರ್ಥ .
ತಟ್ಟೆಯಲ್ಲಿ ಆಹಾರವನ್ನು ವಿಭಜಿಸಿ ತಿನ್ನುವ ಅಭಾಸ್ಯ ಹೊಂದಿದ್ದರೆ ನೀವು ಜೀವನವನ್ನು ಸಂಪೂರ್ಣವಾಗಿ ಯೋಜಿಸಲು ಪ್ರಯತ್ನ ಪಡುತ್ತೀರಿ ಮತ್ತು ಹೊಸ ಸಂದರ್ಭಗಳಿಗೆ ಹೊಂದಿಕೊಳ್ಳುವುದು ನಿಮಗೆ ಕಷ್ಟ ಎಂದು ಅರ್ಥ .
2. ಲೋಟ ಹಿಡಿಯುವ ರೀತಿ
ಒಬ್ಬ ವ್ಯಕ್ತಿಯ ಗುಣ ,ನಡವಳಿಕೆ ಅವನು ಕಪ್ ಅನ್ನು ಹೇಗೆ ಹಿಡಿದಿಟ್ಟುಕೊಂಡಿರುತ್ತಾರೆ ಎಂಬುವುದರ ಮೇಲೆ ನಿರ್ಧಾರವಾಗುತ್ತದೆ.
ನೀವು ಲೋಟದ ಒಳಗೆ ನೋಡುತ ಕಾಫಿ ಕುಡಿದರೆ,ನೀವು ಚಿಂತನಶೀಲರಾಗಿರುವಿರಿ.
ನೀವು ಲೋಟದ ಅಂಚಿನ ಮೇಲೆ ನೋಡುತಾ ಕಾಫಿ ಕುಡಿದರೆ,ನೀವು ನಂಬಿಕಸ್ತರಾಗಿರುತ್ತೀರಿ, ನಿರಾತಂಕವಾಗಿರುತ್ತೀರಿ, ಮತ್ತು ಇತರರ ಅಭಿಪ್ರಾಯಗಳ ಮೇಲೆ ಅವಲಂಬಿಸಿರುವಿರಿ.
3. ಸ್ನಾನ:
ಸ್ನಾನ ಮಾಡುವ ರೀತಿ ನಿಮ್ಮ ವರ್ತನೆಯನ್ನು ನಿರ್ಧಾರ ಮಾಡುತ್ತದೆ:
ನೀವು ದೀರ್ಘ ಸ್ನಾನ ಮಾಡಲು ಇಷ್ಟ ಪಡುವವರಾಗಿದ್ದರೆ ,ನೀವು ಶಾಂತ ಸ್ವಭಾವದವರಾಗಿರುತ್ತೀರಿ ಮತ್ತು ಯಾವುದಕು ತಲೆ ಕೆಡಸಿಕೊಳ್ಳುವುದಿಲ್ಲ.
ಸ್ನಾನ ಮಾಡುವ ಸಮಯದಲ್ಲಿ ನಿಮಗೆ ಹಾಡುವ ರೂಢಿ ಇದ್ದರೆ, ನೀವು ಆತ್ಮವಿಶ್ವಾಸವನ್ನು ಹೊಂದಿರುತ್ತೀರಿ ಮತ್ತು ಬಹಳಷ್ಟು ಸ್ನೇಹಿತರನ್ನು ಹೊಂದಿರುವಿರಿ..
4. ವಿಶ್ರಾಂತಿ:
ಒಬ್ಬ ವ್ಯಕ್ತಿಯು ತನ್ನ ವಿಶ್ರಾಂತಿ ಸಮಯವನ್ನು ಕಳೆಯಲು ಇಷ್ಟಪಡುವ ರೀತಿಯಲ್ಲಿ ಅವನ ಸ್ವಭಾವವನ್ನು ಹೇಳಬಹುದು.
ನೀವು ಪುಸ್ತಕ ಓದಲು ಇಷ್ಟ ಪಡುವವರಾಗಿದ್ದರೆ, ನೀವು ಸಹಾನುಭೂತಿಗಳು ಮತ್ತು ತಿಳುವಳಿಕೆ ಹೊಂದಿರುವಿರಿ.
ನೀವು ಟಿವಿ ನೋಡುವ ಅಥವಾ ವೀಡಿಯೊ ಆಟಗಳನ್ನು ಆಡಲು ಇಷ್ಟ ಪಡುವವರಾಗಿದ್ದರೆ ಭಿನ್ನವಾದ ಅಭಿಪ್ರಾಯಗಳನ್ನು ನಿಮಗೆ ಸ್ವೀಕರಿಸಲು ಕಷ್ಟವಾಗುತ್ತದೆ ಎಂದು ಅರ್ಥ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
