fbpx
ದೇವರು

ಗಣೇಶನ ಒಂದು ಹಲ್ಲು ಮುರಿದು ಹೋಗಿದ್ದು ಹೇಗೆ ಗೊತ್ತಾ?

ಗಣೇಶನ ಒಂದು ಹಲ್ಲು ಮುರಿದು ಹೋಗಿದ್ದು ಹೇಗೆ ಗೊತ್ತಾ?

 

 

ಗಣೇಶನಿಗೆ ಇನ್ನೊಂದು ಹೆಸರಿದೆ ಅದೇ ಏಕದಂತ. ಅದರ ಅರ್ಥ ಒಂದೇ ಒಂದು ಹಲ್ಲು ಇರುವವನು ಎಂದು.ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಜಮದಗ್ನಿ ಎಂಬ ಋಷಿ , ಅವನ ಪತ್ನಿ ರೇಣುಕಾ ಹಾಗು ಅವರ ಪುತ್ರ ಭಾರ್ಗವ ವಾಸಿಸುತ್ತಿದ್ದರು. ಕಾರ್ಥ್ಯ ವೀರಾರ್ಜುನ ಎಂಬ ರಾಜ ಆ ರಾಜ್ಯವನ್ನು ಆಳುತ್ತಿದ್ದನು. ಒಂದು ದಿನ ಆ ರಾಜನು ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ದಾರಿ ತಪ್ಪುತ್ತಾನೆ. ಆಗ ರಾಜನು “ನಾವು ಹೇಗೆ ದಾರಿ ಹುಡುಕುವುದು ಮತ್ತು ಯಾರ ಬಳಿ ದಾರಿ ಕೇಳುವುದು” ಎಂದು ರಾಜಭಟನನ್ನು ಕೇಳುತ್ತಾನೆ.ಆಗ ಅವನು “ಪ್ರಭು ಅಲ್ಲಿ ಒಂದು ಆಶ್ರಮ ಕಾಣಿಸುತ್ತಿದೆ”ಎಂದು ಹೇಳುತ್ತಾನೆ. ಆಗ ಅವರೆಲ್ಲ ಆ ಆಶ್ರಮದ ಬಳಿ ಹೋಗುತ್ತಾರೆ

ಆ ಋಷಿ ಇವತ್ತು ಇಲ್ಲಿ ಉಳಿದುಕೊಳ್ಳಿ ಎನ್ನುತ್ತಾನೆ ಅದಕ್ಕೆ ರಾಜನು ಒಪ್ಪಿಕೊಳ್ಳುತ್ತಾನೆ,ಋಷಿಯು ರಾಜನಿಗೆ ಅಡುಗೆಯನ್ನು ಸಿದ್ದಗೊಳಿಸಿ ಬಡಿಸಿದನು ರಾಜ ಊಟವನ್ನು ಮುಗಿಸಿದನು. ರಾಜನು ಊಟವನ್ನು ಕೊಂಡಾಡುತ್ತಾ “ಆಹಾ! ಎಂಥಾ ಅದ್ಭುತವಾದ ರುಚಿ, ನಮ್ಮ ಅರಮನೆಯಲ್ಲಿ ಕೂಡ ಇಷ್ಟು ರುಚಿಯಾದ ಅಡುಗೆ ಮಾಡೋದಿಲ್ಲ ಇದು ಹೇಗೆ ಸಾಧ್ಯ” ಎಂದು ಕೇಳುತ್ತಾನೆ.ಆಗ ಋಷಿಯು “ನಮ್ಮ ಬಳಿ ಕಾಮದೇನು ಎಂಬ ಹಸುವಿದೆ ಅದು ದೇವರ ಪ್ರಸಾದ ನಾವು ಕೇಳಿದ್ದನ್ನೆಲ್ಲ ಆ ಹಸು ನೀಡುತ್ತದೆ”ಎಂದು ರಾಜನಿಗೆ ಹೇಳುತ್ತಾನೆ. ಅದಕ್ಕೆ ರಾಜನು “ಹೌದೇ! ಹಾಗಾದರೆ ಅದು ನಮ್ಮ ಬಳಿ ಇದ್ದರೆ ನಮ್ಮ ಜನರಿಗೆ ಬಹಳ ಉಪಯೋಗವಾಗುತ್ತದೆ, ಹಾಗಾಗಿ ಆ ಹಸುವನ್ನು ನಮಗೆ ಕೊಟ್ಟುಬಿಡಿ”ಎಂದು ಋಷಿಯನ್ನು ಕೇಳುತ್ತಾನೆ. ಆಗ ಋಷಿಯು “ಕ್ಷಮಿಸಿ ಮಹಾಪ್ರಭು ಕಾಮಧೇನು ನನ್ನ ತಾಯಿ ಇದ್ದಂತೆ,ಕೊಡಲಾಗುವುದಿಲ್ಲ “ಎಂದು ರಾಜನಿಗೆ ಹೇಳಿದಾಗ ರಾಜನು ಕೋಪಗೊಂಡು “ಕಾವಲುಗಾರರೇ ಈ ಹಸುವನ್ನು ಅರಮನೆಗೆ ಎಳೆದುಕೊಂಡು ಹೋಗಿ,ಇದು ರಾಜಾಜ್ಞೆ”ಎಂದು ಆದೇಶಿಸುತ್ತಾನೆ.

ಸೌದೆ ತರಲು ಹೋಗಿದ್ದ ಭಾರ್ಗವನು ಹಿಂದುರಿಗಿ ಆಶ್ರಮದ ಬಳಿಗೆ ಬಂದಾಗ ನಡೆದಿರುವುದನ್ನು ತಿಳಿದು ತುಂಬಾ ಕೋಪಗೊಂಡನು ಮತ್ತು “ತಂದೆ!ನಾನು ಕಾಮದೇನುವನ್ನು ಮರಳಿ ಕರೆದೊಯ್ಯುತ್ತೇನೆ, ನನ್ನನ್ನು ಆಶೀರ್ವದಿಸಿ” ಎಂದು ತನ್ನ ತಂದೆಯ ಬಳಿ ಆಶೀರ್ವಾದ ಪಡೆದು ಅರಮನೆಯ ಕಡೆಗೆ ಹೊರಟನು.
ಭಾರ್ಗವನು ರಾಜನ ಅರಮನೆಗೆ ಹೋಗಿ “ಮಹಾ ಪ್ರಭುವೇ!ನಮ್ಮ ಕಾಮದೇನುವನ್ನು ನಮಗೆ ಕೊಟ್ಟುಬಿಡಿ”ಎಂದು ರಾಜನನ್ನು ಕೇಳುತ್ತಾನೆ. ರಾಜನು ಕೊಡುವುದಿಲ್ಲ ಎನ್ನುತ್ತಾನೆ ಆಗ ಭಾರ್ಗವನು ರಾಜನನ್ನು ಸಾಯಿಸಿ ಕಾಮದೇನುವನ್ನು ಕರೆದುಕೊಂಡು ಹೋದನು.ತನ್ನ ತಂದೆಗೆ ನಡೆದ ವಿಚಾರವನ್ನೆಲ್ಲ ಹೇಳಿದನು ಆಗ ಋಷಿಯು ರಾಜನನ್ನು ಕೊಂದ ಪಾಪದ ಪರಿಹಾರಕ್ಕೆ ದೀರ್ಘತಪಸ್ಸು ಮಾಡಬೇಕು ಎಂದು ಹೇಳುತ್ತಾನೆ.


ಭಾರ್ಗವನು ತಪಸ್ಸು ಶುರುಮಾಡಿದನು ಭಾರ್ಗವನ ತಪಸ್ಸಿಗೆ ಮೆಚ್ಚಿ ಪರಮ ಶಿವನು ಅವನ ಮುಂದೆ ಪ್ರತ್ಯಕ್ಷನಾದನು ಮತ್ತು “ಭಾರ್ಗವ ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ ಇಂದಿನಿಂದ ನಿನ್ನನ್ನು ಪರಶುರಾಮ ಎಂದು ಕರೆಯಲಾಗುತ್ತದೆ’ಎಂದು ಹೇಳಿ ಒಂದು ಕೊಡಲಿಯನ್ನು ಕೊಟ್ಟನು.


ಕೆಲವು ದಿನಗಳ ನಂತರ ತಂದೆಯ ಸಾವಿನ ಸೇಡನ್ನು ತೀರಿಸಿಕೊಳ್ಳಲು ರಾಜನ ಮಕ್ಕಳು ಜಮದಗ್ನಿಯನ್ನು ಕೊಂದರು ಈ ವಿಷಯವನ್ನು ತಿಳಿದ ಪರಶುರಾಮನು ಶಿವನ ಕೊಡಲಿಯಿಂದ ರಾಜನ ಮಕ್ಕಳನ್ನೂ ಸಹ ಕೊಂದುಬಿಟ್ಟನು. ಮತ್ತು ಕ್ಷತ್ರೀಯ ಪರಂಪರೆಯನ್ನು ನಿರ್ಮೂಲನೆ ಗೊಳಿಸುವುದಾಗಿ ಶಪಥಗೈದನು. ಪರಶುರಾಮನು ಎಲ್ಲ ಕ್ಷತ್ರಿಯರನ್ನು ಕೊಂದನು .ಪ್ರತಿಯೊಂದು ಬಾರಿ ಕ್ಷತ್ರಿಯರನ್ನು ಕೊಂದ ನಂತರ ತಪಸ್ಸು ಮಾಡಿ ಪಾಪವನ್ನು ಪರಿಹರಿಕೊಂಡನು. ಕ್ಷತ್ರಿಯರನ್ನು ನಾಶಗೊಳಿಸಲು ಪರಶಿವ ನನಗೆ ಸಹಾಯ ಮಾಡಿದ್ದಾನೆ ಅವನಿಗೆ ಕೃತಜ್ಞತೆಯನ್ನು ಅರ್ಪಿಸಬೇಕು ಎಂದು ಬಹಳಷ್ಟು ದಿನಗಳ ಕಾಲ ಪ್ರಯಾಣ ಮಾಡಿ ಕೈಲಾಸ ಪರ್ವತವನ್ನು ಪ್ರವೇಶಿಸಿದನು

ಅಲ್ಲಿ ಗಣೇಶನು ಅರಮೆನೆಯನ್ನು ಕಾಯುತ್ತಿದ್ದನು ಪರಶುರಾಮನು ಒಳಗೆ ಹೋಗಲು ಪ್ರಯತ್ನ ಪಟ್ಟನು. ಆಗ ಗಣೇಶನು “ಒಳಗೆ ಹೋಗಲು ಅಪ್ಪಣೆ ಇಲ್ಲ”ಎಂದು ಅವನನ್ನು ತಡೆದನು.ಆಗ”ಯಾಕೆ ನಾನು ಪರಮ ಶಿವನನ್ನು ಕಾಣಬೇಕು”ಎಂದು ಗಣೇಶನಿಗೆ ಹೇಳುತ್ತಾನೆ. ಆಗ ಗಣೇಶನು “ತಂದೆ-ತಾಯಿ ವಿಶ್ರಮಿಸುತ್ತಿದ್ದರೆ ಆಅದರಿಂದ ನಿಮ್ಮನ್ನು ಒಳಗೆ ಬಿಡೋದಿಲ್ಲ”ಎಂದು ಹೇಳುತ್ತಾನೆ.

ಪರಶುರಾಮ ಎಷ್ಟು ಕೇಳಿಕೊಂಡರು ಒಳಗೆ ಪ್ರವೇಶಿಸಲು ಗಣೇಶನು ಬಿಡಲೇ ಇಲ್ಲ ಆಗ ಪರಶುರಾಮನಿಗೆ ತುಂಬಾ ಕೋಪ ಬರುತ್ತದೆ.ಪರಶುರಾಮನು ಅರಮನೆಯನ್ನು ಪ್ರವೇಶಿಸಲು ಮುಂದಾದಾಗ ಗಣೇಶನು ತನ್ನ ಸೊಂಡಲಿನಿಂದ ಅವನನ್ನು ಬಿಸಾಡಿದನು. ಕೆಳಗೆ ಬಿದ್ದ ಪರಶುರಾಮನು ಶಿವನು ಕೊಟ್ಟಿದ್ದ ಕೊಡಲಿಯನ್ನು ಗಣೇಶನಲ್ಲಿಗೆ ಎಸೆದನು ಅದು ಗಣೇಶನ ಒಂದು ದಂತವನ್ನು ಕತ್ತರಿಸಿತು. ಆಗ ಗಣೇಶನು ಮೂರ್ಛೆ ಬಿದ್ದನು.

ಶಬ್ದವನ್ನು ಕೇಳಿ ಹೊರಬಂದ ಶಿವ ಪಾರ್ವತಿಯರು ರಕ್ತದ ಕಲೆಯಿರುವ ಕೊಡಲಿಯನ್ನು ನೋಡಿ. ಏನು ನಡೆದಿರಬಹುದು ಎಂದು ಯೋಚಿಸಿದರು, ಪರುಶುರಾಮನು ತಪ್ಪಿತಸ್ತನ್ನಾಗಿ ಅಲ್ಲಿ ನಿಂತನು. ಪರಶುರಾಮನು “ಶಿವ ಪಾರ್ವತಿಯರಲ್ಲಿ ಕ್ಷಮೆಯನ್ನು ಕೇಳಿದನು” ಶಿವನು ಗಣೇಶನನ್ನು ಮತ್ತೆ ಬದುಕಿಸಿದನು. ನಂತರ ಶಿವ ಪಾರ್ವತಿ ಗಣೇಶರು ಪರಶುರಾಮನನ್ನು ಹರಸಿದರು . ಅಂದಿನಿಂದ ಗಣೇಶನಿಗೆ ಏಕದಂತ ಎಂಬ ಹೆಸರು ಹುಟ್ಟಿಕೊಂಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top