fbpx
ಆರೋಗ್ಯ

ಮಾನಸಿಕ ಸಮಸ್ಯೆಗಳ ಬಗ್ಗೆ ಒಂದಿಷ್ಟು ತಿಳ್ಕೊಂಡಿದ್ರೆ ಒಳ್ಳೇದು.

ನಿಮಗೆ ಅಥವಾ ನೀವು ತುಂಬ ಪ್ರೀತಿಸುವ ಒಬ್ಬರಿಗೆ ಮಾನಸಿಕ ತೊಂದರೆ ಇದೆಯೆಂದು ತಿಳಿದುಬಂದಾಗ ನಿಮಗೆ ಹೇಗೆ ಅನಿಸಬಹುದು? ಮಾನಸಿಕ ಕಾಯಿಲೆಗೆ ಚಿಕಿತ್ಸೆ ಇದೆ ಎನ್ನುವುದು ಸಂತೋಷದ ಸಂಗತಿ. ಮಾನಸಿಕ ತೊಂದರೆಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ನೆರವಾಗುವ ಕೆಲವೊಂದು ವಿಷಯಗಳನ್ನು ನೋಡೋಣ.

ಬಹು ಪುರಾತನ ಕಾಲದಿಂದಲೂ,ಮಾನಸಿಕ ಕಾಯಿಲೆಗಳು ಜನರನ್ನು ಕಾಡುತ್ತಿದ್ದರೂ,ಜನರು ಅವುಗಳ ಬಗ್ಗೆ ಲಕ್ಷ್ಯ ವಹಿಸದೇ ಪರಿಚಯವೇ ಇಲ್ಲದವರಂತೆ ವರ್ತಿಸುತ್ತಾರೆ. ಹುಚ್ಚು, ಬುದ್ದಿಭ್ರಮಣೆ, ತಲೆಕೆಟ್ಟು ಹೋಗುವುದು, ಮತಿಭ್ರಮಣೆ, ಮರುಳು ಎಂಬಿತ್ಯಾದಿ ಪದಗಳಷ್ಟೆ ಅವರಿಗೆ ಗೊತ್ತು. ಮನೋರೋಗಿ ಅಥವಾ ಮಾನಸಿಕ ಕಾಯಿಲೆಯವಳು ಎಂದರೆ ಕೆದರಿನ ಕೂದಲು,ಹರಿದು ಚಿಂದಿಯಾದ ಉಡುಪು, ದಿನಗಟ್ಟಲೇ ಸ್ನಾನ ಕಾಣದೇ ಕೊಳಕಾದ ಶರೀರ, ಕ್ಷಣ ಕ್ಷಣಕ್ಕೆ ಬದಲಾಗುವ ಗುಣ ಸ್ವಭಾವ- ಅಳು, ನಗು, ಭಯ, ಕೋಪಗಳ ಭಾವ ವಿಕಾರ, ಗುರಿ ಇಲ್ಲದ ಅಲೆದಾಟ, ಆಗಿಂದಾಗ್ಗೆ ಕಾಣಿಸಿಕೊಳ್ಳುವ ಅರ್ಥವಿಲ್ಲದ ಹಿಂಸಾಚಾರ ನೆನಪಿಗೆ ಬರುತ್ತದೆ. ಹೀಗಾಗಿ ಮನೋರೋಗಿ ಎಂದಾಕ್ಷಣ ಜನಗಳ ಮನಸ್ಸಿನಲ್ಲಿ ಭಯ, ಜಿಗುಪ್ಸೆ, ಸಿಟ್ಟು ಮೂಡಿಬರುತ್ತದೆ. ಮನೋರೋಗಿಯನ್ನು ದೂರಸರಿಸುತ್ತರೆ. ಅಪಾಯಕಾರಿ ಎಂದು ಅವರಿಂದ ದೂರ ಉಳಿಯುತ್ತಾರೆ.

ಮಾನಸಿಕ ರೋಗದ ಕೆಲವು ನಿಜಾಂಶಗಳು:

ತಮಗೆ ಮಾನಸಿಕ ಕಾಯಿಲೆ ಇದೆಯೆಂದು ಹೆಚ್ಚಿನ ಜನ ಹೇಳಲು ಇಷ್ಟಪಡುವುದಿಲ್ಲ, ಬೇರೆಯವರಿಗೆ ಗೊತ್ತಾದರೆ ಅವಮಾನವಾಗುತ್ತದೆ ಎಂದು ನೆನಸುತ್ತಾರೆ. ಇದರಿಂದಾಗಿ ಅವರು ಚಿಕಿತ್ಸೆ ಪಡೆಯಲು ಮುಂದೆ ಬರುವುದಿಲ್ಲ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ಹೆಚ್ಚಿನ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇದೆಯಾದರೂ ಅಮೆರಿಕದಲ್ಲಿ ಅಂಥ ಕಾಯಿಲೆ ಇರುವವರಲ್ಲಿ ಸುಮಾರು 60% ವಯಸ್ಕರಿಗೆ ಮತ್ತು 8-15 ವಯಸ್ಸಿನ ಹತ್ತಿರತ್ತಿರ 50% ಮಕ್ಕಳಿಗೆ ಕಳೆದ ವರ್ಷ ಚಿಕಿತ್ಸೆ ಸಿಗಲಿಲ್ಲ.—ಮಾನಸಿಕ ಕಾಯಿಲೆಗೆ ಸಂಬಂಧಪಟ್ಟ ಸಂಘದ (NAMI) ವರದಿ.

ಮಾನಸಿಕ ತೊಂದರೆಗಳು ಬರಲು ಕಾರಣ?

ಹಲವು ಕಾರಣಗಳು ಸೇರಿ ಮಾನಸಿಕ ಕಾಯಿಲೆಗಳು ಸೃಷ್ಟಿಯಾಗುತ್ತವೆ.

 • ಅನುವಂಶೀಯತೆ.
 • ಮಿದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳು ಡೋಪಮಿನ್, ಸೆರೋಟೋನಿನ್, ಗಾಬಾ ಇತ್ಯಾದಿ ನರವಾಹಕ ವ್ಯವಸ್ಥೆ ಏರುಪೇರಾಗುತ್ತದೆ.
 • ಮಿದುಳಿಗೆ ಸಣ್ಣ ಅಥವಾ ದೊಡ್ಡ ಪ್ರಮಾಣದ ಹಾನಿ.
 • ಮಿದುಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯುಂಟಾಗುವದು.
 • ಅತಿಯಾದ ಆಲ್ಕೋಹಾಲ್- ಮಾದಕವಸ್ತುಗಳ ಸೇವನೆ.ವಿವಿಧ ರೇತಿಯ ನಂಜು ವಸ್ತುಗಳು ಮಿದುಳನ್ನು ಹಾನಿ ಮಾಡುವುದು.
 • ಬಾಲ್ಯದಲ್ಲಿ ನೋವಿನ ಅನುಭವಗಳು, ಪ್ರೀತಿ ಆಸರೆಯಿಂದ ವಂಚಿತವಾಗಿರುವುದು.
 • ಮೇಲಿಂದ ಮೇಲೆ ಕಷ್ಟ ನಷ್ಟ, ಸೋಲು ನಿರಾಶೆಗಳುಂಟಾಗುವುದು.
 • ಮಾನಸಿಕ ಚಿಂತೆ, ವ್ಯಥೆ, ಒತ್ತಡಗಳು, ಅತೃಪ್ತಿ, ಅಸಮಾಧಾನ, ಆರ್ಥಿಕ ಸಮಸ್ಯೆಗಳು.
 • ದೀರ್ಘಕಾಲದ ಹಾಗೂ ಸಾಮಾಜಿಕ ಕಳಂಕವನ್ನುಂಟು ಮಾಡುವ ಪ್ರಾಣಾಪಾಯವನ್ನುಂಟು ಮಾಡುವ ಕಾಯಿಲೆಗಳು ಅಥವಾ ಅನಾರೋಗ್ಯ.
 • ಸಾಮಾಜಿಕ ಅವ್ಯವಸ್ಥೆ ಹಾಗೂ ತೊಂದರೆದಾಯಕ ಪರಿಸರ.

ಮಾನಸಿಕ ತೊಂದರೆಗಳಿಗೆ ಚಿಕಿತ್ಸೆ:

 1. ಮಾನಸಿಕ ಆರೋಗ್ಯ ತಜ್ಞರು ಅನೇಕ ಮಾನಸಿಕ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ಕೊಡಬಲ್ಲರು. ಹಾಗಾಗಿ ಅನುಭವೀ ತಜ್ಞರೊಬ್ಬರ ಅಭಿಪ್ರಾಯ ಪಡೆಯುವುದೇ ಮುಖ್ಯವಾದ ಮೊದಲ ಹೆಜ್ಜೆ.
 2. ಔಷಧಿಗಳು: ಖಿನ್ನತೆ ನಿವಾರಕ, ಪ್ರಧಾನ ಮತ್ತು ಅಲ್ಪಮಟ್ಟದ ಶಮನಕಾರಿಗಳು.
 3. ವಿದ್ಯುತ್ ಕಂಪನ ಚಿಕಿತ್ಸೆ.
 4. ಮನೋಚಿಕಿತ್ಸೆ ಮತ್ತು ನಡವಳಿಕೆ ಚಿಕಿತ್ಸೆ
 5. ಆಪ್ತಸಲಹೆ ಮತ್ತು ಸಮಾಧಾನ
 6. ತರಭೇತಿ ಮತ್ತು ಅಂಗಮರ್ದನ ಚಿಕಿತ್ಸೆ.
 7. ಅನುಕೂಲಕರ ಪರಿಸರ.
 8. ವಿರಾಮಕರ ಹಾಗೂ ಕಲಾ ಚಟುವಟಿಕೆಗಳು, ಯೋಗ, ಧ್ಯಾನ.
 • ಆಧ್ಯಾತ್ಮಿಕ ಆರೋಗ್ಯ ಮುಖ್ಯ
 • ಮಾನಸಿಕ ತೊಂದರೆಗಳಿದ್ದರೆ ಹೀಗೆ ಮಾಡಿ
 • ಅನುಭವೀ ಮಾನಸಿಕ ಆರೋಗ್ಯ ತಜ್ಞರು ಹೇಳಿರುವ ಚಿಕಿತ್ಸೆ ಪಾಲಿಸಿ. *
 • ದಿನಚರಿಯಲ್ಲಿ ಏರುಪೇರು ಆಗದಂತೆ ನೋಡಿಕೊಳ್ಳಿ. ವಿಪರೀತ ಚಟುವಟಿಕೆ ಬೇಡ.
 • ದೈಹಿಕ ಚಟುವಟಿಕೆಗಳಲ್ಲಿ ತೊಡಗಿ.
 • ಸಾಕಷ್ಟು ನಿದ್ರೆ ಮಾಡಿ.
 • ದಿನಾಲೂ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ.
 • ಪೌಷ್ಠಿಕ ಹಾಗೂ ಆರೋಗ್ಯಕರ ಆಹಾರ ಸೇವಿಸಿ.
 • ಮದ್ಯ ಸೇವನೆ ಕಡಿಮೆ ಮಾಡಿ. ವೈದ್ಯರು ಬೇರೆಯವರಿಗೆಂದು ಬರೆದುಕೊಟ್ಟ ಮಾತ್ರೆ, ಔಷಧಗಳನ್ನು ಸೇವಿಸಬೇಡಿ.
 • ಒಂಟಿ ಆಗಿರಬೇಡಿ. ನಿಮಗೆ ಯಾರ ಮೇಲೆ ಭರವಸೆ ಇದೆಯೊ, ನಿಮ್ಮ ಬಗ್ಗೆ ಯಾರಿಗೆ ಕಾಳಜಿ ಇದೆಯೊ ಅಂಥವರೊಟ್ಟಿಗೆ ಸಮಯ ಕಳೆಯಿರಿ.
 • ಆಧ್ಯಾತ್ಮಿಕತೆ ಇರಲಿ. *

ಮಾನಸಿಕ ಆರೋಗ್ಯ ತಜ್ಞರು ರೋಗದ ವೈದ್ಯಕೀಯ ಹಿನ್ನೆಲೆಯನ್ನು ತಿಳಿದುಕೊಂಡು, ಲಕ್ಷಣಗಳನ್ನು ಪರಿಶೀಲಿಸಿ, ಕೂಲಂಕುಷ ಪರೀಕ್ಷೆಗಳನ್ನು ಮಾಡಿ, ಮನೆಯವರೊಡನೆ ಸಮಾಲೋಚಿಸಿ ರೋಗವನ್ನು ನಿಖರವಾಗಿ ನಿರ್ಧರಿಸಿದ ನಂತರವಷ್ಟೇ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಸೂಚಿಸುತ್ತಾರೆ. ರೋಗಿ ಮತ್ತು ಅವರ ಆರೈಕೆದಾರರಿಗೆ ಈ ಕುರಿತು ಎಲ್ಲಾ ಮಾಹಿತಿಗಳನ್ನು ನೀಡಲಾಗುವುದು. ಚಿಕಿತ್ಸೆಯು ಹೇಗೆ ತನ್ನ ಚೇತರಿಕೆಗೆ ನೆರವಾಗಲಿದೆ ಎಂದು ರೋಗಿಯು ಸಮಾಲೋಚಿಸುವ ಸ್ಥಿತಿಯಲ್ಲಿದ್ದರೆ, ಚಿಕಿತ್ಸಕರು ಅವರಿಗೆ ಎಲ್ಲವನ್ನೂ ತಿಳಿಸುತ್ತಾರೆ. ಇಲ್ಲದಿದ್ದರೆ ಒಂದೊಮ್ಮೆ ರೋಗಿಯ ಮನೆಯವರು ರೋಗದ ಬಗ್ಗೆ ಸಾಕಷ್ಟು ತಿಳಿದಿದ್ದು ಅದಕ್ಕೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ ಎಂಬ ಅರಿವನ್ನು ಹೊಂದಿದ್ದರೆ ಬಹಳ ಪ್ರಯೋಜನವಾಗುತ್ತದೆ. ಆಗ ಚಿಕಿತ್ಸಕರು ಮತ್ತು ಮನೆಯವರ ಸಹಕಾರದಿಂದ ಚಿಕಿತ್ಸೆಗೆ ನೆರವಾಗಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top