fbpx
ಸಮಾಚಾರ

ಕಾನೂನು ವಿ.ವಿಯಲ್ಲಿ ಕನ್ನಡಿಗರಿಗೆ 50 % ಮೀಸಲಾತಿ ಎಂದ ಸರ್ಕಾರ, ಸಹಿ ಹಾಕಲ್ಲ ಎಂದ ರಾಜ್ಯಪಾಲ ವಜುಭಾಯ್ ವಾಲಾ

ಕಾನೂನು ವಿ.ವಿಯಲ್ಲಿ ಕನ್ನಡಿಗರಿಗೆ 50 % ಮೀಸಲಾತಿ ಎಂದ ಸರ್ಕಾರ, ಸಹಿ ಹಾಕಲ್ಲ ಎಂದ ರಾಜ್ಯಪಾಲ ವಜುಭಾಯ್ ವಾಲಾ

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯಲ್ಲಿ ಶೇ.50 ರಷ್ಟು ನೀಡುವ ವಿಧೇಯಕಕ್ಕೆ ಸಹಿ ಹಾಕಲು ರಾಜ್ಯಪಾಲ ವಜುಭಾಯ್ ವಾಲಾ ನಿರಾಕರಿಸಿದ್ದಾರೆ ! ಮತ್ತೊಮ್ಮೆ ಪರಿಶೀಲನೆ ನಡೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದಿದ್ದಾರೆ.

ಈಗಾಗಲೇ ವಿಧಾನ ಮಂಡಲದ ಉಭಯ ಸದನಗಳಲ್ಲೂ ಈ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಶೇ.50 ರಷ್ಟು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಷಯ ಅಂಗೀಕಾರಗೊಂಡಿದೆ ಆದರೂ ಸಹ ರಾಜ್ಯಪಾಲ ವಜುಭಾಯ್ ವಾಲಾ ಸಹಿ ಹಾಕಲು ನಿರಾಕರಿಸಿದ್ದಾರೆ.

ಈ ಪ್ರಶ್ನೆಗಳನ್ನು ಸಿದ್ದರಾಮಯ್ಯ ನವರ ಮುಂದೆ ಇಟ್ಟಿದ್ದಾರೆ ಅವೆಂದರೆ ಈ ವಿಧೇಯಕ ಅನುಷ್ಠಾನಕ್ಕೆ ತರಲು ಸಾಧ್ಯವೇ?
ಮೆರಿಟ್ ವಿದ್ಯಾರ್ಥಿಗಳ ಸ್ಥಿತಿ ಏನು? ಮುಂದೆ ಕಾನೂನು ತೊಡಕು ಉಂಟಾದರೆ ಪರಿಸ್ಥಿತಿ ಏನು ? ಮತ್ತೊಮ್ಮೆ ಪರಿಶೀಲನೆ ನಡೆಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ್ದಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top