fbpx
ಸಾಧನೆ

ಒಂದು ಕಾಲದಲ್ಲಿ ಕುರಿ ಕಾಯುತ್ತಿದ್ದ ಹುಡುಗಿ ಈಗ ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ!!!

ಕುರಿ ಕಾಯುವವಳು ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಂತಹ ಒಳ್ಳೆಯ ಉದಾಹರಣೆ.

ಇವಳ ಹೆಸರು Najat Vallaud-Belkacem. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ.

%e0%b2%a8%e0%b2%9c%e0%b2%a4

Najat Vallaud-Belkacem (4 ಅಕ್ಟೋಬರ್ 1977 ರಂದು Najat Belkacem ಜನನ) ಆಗಸ್ಟ್ 2014 25 ಎರಡನೇ Valls ಸಂಪುಟ ಸೇರುವ ಮೊದಲ ಫ್ರೆಂಚ್ ಮಹಿಳೆಯ ಶಿಕ್ಷಣ ಮಂತ್ರಿ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸವಿವೆಯಾಗಿ ನೇಮಕವಾಗಿದ್ದಾರೆ ಮತ್ತು ಒಬ್ಬ ಫ್ರೆಂಚ್ ಸಮಾಜವಾದಿ ಹಾಗೂ ರಾಜಕಾರಣಿ,.

%e0%b2%a8%e0%b2%9c%e0%b2%a4-1

ಇವಳ ತಂದೆ ತಾಯಿ ಆಗರ್ಭ ಶ್ರೀಮಂತರಲ್ಲ, ಕಡು ಬಡವರು. ತಂದೆ ಕನ್ಸ್ಟ್ರಕ್ಷನ್ ಕೆಲಸದ ಒಬ್ಬ ಕೆಲಸಗಾರ. ಮನೆಗೆ ನೆರವಾಗಲು ನಜತ್ ಚಿಕ್ಕಂದಿನಿಂದಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದಳಂತೆ. ನಂತರ ಕುಟುಂಬ ಹೊಟ್ಟೆ ಪಾಡಿಗೆ ಫ್ರಾನ್ಸಿಗೆ ವಲಸೆ ಬಂದಾಗ ಆಕೆಗೆ ಇನ್ನೂ ಚಿಕ್ಕ ವಯಸ್ಸು. ಅದು ಎಷ್ಟು ಪರಿಶ್ರಮದಿಂದ ಕಲಿತಳೋ ಅವಳಿಗೇ ಗೊತ್ತು. ಯಾವುದೇ ಸಹಾಯವಿಲ್ಲದೇ ಸ್ವಪ್ರಯತ್ನದಿಂದ ಫ್ರೆಂಚ್ ಕಲಿತು, ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕಲ್ ಸೈನ್ಸ್’ನಿಂದ ಪದವಿ ಪಡೆದಳು. ನಂತರದಲ್ಲಿ ಸೋಷಿಯಲಿಸ್ಟ್ ಪಾರ್ಟಿಗೆ ಸೇರಿ ತನ್ನ ರಾಜಕೀಯ ಜೀವನ ಶುರು ಮಾಡಿದಳು. ಇಂದು ಅವಳಿಗೆ ಬರೀ ಮೂವತ್ತೆಂಟು ವರ್ಷ, ಅವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ!

%e0%b2%a8%e0%b2%9c%e0%b2%a4-2

ಅವಳ ಜಾತಿ, ಬಡತನ, ಶೋಷಣೆ ಎಷ್ಟು ಎದುರಾದರೂ ಸೋಲಲಿಲ್ಲ. ಅವಳ ಒಂದು ಮಾತು ಬಹಳ ಚೆನ್ನಾಗಿದೆ. ನಜತ್ ಹೇಳುತ್ತಾರೆ, “ಯುವಜನತೆ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಭವಿಷ್ಯದ ಬಗ್ಗೆ ಚಿಂತೆ ಮಾಡುವುದಕ್ಕಿಂತ, ಅದರ ಭಾಗವಾಗಿ ಬದಲಾಯಿಸಬೇಕು. ಸುಮ್ಮನೆ ವೀಕ್ಷಕನಾಗಿ ಹತಾಷೆ ಪಡುವುದರಲ್ಲಿ ಅರ್ಥವಿಲ್ಲ”.

%e0%b2%a8%e0%b2%9c%e0%b2%a4-3

ಕುರಿ ಕಾಯುವವಳು ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆ. Najat Vallaud-Belkacem ನಮಗೆಲ್ಲರಿಗೂ ಮಾದರಿ

%e0%b2%a8%e0%b2%9c%e0%b2%a4-4

“ಯುವಜನತೆ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಭವಿಷ್ಯದ ಬಗ್ಗೆ ಚಿಂತೆ ಮಾಡುವುದಕ್ಕಿಂತ, ಅದರ ಭಾಗವಾಗಿ ಬದಲಾಯಿಸಬೇಕು. ಸುಮ್ಮನೆ ವೀಕ್ಷಕನಾಗಿ ಹತಾಷೆ ಪಡುವುದರಲ್ಲಿ ಅರ್ಥವಿಲ್ಲ”. ಎಂದು ರಾಜಕೀಯದಲ್ಲಿ ಭಾಗ ವಹಿಸುವ ಯುವಕರಿ ಸಲಹೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top