fbpx
ಆರೋಗ್ಯ

ರಾಗಿಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಆಹಾರ ಧಾನ್ಯ. ಇತಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯು ಸುಮಾರು ೪೦೦೦ ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು.

ರಾಗಿಯ ಉಪಯೋಗಗಳು:-

ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು , ದೋಸೆ, ಗಂಜಿ, ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಟಿಕ ಆಹಾರವೆಂದರೆ- ಒಡ್ಡರಾಗಿಹಿಟ್ಟು. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ. ರಾಗಿ ಮಾಲ್ಟನ್ನು ಸರಿಯಾಗಿ ಡಬ್ಬಿಗಳಲ್ಲಿ ಶೇಖರಿಸಿ ಮಾರುವು ಕಂಪೆನಿಗಳು ಚೆನ್ನಾಗಿ ಹಣ ಮಾಡುತ್ತಿವೆ. ಮಧುಮೇಹ(ಡಾಯಾಬೆಟೆಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಿಸ್ ಪಡೆದ ಪೇಯ. ರಾಗಿ ಅರಳನ್ನು ಹುರಿದು, ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ,ಸೇವಿಸಿದರೆ, ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು.

ಪೋಷಕಾಂಶಗಳ ವಿವರ:-

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

೧೦೦ ಗ್ರಾಮ್ ರಾಗಿಯಲ್ಲಿನ ಪೋಷಕಾಂಶಗಳ ವಿವರ ಈ‌ ಕೆಳಕಂಡಂತಿದೆ:

ಪೋಷಕಾಂಶ    –     ಪ್ರತಿಶತ

ಪ್ರೋಟಿನ್        –     ೭.೩ ಗ್ರಾಂ

ಕೊಬ್ಬು            –     ೧.೩ ಗ್ರಾಂ

ಪಿಷ್ಟ               –      ೭೨ ಗ್ರಾಂ

ಖನಿಜಾಂಶ      –    ೨.೭ ಗ್ರಾಂ

ಸುಣ್ಣದಂಶ       –    ೩.೪೪ ಗ್ರಾಂ

ನಾರಿನಂಶ       –    ೩.೬ ಗ್ರಾಂ

ಶಕ್ತಿ                 –    ೩೨೮ ಕಿ.ಕ್ಯಾ.

ನಿಮಗೆ ರಾಗಿಯ ಬಗ್ಗೆ ತಿಳಿದಿದೆಯೇ? ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ. ಆದರೆ ರಾಗಿ ನಮ್ಮ ದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ

ಇಂದೇ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ. ಹೆಚ್ಚಾಗಿ ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ, ರಾಗಿ ರೊಟ್ಟಿ ಹೀಗೆ ಒಂದಾ ಎರಡಾ ರಾಗಿಯ ರೆಸಿಪಿಗಳು. ರಾಗಿಯಿಂದ ತಯಾರಿಸುವ ಪ್ರತಿಯೊಂದು ಆಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ. ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೇರೆ ಧಾನ್ಯಗಳಿಗಿಲ್ಲ. ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು.

ತಮ್ಮ ದೇಹ ತೂಕವನ್ನು ಇಳಿಸುವ ಯೋಜನೆ ಇದ್ದವರು ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಸಸ್ಯಾಹಾರಿಗಳಿಗೆ ಪ್ರೋಟೀನ್ ಶ್ರೀಮಂತವಾಗಿರುವ ರಾಗಿ ದೇಹ ತೂಕ ಇಳಿಸುವವರಿಗೆ ವರದಾನವೇ ಸರಿ. ದಕ್ಷಿಣ ಭಾರತದಲ್ಲಿ ರಾಗಿ ಮುದ್ದೆ ತುಂಬಾ ಜನಪ್ರಿಯ. ಕರ್ನಾಟಕದಲ್ಲಂತೂ ಪ್ರತೀ ದಿನ ರಾಗಿ ಮುದ್ದೆಯನ್ನು ತಿಂದೇ ತಮ್ಮ ದೈನಂದಿನ ಕಾಯಕವನ್ನು ಪ್ರಾರಂಭಿಸುವವರು ಬಹುತೇಕ ಮಂದಿ. ರಾಗಿ ಮುದ್ದೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

ರಾಗಿಯಿಂದಾಗುವ ಉಪಯೋಗಗಳು :-

 1. ದೇಹ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ.
 2. ಮೂಳೆಗಳಿಗೆ ಉತ್ತಮ: ರಾಗಿ ಮುದ್ದೆಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು, ಮಕ್ಕಳಿಗೆ ಹಾಗೂ ವೃದ್ಧರಿಗೆ ಆವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.
 3. ಮಧುಮೇಹಿಗಳಿಗೆ ಸೂಕ್ತ: ಆಧುನಿಕ ಜೀವನದಲ್ಲಿ ಒತ್ತಡದಲ್ಲೆ ಬದುಕಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮಧುಮೇಹಿಗಳಿಗೆ ರಾಗಿ ಉತ್ಪನ್ನಗಳು ರಾಮಬಾಣವಿದ್ದಂತೆ. ಮಧುಮೇಹದಿಂದ ನೀವು ಬಳಲುತ್ತಿದ್ದೀರಾ? ನಿಮಗೆ ಸೇವಿಸಲು ಇದೊಂದು ಪರಿಪೂರ್ಣ ಆಹಾರವಾಗಿದೆ. ಮಧುಮೇಹದ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.
 4. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ: ರಾಗಿಯಲ್ಲಿರುವ ಅಮೀನೊ ಏಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ನಿಮ್ಮ ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ
 5. ನೀವು ಒಬ್ಬ ಅನೀಮಿಕ್ ಆಗಿದ್ದರೆ: ನೀವು ಅನಿಮೀಯಾದಿಂದ ಬಳಲುತ್ತಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್‌ನ ಮೂಲ ರಾಗಿ ಗಿಡವಾಗಿದೆ.
 6. ನಿಮಗೆ ರಿಲ್ಯಾಕ್ಸ್ ಆಗಲು ಸಹಕಾರಿ: ರಾಗಿಗಿರುವ ಇನ್ನೊಂದು ಮಹತ್ವದ ಗುಣವೆಂದರೆ ಅದು ನಿಮಗೆ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಒತ್ತಡಪೂರ್ಣ ಜೀವನದಿಂದ ಮುಕ್ತಿ ಸಿಗಲು ನಿಮ್ಮ ಪಥ್ಯದಲ್ಲಿ ಸೇರಿಸಬೇಕಾದ ಒಂದು ಉತ್ತಮ ಸಾಮಾಗ್ರಿ ರಾಗಿ ಮುದ್ದೆಯಾಗಿದೆ.
 7. ದೇಹವನ್ನು ತಂಪುಗೊಳಿಸುತ್ತದೆ: ಬೇಸಿಗೆ ಸಮಯದಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.
 8. ಸದೃಢತೆಗೆ: ನಿಮ್ಮ ಸಾಮರ್ಥ್ಯ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು, ರಾಗಿ ಮುದ್ದೆಯನ್ನು ನಿಮ್ಮ ಆಯ್ಕೆಯಾಗಿಸಿಕೊಳ್ಳಿ. ಇದರಲ್ಲಿರುವ ಪ್ರೊಟೀನ್ ವಿಟಮಿನ್‌ಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿರಿಸುತ್ತದೆ.
 9. ಮಲಬದ್ಧತೆಗೆ ಉಪಯೋಗಕಾರಿ: ರಾಗಿ ಮುದ್ದೆಯಲ್ಲಿರುವ ಫೈಬರ್ ಗುಣ ಮಲಬದ್ಧತೆಗೆ ಸಹಾಯಕಾರಿ. ನೀವು ಸುಲಭವಾದ ಮಲಬದ್ಧತೆಯನ್ನು ಹೊಂದಲು ನಿತ್ಯವೂ ರಾಗಿಮುದ್ದೆ ಸೇವಿಸಿ.
 10. ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ: ಹೌದು, ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜನವೆಂದರೆ ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ್‌ನಿಂದ ಬಳಲುತ್ತಿರುವವರಿಗೆ ಇದು ಉತ್ತಮ.
 11. ನೂತನ ತಾಯಂದಿರಿಗೆ:ನೂತನ ತಾಯಂದಿರಿಗೆ, ಹಿಮೋಗ್ಲೋಬೀನ್ ಮಟ್ಟಗಳನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.
 12. ರಾಗಿ ತಂಪು ಗುಣ ಹೊಂದಿರುವ ಸಾತ್ವಿಕ ಆಹಾರ: ಮುಖ್ಯವಾಗಿ ಇದು ಪಿತ್ತಹರ. ರಾಗಿಯ ಗಂಜಿಯನ್ನು ನಿತ್ಯವೂ ಸೇವಿಸಿದರೆ ದೇಹ ತಂಪಾಗುತ್ತದೆ. ರಕ್ತವೃದ್ದಿಯಾಗುತ್ತದೆ.

ನಾವು ನೀಡಿರುವುದು ಒಂದು ಉದಾಹರಣೆ ಅಷ್ಟೇ ರಾಗಿ ಇಂದ ಇನ್ನು ಅನೇಕ ಲಾಭಗಳಿವೆ

“ಕ್ಯಾಲ್ಸಿಯಂ , ಖನಿಜಾಂಶಗಳು , ಪ್ರೊಟೀನ್ ಹೇರಳವಾಗಿರುವ ರಾಗಿ ಪೋಷಕಾಂಶಗಳ ಆಗರ . ಅಬಾಲವೃದ್ಧರಿಗೆ ಆದರ್ಶಪ್ರಾಯ ಆಹಾರ . ವೈದ್ಯರು ಕೊಡುವ ವಿಟಮಿನ್ ಮಾತ್ರೆಗಳನ್ನು ನುಂಗುವ ಬದಲು ರಾಗೀ ಗಂಜಿಯನ್ನು ನಿಯಮಿತವಾಗಿ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ . ಬಳಲಿಕೆ ಮಾಯವಾಗಿ ಶರೀರವೂ ಹಾಯೆನಿಸುವುದು . ಇದರಲ್ಲಿರುವ ಪೋಷಕಾಂಶಗಳು ಬಹು ಬೇಗನೆ ಜೀರ್ಣವಾಗುವಂಥವು . ಹಾಗಾಗಿ ಪುಟ್ಟ ಮಗುವಿಗೆ 6 ತಿಂಗಳಾದೊಡನೆ ರಾಗೀಮಣ್ಣಿ ಕೊಡಬಹುದಾಗಿದೆ . ರಾಗಿಮುದ್ದೆ ತಯಾರಿಗೆ ಪರಿಣತಿಯ ಅವಶ್ಯಕತೆ ಇದೆ , ಹಾಗೆಯೇ ತಿನ್ನಲೂ ಸಹ . ಮಾಡುವುದನ್ನು ನೋಡಿಯೇ ಕಲಿಯಿರಿ . ಸುಲಭವಾಗಿ ತಯಾರಿಸಬಹುದಾದ ಕೆಲವು ವೈವಿಧ್ಯಗಳು ಇಲ್ಲಿವೆ .”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top