ವಿಶೇಷ

ಭಿಕ್ಷೆ ಬೇಡಿದ ಹಣವನ್ನು ಉಳಿಸಿ ಬಡ ಹೆಣ್ಣುಮಕ್ಕಳಿಗೆ ಸಹಾಯಮಾಡುತ್ತಿರುವ ಅಪರೂಪದ ಭಿಕ್ಷುಕ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭಿಕ್ಷೆ ಬೇಡಿದ ಹಣವನ್ನು ಉಳಿಸಿ ಬಡ ಹೆಣ್ಣುಮಕ್ಕಳಿಗೆ ಸಹಾಯಮಾಡುತ್ತಿರುವ ಅಪರೂಪದ ಭಿಕ್ಷುಕ.

ಸಮಾಜಸೇವೆಗೆ ಬೇಕಾಗಿರುವುದು ಸಿರಿವಂತಿಕೆಯಲ್ಲ ವಿಶಾಲವಾದ ಹೃದಯ ಎಂಬುದನ್ನು ಗುಜರಾತ್ನ ಭಿಕ್ಷುಕನೊಬ್ಬನು ನಿರೂಪಿಸಿ ತೋರಿಸಿದ್ದಾನೆ ಭಿಕ್ಷೆ ಬೇಡಿ ಬಂದ ಹಣದಲ್ಲಿ ತನ್ನ ಜೀವನೋಪಾಯಕ್ಕಾಗಿ ಸ್ವಲ್ಪ ಹಣವನ್ನು ಇಟ್ಟುಕೊಂಡು ಮಿಕ್ಕದ್ದನ್ನು ಈತ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಅದರಲ್ಲೂ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಹಣ ವಿನಿಯೋಗಿಸುತ್ತಿದ್ದಾರೆ. 68 ವರ್ಷ ವಯಸ್ಸಿನ ಈ ಭಿಕ್ಷುಕ ಬಾಲಕಿಯರ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಚಿನ್ನದ ಕಿವಿಯೋಲೆಗಳನ್ನು ಹೊಂದಿದ್ದ 10 ಪೆಟ್ಟಿಗೆಗಳನ್ನು ನೀಡಿದ್ದು, ಅಲ್ಲಿದ್ದವರನ್ನು ಬೆರಗುಗೊಳಿಸಿದೆ.

ಕಳೆದ ಮೂರು ದಶಕಗಳಿಂದ ಮೆಹ್ಸಾನ್ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿರುವ ಪ್ರಜಾಪತಿ ಸ್ವತಃ ಯಾರದೋ ಮನೆಯ ಊಟವನ್ನು ಪಡೆದು ಕಾಲ ಕಳೆಯುತ್ತಿರುವವನು. ಅತಿ ಕೊಳಕು ಬಟ್ಟೆಯನ್ನು ತೊಡುತ್ತಿದ್ದರು ಅವನು ಅತಿ ಶುಚಿ ಮನಸ್ಸಿನಿಂದ ಬಡ ಮಕ್ಕಳನ್ನು ಕಂಡು ಮರುಗಿ ಈ ನಿರ್ಧಾರಕ್ಕೆ ಬಂದಿದ್ದಾನೆ. ಪ್ರಜಾಪತಿ ಸಾಮಾನ್ಯವಾಗಿ ಭಿಕ್ಷೆ ಬೇಡುವುದು ಮೆಹ್ಸಾನಾದ ಸೀಮಾಂಧರ್ ಸ್ವಾಮಿ ಜೈನ ಬಸದಿ ಮತ್ತು ಹನುಮಾನ್ ಗುಡಿಯ ಹೊರಗಡೆ. ಅಲ್ಲಿಗೆ ಬರುವ ಭಕ್ತಾದಿಗಳ ಮುಂದೆ ಕೈಯೊಡ್ಡಿ ಸಿಕ್ಕಿದ ಚಿಲ್ಲರೆಗಳನ್ನು ಸಂಗ್ರಹಿಸಿ ತನ್ನ ಬದುಕು ಸಾಗಿಸಿ ಉಳಿದ ಹಣವನ್ನು ದಾನ ಮಾಡಿದ್ದಾನೆ.

ತನ್ನ ಕೈಲಾದ ರೀತಿಯಲ್ಲಿ ಮಾಡಿರುವ ಸೇವೆಯಿಂದ ಸಂತೃಪ್ತನಾಗಿರುವ ಪ್ರಜಾಪತಿ ದಿನಕ್ಕೆ ಎರಡು ಹೊತ್ತು ಮಾತ್ರ ಊಟ ಮಾಡುತ್ತಾನೆ.ಭಿಕ್ಷೆ ಬೇಡಿದ ಹಣವನ್ನು ತನ್ನ ಪತ್ನಿಗೆ ಕಳುಹಿಸುತ್ತೇನೆ. ಆಕೆ ಶ್ವಾಸಕೋಸದ ರೋಗದಿಂದ ಬಳಲುತ್ತಿದ್ದಾಳೆ. ಇದನ್ನು ಹೊರತುಪಡಿಸಿದ ನನ್ನ ಸಂಪಾದನೆ ನನಗಿಂತ ಬಡವರಿಗೆ ಸಹಾಯಮಾಡುತ್ತಿದ್ದಾನೆ.ಕೊಳಗೇರಿಯ 10 ಹೆಣ್ಣು ಮಕ್ಕಳಿಗೆ ಚಿನ್ನದೋಲೆಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾನೆ.
ಅಂಗನವಾಡಿ ಮಕ್ಕಳಿಗೆ ಪುಸ್ತಕ, ಸಮವಸ್ತ್ರವನ್ನು ನೀಡಿದ್ದಾರೆ. ತಾವು 13 ವರ್ಷಗಳಿಂದ ಭಿಕ್ಷೆ ಬೇಡಿ ಸಂಪಾದಿಸಿದ ಹಣದಲ್ಲಿ ಈ ಸಹಾಯ ಮಾಡುತ್ತಾ ಬಂದಿದ್ದಾರೆ.ಈ ವರೆಗೆ ಅವರು ಒಟ್ಟು 80 ಲಕ್ಷ ದಾನವನ್ನು ಮಾಡಿದ್ದಾರೆ.

“ಹಸಿವಿನಿಂದ ಬಳಲುತ್ತಿರುವವರಿಗೆ ನನ್ನಿಂದ ಸಾಧ್ಯವಾಗುವ ಸಹಾಯ ಮಾಡುತ್ತೇನೆ. ಅದೇ ರೀತಿ ಬಡ ಹೆಣ್ಣುಮಕ್ಕಳಿಗೂ ಅಷ್ಟೋ ಇಷ್ಟೋ ನೀಡಿದ್ದೇನೆ. ಇದರಿಂದ ನನಗೆ ಸಂತೋಷವಾಗುತ್ತದೆ” ಎನ್ನುತ್ತಾನೆ ಪ್ರಜಾಪತಿ.

ಬಡವನಾಗಿರಲಿ, ಸಿರಿವಂತನಾಗಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಮುಂದೆ ಬರಬೇಕು ಎನ್ನುವ ಮೂಲಕ ದಾನವೆಂದ ಕೂಡಲೇ ದೂರ ಹೋಡಿಹೋಗುವ ಕೆಲಶ್ರೀಮಂತರಿಗೆ ಮಾದರಿಯಾಗಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top