ಈ ದೀಪ ಬೆಳಗುವುದರಿಂದ ಕುಟುಂಬದಲ್ಲಿ ಒಗ್ಗಟ್ಟು ಬರುತ್ತದೆ.
“ಒಗ್ಗಟ್ಟಿನಲ್ಲಿ ಬಲವಿದೆ”
ಈ ಗಾದೆ ಮಾತು ಎಲ್ಲರಿಗೂ ಗೊತ್ತಿದೆ.ಎಲ್ಲಾದರೂ ಸರಿ ಮನೆ,ಕಚೇರಿ ,ಸ್ನೇಹಿತರು ಬಂಧು,ಬಳಗ ಎಲ್ಲರಲ್ಲೂ ಒಗ್ಗಟ್ಟಿನಿಂದ ಇದ್ದರೆ ಒಳ್ಳೇದು ಏನನ್ನು ಬೇಕಾದರೂ ಸಾಧಿಸಬಹುದು.ಎಷ್ಟೇ ಕಷ್ಟ ಬಂದರೂ ಎದುರಿಸಬಹುದು.
ಇಂದು ನಾವು ಮನೆಯಲ್ಲಿರುವವರ ಒಗ್ಗಟ್ಟಿನ ಬಗ್ಗೆ ತಿಳಿದುಕೊಳ್ಳೋಣ. ನೆನಪಿಡಿ ಒಗ್ಗಟ್ಟಿನಲ್ಲಿ ಬಲವಿದೆ.ಇಲ್ಲಾ ಅಂದರೆ ಯಾವುದೇ ಸಂಬಂಧ ಆಗಲಿ, ಸ್ನೇಹ ಆಗಲಿ ಬೇಗ ಕಿತ್ತೊಗತ್ತೆ, ಮುರಿದುಬೀಳುತ್ತೆ.
ಮನೆಯಲ್ಲಿ ನನ್ನದೊಂದು ದಾರಿ,ಹೆಂಡ್ತಿದೊಂದು ದಾರಿ, ಮಗನದೊಂದು ದಾರಿ ಅಂತ ಹೋದರೆ . “ಮನೆಯೊಂದು ಮೂರು ಬಾಗಿಲು” ಅಂತ ಆಗತ್ತೆ.
ಆಗ ಹೊರಗಿನ ಜನ ಬೇರೆಯವರು ಏನು ಮಾತನಾಡ್ತಾರೆ ಗೊತ್ತಾ ಅಯ್ಯೋ,ಅವರ ಮನೆಗೆ ಯಾರು ಹೋಗ್ತಾರೆ ನಾಯಿಗಳು ಕಿತ್ತಾಡೋ ಹಾಗೆ ಯಾವಾಗ್ಲೂ ಕಿತ್ತಾಡ್ತಾ ಇರ್ತಾರೆ.ಒಂದು ಮಾತಿನ ಮೇಲೆ ಯಾರು ಒಪ್ಕೋಳಲ್ಲ. ಮನೆಗೆ ಯಾರಾದರೂ ಹುಡುಗನನ್ನು ನೋಡೋಕೆ ಕರೆದುಕೊಂಡು ಹೋದರೆ ಒಬ್ಬರು ಹೇಳ್ತಾರೆ ಆ ಹುಡುಗನ ಎತ್ತರ ನೋಡಿ ಅಂತ,ಇನ್ನೊಬ್ಬರು ಹೇಳ್ತಾರೆ ಆ ಹುಡುಗ ದಪ್ಪ ಅಂತ,ಮತ್ತೊಬ್ಬರು ಆ ಹುಡುಗನಿಗೆ ವಿದ್ಯಾರ್ಹತೆ ಇಲ್ಲ ಅಂತ ಹೇಳ್ತಾರೆ,ನನಗೆ ಇಷ್ಟ ಆದ ಅಂತ ಇನ್ನೊಬ್ಬರು ಹೀಗೆ ಅವನಿಗೆ ಎಷ್ಟು ಕೊಡೋದು ಅಂತ ಇನ್ನೊಬ್ಬರು ಮಾತಾಡ್ತಾರೆ.
ಅಯ್ಯೋ ಅವರ ಮನೆಗೆ ಯಾರಾದರೂ ಕಾಲಿಡೋದು ಉಂಟೆ ಮುಳುಗಿಸಿ ಬಿಡ್ತಾರೆ ನಮ್ಮನ್ನ.ಬೇಡಪ್ಪ ಆ ಮನೆಗೆ ಯಾರು ಹೋಗ್ಬೇಡಿ. ಅಂತಹ ಮನೆಗೆ ಕಳ್ಳರು, ಎಲ್ಲರೂ ನುಗ್ಗಿ ಆ ಮನೆಯನ್ನು ಸರ್ವನಾಶ ಮಾಡ್ತಾರೆ.ನಿಮ್ಮ ನಾಶಕ್ಕೆ ನಿಮ್ಮ ಮನೆಯಲ್ಲಿ ಒಗ್ಗಟ್ಟು ಇಲ್ಲದಿರೋದೆ ಮುಖ್ಯ ಕಾರಣ.
ಪರಿಹಾರ.
ಇದಕ್ಕೊಂದು ಸರಳವಾದ ಪರಿಹಾರ ಇದೆ ಇದನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು.ಪ್ರತಿ ಮಂಗಳವಾರ ತಪ್ಪದೇ ಮನೆಯಲ್ಲಿ ಮೂರು ಇಂಚಿನ ಒಂದು ಪುಟ್ಟ ದೀಪವನ್ನ,ತುಪ್ಪ ಹಾಕಿ ಹಚ್ಚಬೇಕು.ತುಪ್ಪ ಹಾಕೋಕೆ ಆಗೋದಿಲ್ಲ ಇಲ್ಲ ಅಂದರೆ,ತೆಂಗಿನ ಎಣ್ಣೆಯನ್ನು ಹಾಕಿ ದೀಪ ಹಚ್ಚಬಹುದು ಇದರಿಂದ ಅದ್ಭುತವಾದ ಫಲಿತಾಂಶವನ್ನು ಮನೆಯಲ್ಲಿ ಕಾಣಬಹುದು.
27 ಮಂಗಳವಾರ ಈ ದೀಪವನ್ನು ಹಚ್ಚಿದರೆ ಮನೆಯಲ್ಲಿ ಒಗ್ಗಟ್ಟನ್ನು ಕಾಣುತ್ತೀರಾ.ಮನೆಯಲ್ಲಿರುವವರಲ್ಲಿ ಒಗ್ಗಟ್ಟು ಮೂಡಲು ಶುರುವಾಗತ್ತೆ. ಭಿನ್ನಾಭಿಪ್ರಾಯಗಳು ಇರೋದಿಲ್ಲ.ಯಾರು ಏನೇ ಹೇಳಿದರೂ ಸರಿ ಎಂದು ಒಪ್ಪಿಕೊಳ್ಳುತ್ತಿರಾ.
ಅವರು ಹೇಳಿದ್ದು ಸರಿಯೋ ತಪ್ಪೋ ಎಂದು ಮನಸ್ಸು ಪ್ರಶಾಂತವಾಗಿ ಆಲೋಚನೆ ಮಾಡುತ್ತೀರಾ.ಮನೆಯ ವಾತಾವರಣವೂ ಶಾಂತವಾಗತ್ತೆ.ಎಲ್ಲದರಲ್ಲೂ ಗೆಲುವು ಸಹ ನಿಮ್ಮದೇ ಆಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
